ಕರ್ನಾಟಕ ಸರ್ಕಾರದ ಮುಂಗಡ ಪತ್ರ ೨೦೧೬-೧೭

ಕರ್ನಾಟಕ ಸರ್ಕಾರದ ಮುಂಗಡ ಪತ್ರ 2016-17

ಬದಲಾಯಿಸಿ

ದಿನಾಂಕ 2016 ಮಾರ್ಚ್, 18 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಹಣಕಾಸು ಪತ್ರವನ್ನು ಮಂಡನೆ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ 4ನೇ ಬಾರಿ ಹಾಗೂ ಒಟ್ಟಾರೆಯಾಗಿ 11ನೇ ಬಾರಿಗೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಿದರು.* 'ಸರ್ಕಾರ ಸಾಮಾಜಿಕ ನ್ಯಾಯದ ಜೊತೆಗೆ ನಾಡಿನ ಅಭಿವೃದ್ಧಿಗೆ ಮಿಡಿಯುತ್ತದೆ, ದುಡಿಯುತ್ತದೆ' ಎಂದು ಭಾಷಣ ಆರಂಭಿಸಿದರು.ಈ ಸಾಲಿನ ಬಜೆಟ್‌ ಗಾತ್ರ ರೂ.1,63,419 ಕೋಟಿಗೆ ಏರಿದೆ. ವಿತ್ತೀಯ ಕೊರತೆ ರೂ.25,657 ಕೋಟಿಯಾಗಲಿದೆ. ಸರ್ಕಾರ ರೂ.31,123 ಕೋಟಿ ಸಾಲ ಎತ್ತಲಿದೆ.

  • ರೈತರ ಕಲ್ಯಾಣ ಸಮಿತಿ: ಸರಣಿ ಆತ್ಮಹತ್ಯೆ ಪ್ರಕರಣಗಳಿಂದ ಕಂಗಾಲಾಗಿರುವ ರೈತ ಸಮುದಾಯದಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನವನ್ನೂ ಮುಖ್ಯಮಂತ್ರಿ ಮಾಡಿದ್ದಾರೆ. ರೈತರ ಸಂಕಷ್ಟ ನಿವಾರಣೆಗೆ ತಮ್ಮ (ಮುಖ್ಯಮಂತ್ರಿ) ಅಧ್ಯಕ್ಷತೆಯಲ್ಲಿ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ.
  • ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಣೆ ಮುಂದುವರಿಸುವುದಾಗಿ ಹೇಳಿದ್ದಾರೆ. ಕಳೆದ ವರ್ಷ 21 ಲಕ್ಷ ರೈತರಿಗೆ ಇದರ ಉಪಯೋಗ ಆಗಿದ್ದು, ಮುಂದಿನ ವರ್ಷ ಕನಿಷ್ಠ 23 ಲಕ್ಷ ಜನರಿಗೆ ರೂ.11 ಸಾವಿರ ಕೋಟಿ ಸಾಲ ನೀಡುವ ಗುರಿ ಘೋಷಿಸಿದ್ದಾರೆ.
  • ‘ನವೋದ್ಯಮ’ (ಸ್ಟಾರ್ಟ್‌ಅಪ್‌) ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಅದರ ಉಪಯೋಗ ಕೃಷಿ ಕ್ಷೇತ್ರಕ್ಕೂ ಆಗಬೇಕೆಂದು ‘ಕೃಷಿ ನವೋದ್ಯಮ’ ಸ್ಥಾಪಿಸುವುದಾಗಿಯೂ ಪ್ರಕಟಿಸಿದ್ದಾರೆ. ಇದರಡಿ ಕೈಗಾರಿಕಾ ಅಭಿವೃದ್ಧಿಯ ವಿಶೇಷ ಆರ್ಥಿಕ ವಲಯಗಳ ಮಾದರಿಯಲ್ಲೇ ರಾಜ್ಯದ ವಿವಿಧೆಡೆ ‘ವಿಶೇಷ ಕೃಷಿ ವಲಯ’ಗಳನ್ನು ಸ್ಥಾಪಿಸಲಾಗುತ್ತದೆ.

