You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಕಲ್ಪಿಸುವ ಸಹಜಶಕ್ತಿ ಎಂದೂ ಕರೆಯಲ್ಪಡುವ ಕಲ್ಪನೆಯು ದೃಷ್ಟಿ, ಶ್ರವಣ ಅಥವಾ ಇತರ ಇಂದ್ರಿಯಗಳ ಮೂಲಕ ಗ್ರಹಿಸಲ್ಪಡದಿರುವ ಹೊಸ ಚಿತ್ರಗಳನ್ನು ಮತ್ತು ಸಂವೇದನೆಗಳನ್ನು ರೂಪಿಸುವ ಸಾಮರ್ಥ್ಯ. ಕಲ್ಪನೆಯು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜ್ಞಾನವನ್ನು ಅನ್ವಯಿಸುವಂತೆ ಮಾಡಲು ನೆರವಾಗುತ್ತದೆ ಮತ್ತು ಅನುಭವ ಹಾಗೂ ಕಲಿಕಾ ಪ್ರಕ್ರಿಯೆಯನ್ನು ಸಂಯೋಜಿಸುವಲ್ಲಿ ಮೂಲಭೂತವಾಗಿದೆ. ಕಲ್ಪನೆಗೆ ಒಂದು ಮೂಲಭೂತ ತರಬೇತಿ ಎಂದರೆ ಕಥೆಗಳನ್ನು ಕೇಳುವುದು. ಇದರಲ್ಲಿ ಆಯ್ದುಕೊಳ್ಳಲಾದ ಪದಗಳ ನಿಖರತೆಯು "ಪ್ರಪಂಚಗಳನ್ನು ಪ್ರಚೋದಿಸವಲ್ಲಿ" ಮೂಲಭೂತ ಅಂಶವಾಗಿದೆ. ಇದು ಚಿತ್ರ ರಚನೆ ಅಥವಾ "ರಹಸ್ಯ" ಎಂದು ವಿವರಿಸಬಹುದಾದ ಯಾವುದೇ ಸಂವೇದನೆಯ ಸಂಪೂರ್ಣ ಆವರ್ತವಾಗಿದೆ. ಇದು ರಹಸ್ಯ ಏಕೆಂದರೆ ಬೇರೆ ಯಾರ ಅರಿವಿಲ್ಲದೆಯೇ ನಡೆಯುತ್ತದೆ. ಒಬ್ಬ ವ್ಯಕ್ತಿಯು ತನ್ನ ಮನಸ್ಥಿತಿಯ ಪ್ರಕಾರ ಕಲ್ಪಿಸಿಕೊಳ್ಳಬಹುದು, ಮತ್ತು ಇದು ಪರಿಸ್ಥಿತಿಯನ್ನು ಅವಲಂಬಿಸಿ ಒಳ್ಳೆಯದು ಅಥವಾ ಕೆಟ್ಟದ್ದು ಇರಬಹುದು. ಕೆಲವರು ಒತ್ತಡ ಅಥವಾ ವಿಷಣ್ಣತೆಯ ಸ್ಥಿತಿಯಲ್ಲಿ ತಮ್ಮನ್ನು ಶಾಂತಗೊಳಿಸುವ ಸಲುವಾಗಿ ಕಲ್ಪಿಸುತ್ತಾರೆ. ಇದನ್ನು ಹಂಚಿಕೊಂಡ ವಿಶ್ವದ ಇಂದ್ರಿಯಾನುಭವಗಳಿಂದ ಪಡೆದ ಅಂಶಗಳಿಂದ ಮನಸ್ಸಿನೊಳಗೆ ಭಾಗಶಃ ಅಥವಾ ಪೂರ್ಣ ವೈಯಕ್ತಿಕ ಪ್ರಪಂಚಗಳನ್ನು ಆವಿಷ್ಕರಿಸುವ ಸಹಜ ಸಾಮರ್ಥ್ಯ ಮತ್ತು ಪ್ರಕ್ರಿಯೆ ಎಂದು ಸ್ವೀಕರಿಸಲಾಗಿದೆ. ಈ ಪದವನ್ನು ಮನಃಶಾಸ್ತ್ರದಲ್ಲಿ, ಪೂರ್ವದಲ್ಲಿ ಇಂದ್ರಿಯಾನುಭವದಲ್ಲಿ ನೀಡಲಾದ ವಸ್ತುಗಳ ಅನುಭೂತಿಗಳನ್ನು ಮನಸ್ಸಿನಲ್ಲಿ ಪುನರುಜ್ಜೀವಿತಗೊಳಿಸುವ ಪ್ರಕ್ರಿಯೆಗೆ ತಾಂತ್ರಿಕವಾಗಿ ಬಳಸಲಾಗುತ್ತದೆ. ಪದದ ಈ ಬಳಕೆಯು ಸಾಮಾನ್ಯ ಭಾಷೆಯ ಬಳಕೆಗೆ ವಿರುದ್ಧವಾಗಿರುವ ಕಾರಣ, ಕೆಲವು ಮನೋವಿಜ್ಞಾನಿಗಳು ಈ ಪ್ರಕ್ರಿಯೆಯನ್ನು "ಚಿತ್ರಣ" ಅಥವಾ "ಅಲಂಕಾರಿಕ ನಿರೂಪಣೆ" ಎಂದು ವರ್ಣಿಸಲು ಅಥವಾ "ಫಲದಾಯಕ" ಅಥವಾ "ರಚನಾತ್ಮಕ" ಕಲ್ಪನೆಗೆ ಬದಲಾಗಿ "ಪುನರುತ್ಪಾದಕ" ಎಂದು ಅದರ ಬಗ್ಗೆ ಮಾತನಾಡಲು ಇಷ್ಟಪಟ್ಟಿದ್ದಾರೆ. ಕಲ್ಪಿಸಿಕೊಂಡ ಚಿತ್ರಗಳನ್ನು "ಮನಸ್ಸಿನ ಕಣ್ಣಿನಿಂದ" ಕಾಣಲಾಗುತ್ತದೆ.

ಕಲ್ಪನೆಯನ್ನು ಕಲ್ಪಿತ ಕಥೆಗಳು ಅಥವಾ ಫ್ಯಾಂಟಸಿಗಳಂತಹ ಕಥೆಗಳ ಮೂಲಕವೂ ವ್ಯಕ್ತಪಡಿಸಬಹುದು. ತಮ್ಮ ಕಲ್ಪನೆಗಳನ್ನು ಉಪಯೋಗಿಸಲು ಮಕ್ಕಳು ಹಲವುವೇಳೆ ಅಂತಹ ಕಥೆಗಳು ಮತ್ತು ನಟನಾ ಆಟಗಳನ್ನು ಬಳಸುತ್ತಾರೆ. ಮಕ್ಕಳು ಕಲ್ಪನಾಶಕ್ತಿಯನ್ನು ವಿಕಸಿಸಿಕೊಂಡಾಗ ಅವರು ಎರಡು ಹಂತಗಳಲ್ಲಿ ಆಡುತ್ತಾರೆ: ಮೊದಲು, ತಮ್ಮ ಕಲ್ಪನೆಯಿಂದ ವಿಕಸಿಸಿಕೊಂಡದ್ದನ್ನು ಅಭಿನಯಿಸಲು ಅವರು ಪಾತ್ರಾಭಿನಯವನ್ನು ಬಳಸುತ್ತಾರೆ, ಮತ್ತು ಎರಡನೇ ಸ್ತರದಲ್ಲಿ, ತಮ್ಮ ಕಾಲ್ಪನಿಕ ಸ್ಥಿತಿಯಿಂದ ನಟನೆ ಮೂಲಕ ಅವರು ಮತ್ತೆ ಆಡುತ್ತಾರೆ, ಹೇಗೆಂದರೆ ತಾವು ಸೃಷ್ಟಿಸಿಕೊಂಡದ್ದು ಈಗಾಗಲೇ ನಿರೂಪಿತ ಕಟ್ಟುಕತೆಯಲ್ಲಿ ಇರುವ ನೈಜ ವಾಸ್ತವಿಕತೆಯಾಗಿದೆ ಎಂಬಂತೆ.

ಪದದ ಸಾಮಾನ್ಯ ಬಳಕೆಯು ನೋಡಿದ, ಕೇಳಿದ, ಅಥವಾ ಹಿಂದೆ ಅನಿಸಿದ, ಅಥವಾ ಕನಿಷ್ಠಪಕ್ಷ ಕೇವಲ ಭಾಗಶಃ ಅಥವಾ ವಿವಿಧ ಸಂಯೋಜನೆಗಳಲ್ಲಿ ಆಗಿದ್ದರ ಸಹಾಯದಿಂದ ಮನಸ್ಸಿನಲ್ಲಿ ಪೂರ್ವದಲ್ಲಿ ಅನುಭವಿಸಲ್ಪಡದಿರುವ ಹೊಸ ಚಿತ್ರಗಳನ್ನು ರೂಪಿಸಿಕೊಳ್ಳುವ ಪ್ರಕ್ರಿಯೆಗೆ ಆಗುತ್ತದೆ. ಕೆಲವು ವಿಶಿಷ್ಟ ಉದಾಹರಣೆಗಳೆಂದರೆ: ಕಲ್ಪಿತ ಕಥೆ, ಕಟ್ಟುಕಥೆ ಮತ್ತು ಹಲವುವೇಳೆ ಫ್ಯಾಂಟಸಿ ಮತ್ತು ವೈಜ್ಞಾನಿಕ ಕಟ್ಟುಕಥೆಯಲ್ಲಿ ಉದ್ಧರಿಸಲಾದ ಸತ್ಯಾಭಾಸದ ರೂಪವು ಕಾಲ್ಪನಿಕ ಪ್ರಪಂಚದಲ್ಲಿರುವುದನ್ನು ಹೊರತುಪಡಿಸಿ ಅಸ್ತಿತ್ವದಲ್ಲಿರದ ಕಾಲ್ಪನಿಕ ಪುಸ್ತಕಗಳು ಅಥವಾ ವರ್ಷಗಳಂತಹ ಮನಸ್ಸಿನ ವಸ್ತುಗಳನ್ನು ಉಲ್ಲೇಖಿಸುವ ಮೂಲಕ ಅಂತಹ ಕಥೆಗಳು ಸತ್ಯ ಎಂದು ತೋರ್ಪಡಿಸುವಂತೆ ಓದುಗರನ್ನು ಆಹ್ವಾನಿಸುತ್ತದೆ.

ವ್ಯಾವಹಾರಿಕ ಆವಶ್ಯಕತೆಯ ಅಗತ್ಯಗಳಿಂದ ನಿಖರ ಜ್ಞಾನಾರ್ಜನೆಗೆ ಸೀಮಿತವಾಗಿರದ ಕಲ್ಪನೆಯು ವಸ್ತುನಿಷ್ಠ ನಿರ್ಬಂಧಗಳಿಂದ ಹೆಚ್ಚಾಗಿ ಮುಕ್ತವಾಗಿದೆ. ಮತ್ತೊಬ್ಬ ವ್ಯಕ್ತಿಯ ಸ್ಥಾನದಲ್ಲಿ ಒಬ್ಬರನ್ನು ಸ್ವತಃ ಕಲ್ಪಿಸಿಕೊಳ್ಳುವ ಸಾಮರ್ಥ್ಯವು ಸಾಮಾಜಿಕ ಸಂಬಂಧಗಳು ಮತ್ತು ತಿಳಿವಳಿಕೆಗೆ ಬಹಳ ಮುಖ್ಯವಾಗಿದೆ. "ಕಲ್ಪನೆಯು ... ಜ್ಞಾನಕ್ಕಿಂತ ಹೆಚ್ಚು ಮುಖ್ಯವಾಗಿದೆ. ಜ್ಞಾನ ಸೀಮಿತವಾಗಿದೆ. ಕಲ್ಪನೆಯು ವಿಶ್ವವನ್ನು ಸುತ್ತುವರೆದಿದೆ." ಎಂದು ಆಲ್ಬರ್ಟ್ ಐನ್ಸ್ಟೈನ್ ಹೇಳಿದರು.

