ಕಲಾಕಂದ್
ಕಲಾಕಂದ್ ಗಟ್ಟಿಯಾಗಿಸಿದ, ಸಿಹಿ ಹಾಲು ಮತ್ತು ಕಾಟೇಜ್ ಚೀಸ್‍ನಿಂದ ತಯಾರಿಸಲಾದ ಒಂದು ಜನಪ್ರಿಯ ಭಾರತೀಯ ಸಿಹಿತಿನಿಸು. ಈ ಖಾದ್ಯ ರಾಜಸ್ಥಾನದ ಅಲ್ವರ್ನಲ್ಲಿ ಹುಟ್ಟಿಕೊಂಡಿತು. ಕಲಾಕಂದ್ ಅನ್ನು ಭಾರತೀಯ ಉಪಖಂಡದಲ್ಲಿ ಹೋಳಿ, ದೀಪಾವಳಿ, ನವರಾತ್ರಿ, ಈದ್‍ನಂತಹ ವಿಭಿನ್ನ ಹಬ್ಬಗಳು ಮತ್ತು ಆಚರಣೆಗಳ ಅವಧಿಯಲ್ಲಿ ತಯಾರಿಸಲಾಗುತ್ತದೆ. ಒಂದು ದೊಡ್ಡ ಬಾಣಲೆಯನ್ನು ಉರಿಯ ಮೇಲಿರಿಸಿ ಗಟ್ಟಿಯಾಗುವವರೆಗೆ ದೊಡ್ಡ ಪ್ರಮಾಣದ ಹಾಲನ್ನು ನಿರಂತರವಾಗಿ ಕೈಯಾಡಿಸುತ್ತ ಕುದಿಸಲಾಗುತ್ತದೆ, ನಂತರ ಸಕ್ಕರೆ ಮತ್ತು ಒಣ ಹಣ್ಣುಗಳನ್ನು ಸೇರಿಸಲಾಗುತ್ತದೆ.