ಆರ್ಥಿಕ ಸಮೀಕ್ಷೆ

ಬದಲಾಯಿಸಿ
ಆರ್ಥಿಕ ಸಮೀಕ್ಷೆ ಅಂದಾಜು
  • ಒಟ್ಟು ಆರ್ಥಿಕ ಉತ್ಪನ್ನ (ಜಿಡಿಪಿ)
  • 2014–15 ರೂ.7,34,988 ಕೋಟಿ
  • 2015–16 ರೂ.7,80,805 ಕೋಟಿ
ಆರ್ಥಿಕ ವೃದ್ಧಿ ದರ ಕುಸಿತ
  • ಸತತ ಮೂರು ವರ್ಷಗಳ ಬರಗಾಲದಿಂದಾಗಿ ಕೃಷಿ ವಲಯದ ಬೆಳವಣಿಗೆಯು ಗಮನಾರ್ಹ ಕುಸಿತ ಕಂಡಿದ್ದರಿಂದ ರಾಜ್ಯದ ಆರ್ಥಿಕ ವೃದ್ಧಿ ದರವು ಶೇ 7.8ರಿಂದ ಶೇ 6.2ಕ್ಕೆ ಇಳಿದಿದೆ ಎಂದು ಆರ್ಥಿಕ ಸಮೀಕ್ಷೆ ಅಂದಾಜಿಸಿದೆ. 2015-16ನೇ ಸಾಲಿನ ರಾಜ್ಯದ ಒಟ್ಟು ಆಂತರಿಕ ಉತ್ಪನ್ನವು (ಎಸ್‌ಜಿಡಿಪಿ) , ಹಿಂದಿನ ವರ್ಷದ (2014–15) ಶೇ 7.8ಕ್ಕೆ ಹೋಲಿಸಿದರೆ ಶೇ 6.2ರಷ್ಟಕ್ಕೆ ಇಳಿದಿದೆ.2014–15ನೇ ಸಾಲಿನಲ್ಲಿ ರೂ.7,34, 988 ಕೋಟಿಯಷ್ಟಿದ್ದ ‘ಎಸ್‌ಜಿಡಿಪಿ’ ಶೇ 6.2 ವೃದ್ಧಿದರದೊಂದಿಗೆ ರೂ.7,80,805 ಕೋಟಿ ತಲುಪುವ ನಿರೀಕ್ಷೆ ಇದೆ ಎಂದು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ವರದಿಯಲ್ಲಿ ಲೆಕ್ಕ ಹಾಕಲಾಗಿದೆ.
  • ರಾಜ್ಯದ ವಿವಿಧೆಡೆ ಕಾಣಿಸಿಕೊಂಡ ಬರದಿಂದಾಗಿ ಕೃಷಿ ವಲಯದ ಬೆಳವಣಿಗೆ ದರ ಶೇ (– ) 4.7ಕ್ಕೆ ಕುಸಿಯುವ ಭೀತಿ ಎದುರಾಗಿದೆ. ಬರದ ಛಾಯೆಯಿಂದಾಗಿ 12.26 ಕೋಟಿ ಟನ್‌ ಆಹಾರ ಪದಾರ್ಥಗಳ ಉತ್ಪಾದನೆ 11 ಕೋಟಿ ಟನ್‌ಗಳಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ.
ಬರ
  • ಮುಂಗಾರು ಹಂಗಾಮಿನಲ್ಲಿ ರಾಜ್ಯದ 136 ತಾಲ್ಲೂಕು ಮತ್ತು ಹಿಂಗಾರಿನಲ್ಲಿ 62 ತಾಲ್ಲೂಕುಗಳು ಬರಕ್ಕೆ ತುತ್ತಾಗಿದ್ದವು. ಗಣಿ, ಕಲ್ಲುಗಣಿಗಾರಿಕೆ, ತಯಾರಿಕಾ ಮತ್ತು ನಿರ್ಮಾಣ ವಲಯ, ವಿದ್ಯುಚ್ಛಕ್ತಿ, ಅನಿಲ ಹಾಗೂ ನೀರು ಸರಬರಾಜು ಸೇರಿದಂತೆ ಕೈಗಾರಿಕಾ ವಲಯದ ಬೆಳವಣಿಗೆ ದರ ಶೇ 4.7ರಿಂದ ಶೇ 4.5ಕ್ಕೆ ಇಳಿಕೆಯಾಗುವುದೆಂದು ಎಂದು ಸಮೀಕ್ಷೆ ಹೇಳಿದೆ.
ಗಮನಾರ್ಹ ಕೊಡುಗೆ
  • ಶೇ 10.3ರಷ್ಟಿದ್ದ ಸೇವಾ ವಲಯದ (ವೃತ್ತಿಪರ ಸೇವೆ, ಸ್ಥಿರಾಸ್ತಿ, ಸಂಪರ್ಕ ಕ್ಷೇತ್ರ ಇತ್ಯಾದಿ) ಬೆಳವಣಿಗೆ ಶೇ 9.1ಕ್ಕೆ ಇಳಿಕೆಯಾಗಿದ್ದರೂ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಬಹುಪಾಲು ಕೊಡುಗೆ ನೀಡಿದೆ. ಸೇವಾವಲಯದ ವ್ಯಾಪ್ತಿಯಲ್ಲಿಯ ಪ್ರತಿ ಯೊಂದು ಕೈಗಾರಿಕೆಯು ಶೇ 12ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸುವ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆ ಶೇ 6.2 ತಲುಪಲು ಗಮನಾರ್ಹ ಕೊಡುಗೆ ನೀಡಿದೆ.
ಹೆಚ್ಚಿದ ನಿವ್ವಳ ತಲಾ ಆದಾಯ
  • ರಾಜ್ಯದ ನಿವ್ವಳ ತಲಾ ಆದಾಯ ರೂ.1,30,897 ಕೋಟಿಯಿಂದ ರೂ.1,45,799 ಕೋಟಿಗೆ ಹೆಚ್ಚುವ ಮೂಲಕ ಶೇ 11.4ರಷ್ಟು ಏರಿಕೆ ಕಾಣಲಿದೆ. ಇದೇ ಅವಧಿಯಲ್ಲಿ ರಾಷ್ಟ್ರೀಯ ನಿವ್ವಳ ತಲಾ ಆದಾಯ ಶೇ 7.3ರಷ್ಟು (ರೂ.86,879 ರಿಂದ ರೂ.93,231) ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಲಿಂಗಾಧಾರಿತ ಬಜೆಟ್‌
  • ದೇಶದಲ್ಲಿ ಲಿಂಗಾಧಾರಿತ ಬಜೆಟ್‌ ಜಾರಿಗೊಳಿಸಿರುವ ಮೂರು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಬಜೆಟ್‌ನಲ್ಲಿ ಲಿಂಗ ಸಮಾನತೆ ಮತ್ತು ಸಾರ್ವಜನಿಕ ವೆಚ್ಚದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಮಹಿಳೆಯರಿಗೆ ಸಮಾನ ಸಂಪನ್ಮೂಲ ಹಂಚಿಕೆ ಮತ್ತು ವೆಚ್ಚ ನಿಗದಿಪಡಿಸಲು ರಾಜ್ಯ ಸರ್ಕಾರ ಆರ್ಥಿಕ ಇಲಾಖೆಯಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ ಘಟಕ ಸ್ಥಾಪಿಸಿದೆ.
ಬಂಡವಾಳ
  • ಇನ್ವೆಸ್ಟ್‌ ಕರ್ನಾಟಕ ಸಮಾವೇಶದ ಮೂಲಕ ರಾಜ್ಯ ಸರ್ಕಾರ ₹3 ಲಕ್ಷ ಕೋಟಿಗಿಂತಲೂ ಹೆಚ್ಚು ಬಂಡವಾಳ ಆಕರ್ಷಿಸಿದೆ. ಆ ಪೈಕಿ ₹ 1.77 ಲಕ್ಷ ಕೋಟಿ ಹೂಡಿಕೆಯ 1080 ಯೋಜನೆಗಳಿಗೆ ಸರ್ಕಾರ ಈಗಾಗಲೇ ಹಸಿರು ನಿಶಾನೆ ತೋರಿಸಿದೆ. ಇದರಿಂದಾಗಿ 4.82 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ.
  • ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವಲ್ಲಿ ಕರ್ನಾಟಕ ಪ್ರಮುಖ ತಾಣವಾಗಿ ಹೊರಹೊಮ್ಮಿದೆ. 2014–15ರಲ್ಲಿ ಭಾರತಕ್ಕೆ ಹರಿದು ಬಂದ ಎಫ್‌ಡಿಐನಲ್ಲಿ ಶೇ 11.13ರಷ್ಟು ರಾಜ್ಯದ ಪಾಲಾಗಿದೆ. ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಈ ಕ್ಷೇತ್ರದಲ್ಲಿ ರೂ.2.20 ಲಕ್ಷ ಕೋಟಿ ರಫ್ತು ವಹಿವಾಟು ನಡೆಸಿದೆ. ಈ ಕ್ಷೇತ್ರ ರಾಜ್ಯದ ಜಿಡಿಪಿಗೆ ಶೇ 26ಕ್ಕಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ.
  • ರಫ್ತಿಗೆ ಐ.ಟಿ ಕೊಡುಗೆ: ದೇಶದ ರಫ್ತು ಪ್ರಮಾಣದಲ್ಲಿ ರಾಜ್ಯದ ಐ.ಟಿ ಕ್ಷೇತ್ರದ ಪಾಲು ಶೇ 38ರಷ್ಟಾಗಿದೆ. 3500 ಐ.ಟಿ ಕಂಪೆನಿಗಳು ಅತಿ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಸುವ ಕೇಂದ್ರಗಳಾಗಿ ಗುರುತಿಸಿಕೊಂಡಿವೆ.
ಐ.ಟಿ ತಾಂತ್ರಿಕ ಕೇಂದ್ರ
  • ಅಮೆರಿಕದ ಸಿಲಿಕಾನ್‌ ವ್ಯಾಲಿ, ಬಾಸ್ಟನ್‌ ಮತ್ತು ಲಂಡನ್‌ ಬಿಟ್ಟರೆ ಬೆಂಗಳೂರು ವಿಶ್ವಾದ ನಾಲ್ಕನೇ ಅತ್ಯುತ್ತಮ ಐ.ಟಿ ತಾಂತ್ರಿಕ ಕೇಂದ್ರವಾಗಿದೆ. ಅದೇ ರೀತಿ ಶೇ 30ರಷ್ಟು ಸ್ಟಾರ್ಟ್‌ಅಪ್‌ಗಳಿರುವ ಕರ್ನಾಟಕವು ದೇಶದ ಸ್ಟಾರ್ಟ್‌ಅಪ್ ರಾಜಧಾನಿಯಾಗಿ ಹೊರಹೊಮ್ಮಿದೆ. ಮೊದಲ ಬಾರಿಗೆ ಪ್ರತ್ಯೇಕ ‘ಸ್ಟಾರ್ಟ್‌ಅಪ್‌ ನೀತಿ 2015– 20’ ಜಾರಿಗೆ ತಂದ ಹೆಗ್ಗಳಿಕೆ ಕೂಡ ರಾಜ್ಯಕ್ಕೆ ಸಲ್ಲುತ್ತದೆ. 2020ರ ವೇಳೆಗೆ 20 ಸಾವಿರ ತಾಂತ್ರಿಕ ಸ್ಟಾರ್ಟ್‌ಅಪ್‌ ಸ್ಥಾಪಿಸುವ ಗುರಿ ಹೊಂದಿದೆ.
ಸವಾಲುಗಳು
  • ವಿದೇಶಿ ನೇರ ಬಂಡವಾಳ ಆಕರ್ಷಿಸುವ ಅವಕಾಶಗಳಿದ್ದು ಆ ನಿಟ್ಟಿನಲ್ಲಿ ಎದುರಾಗಿರುವ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಮೂಲಸೌಲಭ್ಯ ಕೊರತೆ, ಅಧಿಕಾರಿಶಾಹಿ ಅಡೆತಡೆ, ವಿದ್ಯುತ್‌ ಅಭಾವ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಸರ್ಕಾರ ಹಲವಾರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಶಿವಮೊಗ್ಗ, ಕಲಬುರ್ಗಿಯಂತಹ ಎರಡನೇ ಹಂತದ ನಗರಗಳಿಗೆ ಐ.ಟಿ ಮತ್ತು ಸ್ಟಾರ್ಟ್‌ ಅಪ್‌ಗಳನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ
ಜಿಲ್ಲಾ ಯೋಜನಾ ಗಾತ್ರ ಹೆಚ್ಚಳ
  • ವರ್ಷದಿಂದ ವರ್ಷಕ್ಕೆ ಜಿಲ್ಲಾ ವಲಯದ ಯೋಜನಾ ಗಾತ್ರ ಹೆಚ್ಚಾಗುತ್ತಿದೆ. ಶಿಕ್ಷಣ, ಗ್ರಾಮೀಣ ಉದ್ಯೋಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪರಿಶಿಷ್ಟ ಜಾತಿ ಮತ್ತು ಪಂಗಡ, ಗ್ರಾಮೀಣ ವಿದ್ಯಾರ್ಥಿ ವಸತಿ ನಿಲಯಗಳು ಹೆಚ್ಚಿನ ಪಾಲು ಹೊಂದಿವೆ. 2013–14ರಲ್ಲಿ ರೂ.8921 ಕೋಟಿಯಷ್ಟಿದ್ದ ಜಿಲ್ಲಾ ವಲಯದ ಯೋಜನಾ ಗಾತ್ರ 2014–15ರಲ್ಲಿ ರೂ. 10,481 ಕೋ ಟಿಗೆ ಹಾಗೂ 15–16ರಲ್ಲಿ ರೂ.11,328 ಕೋಟಿಗೆ ಏರಿದೆ.
ಕೃಷಿ ವಲಯದ ಕೊಡುಗೆ ಇಳಿಕೆ
  • ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ಕೃಷಿ ವಲಯದ ಕೊಡುಗೆ ಇಳಿಕೆಯಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ರಾಜ್ಯದ ಕೊಡುಗೆ ಶೇ. 5.5ರಿಂದ ಶೇ. 7ಕ್ಕೆ ಹೆಚ್ಚಿದ್ದು, ಇದು ರಾಷ್ಟ್ರೀಯ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ ನಮ್ಮ ರಾಜ್ಯದ ವಾಸ್ತವಿಕ ಕೊಡುಗೆಯನ್ನು ಪ್ರತಿಬಿಂಬಿಸುತ್ತಿದೆ. ಐಟಿ ವಲಯದ ಕೊಡುಗೆ ಶೇ. 9ರಿಂದ ಶೇ. 18ಕ್ಕೆ ಏರಿಕೆಯಾಗಿದೆ. ಸೇವಾವಲಯದ ಒಟ್ಟಾರೆ ಕೊಡುಗೆಯು ಶೇ. 59ರಿಂದ ಶೇ. 64ಕ್ಕೆ ಹೆಚ್ಚಳವಾಗಿದೆ. ಉತ್ಪಾದನಾ ವಲಯದ ಕೊಡುಗೆ ಶೇ.12ರಿಂದ ಶೇ.15ಕ್ಕೆ ಏರಿದೆ. ಆದರೆ, ಕೃಷಿ ವಲಯದ ಕೊಡುಗೆಯು ಶೇ.14ರಿಂದ ಶೇ.8ಕ್ಕೆ ಇಳಿಕೆಯಾಗಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ತಮ್ಮ ಬಜೆಟ್‌ನಲ್ಲಿ ಪ್ರಸ್ತಾವಿಸಿದ್ದಾರೆ.

