'ಕಲ್ಪನಾ ಲಾಜ್ಮಿ' ಭಾರತೀಯ ಚಲನಚಿತ್ರ ರಂಗದ ಒಬ್ಬ 'ಪ್ರತಿಭಾನ್ವಿತ ನಿರ್ದೇಶಕಿ', ಮತ್ತು 'ಪಟ್ಕಥಾ ಬರಹಗಾರ್ತಿ', ಸ್ವಂತ ಅನುಭವ,ಮತ್ತು ಸ್ತ್ರೀಯರ ಸಂಘರ್ಷಮಯ ಜೀವನವನ್ನು ಬಿಂಬಿಸುವ ಹಲವಾರು ವಿಷಯಗಳನ್ನು ತೆಗೆದುಕೊಂಡು ಕಡಿಮೆ ವೆಚ್ಚದ ಚಿತ್ರ ನಿರ್ಮಿಸಿದ್ದಾರೆ. ಅವರು ಯಾವಾಗಲೂ ನೈಜತೆಗೆ ಪ್ರಧಾನ ಸ್ಥಾನವನ್ನು ಕೊಟ್ಟರು. 'ಕಮರ್ಶಿಯಲ್ ಚಿತ್ರ'ಗಳ ಜೊತೆಗೆ ಭುಜತಿಕ್ಕುತ್ತಾ ಸಾಗುವ ಈ ಒಂದು ವ್ಯವಸಾಯ ನಿಜಕ್ಕೂ ಅನುಕರಣೀಯ, ಹಾಗೂ ಸವಾಲಾಗಿದೆ. ಭೂಪೇನ್ ದ ರೊಡನೆ ಗೆಳೆತನ ಸುಮಾರು ೪ ದಶಕಕ್ಕೂ ಹೆಚ್ಚಿನದು. 'ಕಲ್ಪನಾ'ರ ಚಿತ್ರಗಳು ಸಾಮಾನ್ಯವಾಗಿ ಸ್ತ್ರೀಯರ ಸ್ಥಾನಮಾನ ಮತ್ತು ಜೀವನದ ಸಮಸ್ಯೆಗಳ ಸುತ್ತಮುತ್ತ ಹೆಣೆದ ಪ್ರಸಂಗಗಳನ್ನು ಒಳಗೊಂಡಿರುತ್ತದೆ.