ಆದರೆ ವಾಸ್ತವದಲ್ಲಿ, ಜ್ಞಾನವಿಲ್ಲದೆ, ಕಲ್ಪನೆಯ ಅಭಿವೃದ್ಧಿ ಸಾಧ್ಯವಿಲ್ಲ.

ಆದರೆ, ವಿವಿಧ ಕಾರ್ಯಕ್ಷೇತ್ರಗಳಲ್ಲಿ, ಕಲ್ಪನೆ ಕೂಡ ಆಚರಣೆಯಲ್ಲಿ ಸೀಮಿತವಾಗಿದೆ: ಹಾಗಾಗಿ ಯಾವ ವ್ಯಕ್ತಿಯ ಕಲ್ಪನೆಗಳು ಚಿಂತನೆಯ ಪ್ರಾಥಮಿಕ ನಿಯಮಗಳಿಗೆ, ಅಥವಾ ಪ್ರಾಯೋಗಿಕ ಸಾಧ್ಯತೆಯ ಅಗತ್ಯ ತತ್ವಗಳಿಗೆ, ಅಥವಾ ಒಂದು ನಿರ್ದಿಷ್ಟ ಸಂದರ್ಭದ ಸಮಂಜಸವಾದ ಸಂಭವನೀಯತೆಗಳಿಗೆ ಹಿಂಸೆ ಮಾಡುತ್ತವೊ, ಅಂತಹ ವ್ಯಕ್ತಿಯನ್ನು ಮಾನಸಿಕ ಆರೋಗ್ಯ ವೃತ್ತಿಪರರು ಸಾಮಾನ್ಯವಾಗಿ ಹುಚ್ಚನೆಂದು ಪರಿಗಣಿಸುತ್ತಾರೆ.

ಅದೇ ಮಿತಿಗಳು ವೈಜ್ಞಾನಿಕ ಕಲ್ಪಿತ ಸಿದ್ಧಾಂತಗಳ ಕ್ಷೇತ್ರದಲ್ಲಿ ಕಲ್ಪನೆಯನ್ನು ದುರ್ಗಮವಾಗಿಸುತ್ತವೆ. ವೈಜ್ಞಾನಿಕ ಸಂಶೋಧನೆಯಲ್ಲಿನ ಪ್ರಗತಿಯು ಹೆಚ್ಚಾಗಿ ಕಲ್ಪನೆಯಿಂದ ಅಭಿವೃದ್ಧಿಗೊಂಡ ತಾತ್ಕಾಲಿಕ ವಿವರಣೆಗಳ ಕಾರಣದಿಂದ ಇರುತ್ತವೆ, ಆದರೆ ಅಂತಹ ಕಲ್ಪಿತ ಸಿದ್ಧಾಂತಗಳನ್ನು ಪೂರ್ವದಲ್ಲಿ ಖಚಿತಪಡಿಸಿಕೊಂಡ ವಾಸ್ತವಾಂಶಗಳ ಸಂಬಂಧದಲ್ಲಿ ಮತ್ತು ನಿರ್ದಿಷ್ಟ ವಿಜ್ಞಾನದ ತತ್ವಗಳಿಗೆ ಅನುಗುಣವಾಗಿ ರೂಪಿಸಿರಬೇಕು.

