ಕಲ್ಲರ್, ಜಾನ್ :(29 ಜುಲೈ 1793 – 24 ಜನವರಿ 1852). ಸ್ಲೊವಾಕ್ ಕವಿ. ಮತಶಾಸ್ತ್ರವನ್ನು ಅಭ್ಯಾಸ ಮಾಡಿದ. ಜೀನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದುದರಿಂದ (೧೮೧೭-೧೯) ಜರ್ಮನಿಯ ರಾಷ್ಟ್ರೀಯ ಐಕ್ಯತೆಯ ಚಳವಳಿ ಮತ್ತು ಜರ್ಮನಿಯ ಆದರ್ಶ ವಿಚಾರಸರಣಿ ಇವನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದುವು. ೧೮೧೯ರಲ್ಲಿ ಜರ್ಮನಿಯನ್ನು ಬಿಟ್ಟ. ತಾನು ಪ್ರೇಮಿಸಿದ ಜರ್ಮನ್ ಹುಡುಗಿಯೊಬ್ಬಳನ್ನು ಮದುವೆಯಾಗಲು ಸಾಧ್ಯಾವಾಗಲಿಲ್ಲ. ಆಕೆ ಜರ್ಮನಿಯಲ್ಲೇ ಉಳಿದಳು. ಆಕೆಯನ್ನು ಕಲ್ಲರ್ ತನ್ನ ಸುನೀತಗಳಲ್ಲಿ ಮೀನ ಎಂದು ಹೆಸರಿಟ್ಟು ವರ್ಣಿಸಿ ಹೊಗಳಿದ್ದಾನೆ. ಕೆಲಕಾಲ ಅರ್ಚಕನಾಗಿ ಕಲ್ಲರ್ ಧಾರ್ಮಿಕ ಸೇವೆ ಮಾಡಿದ. ೧೮೩೫ರಲ್ಲಿ ಮೀನಳನ್ನು ಮದುವೆಯಾದ. ಅನಂತರ (೧೮೪೯) ವಿಯನ್ನಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ದುಡಿದ. ಇವನ ಮುಖ್ಯಕೃತಿ ಸ್ಲಾವದ ಕುವರಿ. ಚೆಕ್ ಭಾಷೆಯಲ್ಲಿರುವ ಈ ಸಂಕಲನ ಮೊದಲು ಪ್ರಕಟವಾದಾಗ ಒಂದುನೂರ ಐವತ್ತೊಂದು ಸುನೀತಗಳನ್ನೂ ಎಲಿಜೆಯಿಕ್ಸ್‌ ನಲ್ಲಿನ ಪ್ರವೇಶಭಾಗವನ್ನೂ ಒಳಗೊಂಡಿತ್ತು. ಕಲ್ಲರನ ಕಾಲದಲ್ಲಾಗಲಿ ಹಿಂದಾಗಲಿ ಸ್ಲಾವರಿಗೆ ಸೇರಿದ ನಾಡುಗಳ ಯಾತ್ರೆಯ ವರ್ಣನೆಯಿದು. ಕವಿಗೆ ಮೀನಳಲ್ಲಿರುವ ಪ್ರೇಮ, ಸ್ಲಾವ್ ಜನಾಂಗದಲ್ಲಿರುವ ಅಭಿಮಾನ_ಎರಡೂ ಸಂಗಮವಾಗಿ ಈ ಕೃತಿಯಲ್ಲಿ ಸುಂದರ ಅಭಿವ್ಯಕ್ತಿ ಪಡೆದಿವೆ. ಸ್ಲಾವ್ ಜನಾಂಗದ ಗತವೈಭವ, ಕರುಣಾಜನಕ ವರ್ತಮಾನಗಳನ್ನು ಕವಿ ಹೃದಯಸ್ಪರ್ಶಿಯಾಗಿ ಬಿತ್ತರಿಸುತ್ತಾನೆ; ಉಜ್ಜ್ವಲ ಭವಿಷ್ಯವನ್ನು ನಿರ್ಮಿಸಲು ಸ್ಫೂರ್ತಿ ನೀಡುತ್ತಾನೆ. ಅನಂತರದ ಆವೃತ್ತಿಗಳಲ್ಲಿ ನೀತಿ ಬೋಧಕ ಸುನೀತಗಳನ್ನೂ ಡಾಂಟೆಯ ಮಹಾಕಾವ್ಯದಲ್ಲಿರುವಂತೆ ಸ್ವರ್ಗನರಕಗಳನ್ನು ವರ್ಣಿಸುವ ಎರಡು ಭಾಗಗಳನ್ನೂ ಕವಿ ಸೇರಿಸಿದ್ದಾನೆ.

ಕಲ್ಲರ್, ಜಾನ್
Ján Kollár
ಜನನ(೧೭೯೩-೦೭-೨೯)೨೯ ಜುಲೈ ೧೭೯೩
Mosóc, Kingdom of Hungary (now Mošovce, Slovakia)
ಮರಣ24 January 1852(1852-01-24) (aged 58)
Vienna, Austrian Empire
ವೃತ್ತಿWriter, poet, pastor
ರಾಷ್ಟ್ರೀಯತೆSlovak
ಪ್ರಮುಖ ಕೆಲಸ(ಗಳು)Slávy dcera
ಸಂಬಂಧಿಗಳುMatej Kollár (father)
Katarína Frndová (mother)

ಛಾಯಾಂಕಣ

ಬದಲಾಯಿಸಿ

ಬಾಹ್ಯ ಸಂಪರ್ಕಗಳು

ಬದಲಾಯಿಸಿ