ಕಾಂತ ತಂತಿ

ಮ್ಯಾಗ್ನೆಟ್ ತಂತಿ ಅಥವಾ ಎನಾಮೆಲ್ಡ್ ತಂತಿಯು ಒಂದು ತಾಮ್ರ ಅಥವಾ ಅಲ್ಯುಮಿನಿಯಂ ತಂತಿಯಿಂದ ತುಂಬಿದ್ದು, ಅತಿ ತೆಳ

ವಿದ್ಯುತ್ ಕಾಂತಗಳು ಮತ್ತು ವಿದ್ಯುತ್ ಕಾಂತ ಉಪಕರಣಗಳಲ್ಲಿ ಉಪಯೋಗಿಸುವ, ಅವಾಹಕದಿಂದ ಮುಚ್ಚಿದ ತಾಮ್ರ ಅಥವಾ ಅಲ್ಯೂಮಿನಿಯಮ್ ತಂತಿ (ಮ್ಯಾಗ್ನೆಟಿಕ್ ವೈರ್). ಇದು ಕಾಗದ, ದಾರ, ಎನಾಮಲ್, ಫಾರಮ್ ವಾರ್ ಮುಂತಾದ ಅವಾಹಕ ವಸ್ತುಗಳಿಂದ ಮುಚ್ಚಿರುವ ಒಂದೆಳೆ ತಂತಿ. ವಿವಿಧ ಉಪಯೋಗಗಳಿಗೆ ವಿವಿಧ ರೀತಿಯ ಅವಾಹಕಗಳನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ ಕೆಲವು ವಿದ್ಯುತ್ ಟ್ರಾನ್ಸ್‍ಫಾರ್ಮರುಗಳಲ್ಲಿ ಕಾಗದದಿಂದ ಮುಚ್ಚಿದ ತಂತಿಯನ್ನು ಉಪಯೋಗಿಸಿದರೆ ವಾಹನಗಳ ಜ್ವಲನ (ಇಗ್ನಿಷನ್) ಸುರುಳಿಗಳು, ಮ್ಯಾಗ್ನೆಟೋ ಸುರುಳಿಗಳು, ರಿಲೇಗಳು, ಟೂಬ್‍ಲೈಟ್‍ಗಳ ಬೆಲ್ಲಾಸ್ಟುಗಳು, ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಉಪಯೋಗಿಸುವ ಸುರುಳಿಗಳು ಟ್ರಾನ್ಸ್‍ಫಾರ್ಮರುಗಳು ಮುಂತಾದುವುಗಳಲ್ಲಿ ಎನಾಮಲಿನಿಂದ ಮುಚ್ಚಿದ ತಂತಿಯನ್ನು ಉಪಯೋಗಿಸುತ್ತಾರೆ. [೧]

ಉಷ್ಣತೆ ಬದಲಾಯಿಸಿ

ಕೆಲವು ಉಪಕರಣಗಳಲ್ಲಿ ಹೆಚ್ಚು ಉಷ್ಣ ಉತ್ಪತ್ತಿಯಾಗುವುದಿಂದ ಅವುಗಳಲ್ಲಿ ಉಪಯೋಗಿಸುವ ತಂತಿಯನ್ನು ಮುಚ್ಚಿದ ಅವಾಹಕ ಆ ಉಷ್ಣವನ್ನು ತಡೆಯುವಂಥದ್ದಾಗಿರಬೇಕು. ಅವು ತಡೆಯಬಹುದಾದ ಅತ್ಯಧಿಕ ಉಷ್ಣತೆಯನ್ನನುಸರಿಸಿ ಅವಾಹಕಗಳನ್ನು ಐದು ಭಾಗಗಳಾಗಿ ವಿಂಗಡಿಸಿದ್ದಾರೆ: ಭಾಗ 0-900ಸೆಂ. ಭಾಗ ಂ-1050ಸೆಂ. ಭಾಗ ಃ-1300ಸೆಂ. ಭಾಗ ಈ-1550ಸೆಂ; ಮತ್ತು ಭಾಗ ಊ-1800ಸೆಂ.

ಉಲ್ಲೇಖನಗಳು: ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2015-07-11. Retrieved 2016-10-20.