ಕಲ್ಲೊತ್ತು
ಕಲ್ಲೊತ್ತು (ಆಣಿ) ಮೃತ ಚರ್ಮದ ವಿಶಿಷ್ಟ ಆಕಾರದ ಗಡಸುಗಟ್ಟಿದ ಭಾಗ ಮತ್ತು ಸಾಮಾನ್ಯವಾಗಿ ತೆಳು ಅಥವಾ ರೋಮರಹಿತ ಚರ್ಮ ಮೇಲ್ಮೈಗಳ ಮೇಲೆ ಉಂಟಾಗುತ್ತದೆ, ವಿಶೇಷವಾಗಿ ಬೆರಳುಗಳ ಹಿಂಬದಿ ಮೇಲೆ. ಇವು ಕೆಲವೊಮ್ಮೆ ಅಂಗೈಗಳು ಅಥವಾ ಪಾದದ ಕೆಳಭಾಗದ ದಪ್ಪನೆಯ ಚರ್ಮದ ಮೇಲೆ ಉಂಟಾಗಬಹುದು. ಚರ್ಮದ ವಿರುದ್ಧದ ಒತ್ತಡದ ಬಿಂದು ಉಜ್ಜುವ ಚಲನೆಯ ಅವಧಿಯಲ್ಲಿ ಅಂಡಾಕಾರದ ಅಥವಾ ಅರೆಅಂಡಾಕಾರದ ಪಥವನ್ನು ಪ್ರವಹಿಸಿದಾಗ ಕಲ್ಲೊತ್ತುಗಳು ರೂಪಗೊಳ್ಳುತ್ತವೆ. ಇದರ ಕೇಂದ್ರ ಒತ್ತಡದ ಬಿಂದುವಿನ ಸ್ಥಳದಲ್ಲಿ ಇರುತ್ತದೆ ಮತ್ತು ಕ್ರಮೇಣವಾಗಿ ವಿಸ್ತರಿಸುತ್ತದೆ. ಕಲ್ಲೊತ್ತನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆಯಲಾದ ನಂತರವೂ ಕಲ್ಲೊತ್ತುಗಳನ್ನು ಉತ್ಪತ್ತಿಮಾಡುವ ಅಂಗಾಂಶದ ನಿರಂತರ ಉತ್ತೇಜನ ಆಗುತ್ತಿದ್ದರೆ, ಚರ್ಮವು ಕಲ್ಲೊತ್ತಾಗಿ ಬೆಳೆಯುವುದು ಮುಂದುವರಿಯಬಹುದು.
ಕಲ್ಲೊತ್ತಿನ ಕೇಂದ್ರದಲ್ಲಿರುವ ಗಟ್ಟಿಯಾದ ಭಾಗ ಜವೆಯ ಬೀಜವನ್ನು ಹೋಲುತ್ತದೆ, ಅಂದರೆ ಅಗಲವಾದ ಎತ್ತರದ ಮೇಲ್ಭಾಗ ಮತ್ತು ಚೂಪಾದ ಕೆಳಭಾಗವಿರುವ ಲಾಳಿಕೆಯಂತೆ. ಅವುಗಳ ಆಕಾರದ ಕಾರಣ, ಕಲ್ಲೊತ್ತುಗಳು ತುದಿಯಲ್ಲಿನ ಒತ್ತಡವನ್ನು ತೀವ್ರಗೊಳಿಸುತ್ತವೆ ಮತ್ತು ಆಳದ ಅಂಗಾಂಶ ಹಾನಿ ಮತ್ತು ಹುಣ್ಣನ್ನು ಉಂಟುಮಾಡಬಲ್ಲವು.[೧] ಗಟ್ಟಿ ಕಲ್ಲೊತ್ತುಗಳು ವಿಶೇಷವಾಗಿ ಅಸಂವೇದನಶೀಲ ಚರ್ಮವಿರುವ ಜನರಿಗೆ ಹಾನಿಗೊಂಡ ನರಗಳ ಕಾರಣ ಸಮಸ್ಯೆ ಉಂಟುಮಾಡುತ್ತವೆ (ಉದಾ. ಮಧುಮೇಹವಿರುವ ಜನರಲ್ಲಿ). ಮೃದು ಕಲ್ಲೊತ್ತುಗಳ ಸ್ಥಳ ಗಟ್ಟಿ ಕಲ್ಲೊತ್ತುಗಳ ಸ್ಥಳಗಳಿಂದ ಬೇರೆಯಾಗಿರುವ ಪ್ರವೃತ್ತಿ ಹೊಂದಿರುತ್ತವೆ. ಗಟ್ಟಿ ಕಲ್ಲೊತ್ತುಗಳು ಚರ್ಮದ ಒಣ, ಚಪ್ಪಟೆ ಮೇಲ್ಮೈಗಳ ಮೇಲೆ ಉಂಟಾಗುತ್ತವೆ. (ಆಗಾಗ್ಗೆ ಅಕ್ಕಪಕ್ಕದ ಬೆಟ್ಟುಗಳ ಮಧ್ಯೆ ಕಂಡುಬರುವ) ಮೃದು ಕಲ್ಲೊತ್ತುಗಳು ತೇವವಾಗಿರುತ್ತವೆ ಮತ್ತು ಸುತ್ತಲಿನ ಚರ್ಮವನ್ನು ಮೃದುವಾಗಿ ಇಡುತ್ತವೆ. ಆದರೆ, ಕಲ್ಲೊತ್ತಿನ ಕೇಂದ್ರ ಮೃದುವಾಗಿರುವುದಿಲ್ಲ, ಬದಲಾಗಿ ಗಟ್ಟಿಯಾಗಿರುತ್ತದೆ.
ಇತರ ಭಿನ್ನ ರೋಗನಿರ್ಣಯಗಳನ್ನು ಪ್ರತ್ಯೇಕಿಸಲು, ಚರ್ಮದ ಬಾಯಾಪ್ಸಿಯನ್ನು ತೆಗೆದುಕೊಳ್ಳಲಾಗಬಹುದು. ಮೇಲಿನ ಚರ್ಮದ ಮೇಲೆ ಅಸಹಜ ಒತ್ತಡವನ್ನು ಉಂಟುಮಾಡುವ ಯಾವುದೇ ಆಧಾರವಾಗಿರುವ ಮೂಳೆಯಂಥ ಅಸಹಜತೆಗಳನ್ನು ಪತ್ತೆಹಚ್ಚಲು ಚಿತ್ರಣ ಅಧ್ಯಯನಗಳನ್ನು ಬಳಸಬಹುದು. ಈ ಉದ್ದೇಶಕ್ಕಾಗಿ, ಸಾಮಾನ್ಯವಾಗಿ ಸರಳ ರೇಡಿಯೋಚಿತ್ರ ಸಾಕಾಗುತ್ತದೆ, ಆದರೆ, ಸಾಂದರ್ಭಿಕವಾಗಿ, ಸಿಟಿ ಸ್ಕ್ಯಾನಿಂಗ್‍ನ್ನು ಬಳಸಲಾಗುತ್ತದೆ.
ಕಲ್ಲೊತ್ತುಗಳ ಚಿಕಿತ್ಸೆಗಳಲ್ಲಿ ಗಾಯಗಳ ತುದಿ ಕತ್ತರಿಸುವುದು ಸೇರಿವೆ. ಇದು ತಕ್ಷಣ ನೋವನ್ನು ಕಡಿಮೆಮಾಡುತ್ತದೆ. ಕಲ್ಲೊತ್ತು ಪಟ್ಟಿಯನ್ನು ಬಳಸುವುದು ಮತ್ತೊಂದು ಜನಪ್ರಿಯ ವಿಧಾನವಾಗಿದೆ. ಇದು ಸ್ಯಾಲಿಸಿಲಿಕ್ ಆಮ್ಲದ ಕೇಂದ್ರಭಾಗವನ್ನು ಹೊಂದಿರುವ ದಪ್ಪ ಬಟ್ಟೆಯ ಒಂದು ದುಂಡುಪಟ್ಟಿಯಾಗಿರುತ್ತದೆ. ಇದು ಒತ್ತಡವನ್ನು ನಿವಾರಿಸಿ ಗಟ್ಟಿ ಚರ್ಮವನ್ನು ಸವೆಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ eMedicine > Clavus By Nanette Silverberg. Updated: Apr 9, 2010