[] []

ಬಜೆಟ್'ನ ಸಂಕ್ಷಿಪ್ತ ನೊಟ

ಬದಲಾಯಿಸಿ
  • ಈ ಸಾಲಿನ ಬಜೆಟ್‌ ಗಾತ್ರ ರೂ.1,63,419 ಕೋಟಿಗೆ ಏರಿದೆ. ವಿತ್ತೀಯ ಕೊರತೆ ರೂ.25,657 ಕೋಟಿಯಾಗಲಿದೆ. ಸರ್ಕಾರ ರೂ.31,123 ಕೋಟಿ ಸಾಲ ಎತ್ತಲಿದೆ.[]
12016-17 ರ ಕರ್ನಾಟಕ ಮುಂಗಡ ಪತ್ರದ (ಬಜೆಟ್ಟಿ£) ಸಂಕ್ಷಿಪ್ತ ನೊಟ
ಬಜೆಟ್ ಗಾತ್ರ ಯೋಜನಾ ಗಾತ್ರ ವಿತ್ತೀಯ ಕೊರತೆ ಸಾಲ ಸಾಲ ಮರುಪಾವತಿ
ಕೋಟಿ ರೂ.ಗಳಲ್ಲಿ ಕೋಟಿ ರೂ.ಗಳಲ್ಲಿ ಕೋಟಿ ರೂ.ಗಳಲ್ಲಿ ಕೋಟಿ ರೂ.ಗಳಲ್ಲಿ ಕೋಟಿ ರೂ.ಗಳಲ್ಲಿ
1.63,419 85,275 25,657 31,123 6,841
2016-17 ರ ಆದಾಯ ಮೂಲ :: ತೆರಿಗೆ ಏರಿಕೆಯಿಂದ ಬರುವ ವರಮಾನ
ವಾಣಿಜ್ಯ ತೆರಿಗೆ ಅಬಕಾರಿ ಮುದ್ರಾಂಕ ಶುಲ್ಯ ವಾಹನ ತೆರಿಗೆ ಒಟ್ಟು
5,088 1,310 800 360 7658

