ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು (ಪುಸ್ತಕ)


"ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು" ೧೯೯೦ರಲ್ಲಿ ಪ್ರಕಟವಾದ ಲೇಖಕ ಪಿ.ಲಂಕೇಶ್‌ ಅವರ ಕಥಾ ಸಂಕಲನ.[]

ಲೇಖಕರುಪಿ.ಲಂಕೇಶ್
ಚಿತ್ರಲೇಖಕ‌ ಕೆ.ಎನ್. ನಾಗೇಶ್‌ ಕುಮಾರ್
ಮುಖಪುಟ ಕಲಾವಿದಸಾಮ್ಯುಯೆಲ್
ದೇಶಭಾರತ
ಭಾಷೆಕನ್ನಡ
ಪ್ರಕಾರಕಥಾ ಸಂಕಲನ
ಪ್ರಕಾಶಕರುಪತ್ರಿಕೆ ಪ್ರಕಾಶನ
ಪ್ರಕಟವಾದ ದಿನಾಂಕ
೧೯೯೦

ಈ ಕಥಾ ಸಂಕಲನದ ಪ್ರಥಮ ಮುದ್ರಣದಲ್ಲಿ ಹದಿಮೂರು ಸ್ವರಚಿತ ಕತೆಗಳು ಜೊತೆಗೆ ಮೂರು ಇತರರ ಕಥೆಗಳು ಇವೆ. ಎರಡನೇ ಮುದ್ರಣದಲ್ಲಿ "ದಾಳಿ" ಎಂಬ ಕಥೆಯನ್ನು ಸೇರಿಸಲಾಗಿದೆ.

ಕಥಾ ಸಂಕಲನದಲ್ಲಿ ಇರುವ ಕಥೆಗಳು

ಬದಲಾಯಿಸಿ
  1. ದಾಹ
  2. ಕೃತಜ್ಞತೆ
  3. ಒಂದು ಬಾಗಿಲು
  4. ಕಣ್ಮರೆ
  5. ಮುಟ್ಟಿಸಿಕೊಂಡವನು
  6. ಸಹಪಾಠಿ
  7. ಉರಿದ ಊರಿನವರು
  8. ವೃಕ್ಷದ ವೃತ್ತಿ
  9. ತೋಟದವರು
  10. ಕಲ್ಲು ಕರಗುವ ಸಮಯ
  11. ಸ್ಟೆಲ್ಲಾ ಎಂಬ ಹುಡುಗಿ
  12. ದೇವಿ
  13. ಸುಭದ್ರ

ಈ ಸಂಕಲನದಲ್ಲಿ ಮೃಗ ಮತ್ತು ಸುಂದರಿ, ಟಾಲ್ ಸ್ಟಾಯ್ ,ಅಧಿಕಾರಿಗಳು ಮತ್ತು ಕೆಲಸದವರು ಇತರರು ಬರೆದ ಕಥೆಯ ಸಂಗ್ರಹವಾಗಿದೆ. ಲಂಕೇಶ್ ಅವರೇ ಬರೆದ "ದಾಳಿ" ಕಥೆಯು ಎರಡನೇ ಮುದ್ರಣದಲ್ಲಿ ಸೇರ್ಪಡೆಗೊಂಡಿತು.[]

ಪ್ರಶಸ್ತಿಗಳು

ಬದಲಾಯಿಸಿ

೧೯೯೩ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಈ ಸಂಕಲನಕ್ಕೆ ಸಂದಿತು.[]

ಉಲ್ಲೇಖಗಳು

ಬದಲಾಯಿಸಿ
  1. ""ಕಲ್ಲು ಕರಗುವ ಸಮಯ ಮತ್ತು ಇತರ ಕತೆಗಳು" ಅಝೀಮ್‌ ಪ್ರೇಮ್ಜಿ ವಿದ್ಯಾಲಯದ ಗ್ರಂಥಾಲಯದ ಜಾಲತಾಣ".
  2. "ಪುಸ್ತಕದ ಬಗ್ಗೆ ಲೇಖನ".
  3. "AKADEMI AWARDS (1955-2023)". sahitya-akademi.gov.in. ಕೇಂದ್ರ ಸಾಹಿತ್ಯ ಅಕಾಡೆಮಿ. Retrieved 9 August 2024.