ಬಲೆ

(ಕಲ್ಲಿ ಇಂದ ಪುನರ್ನಿರ್ದೇಶಿತ)

ಅದರ ಪ್ರಾಥಮಿಕ ಅರ್ಥದಲ್ಲಿ, ಬಲೆಯು ಜಾಲರಿಯಂಥ ರಚನೆಯಲ್ಲಿ ಹೆಣೆದ ಎಳೆಗಳನ್ನು ಹೊಂದಿರುತ್ತದೆ. ಇದು ದೊಡ್ಡ ವಸ್ತುಗಳ ಸಾಗುವಿಕೆಯನ್ನು ತಡೆಯುತ್ತದೆ, ಮತ್ತು ಚಿಕ್ಕ ವಸ್ತುಗಳು ಹಾಗೂ ದ್ರವಗಳು ಸಾಗಲು ಬಿಡುತ್ತದೆ. ತಗಡಿನಂತಿರುವ ಯಾವುದೇ ವಸ್ತುವಿಗಿಂತ ಇದಕ್ಕೆ ಕಡಿಮೆ ಕಚ್ಚಾವಸ್ತು ಬೇಕಾಗುತ್ತದೆ, ಮತ್ತು ಸ್ವಲ್ಪ ಪ್ರಮಾಣದ ಪಾರದರ್ಶಕತೆಯನ್ನು ಒದಗಿಸುತ್ತದೆ.

ಸರಕು ಬಲೆ

ಪೂರ್ವದಲ್ಲಿ ಎಲ್ಲ ಬಲೆಗಳನ್ನು ಕೈಯಿಂದ ತಯಾರಿಸಲಾಗುತ್ತಿತ್ತು. ದುಂಡು ಬಲೆಗಳಿಗಾಗಿ (ಉದಾಹರಣೆಗೆ ಪರ್ಸು ಬಲೆಗಳು, ಬಲೆಚೀಲಗಳು, ಅಥವಾ ತುರುಬುಬಲೆಗಳು) ಅವನ್ನು ಒಂದು ಏಕ ಬಿಂದುವಿನಿಂದ ಆರಂಭಿಸಬಹುದು, ಆದರೆ ಚೌಕಾಕಾರದ ಬಲೆಗಳನ್ನು ಸಾಮಾನ್ಯವಾಗಿ ಒಂದು ಶಿರರಜ್ಜುವಿನಿಂದ ಆರಂಭಿಸಲಾಗುತ್ತದೆ.[] ನಿಯಮಿತ ಮಧ್ಯಂತರಗಳಲ್ಲಿ ಶಿರರಜ್ಜುವಿಗೆ ಒಂದು ದಾರವನ್ನು ಕಟ್ಟಲಾಗುತ್ತದೆ. ಇದರಿಂದ ಕುಣಿಕೆಗಳ ಸರಣಿಯು ಸೃಷ್ಟಿಯಾಗುತ್ತದೆ. ಇದನ್ನು ಜೀರು ಮೇಲುಗೈ ಗಂಟನ್ನು ಬಳಸಿ ಮಾಡಬಹುದು, ಅಥವಾ ಗೂಟದ ಗಂಟುಗಳಂತಹ ಇತರ ಗಂಟುಗಳನ್ನು ಬಳಸಿ ಮಾಡಬಹುದು. ಅನಂತರದ ಸಾಲುಗಳನ್ನು ಆಮೇಲೆ ಹಂಗಾಮಿ ಕುಣಿಕೆಗಳು ಅಥವಾ ಮತ್ತೊಂದು ಗಂಟನ್ನು ಬಳಸಿ ಬೇಕಾದ ರೂಪಕ್ಕೆ ತರಲಾಗುತ್ತದೆ.