ಬಜೆಟ್ ಆದಾಯ-ವೆಚ್ಚ ರೂ-ಪೈಸೆ ಲೆಖ್ಖದಲ್ಲಿ

ಬದಲಾಯಿಸಿ
  • ಆದಾಯ-ವೆಚ್ಚ ಪೈಸೆ ಲೆಖ್ಖದಲ್ಲಿ ಎಂದರೂ ಒಂದೇ, ಶೇಕಡಾವಾರು ಎಂದರೂ ಒಂದೇ.
12016-17 ಮುಂಗಡ ಪತ್ರದ ಆದಾಯ-ವೆಚ್ಚ ಶೇಕಡಾವಾರು ಮತ್ತು ಅಂಶವಾರು ಹಣ ಮಂಜೂರು
ಜಮೆ-(ಹೇಗೆ) ಶೇಕಡ ಕೋಟಿ ರೂ. ವೆಚ್ಚ (ಹೇಗೆ) ಶೇಕಡ ಕೋಟಿ ರೂ
ರಾಜ್ಯ ತೆರಿಗೆ 51% ಕೃಷಿ ನೀರಾವರಿ 18%
ಸಾಲದಿಂದ 19% 31,123 ಇತರಸೇವೆಗಳು 18%
ಕೇಂದ್ರ ತೆರಿಗೆ ಪಾಲು 17% ಇತರೆ ಆರ್ಥಿಕ ಸೇವೆ 17%
ಕೇಂದ್ರದ ಅನುದಾನ 8% ಶಿಕ್ಷಣ 12%
ತೆರಿಗೆಯೇತರ ಆದಾಯ 4% ಸಾಲ ತೀರಿಕೆ 12% 6841
ಸಾರ್ವಜನಿಕ ಲೆಖ್ಖ 1% ಸಮಾಜ ಕಲ್ಯಾಣ 10%
ಇತರೆ ಸಮಾಜ ಸೇವೆ 7%
ಆರೋಗ್ಯ 4%
ನೀರು -ನೈರ್ಮಲ್ಯ 2%
ಒಟ್ಟು 100% 1,63,419 ಓಟ್ಟು ೧೦೦% 1,63,419

ದರ ಏರಿಕೆ - ಇಳಿಕೆ

ಬದಲಾಯಿಸಿ

ತೆರಿಗೆ ಏರಿಕೆಯಾದ ಪದಾರ್ಥಗಳು ಮತ್ತು ತೆರಿಗೆ ಇಳಿಕೆಯಾದ ಪದಾರ್ಥಗಳು:

ಬಜೆಟ್ 2016-17 ರ ಕೊಡಿಗೆಗಳು

ಬದಲಾಯಿಸಿ

ಈ ಸಾಲಿನ ಬಜೆಟ್‌ ಗಾತ್ರ ರೂ.1,63,419 ಕೋಟಿಗೆ ಏರಿದೆ. ವಿತ್ತೀಯ ಕೊರತೆ ರೂ.25,657 ಕೋಟಿಯಾಗಲಿದೆ. ಸರ್ಕಾರ ರೂ.31,123 ಕೋಟಿ ಸಾಲ ಎತ್ತಲಿದೆ.

