ಕಾಂತೀಯ ಅನುರಣನ ಚಿತ್ರಣ

ಕಾಂತೀಯ ಅನುರಣನ ಚಿತ್ರಣ[]

ಕಾಂತೀಯ ಅನುರಣನದಿಂದ (ಒಚಿgಟಿeಣiಛಿ ಖesoಟಿಚಿಟಿಛಿe) ವಸ್ತುಗಳ ಚಿತ್ರಣವನ್ನು ಪಡೆಯಬಲ್ಲ ತಾಂತ್ರಿಕತೆಯ ಬಳಕೆಯಿಂದ ಇತ್ತೀಚಿನ ಕಾಲದಲ್ಲಿ ರೋಗ ತಪಾಸಣೆಯ ಮತ್ತು ರೋಗ ಎಚ್ಚರಿಕೆ ಕ್ರಮಗಳಲ್ಲಿ ಅಪಾರ ಸುಧಾರಣೆಗಳು ಕಂಡುಬಂದಿವೆ. ಇದನ್ನು ಇಂಗ್ಲಿಷ್ ಭಾಷೆಯಲ್ಲಿ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಒಖI - ಒಚಿgಟಿeಣiಛಿ ಖesoಟಿಚಿಟಿಛಿe Imಚಿgiಟಿg) ಎಂದು ಕರೆಯುತ್ತಾರೆ. ಇದು ಉನ್ನತ ಗುಣಮಟ್ಟದ ಮೂರು ಆಯಾಮದ ಪ್ರತಿಬಿಂಬಗಳನ್ನು ಯಾವುದೇ ಕೋನದಲ್ಲಿ ಮತ್ತು ದಿಕ್ಕಿನಲ್ಲಿ ಪಡೆಯುವ ವಿಧಾನ. ಶಸ್ತ್ರಕ್ರಿಯೆ ಯನ್ನು ಮಾಡಿ ಮಾನವನ ದೇಹದೊಳಗಿನ ಅವಯವಗಳ ನೋಟವನ್ನು ಪಡೆಯುವ ಅಗತ್ಯವಿಲ್ಲದೆಯೇ ಬಹಳ ಕಡಮೆ ಕಾಲಾವಧಿಯಲ್ಲಿ ದೇಹದ ಅಂಗಭಾಗಗಳ ಒಳಗಿನ ನೋಟವನ್ನು ಇದು ಒದಗಿಸುತ್ತದೆ. ಇದು ಸರ್ವತೋಮುಖವಾದ, ಶಕ್ತಿಶಾಲಿಯಾದ ಮತ್ತು ಸಂವೇದನೆಯುಳ್ಳ ತಂತ್ರವಾಗಿದ್ದು ವೈದ್ಯಕೀಯ ಚಿಕಿತ್ಸೆ, ರೋಗ ತಪಾಸಣೆ, ಚಿಕಿತ್ಸೆ ಹಾಗೂ ಮರುಪರೀಕ್ಷಾ ಕ್ರಿಯೆಗಳಿಗೆ ಒಂದು ಪ್ರಮುಖವಾದ ವಿಧಾನವಾಗಿದೆ.

ಕಾಂತೀಯ ಅನುರಣನ ಚಿತ್ರಣಕ್ಕೆ ಸಂಬಂಧಿಸಿದ ಮಹತ್ವದ ಸಂಶೋಧನೆಗಳನ್ನು ಗುರುತಿಸಿ 2003ನೇ ವರ್ಷದ ಜೀವವಿಜ್ಞಾನ ಅಥವಾ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಅಮೆರಿಕಾದ ಇಲಿನಾಯ್ಸ್ ವಿಶ್ವ ವಿದ್ಯಾಲಯದ ಪೌಲ್ ಸಿ. ಲಾಟೆರ್‍ಬರ್ ಮತ್ತು ಸಂಯುಕ್ತ ರಾಜ್ಯದ ನೊಟಿಂಗಾಮ್ ವಿಶ್ವವಿದ್ಯಾಲಯದ ಸರ್ ಫೀಟರ್ ಮಾನ್ಸ್ ಫೀಲ್ಡ್ ಅವರಿಗೆ ಜಂಟಿಯಾಗಿ ಕೊಡಲಾಯಿತು.

ಉಲ್ಲೇಖನೆಗಳು:

ಬದಲಾಯಿಸಿ
  1. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಕಾಂತೀಯ_ಅನುರಣನ_ಚಿತ್ರಣ