ಕಲ್ಪನೆಯು ಕಾರ್ಯಗಳನ್ನು ಆಧರಿಸಿದ ಸಿದ್ಧಾಂತಗಳು ಮತ್ತು ವಿಚಾರಗಳನ್ನು ಅಭಿವೃದ್ಧಿಪಡಿಸಲು ಬಳಸಲಾದ ಮನಸ್ಸಿನ ಪ್ರಾಯೋಗಿಕ ವಿಭಾಗವಾಗಿದೆ. ವಾಸ್ತವಿಕ ಗ್ರಹಿಕೆಗಳಿಂದ ವಸ್ತುಗಳನ್ನು ತೆಗೆದುಕೊಂಡು, ಹೊಸ ಅಥವಾ ಪರಿಷ್ಕೃತ ವಿಚಾರಗಳನ್ನು ಸೃಷ್ಟಿಸಲು ಕಲ್ಪನೆಯು ಸಂಕೀರ್ಣವಾದ "ಇದ್ದರೆ"-ಫಲನಗಳನ್ನು ಬಳಸುತ್ತದೆ. ಹಳೆಯ ಮತ್ತು ಹೊಸ ಕಾರ್ಯಗಳನ್ನು ನೆರವೇರಿಸುವ ಸಲುವಾಗಿ ಹೆಚ್ಚು ಉತ್ತಮ ಮತ್ತು ಸುಲಭ ರೀತಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಮನಸ್ಸಿನ ಈ ಭಾಗವು ಮಹತ್ವಪೂರ್ಣವಾಗಿದೆ. ಈ ಪ್ರಾಯೋಗಿಕ ವಿಚಾರಗಳನ್ನು ಒಂದು ವಾಸ್ತವ ಜಗತ್ತಿನ ಒಳಗೆ ಸುರಕ್ಷಿತವಾಗಿ ನಡೆಸಬಹುದಾಗಿದೆ, ಮತ್ತು ನಂತರ, ವಿಚಾರವು ಸಂಭಾವ್ಯವಾಗಿದ್ದರೆ ಮತ್ತು ಫಲನವು ನಿಜವಾಗಿದ್ದರೆ, ವಿಚಾರವನ್ನು ವಾಸ್ತವದಲ್ಲಿ ವಾಸ್ತವೀಕರಿಸಬಹುದು. ಕಲ್ಪನೆಯು ಮನಸ್ಸಿನ ಹೊಸ ಬೆಳವಣಿಗೆಗೆ ಬಹುಮುಖ್ಯವಾಗಿದೆ ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಬಹುದು, ಮತ್ತು ಸಾಮೂಹಿಕವಾಗಿ ಪ್ರಗತಿ ಹೊಂದಬಹುದು.

ಸ್ವಯಂಸೇವಕ ಪ್ರಯತ್ನಕ್ಕೆ ಸಂಬಂಧಿಸಿದಂತೆ, ಕಲ್ಪನೆಯನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು: ಸ್ವಯಂಪ್ರೇರಿತ ಮತ್ತು ಅನೈಚ್ಛಿಕ.

ನೆನಪು ಮತ್ತು ಕಲ್ಪನೆಗಳು ಒಂದರಿಂದ ಇನ್ನೊಂದು ಪ್ರಭಾವಿತವಾಗುತ್ತವೆ ಎಂದು ತೋರಿಸಲಾಗಿದೆ. "ನೆನಪಿಸಿಕೊಳ್ಳುವುದು ಮತ್ತು ಕಲ್ಪನೆ ಮಾಡುವುದು ಎರಡೂ ಮೆದುಳಿನ ಸಮಾನ ಭಾಗಗಳಿಗೆ ರಕ್ತವನ್ನು ಕಳುಹಿಸುತ್ತವೆ ಎಂದು ಕ್ರಿಯಾತ್ಮಕ ಕಾಂತೀಯ ಅನುರಣನ ಚಿತ್ರಣ ತಂತ್ರಜ್ಞಾನದಿಂದ ಮಾಡಲ್ಪಟ್ಟ ಚಿತ್ರಗಳು ತೋರಿಸುತ್ತವೆ". ಮಾಹಿತಿ ಸಂಸ್ಕರಣೆಯ ಸ್ವಾಭಾವಿಕ, ಬಾಹ್ಯ, ಮತ್ತು ಸಂಗತವಾದ ರೂಪದ ಅತ್ಯಂತ ಅನುಕೂಲಕರ ಸಮತೋಲನವು ಮಾಹಿತಿಯನ್ನು ಅಲ್ಪಾವಧಿಯ ನೆನಪುಗಳಾಗಿ ಉಳಿಸಿಕೊಳ್ಳುವ ಬದಲಾಗಿ ದೀರ್ಘಕಾಲದ ನೆನಪುಗಳಾಗಿ ಉಳಿಸಿಕೊಳ್ಳುವ ಮೆದುಳಿನ ಸಾಧ್ಯತೆಯನ್ನು ಹೆಚ್ಚಿಸಬಲ್ಲದು. ಇದು ಗಮನಾರ್ಹವಾಗಿದೆ ಏಕೆಂದರೆ ದೀರ್ಘಕಾಲದ ನೆನಪುಗಳಾಗಿ ಸಂಗ್ರಹಿಸಲಾದ ಅನುಭವಗಳನ್ನು ನೆನಪಿಸಿಕೊಳ್ಳುವುದು ಹೆಚ್ಚು ಸುಲಭ, ಏಕೆಂದರೆ ಅವು ಮನಸ್ಸಿನಲ್ಲಿ ಹೆಚ್ಚು ಆಳವಾಗಿ ಬೇರುಬಿಟ್ಟಿರುತ್ತವೆ. ಸಂಸ್ಕರಿಸಲ್ಪಡುತ್ತಿರುವಾಗ ಮೆದುಳಿನ ವಿವಿಧ ಪ್ರದೇಶಗಳನ್ನು ಬಳಸಲು ಈ ಪ್ರತಿಯೊಂದು ರೂಪಗಳಿಗೆ ಮಾಹಿತಿಯನ್ನು ನಿರ್ದಿಷ್ಟ ರೀತಿಯಲ್ಲಿ ಕಲಿಸುವ ಅಗತ್ಯವಿರುತ್ತದೆ. ಯುವ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಿಂದ ತಮ್ಮ ಸೃಜನಶೀಲ ಸಾಮರ್ಥ್ಯಗಳನ್ನು ಬೆಳೆಸಲು ಅಥವಾ ಮತ್ತಷ್ಟು ವರ್ಧಿಸುವ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಈ ಮಾಹಿತಿಯು ಸಂಭಾವ್ಯವಾಗಿ ನೆರವಾಗಬಹುದು. ನಿಯೊಕಾರ್ಟೆಕ್ಸ್ ಮತ್ತು ಥಲಾಮಸ್ ಮೆದುಳಿನ ಕಲ್ಪನೆ, ಜೊತೆಗೆ ಪ್ರಜ್ಞೆ ಮತ್ತು ಅಮೂರ್ತ ಚಿಂತನೆಯಂತಹ ಮೆದುಳಿನ ಇತರ ಅನೇಕ ಕಾರ್ಯಗಳನ್ನು ನಿಯಂತ್ರಿಸುವುದಕ್ಕೆ ಜವಾಬ್ದಾರವಾಗಿವೆ. ಕಲ್ಪನೆಯು ಸ್ಮರಣೆ, ನೆನಪು, ಆಲೋಚನೆಗಳು ಇತ್ಯಾದಿಗಳಂತಹ ಅನೇಕ ವಿಭಿನ್ನ ಮೆದುಳು ಕ್ರಿಯೆಗಳನ್ನು ಒಳಗೊಳ್ಳುವುದರಿಂದ, ನಿಯೊಕಾರ್ಟೆಕ್ಸ್ ಮತ್ತು ಥಲಾಮಸ್‍ನಂತಹ ಬಹು ಕ್ರಿಯೆಗಳು ನಡೆಯುವ ಮೆದುಳಿನ ಭಾಗಗಳು ಕಲ್ಪನಾತ್ಮಕ ಸಂಸ್ಕರಣೆಯು ದಾಖಲಿಸಲ್ಪಟ್ಟಿರುವ ಮುಖ್ಯ ಪ್ರದೇಶಗಳಾಗಿವೆ. ನೆನಪು ಮತ್ತು ಕಲ್ಪನೆಗಳು ಮೆದುಳಿನಲ್ಲಿ ಹೇಗೆ ಸಂಬಂಧಿಸಿವೆ ಎಂಬ ತಿಳಿವಳಿಕೆಯು ಗಮನಾರ್ಹ ಪೂರ್ವದ ಅನುಭವಗಳನ್ನು ತಮ್ಮ ಕಲ್ಪನೆಯೊಂದಿಗೆ ಸಂಬಂಧಿಸುವ ಒಬ್ಬರ ಸಾಮರ್ಥ್ಯವನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ದಾರಿಮಾಡಿಕೊಡುತ್ತದೆ.

"https://kn.wikipedia.org/w/index.php?title=ಕಲ‍್ಪನೆ&oldid=882311" ಇಂದ ಪಡೆಯಲ್ಪಟ್ಟಿದೆ