ಬಲೆಗಳನ್ನು ಬಹುತೇಕ ಯಾವುದೇ ಬಗೆಯ ನೂಲನ್ನು ಬಳಸಿ ತಯಾರಿಸಬಹುದು. ಸಾಂಪ್ರದಾಯಿಕ ಬಲೆ ವಸ್ತುಗಳು ಸ್ಥಳೀಯವಾಗಿ ಲಭ್ಯವಿರುವುದನ್ನು ಅವಲಂಬಿಸಿ ಬದಲಾಗುತ್ತವೆ; ಉದಾಹರಣೆಗೆ, ಮುಂಚಿನ ಐರೋಪ್ಯ ಮೀನಿನ ಬಲೆಗಳನ್ನು ಹಲವುವೇಳೆ ನಾರುಬಟ್ಟೆಯಿಂದ ತಯಾರಿಸಲಾಗುತ್ತಿತ್ತು, ಆದರೆ ಈಗ ಹೆಚ್ಚುಕಾಲ ಬಾಳುವ ಸಂಶ್ಲೇಷಿತ ವಸ್ತುಗಳು ತಕ್ಕಮಟ್ಟಿಗೆ ಸಾರ್ವತ್ರಿಕವಾಗಿವೆ. ನೈಲಾನ್ ಏಕತಂತು ಬಲೆಗಳು ಪಾರದರ್ಶಕವಾಗಿರುತ್ತವೆ, ಮತ್ತು ಹಾಗಾಗಿ ಇವನ್ನು ಹಲವುವೇಳೆ ಮೀನುಗಾರಿಕೆ ಮತ್ತು ಬೋನುಗಳಿಗಾಗಿ ಬಳಸಲಾಗುತ್ತದೆ.

ಬಲೆಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು. ಬಲೆಗಳನ್ನು ಸಾಗಣೆಗೆ ಬಳಸಬಹುದು. ಉದಾಹರಣೆಗಳಲ್ಲಿ ಸರಕು ಬಲೆಗಳು ಮತ್ತು ಬಲೆಚೀಲಗಳು ಸೇರಿವೆ. ಈರುಳ್ಳಿಗಳಂತಹ ಕೆಲವು ತರಕಾರಿಗಳನ್ನು ಹಲವುವೇಳೆ ಬಲೆಗಳಲ್ಲಿ ಸಾಗಿಸಲಾಗುತ್ತದೆ. ಬಲೆಗಳನ್ನು ಕ್ರೀಡಾ ಗೋಲುರಚನೆ ಮತ್ತು ಫುಟ್‍ಬಾಲ್, ಬಾಸ್ಕೆಟ್‍ಬಾಲ್, ಬೋಸಾಬಾಲ್ ಮತ್ತು ಐಸ್ ಹಾಕಿಯಂತಹ ಆಟಗಳಲ್ಲಿ ಬಳಸಲಾಗುತ್ತದೆ. ಬಲೆಯು ವಾಲಿಬಾಲ್, ಟೆನಿಸ್, ಬ್ಯಾಡ್ಮಿಂಟನ್, ಮತ್ತು ಟೇಬಲ್ ಟೆನಿಸ್‍ನಂತಹ ವಿವಿಧ ಬಲೆ ಕ್ರೀಡೆಗಳಲ್ಲಿ ಎದುರಾಳಿಗಳನ್ನು ಕೂಡ ಪ್ರತ್ಯೇಕಿಸುತ್ತದೆ. ಈ ಕ್ರೀಡೆಗಳಲ್ಲಿ ಆಟದಲ್ಲಿ ಉಳಿಯಲು ಚೆಂಡು ಅಥವಾ ಷಟಲ್‍ಕಾಕು ಬಲೆಯ ಮೇಲೆ ಹೋಗಬೇಕು. ಪ್ರಾಣಿಗಳನ್ನು ಸೆರೆಹಿಡಿಯಲು ಬಳಸಲಾಗುವ ಬಲೆಗಳಲ್ಲಿ ಮೀನಿನ ಬಲೆಗಳು, ಚಿಟ್ಟೆ ಬಲೆಗಳು, ಕ್ರಿಕೆಟ್ ಬಲೆಗಳು, ಪಕ್ಷಿ ಜಾಲ, ಮತ್ತು ಪರ್ಸು ಹಾಗೂ ಉದ್ದ ಬಲೆಯಂತಹ ಸಿಕ್ಕಿಸುವ ಬಲೆಗಳು ಸೇರಿವೆ. ಮಂಜು ಬಲೆಗಳು, ರಾಕೆಟ್ ಬಲೆಗಳು, ಹಾಗೂ ಬಲೆ ಬಂದೂಕುಗಳಂತಹ ಕೆಲವನ್ನು ಹಿಡಿಯಲಾದ ಪ್ರಾಣಿಗಳಿಗೆ ನೋವುಂಟುಮಾಡದಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಮರೆಮಾಚುವಿಕೆ ಬಲೆಗಳನ್ನು ಕೂಡ ಬಳಸಬಹುದು.

ಉಲ್ಲೇಖಗಳು

ಬದಲಾಯಿಸಿ
  1. "Netting instructions". Archived from the original on 2018-04-08. Retrieved 2018-12-02.
"https://kn.wikipedia.org/w/index.php?title=ಬಲೆ&oldid=1056735" ಇಂದ ಪಡೆಯಲ್ಪಟ್ಟಿದೆ