ಮನೆಯ ವಾತಾವರಣ, ಬಾಲ್ಯ

ಬದಲಾಯಿಸಿ

'ಕಲ್ಪನಾ ಲಾಜ್ಮಿ', ಹೆಸರುವಾಸಿಯಾದ ಚಿತ್ರಕಲಾವಿದೆ, ಹೆಸರಾಂತ ಹಿಂದಿ ನಟ, ನಿರ್ದೇಶಕ, ನಿರ್ಮಾಪಕ, ಗುರುದತ್ ರವರ ಸೋದರಿ, ಲಲಿತ ಲಾಜ್ಮಿಯವರ ಪುತ್ರಿಯಾಗಿ ಸನ್, ೧೯೫೪ ರಲ್ಲಿ ಜನಿಸಿದರು. ಆಮೀರ್ ಖಾನ್ ನಿರ್ದೇಶನದ ಹೆಸರಾಂತ ಚಲನಚಿತ್ರ, ’ತಾರೆ ಝಮೀನ್ ಪರ್’ ಹಿಂದಿ ಚಿತ್ರದಲ್ಲಿ ಭೂಮಿಕೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿರುವ, 'ಕಲ್ಪನಾ,'ಬಾಬಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ', ಶ್ಯಾಮ್ ಬೆನೆಗಲ್ ರೊಡನೆ ಸಹಾಯಕ ನಿರ್ದೇಶಕರಾಗಿ ಕೆಲಸಮಾಡುತ್ತಾ, ಮುಂದೆ 'ಶಾಮ್ ಬೆನೆಗಲ್' ರವರ ಭೂಮಿಕ ಚಿತ್ರದಲ್ಲಿ ಉಡುಪನ್ನು ಹೊಂದಿಸುವ ಕ್ರಿಯೆಯಲ್ಲಿ ಸಹಾಯಕರಾಗಿ ದುಡಿದರು. ಸನ್, ೧೯೭೮ ರಲ್ಲಿ ಸ್ಮಿತಾ ಪಾಟಿಲ್, ಅಭಿನಯಿಸಿದರು. ತಮ್ಮ ಮೊದಲ ವೃತ್ತಚಿತ್ರದ ಡಿ.ಜಿ.ಮೂವಿ ಪಯೊನೀರ್ ನ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಹಲವಾರು ವ್ರುತ್ತ-ಚಿತ್ರಗಳು ಅವರ ನಿರ್ದೇಶನದಲ್ಲಿ ಬಂದವು, ೧೯೭೯- 'ಟೀ ಎಸ್ಟೇಟ್ ಗಳಲ್ಲಿ ಟೀ ಎಲೆಗಳನ್ನು ಬಿಡಿಸುವ ಪ್ರಕ್ರಿಯೆಯ ಬಗ್ಗೆ' ೧೯೮೧ ರಲ್ಲಿ 'Along the Brahmaputra'ಎಂಬ ಡಾಕ್ಯುಮೆಂಟರಿ, ೧೯೮೬ ರಲ್ಲಿ 'ಭೂಪೇನ್' ದ ಜೊತೆ 'ಏಕ್ ಪಲ್' ಎಂಬ ಚಿತ್ರವನ್ನು ಶಬನಾ ಆಝ್ಮಿ ಮತ್ತು ಜಸೀರ್ ಉದ್ದೀನ್ ಶಾ ಅಭಿನಯಿಸಿದ. ಗುಲ್ಝರ್ ಜೊತೆ ಚಿತ್ರನಿರ್ಮಾಪಕಿಯಾಗಿ, ಚಿತ್ರದ ಕಥೆ ಮತ್ತು ಪಟ್ಕಥೆಯನ್ನೂ ಬರೆದರು. ೧೯೮೮ ರಲ್ಲಿ 'ಲೋಹಿತ್ ಕಿನಾರೆ' ಎಂಬ 'ತಮ್ಮ ಪ್ರಪ್ರಥಮ ಟೆಲಿವಿಶನ್ ಧಾರಾವಾಹಿ'ಯನ್ನು ಭಾರತದ ಟೆಲಿವಿಶನ್ ರಂಗದಲ್ಲಿ ತಂದರು. ಈ ಸಮಯದಲ್ಲಿ ಚಲನಚಿತ್ರರಂಗದಲ್ಲಿ ಹೆಚ್ಚು ಸಮಯ ಕಳೆಯಲು ಆಗಿರಲಿಲ್ಲ. ’ತನ್ವಿ ಆಝ್ಮಿ' ನಟಿಸಿದ, ೧೯೯೩ ರ ಹೊತ್ತಿಗೆ ಮತ್ತೆ ಸಿನಿಮಾ ರಂಗದಲ್ಲಿ ರುಡಾಲಿ ಎಂಬ ಚಿತ್ರದಲ್ಲಿ ಡಿಂಪಲ್ ಕಾಪಾಡಿಯ ನಾಯಕಿಯಗಿ ನಟಿಸಿದರು. ಈ ಚಿತ್ರ ಸಿನಿಮಾ ವಲಯದಲ್ಲಿ ಹೆಚ್ಚು ಹೆಸರನ್ನು ಗಳಿಸಿಕೊಟ್ಟಿತು. 'ಡಿಂಪಲ್ ಕಾಪಾಡಿಯ ಶ್ರೇಶ್ಠ ನಟಿ' ಮತ್ತು ನಿರ್ದೇಶನಕ್ಕೆ ಲಾಜ್ಮಿಯವರಿಗೆ ಪ್ರಶಸ್ತಿ ಸಂದಿತು. ೧೯೯೭ ರಲ್ಲಿ 'ದರ್ಮಿಯಾನ್' ಚಿತ್ರ ನಿರ್ದೇಶನ ಮತ್ತು ನಿರ್ಮಾಣ 'ಕಿರಣ್ ಖೇರ್' ಅಭಿನಯಿಸಿದ ಮತ್ತು 'ತಾಬು' ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಣಿಸಿಕೊಂಡಿದ್ದರು.

