ಕಲ್ಪನಾ ಚಾವ್ಲ

(ಕಲ್ಪನಾ ಚಾವ್ಲಾ ಇಂದ ಪುನರ್ನಿರ್ದೇಶಿತ)

ಕಲ್ಪನಾ ಚಾವ್ಲ (ಮಾರ್ಚ್ ೧೭, ೧೯೬೨ - ಫೆಬ್ರವರಿ ೧, ೨೦೦೩) - ಮೊದಲ ಭಾರತ ಸಂಜಾತ ಮಹಿಳಾ ಗಗನಯಾತ್ರಿ ಹಾಗೂ ಅಮೆರಿಕನ್ ಪ್ರಜೆ. ಅಂತರಿಕ್ಷ ನೌಕೆ ಕೊಲಂಬಿಯಾ ಭೂವಾತಾವರಣದಲ್ಲಿ ಸುಟ್ಟು ಭಸ್ಮವಾದಾಗ ಮಡಿದ ಏಳು ಗಗನಯಾತ್ರಿಗಳಲ್ಲಿ ಒಬ್ಬರು.

ಕಲ್ಪನಾ ಚಾವ್ಲ
Nationalityಭಾರತೀಯ
Born(೧೯೬೨-೦೩-೧೭)೧೭ ಮಾರ್ಚ್ ೧೯೬೨
ಕರ್ನಾಲ್ ಪಂಜಾಬ್ , ಭಾರತ
DiedFebruary 1, 2003(2003-02-01) (aged 40)
Aboard Space Shuttle Columbia over Texas, U.S.
Alma materಪಂಜಾಬ್ ಎಂಜಿನೆಯರಿಂಗ್ ಕಾಲೇಜು (ಬಿಇ)
ಆರ್ಲಿಂಗ್ಟನ್‌ನಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯ (ಎಂ ಎಸ್)
ಬೌಲ್ಡರ್ನಲ್ಲಿ ಕೊಲೊರಾಡೋ ವಿಶ್ವವಿದ್ಯಾಲಯ (MS, ಪಿ ಎಚ್ ಡಿ)
Time in space೩೧ ದಿನಗಳು, ೧೪ ಗಂಟೆ, ೬೪ ನಿಮಿಷಗಳು[]
Selection1994 NASA Group
MissionsSTS-87, STS-107
Mission insignia
Awardsಟೆಂಪ್ಲೇಟು:CS Medal of Honor

೧೯೬೨ ಮಾರ್ಚ ೧೭ ರಂದು ಹರಿಯಾಣದಲ್ಲಿನ ಕರ್ನಾಲ್ ಎಂಬ ಊರಿನಲ್ಲಿ ಜನಿಸಿದ ಕಲ್ಪನಾ ಚಾವ್ಲ, ೧೯೮೨ರಲ್ಲಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿಯ ಶಿಕ್ಷಣ ಮುಗಿಸಿದರು. ನಂತರ ಸ್ನಾತಕೋತ್ತರ ಶಿಕ್ಷಣವನ್ನು ಅಮೇರಿಕಾ ದೇಶದಲ್ಲಿ ಅಧ್ಯಯನ ಮಾಡಿದರು.ಅಮೇರಿಕನ್ ಪ್ರಜೆ ಜಾನ್ ಪಿಯರೆ ಹಾರಿಸನ್ ಅವರನ್ನು ವಿವಾಹವಾದರು[][][]

ಸಂಶೋಧನಾ ವೃತ್ತಿ

ಬದಲಾಯಿಸಿ

೧೯೯೫ ರಲ್ಲಿ ಕಲ್ಪನಾ, ಅಮೇರಿಕಾದಲ್ಲಿನ ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಸೇರಿದರು. ೧೯೯೭ ರ ನವೆಂಬರ್ ೧೯ ರಂದು ಇವರ ಮೊದಲ ಬಾಹ್ಯಾಕಾಶಯಾನ ಪ್ರಾರಂಭವಾಯಿತು. ನಂತರ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು ೮೦ ಸಂಶೋಧನೆಗಳಲ್ಲಿ ಕಲ್ಪನಾ ನಿರತರಾಗಿದ್ದರು.

