ಕಸೂರ್ ಒಂದು ಪಶ್ಚಿಮ ಪಾಕಿಸ್ಥಾನದ ಲಾಹೋರ್ ಜಿಲ್ಲೆಯ ಪಟ್ಟಣ.ಈ ಪಟ್ಟಣವು ಬೀಯಾಸ್ ನದಿಯ ಹಳೆಯ ದಡದ ಮೇಲೆ ಲಾಹೋರಿಗೆ ದಕ್ಷಿಣಾಗ್ನೇಯದಲ್ಲಿ 34 ಮೈಲಿಗಳ ದೂರದಲ್ಲಿದೆ. ಭಾರತದ ಅಮೃತಸರ ಮತ್ತು ಫಿರೋಪುರಗಳ ಮೇಲಿರುವ ಖೆಮ್ ಕರನ್ ಮತ್ತು ಹುಸೇನಿವಾಲ ಇದರ ಎದುರಿಗೆ ಗಡಿಯಾಚೆ ಇರುವ ಪಟ್ಟಣಗಳು. ಕಸೂರಿನ ಜನಸಂಖ್ಯೆ 74,546 (1961).ಈ ಪಟ್ಟಣವು ಕೋಟೆಗಳಿಂದ ಕೂಡಿದ (26) ಗ್ರಾಮಗಳನ್ನು ಒಳಗೊಂಡಿದೆ. ಇವು 4 ಚ.ಮೈ ಸ್ಥಳದ ವಿಸ್ತೀರ್ಣ ಹಬ್ಬಿಕೊಂಡಿದೆ. ಲಾಹೋರ್-ಕರಾಚಿ ಮುಖ್ಯ ರೈಲುಮಾರ್ಗದೊಂದಿಗೆ ಕಸೂರಿಗೆ ಸಂಪರ್ಕವುಂಟು. ಕಸೂರ್ ಒಂದು ಉಣ್ಣೆಯ ವ್ಯಾಪಾರ ಕೇಂದ್ರವೆಂದೇ ಪ್ರಸಿದ್ಧಿಯಾಗಿದೆ. ಇಲ್ಲಿ ಚರ್ಮ ಹದಗಾರಿಕೆ, ಚರ್ಮದ ವಸ್ತುಗಳ ತಯಾರಿಕೆ, ಎಣ್ಣೆ ತೆಗೆಯುವುದು, ಹತ್ತಿ ನೂಲ್ಗೆ ನೇಯ್ಗೆ ಎಂಬ ಮುಂತಾದ ಕೈಗಾರಿಕೆಗಳಿವೆ. .

ಕಸೂರ್‌ ಪಟ್ಟಣದ ಇತಿಹಾಸ

ಬದಲಾಯಿಸಿ

 ಶ್ರೀರಾಮನ ಮಕ್ಕಳಾದ ಲವಕುಶರ ಪೈಕಿ ಕುಶನಿಂದ ಕಸೂರು ಲವನಿಂದ ಲಾಹೋರು ಸ್ಥಾಪಿತವಾದುದೆಂದು ಒಂದು ಐತಿಹಾಸದಲ್ಲಿ ಉಂಟು. ೭ನೇಯ ಶತಮಾನದಲ್ಲಿ ಚೀನೀ ಯಾತ್ರಿಕ ಹುಯನ್ ತ್ಸಾಂಗ್ ಭೇಟಿ ಕೊಟ್ಟಿದ್ದ ಸ್ಥಳಗಳಲ್ಲಿ ಕಸೂರ್ ಒಂದೆಂದು ಇತಿಹಾಸಕಾರ ಜೆ.ಡಿ. ಕನಿಂಗ್‍ಹ್ಯಾಮನ ಅಭಿಪ್ರಾಯ. ಈಗಿನ ಕಸೂರಿನ ನಿವೇಶನದಲ್ಲಿ ಮುಸ್ಲಿಂ ಆಕ್ರಮಣಕ್ಕೂ ಹಿಂದಿನ ಕಾಲದಲ್ಲಿ, ರಜಪೂತರಿಗೆ ಸೇರಿದ್ದ ಒಂದು ಪಟ್ಟಣವಿತ್ತೆಂದು ಕಾಣುತ್ತದೆ.  ಆದರೆ ಮುಸ್ಲಿಮರ ಆಳ್ವಿಕೆಯಾರಂಭವಾದ ಬಹಳ ಕಾಲದವರೆಗೂ ಕಸೂರಿನ ಹೆಸರು ಚರಿತ್ರೆಯಲ್ಲಿ ಎಲ್ಲೂ ಬರುವುದಿಲ್ಲ. ಮೊಗಲ್ ಚಕ್ರವರ್ತಿ ಬಾಬರನ ಕಾಲದಲ್ಲೋ ಅವನ ಮೊಮ್ಮಗ ಅಕ್ಬರನ ಕಾಲದಲ್ಲೋ ಸಿಂಧೂನದಿಯ ಪೂರ್ವದ ಕಡೆಯಿಂದ ಪಠಾಣರು ಇಲ್ಲಿ ಬಂದು ನೆಲೆಸಿರಬೇಕೆಂದು ಕಾಣುತ್ತದೆ. ಆಗಲೇ ಇದರ ಹೆಸರು ಇತಿಹಾಸದಲ್ಲಿ ಕಂಡುಬಂದದ್ದು. ಸಿಖ್ಖರು ಪ್ರಬಲರಾದ ಮೇಲೆ ಇದು ರಣಜಿತಸಿಂಗನಿಗೆ ಅಧೀನವಾಯಿತು.[][]

ರಾಷ್ಟ್ರ ಭಾಷೆ ಉರ್ದು. ಆದರೆ ಇಲ್ಲಿನವರು ಸಾಮನ್ಯವಾಗಿ ಪಂಜಾಬಿ ಭಾಷೆಯನ್ನು ಮಾತನಾಡುತ್ತರೆ.[]

ಪ್ರಸಿದ್ಧ ವ್ಯಕ್ತಿಗಳು

ಬದಲಾಯಿಸಿ
  • ಬುಲ್ಲೇಶ್ ಷಾ, ಸೂಫಿ ಸಂತ ಮತ್ತು ಆಧ್ಯಾತ್ಮಿಕ ಕವಿ
  • ಹಫೀಜ್ ಗುಲಾಂ ಮುರ್ತಜ,ಬುಲ್ಲೇಶ್ ಷಾ ಮತ್ತು ವಾರಿಸ್ ಶಾಹ್ ಶಿಕ್ಷಕ
  • ನೂರ್ ಜಹಾನ್, ಗಾಯಕಿ ಮತ್ತು ನಟಿ
  • ಬಾಸಿತ್ ಜಹಾಂಗೀರ್ ಶೇಖ್ ಪ್ರಾಂತೀಯ ಅಸೆಂಬ್ಲಿಯ ಮಾಜಿ ಸದಸ್ಯ
  • ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಮಲಿಕ್ ಮೆರಜ್ ಖಾಲಿದ್ ಮಾಜಿ ಸ್ಪೀಕರ್ ಪಾಕಿಸ್ತಾನದ ಮಾಜಿ ಪ್ರಧಾನಿ
  • ಅಹ್ಮದ್ ರಾಜಾ ಖಾನ್ ಕಸುರಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ ಮಾಜಿ ಸದಸ್ಯ
  • ಇರ್ಷಾದ್ ಅಹ್ಮದ್ ಹಕ್ಕಾನಿ, ಪತ್ರಕರ್ತ, ಬರಹಗಾರ
  • ಫೂಲ್ ಮುಹಮ್ಮದ್ ಖಾನ್, ರಾಜಕಾರಣಿ
  • ರಾಣಾ ಮುಹಮ್ಮದ್ ಇಕ್ಬಾಲ್ ಖಾನ್ ಪ್ರಸ್ತುತ ಸ್ಪೀಕರ್ ಪಂಜಾಬ್ ವಿಧಾನಸಭೆಯಲ್ಲಿ[]

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original (PDF) on 2018-12-25. Retrieved 2016-11-28.
  2. http://citykasur.tripod.com/citynetcafe/id12.html
  3. "ಆರ್ಕೈವ್ ನಕಲು". Archived from the original (PDF) on 2018-12-25. Retrieved 2016-11-28.
  4. http://citykasur.tripod.com/citynetcafe/id12.html


"https://kn.wikipedia.org/w/index.php?title=ಕಸೂರ್&oldid=1250027" ಇಂದ ಪಡೆಯಲ್ಪಟ್ಟಿದೆ