'ದಾಮನ್ ಹೆಸರುಮಾಡಿದ ಚಲನಚಿತ್ರ'

ಬದಲಾಯಿಸಿ

೨೦೦೧ ರಲ್ಲಿ ಕಲ್ಪನಾ ಲಾಜ್ಮಿಯವರಿಂದ ತಯಾರಾದ ಮತ್ತೊಂದು 'ಸ್ತ್ರೀ ಸ್ವಾತಂತ್ರ್ಯ', ಹಾಗೂ 'ಮನೆಯ ಸಂಘರ್ಷಮಯ ವಾತಾವರಣ'ದ ಚಿತ್ರ, ದಾಮನ್, ಭಾರತ ಸರ್ಕಾರ ಚಿತ್ರರಂಗಕ್ಕೆ ಬಿಡುಗಡೆಮಾಡಿತು. ಈ ಚಿತ್ರ, 'ಪತ್ರಿಕೆ' ಹಾಗೂ 'ಮೀಡಿಯಾ ವಲಯ'ಗಳಲ್ಲಿ ಅತ್ಯಂತ ಸುದ್ದಿಮಾಡಿದ ಚಿತ್ರ. ಇದಕ್ಕೆ ನ್ಯಾಷನಲ್ ಅವಾರ್ಡ್ ಎರಡನೆಯ ಬಾರಿ ದೊರಕಿತು. ಚಿತ್ರದ ನಾಯಕಿ, ರವೀನಾ ಟಂಡನ್ ರಲ್ಲಿ ಅಡಗಿದ್ದ ಅಂತಃಸತ್ವವನ್ನು ಹೊರತಂದು ಸಿನಿಮಾರಂಗದ ರಸಿಕರ ಮುಂದೆ ಪ್ರದರ್ಶನಕ್ಕಿಟ್ಟ ಹೆಗ್ಗಳಿಕೆ 'ಕಲ್ಪನಾ ಲಾಜ್ಮಿ'ಯವವರಿಗೆ ಸಲ್ಲುತ್ತದೆ. ೨೦೦೩ ರ ಕ್ಯೊಂ ಚಲನಚಿತ್ರ, ಅಷ್ಟೇನೂ ಗಲ್ಲಾ ಪೆಟ್ಟಿಗೆಯಲ್ಲಿ ಹೆಸರು ಮಾಡಲಿಲ್ಲ್ಲ. ೨೦೦೬ ರಲ್ಲಿ ನಿರ್ಮಿಸಿದ ಚಿಂಗಾರಿ, ಸುಷ್ಮಿತಾ ಸೇನ್, ರಂತಹ ಮೇರು ಅಭಿನೇತ್ರಿಯನ್ನು ಹೊಂದಿದ್ದರೂ ಹೆಚ್ಚು ಪ್ರದರ್ಶನ ಹೊಂದಲು ಸಾಧ್ಯವಾಗದೆ ಹೋಯಿತು. ಹಳ್ಳಿಯ ಒಬ್ಬ ವೇಶ್ಯೆಯ ಪಾತ್ರದಲ್ಲಿ, ಸುಷ್ಮಿತಾ ಸೇನ್ ಕಾಣಿಸಿಕೊಂಡಿದ್ದರು. 'ವೇಶ್ಯೆಯರ ಮನಕಲಕುವ ಬದುಕಿನ ದುರ್ಭಾಗ್ಯಮಯ ಜೀವನದ ದಿತ್ರ', ಸಿನಿಮಾ ರಸಿಕರ ಅಂತರಂಗವನ್ನು ಮುಟ್ಟಲಿಲ್ಲ; ತಟ್ಟಲಿಲ್ಲ. ಚಿತ್ರ ಅಂದುಕೊಂಡಷ್ಟು ಯಶಸ್ಸನ್ನು ಕಾಣದಿದ್ದರೂ ಸುಷ್ಮಿತಾರವರ ಅಭಿನಯಕ್ಕೆ ಮನ್ನಣೆ ದೊರೆಯಿತು.