೨೦೦೩ರ ಫೆಬ್ರವರಿ ೧-ರಂದು ಕೊಲಂಬಿಯಾ ಆಕಾಶನೌಕೆ ಎಸ್.ಟಿ.ಎಸ್.-೮೭ರಲ್ಲಿ ಗಗನಯಾತ್ರೆ ಮುಗಿಸಿ ಭೂಮಿಗೆ ಮರಳುವಾಗ,ತಾಂತ್ರಿಕ ದೋಷದಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು.ಈ ನೌಕೆಯಲ್ಲಿ ಇವರೊಂದಿಗೆ ಇತರ ಆರು ಗಗನಯಾನಿಗಳಿದ್ದರು.

ನೆನಪಿನಲ್ಲಿ

ಬದಲಾಯಿಸಿ
  • ಫೆಬ್ರವರಿ ೫ ೨೦೦೩ ರಂದು ಭಾರತದ ಪ್ರಧಾನ ಮಂತ್ರಿಗಳು ಉಪಗ್ರಹ "ಮೆಟ್ ಸ್ಯಾಟ್" ಉಪಗ್ರಹ ಸರಣಿಯನ್ನು "ಕಲ್ಪನಾ" ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮಾಡಿದರು.
  • ನಕ್ಷತ್ರ ಗ್ರಹ "೫೧೮೨೬ ಕಲ್ಪನಾಚಾವ್ಲಾ" ಎಂದು ನಾಮಕರಣ ಮಾಡಲಾಗಿದೆ.
  • ನ್ಯೂಯಾರ್ಕ್ ನಗರದ ಜಾಕ್ಸನ್ ಹೈಟ್ಸ್ ವಲಯದ "ಲಿಟಲ್ ಇಂಡಿಯಾ" ಪ್ರದೇಶದ ೭೪ನೇ ರಸ್ತೆಯನ್ನು "ಕಲ್ಪನಾ ಚಾವ್ಲಾ ಪಥ" ಎಂದು ಹೆಸರಿಸಲಾಗಿದೆ.
  • ಕಲ್ಪನಾ ಎಂ ಎಸ್ ಸಿ ಡಿಗ್ರಿ ಪಡೆದ ಟೆಕ್ಸಾಸ್ ವಿಶ್ವವಿದ್ಯಾಲಯ ದ ಒಂದು ಹಾಸ್ಟೆಲ್ ಗೆ ಕಲ್ಪನಾ ಚಾವ್ಲಾ ಹೆಸರಿಡಲಾಗಿದೆ.
  • ನಾಸಾ ಸಂಸ್ಥೆಯು ಒಂದು ಸೂಪರ್ ಕಂಪ್ಯೂಟರ್ ಅನ್ನು ಕಲ್ಪನಾರವರಿಗೆ ಸಮರ್ಪಿಸಲಾಗಿದೆ. [೧] (ndtv)
  • ಅಮರ ಚಿತ್ರ ಕಥೆ ಕಲ್ಪನಾ ಜೀವನದ ಬಗ್ಗೆ ಕಾಮಿಕ್ ಪುಸ್ತಕವನ್ನು ಹೊರತಂದಿದೆ.
  • ನಾಸಾ ಮಂಗಳ ಗ್ರಹಾನ್ವೇಷಣೆಯ ರೋವರ್ ಮಿಷನ್ ಕೊಲಂಬಿಯಾ ಪರ್ವತಗಳು ಸರಣಿಯ ಏಳು ಪರ್ವತಶ್ರೇಣಿಗಳಿಗೆ ಕೊಲಂಬಿಯಾ ನೌಕೆಯ ದುರಂತದಲ್ಲಿ ಮಡಿದವರ ನೆನಪಾಗಿ ಅವರ ಹೆಸರನ್ನು ಇಟ್ಟಿದೆ. ಇದರಲ್ಲಿ ಚಾವ್ಲಾ ಪರ್ವತ ಒಂದಾಗಿದೆ.

ಹೊರಗಿನ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Dismukes, Kim (ಮಾರ್ಚ್ ೧, ೨೦೦೪). "Kalpana Chawla – STS-107 Crew Memorial". National Aeronautics and Space Administration (NASA). Archived from the original on 2019-03-24. Retrieved ಜನವರಿ ೨೨, ೨೦೧೯. {{cite web}}: Check date values in: |access-date= and |date= (help)
  2. "ಕಲ್ಪನಾ ಚಾವ್ಲಾ". kannadavesatya.wordpress.com. Retrieved 9-2-2014. {{cite web}}: Check date values in: |accessdate= (help)
  3. "Indo-US astronaut follows Kalpana's footsteps". 11 December 2006. Retrieved 21 March 2020.
  4. "Did you know Kalpana was called Monto?". Rediff (in ಇಂಗ್ಲಿಷ್). Retrieved 21 March 2020.