ಕಾಂತ ಮಸೂರ
ಕಾಂತ ಮಸೂರ ಎಲೆಕ್ಟ್ರಾನ್ ದೂಲಗಳನ್ನು ಅಭಿಸರಿಸಲು (ಕನ್ವರ್ಜ್) ಉಪಯೋಗಿಸುವ ಕಾಂತಕ್ಷೇತ್ರ (ಮ್ಯಾಗ್ನೆಟಿಕ್ ಲೆನ್ಸ್). ಬೆಳಕಿನ ಕಿರಣಗಳನ್ನು ಗಾಜಿನ ಮಸೂರ ಬಾಗಿಸಿ ಅಭಿಸರಿಸುವ ರೀತಿಯಲ್ಲಿ ಇದು ಎಲೆಕ್ಟ್ರಾನುಗಳನ್ನು ಬಾಗಿಸಿ ಅಭಿಸರಿಸುತ್ತದೆ.
ಚಿತ್ರ 1ರಲ್ಲಿ ತೋರಿಸಿರುವಂಥ ಒಂದು ಸುರುಳಿಯ ಮೂಲಕ ವಿದ್ಯುತ್ತನ್ನು ಹರಿಸಿದರೆ ಅದರ ಅಕ್ಷನೇರದಲ್ಲಿ ಕಾಂತಕ್ಷೇತ್ರ (ಚುಕ್ಕಿಗೆರೆ) ಉಂಟಾಗುತ್ತದೆ. ಈಗ ಇದರ ಅಕ್ಷನೇರದಲ್ಲಿ ಎಲೆಕ್ಟ್ರಾನುಗಳ ಒಂದು ಅಪಸರಣ ದೊಲವನ್ನು ಕಳುಹಿಸಿದರೆ ಎಲೆಕ್ಟ್ರಾನುಗಳು ಮುಂದೆ ಸ್ವಲ್ಪ ದೂರದಲ್ಲಿ ಅಭಿಸರಿಸುತ್ತವೆ.
[೧]
ಚಿತ್ರ (2)ರಲ್ಲಿ ತೋರಿಸಿರುವಂತೆ ಸ್ವಲ್ಪ ತೆರಪು ಉಳ್ಳ ಮಿದು ಕಬ್ಬಿಣ ಕವಚದಲ್ಲಿ ಒಂದು ಸುರುಳಿಯನ್ನು ಸುತ್ತಿ ಅದರಲ್ಲಿ ವಿದ್ಯುತ್ತನ್ನು ಹರಿಸಿದರೆ ಅಲ್ಲಿ ಉಂಟಾಗುವ ಕಾಂತಕ್ಷೇತ್ರ (ಚುಕ್ಕಿಗೆರೆ) ಕಾಂತ ಮಸೂರದಂತೆ ವರ್ತಿಸುತ್ತದೆ.[೨]
ಕಾಂತ ಮಸೂರಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಿಗಳಲ್ಲಿ ಮತ್ತು ಹೆಚ್ಚು ವೋಲ್ಟೇಜಿನ ಕ್ಯಾಥೋಡ್ ಕಿರಣ ಕವಾಟಗಳಲ್ಲಿ ಉಪಯೋಗಿಸುತ್ತಾರೆ. ಕಾಂತ ಮಸೂರ ಉಂಟುಮಾಡುವ ಬಿಂಬ ಬಾಗಿರುತ್ತದೆ. ಈ ಬಾಗುವಿಕೆ ಕಾಂತಕ್ಷೇತ್ರವನ್ನವಲಂಬಿಸಿರುವುದು.
ಉಲ್ಲೇಖಗಳು
ಬದಲಾಯಿಸಿ- ↑ https://en.wikipedia.org/wiki/Magnetic_lens
- ↑ Hafner B., 2008, Introductory Transmission Electron Microscopy Primer, Characterization Facility, University of Minnesota - "Reference"