ಕಲ್ಯಾಣ(ಪತ್ರಿಕೆ)
ಕಲ್ಯಾಣ- ಬಿಜಾಪುರದಿಂದ ಪ್ರಕಟವಾಗುತ್ತಿದ್ದ ಕನ್ನಡ ಮಾಸಿಕೆ, ಸಾರ ಸಂಗ್ರಹ (ಡೈಜೆಸ್ಟ್). ಆರ್. ಬಿ. ಕುಲಕರ್ಣಿ ವ್ಯವಸ್ಥಾಪಕ ಸಂಪಾದಕ; ಸತ್ಯಕಾಮ ಮತ್ತು ಗುರುರಾಜ ಸಂಪಾದಕರು. ೧೯೬೦ರ ಅಕ್ಟೋಬರಿನಲ್ಲಿ ಪ್ರಾರಂಭವಾಗಿ ಎರಡು ವರ್ಷ ನಡೆದು ನಿಂತಿತು. ಬಿಡಿ ಸಂಚಿಕೆಯ ಬೆಲೆ ೪೦ ಪೈ. ವಾರ್ಷಿಕ ಚಂದಾ ರೂ ೪-೫೦. ಎರಡು ವರ್ಷಗಳ ಅವಧಿಯಲ್ಲಿ ಇದರ ಪ್ರಸಾರ ಸುಮಾರು ೬,೦೦೦ವನ್ನು ಮುಟ್ಟಿತ್ತು.
ಕಥೆ, ಪ್ರಬಂಧ, ರಾವಬಹಾದ್ದೂರರ (ಆರ್.ಬಿ.ಕುಲಕರ್ಣಿ) ಗುರುಪಾದಪ್ಪನ ಹರಟೆ ಇವುಗಳೊಂದಿಗೆ ವಿಜ್ಞಾನ, ಆರೋಗ್ಯ, ಅಧ್ಯಾತ್ಮ, ಕ್ರೀಡಾರಂಗ, ಚಿತ್ರವಿಚಿತ್ರ ಘಟನೆಗಳು, ಐತಿಹಾಸಿಕ ಪ್ರಸಂಗಗಳು, ಸೋಜಿಗಗಳು_ಹೀಗೆ ವಿವಿಧ ವಿಷಯಗಳನ್ನೂ ಕಾಣಬಹುದು. ಕೊನೆಯಲ್ಲಿದ್ದ ಪುಸ್ತಕಸಂಗ್ರಹವಿಭಾಗದಲ್ಲಿ ವಿವಿಧ ಭಾಷೆಗಳ ಉತ್ತಮವಾದ ಮತ್ತು ಜನಪ್ರಿಯ ಗ್ರಂಥಗಳನ್ನು ಸಂಗ್ರಹಿಸಿ ಕೊಡಲಾಗುತ್ತಿತ್ತು. ಕಿರಿದಾದ ಮತ್ತು ರಂಜಕ ಲೇಖನಗಳೇ ಈ ಪತ್ರಿಕೆಯಲ್ಲಿ ಅಧಿಕವಾಗಿದ್ದುವು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: