ಕಲ್ತಪ್ಪ
ಕಲ್ತಪ್ಪ ಎಂದರೆ, ತುಳುನಾಡಿನ ತಿನಸುಗಳು ಒಂದು ವಿಶಿಷ್ಟ ರೀತಿಯ ಖಾದ್ಯ. ಒಂದು ಕಾಲದಲ್ಲಿ ಬಳಪದ ಕಲ್ಲಿನ ವಿಶಿಷ್ಟ ತವಾದಲ್ಲಿ ತಯಾರಾಗುವ ತಿಂಡಿ ಕಲ್ಲಿನ ಅಪ್ಪ ಎಂದು ಕರೆಯಲಾಗುತಿತ್ತು, ಇಂದು ಕಲ್ಲಿನ ಬದಲು ಲೋಹದ ತವಾದಲ್ಲಿ ಸಿದ್ಧವಾಗುತ್ತಿದ್ದರೂ ಅದರ ಹೆಸರು 'ಕಲ್ತಪ್ಪ'[೧] ಎಂದೇ ಉಳಿದುಕೊಂಡಿದೆ. ಕೇರಳ ಮೂಲದ ತಿಂಡಿ ಕರಾವಳಿಯಲ್ಲಿ ತಯಾರಾಗುತ್ತಿದ್ದರೂ ಬೇಯಿಸುವ ತವಾ ಕೇರಳದಲ್ಲಿ ಮಾತ್ರ ಸಿಗುತ್ತದೆ. ಬೇರೆ ತವಾದಲ್ಲಿ ತಯಾರಿಸಿದರೆ ಅದಕ್ಕೆ ಅಂತಹ ರುಚಿ ಬರುವುದಿಲ್ಲ. ಕಡಲೇಕಾಳು, ಆಲೂಗೆಡ್ಡೆ, ಬೀನ್ಸ್, ಕ್ಯಾರೆಟ್ ಸೇರಿಸಿ ತಯಾರಿಸಿದ ಕೂರ್ಮ ಇದರ ಜೊತೆಗೆ ತಿನ್ನಬಹುದು. ಸಾಮಾನ್ಯವಾಗಿ ಕಲ್ತಪ್ಪವನ್ನು ಹಲವಾರು ಬಗೆಗಳಲ್ಲಿ ಮಾಡಬಹುದು.
ಕಲ್ತಪ್ಪ ಮಾಡಲು ಬೇಕಾಗುವ ಸಾಮಾನುಗಳು
ಬದಲಾಯಿಸಿ- ಅಕ್ಕಿ – 1 ಲೋಟ
- ಬೆಲ್ಲ – 1 ಅಚ್ಚು
- ಸೌತೆಕಾಯಿ – 1
- 1/2 ಬಾಗ ಕಾಯಿ ತುರಿ (ದಪ್ಪಗೆ ತುರಿದಿದ್ದು)
- ಏಲಕ್ಕಿ ಪುಡಿ
- ಉಪ್ಪು
- ಎಣ್ಣೆ
- ಈರುಳ್ಳಿ 3/4
ಕಲ್ತಪ್ಪ ಮಾಡುವ ವಿಧಾನ
ಬದಲಾಯಿಸಿಮೊದಲು ಅಕ್ಕಿಯನ್ನು ಕೆಲಹೊತ್ತು ನೀರಿನಲ್ಲಿ ನೆನೆಸಿಡಬೇಕು. ಜೊತೆಗೆ ಬೆಲ್ಲ ಮತ್ತು ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡಿರಬೇಕು. ಬಳಿಕ ಅಕ್ಕಿಯ ಜೊತೆ ಬೆಲ್ಲ, ಸೌತೆಕಾಯಿ, ಕಾಯಿತುರಿ, ಏಲಕ್ಕಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ರುಬ್ಬಿಕೊಳ್ಳಬೇಕು (ಕಾರ ಬೇಕಾದವರು ಕಾರವನ್ನೂ ಹಾಕಿಕೊಳ್ಳಬಹುದು). ರುಬ್ಬಿದ ಹಿಟ್ಟನ್ನು ಸುಮಾರು ಅರ್ದ ಗಂಟೆಯಿಂದ ಒಂದು ಗಂಟೆಯವರೆಗೆ ಹಾಗೆಯೇ ಇಡಬೇಕು. ಒಂದು ಅಗಲ ತಳದ ಪಾತ್ರೆಗೆ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ ಕತ್ತರಿಸಿದ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಆ ಪಾತ್ರೆಗೆ ರುಬ್ಬಿದ ಹಿಟ್ಟನ್ನು ಹಾಕಿ ಸರಿಯಾಗಿ ಕಲಸಿಕೊಂಡು ಸಣ್ಣ ಉರಿಯಲ್ಲಿ ಬೇಯಿಸಬೇಕು.(ಹೀಗೆ ಚೆನ್ನಾಗಿ ಬೆಂದ ತಿಂಡಿಯೇ ನೆಸಲುದಡ್ಯ' ಕಲ್ತಪ್ಪ' . ಕೇರಳಿಗರು ಇದಕ್ಕೆ ಕಡಾಯಿ ಅಪ್ಪಮ್ ಎನ್ನುವರು. ಈ ಹೆಸರೂ ಕೂಡ ಕರ್ನಾಟಕದಲ್ಲಿ ಕೆಲವೆಡೆ ಬಳಸುತ್ತಾರೆ). ಬಳಿಕ ಇನ್ನೊಂದು ಮಣ್ಣಿನ ಪಾತ್ರೆಯಲ್ಲಿ ಕೆಂಡವನ್ನು ಹಾಕಿಕೊಂಡು ಬೆಂದ ತಿಂಡಿಯನ್ನು ಹದವಾಗಿ ಕತ್ತರಿಸಿಕೊಂಡು ಕೆಂಡದಲ್ಲಿ ಕೆಲ ಹೊತ್ತು ಹುರಿದರೆ ಕಲ್ತಪ್ಪ ಸವಿಯಲು ಸಿದ್ದ.