  1. ರೈತರ ಕಲ್ಯಾಣ ಸಮಿತಿ: ಸರಣಿ ಆತ್ಮಹತ್ಯೆ ಪ್ರಕರಣಗಳಿಂದ ಕಂಗಾಲಾಗಿರುವ ರೈತ ಸಮುದಾಯದಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನವನ್ನೂ ಮುಖ್ಯಮಂತ್ರಿ ಮಾಡಿದ್ದಾರೆ. ರೈತರ ಸಂಕಷ್ಟ ನಿವಾರಣೆಗೆ ತಮ್ಮ (ಮುಖ್ಯಮಂತ್ರಿ) ಅಧ್ಯಕ್ಷತೆಯಲ್ಲಿ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ.
  2. ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಣೆ ಮುಂದುವರಿಸುವುದಾಗಿ ಹೇಳಿದ್ದಾರೆ. ಕಳೆದ ವರ್ಷ 21 ಲಕ್ಷ ರೈತರಿಗೆ ಇದರ ಉಪಯೋಗ ಆಗಿದ್ದು, ಮುಂದಿನ ವರ್ಷ ಕನಿಷ್ಠ 23 ಲಕ್ಷ ಜನರಿಗೆ ರೂ.11 ಸಾವಿರ ಕೋಟಿ ಸಾಲ ನೀಡುವ ಗುರಿ ಘೋಷಿಸಿದ್ದಾರೆ.
  3. ‘ನವೋದ್ಯಮ’ (ಸ್ಟಾರ್ಟ್‌ಅಪ್‌) ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಅದರ ಉಪಯೋಗ ಕೃಷಿ ಕ್ಷೇತ್ರಕ್ಕೂ ಆಗಬೇಕೆಂದು ‘ಕೃಷಿ ನವೋದ್ಯಮ’ ಸ್ಥಾಪಿಸುವುದಾಗಿಯೂ ಪ್ರಕಟಿಸಿದ್ದಾರೆ. ಇದರಡಿ ಕೈಗಾರಿಕಾ ಅಭಿವೃದ್ಧಿಯ ವಿಶೇಷ ಆರ್ಥಿಕ ವಲಯಗಳ ಮಾದರಿಯಲ್ಲೇ ರಾಜ್ಯದ ವಿವಿಧೆಡೆ ‘ವಿಶೇಷ ಕೃಷಿ ವಲಯ’ಗಳನ್ನು ಸ್ಥಾಪಿಸಲಾಗುತ್ತದೆ.
  4. ನೀರಾವರಿಗೆ ಪ್ರಸಕ್ತ ಸಾಲಿನಲ್ಲಿ ರೂ.14,477 ಕೋಟಿ ಮೀಸಲಿಟ್ಟಿದ್ದು, ವಿವಿಧ ನಾಲೆಗಳ ಆಧುನೀಕರಣಕ್ಕೆ ರೂ.3 ಸಾವಿರ ಕೋಟಿ ಹಂಚಿಕೆ ಮಾಡಿದ್ದಾರೆ. ನೀರಾವರಿಗೆ 5 ವರ್ಷದಲ್ಲಿ ರೂ.50 ಸಾವಿರ ಕೋಟಿ ಖರ್ಚು ಮಾಡುವುದಾಗಿ ಮೊದಲ ವರ್ಷ ಹೇಳಿದ್ದ ಸಿದ್ದರಾಮಯ್ಯ, ಇದುವರೆಗೂ ರೂ. 46,931 ಕೋಟಿ ವೆಚ್ಚ ಮಾಡಿದಂತಾಗುತ್ತದೆ ಎಂದಿದ್ದಾರೆ. ನಿರೀಕ್ಷೆಗಿಂತ ಹೆಚ್ಚು ಹಣ ನೀರಾವರಿಗೆ ವ್ಯಯ ಮಾಡುವುದು ಅನಿವಾರ್ಯ ಎಂದೂ ವಿವರಿಸಿದ್ದಾರೆ.
  5. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆಗೆ ವಿಪರೀತ ಹಣ ವ್ಯಯ ಮಾಡುತ್ತಿದ್ದು, ಅದು ನಿಜಕ್ಕೂ ಸದ್ವಿನಿಯೋಗ ಆಗುತ್ತಿದೆಯೇ ಎಂಬುದನ್ನು ತಿಳಿಯಲು ಸಾಮಾಜಿಕ ಲೆಕ್ಕ ಪರಿಶೋಧನೆಗೆ ಮೊರೆ ಹೋಗುವುದಾಗಿ ವಿವರಿಸಿದ್ದಾರೆ.
  6. ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ಸಲುವಾಗಿ ಅಂಗನವಾಡಿ ಮಕ್ಕಳಿಗೆ ಕೆನೆರಹಿತ ಹಾಲಿನ ಬದಲಿಗೆ ಕೆನೆಸಹಿತ ಹಾಲು ನೀಡುವುದಾಗಿ ಪ್ರಕಟಿಸಿದ್ದಾರೆ.
  7. ಅಹಿಂದ ವರ್ಗಗಳ ಕಲ್ಯಾಣಕ್ಕೆ ಈ ಹಿಂದೆ ಘೋಷಿಸಿದ್ದ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ಅಗತ್ಯ ಇರುವ ಕಡೆ ಹಾಸ್ಟೆಲ್‌ ನಿರ್ಮಾಣಕ್ಕೂ ಒತ್ತು ಕೊಟ್ಟಿದ್ದಾರೆ. ಈ ವರ್ಗಗಳ ಮಕ್ಕಳು ಇರುವ ಹಾಸ್ಟೆಲ್‌ಗಳಲ್ಲಿನ ಭೋಜನಾ ವೆಚ್ಚವನ್ನೂ ಹೆಚ್ಚಿಸಿದ್ದಾರೆ.
