ಕಾಗೆಮಾಂಬಳ್ಳಿ
ಕಾಗೆಮಾಂಬಳ್ಳಿ- ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಅನಾಮಿರ್ಟ ಕಾಕ್ಯುಲಸ್ ಎಂಬ ಶಾಸ್ತೀಯ ಹೆಸರನ್ನುಳ್ಳ ದೊಡ್ಡ ಬಳ್ಳಿ.
ಎಲ್ಲೆಲ್ಲಿ
ಬದಲಾಯಿಸಿಸಾಮಾನ್ಯವಾಗಿದು ಭಾರತದಲ್ಲಿ ಬಂಗಾಳ, ಖಾಸಿ ಬೆಟ್ಟಗಳು, ಮತ್ತು ದಕ್ಷಿಣ ಭಾರತಗಳಲ್ಲೂ ಸಿಂಹಳ, ಬರ್ಮ, ಮಲಯಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುತ್ತದೆ.
ವಿವರಣೆ
ಬದಲಾಯಿಸಿಬೇರೆ ಆಸರೆ ಸಸ್ಯಗಳನ್ನು ಸುತ್ತುವರಿದು ಹಬ್ಬಿ ಬೆಳೆಯುವ ದೊಡ್ಡ ಬಳ್ಳಿ ಇದು. ಎಲೆಗಳು ಸರಳ; ಮರ್ಯಾಯವಾಗಿ ಜೋಡಣೆಯಾಗಿವೆ. ಹೂಗೊಂಚಲು ಸಂಕೀರ್ಣ ಮಾದರಿಯವು; ವಯಸ್ಸಾದ ಕಾಂಡದ ಗಿಣ್ಣುಗಳಿಂದ ಹುಟ್ಟುತ್ತವೆ. ಹೂಗಳು ಚಿಕ್ಕ ಗಾತ್ರದವು ಮತ್ತು ಭಿನ್ನ ಹೂವಿನಲ್ಲಿ 6 ಕೇಸರಗಳೂ ಹೆಣ್ಣಿನಲ್ಲಿ 3 ಕಾರ್ಪೆಲುಗಳಿಂದಾದ ಉಚ್ಚಸ್ಥಾನದ ಅಂಡಾಶಯವೂ ಇದೆ. ಒಂದೊಂದು ಕಾರ್ಪೆಲಿಗೊಂದರಂತೆ 3 ಅಂಡಕಗಳಿವೆ. ಕಾಯಿ ಅಷ್ಟಿಫಲ (ಡ್ರೂಪ್) ಮಾದರಿಯದು.
ಉಪಯೋಗ
ಬದಲಾಯಿಸಿಕಾಯಿಯಲ್ಲೂ ಬೀಜಗಳಲ್ಲೂ ಹಲವಾರು ಬಗೆಯ ಸಂಯುಕ್ತ ವಸ್ತುಗಳಿವೆ. ಇವುಗಳಲ್ಲಿ ಪಿಕ್ರೋಟಾಕ್ಸಿನ್ (), ಕಾಕ್ಯುಲಿನ್ ಅಥವಾ ಅನಾಮಿರ್ಟಿನ್ ಎಂಬ ರುಚಿರಹಿತ ವಸ್ತು ಮತ್ತು ಮೆನಿಸ್ಪರ್ಮಿನ್ ಎಂಬ ಸಸ್ಯಕ್ಷಾರಗಳು (ಆಲ್ಕಲಾಯಿಡ್) ಮುಖ್ಯವಾದುವು. ಪಿಕ್ರೋಟಾಕ್ಸಿನ್ ಎಂಬುದು ಕಹಿರುಚಿಯುಳ್ಳದ್ದೂ ಬಲು ವಿಷಪೂರಿವಾದುದೂ ಆಗಿದೆ. ಅತಿಸ್ವಲ್ಪ ಪ್ರಮಾಣದಲ್ಲೂ ಅಪಾಯಕಾರಿ; ಸುಮಾರು 20 ಮಿಗ್ರಾಂ. ನಷ್ಟು ಪಿಕ್ರೋಟಾಕ್ಸಿನ್‍ಗೆ ಮನುಷ್ಯನನ್ನೂ ಕೊಲ್ಲುವ ಶಕ್ತಿಯಿದೆ ಎಂದು ಹೇಳುವುದಿದೆ. ಇದರ ಸೇವನೆಯಿಂದ ಮನುಷ್ಯನಲ್ಲಿ ಹೊಟ್ಟೆ ಶೂಲೆ, ವಾಂತಿ ಕೆಲವೊಮ್ಮೆ ಚಿತ್ತಭ್ರಮೆ ಮುಂತಾದ ವಿಕಾರಗಳುಂಟಾಗಿ ಕೊನೆಗೆ ಸಾವು ಸಂಭವಿಸುತ್ತದೆ. ಈ ವಿಶವಸ್ತುವಿರುವುದರಿಂದ ಕೆಲವೆಡೆ ಮೀನು, ಕಾಗೆ ಮುಂತಾದ ಪ್ರಾಣಿಗಳನ್ನು ಕೊಲ್ಲಲು ಇದರ ಕಾಯಿಗಳನ್ನು ಬಳಸುವುದುಂಟು. ಈ ವಸ್ತು ಇಷ್ಟು ವಿಷಪೂರಿತವಾದರೂ ಇದನ್ನು ಕಾಯಿಗಳಿಂದ ಪ್ರತ್ಯೇಕಿಸಿ ಕೆಲವು ರೋಗಗಳಿಗೆ, ಸೊಂಕುಗಳಿಗೆ ಔಷಧಿಯಾಗಿ ಉಪಯೋಗಿಸುವುದೂ ಉಂಟು. ಕ್ಷಯ ರೋಗಿಗಳು ರಾತ್ರಿ ಬೆವರುವುದನ್ನು ತಡೆಯಲು, ಗಜಕರ್ಣಕ್ಕೆ ಮತ್ತು ಹೇನು ನಿವಾರಕ ಮುಲಾಮುಗಳಲ್ಲಿ ಈ ವಸ್ತುವನ್ನು ಉಪಯೋಗಿಸುತ್ತಾರೆ. ಒಣಗಿಸಿದ ಹಣ್ಣುಗಳಿಗೆ ಕಾಕ್ಯುಲಸ್ ಇಂಡಿಕಸ್ ಅಥವಾ ಕಾಕ್ಯುಲಸ್ ಫ್ರಕ್ಟಸ್ ಎಂಬ ವಾಣಿಜ್ಯ ನಾಮವಿದೆ. ಔಷಧೀಯ ಮಹತ್ತ್ವದಿಂದಾಗಿ ಕಾಗೆಮಾಂಬಳ್ಳಿಯ ಕಾಯಿಗಳು ಇತ್ತೀಚಿಗೆ ವಿದೇಶಗಳಿಗೆ ನಿರ್ಯಾತವಾಗುತ್ತಿದೆ.