  8. ಮಹಿಳಾ ಸಬಲೀಕರಣ ನೀತಿ ರೂಪಿಸುವುದಾಗಿ ಘೋಷಿಸಿರುವ ಮುಖ್ಯಮಂತ್ರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳ ಮಾದರಿಯಲ್ಲೇ ಜಿಲ್ಲಾ ಮಹಿಳಾ ಕಲ್ಯಾಣ ಸಮಿತಿಗಳನ್ನು ರಚಿಸಲಾಗುವುದು ಎಂದಿದ್ದಾರೆ.
  9. ಜೆನರ್ಮ್ ಯೋಜನೆ ಜಾರಿ ನಂತರ ನಗರ ಪ್ರದೇಶಗಳಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿದೆ. ಆದರೆ, ಇತ್ತೀಚೆಗೆ ಈ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿದ್ದು, ಅದನ್ನು ರಾಜ್ಯದ ಅನುದಾನದಿಂದಲೇ ಮುಂದುವರಿಸುವುದಾಗಿ ಹೇಳಿದ್ದಾರೆ. ಮೂರು ವರ್ಷಗಳಲ್ಲಿ ₹972 ಕೋಟಿ ಖರ್ಚು ಮಾಡುವ ಭರವಸೆ ನೀಡಿದ್ದಾರೆ.
  10. ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಪಾಠ ಕಲಿತಂತಿರುವ ಮುಖ್ಯಮಂತ್ರಿಯವರು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದು, ₹75 ಕೋಟಿ ಮೀಸಲಿಟ್ಟಿದ್ದಾರೆ.
  11. ನೇಕಾರರ ಸಾಲ ಮನ್ನಾ: ನೇಕಾರರಿಗೆ ಮನೆ ಮತ್ತು ಕೆಲಸದ ಶೆಡ್‌ಗಳ ನಿರ್ಮಾಣಕ್ಕೆ ವಿವಿಧ ಯೋಜನೆಗಳಡಿ ಕೊಟ್ಟಿದ್ದ ₹17 ಕೋಟಿ ಸಾಲ ಮತ್ತು ಅದರ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
  12. ಹಣೆಪಟ್ಟಿ ಅಳಿಸುವ ಯತ್ನ: ತಮ್ಮ ವಿರುದ್ಧ ಇರುವ ‘ಐ ಟಿ ವಿರೋಧಿ’ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ.
  13. ಐ ಟಿ (ಮಾಹಿತಿ ತಂತ್ರಜ್ಞಾನ), ಎಲೆಕ್ಟ್ರಾನಿಕ್ಸ್‌್ ಮತ್ತು ಅನಿಮೇಷನ್‌ ಇತ್ಯಾದಿ ವಲಯಗಳಲ್ಲಿ ಶ್ರೇಷ್ಠತಾ ಕೇಂದ್ರಗಳು ಮತ್ತು ಫಿನಿಷಿಂಗ್ ಶಾಲೆಗಳನ್ನು ವಿಶ್ವವಿದ್ಯಾಲಯ ಮತ್ತಿತರ ಶೈಕ್ಷಣಿಕ ಸಂಸ್ಥೆಗಳ ಜತೆ ಸೇರಿ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
  14. ಇದೇ ರೀತಿ ವಿವಿಧ ಕಾರ್ಯಕ್ರಮಗಳನ್ನು ಘೋಷಿಸಿದ್ದು, ಈ ಸಲುವಾಗಿ ₹222 ಕೋಟಿ ಮೀಸಲಿಟ್ಟಿದ್ದಾರೆ.
  15. ಗೌರವ ಧನ ಹೆಚ್ಚಳ: ಗ್ರಾಮ ಸಹಾಯಕರ ಮಾಸಿಕ ಗೌರವ ಧನವನ್ನು ರೂ.7 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಲಾಗಿದೆ.
  16. ಬೆಂಗಳೂರು: ‘ಭಾಗ್ಯ’ಗಳ ಸರಮಾಲೆಯನ್ನೇ ನೀಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ರಾಜ್ಯದ ಜನರಿಗೆ ತೆರಿಗೆ ಹೊರೆಯ ಭಾಗ್ಯವನ್ನು ಕರುಣಿಸಿದ್ದಾರೆ. ಮೂರು ವರ್ಷಗಳಿಂದ ರಾಜ್ಯ ಬಜೆಟ್‌ ಅನ್ನು ‘ಅಹಿಂದ ಕಲ್ಯಾಣ’ ಹಳಿ ಮೇಲೆಯೇ ಓಡಿಸುತ್ತಿದ್ದ ಅವರು, ಶುಕ್ರವಾರ ಮಂಡಿಸಿದ 2016–17ನೇ ಸಾಲಿನ ಬಜೆಟ್‌ನಲ್ಲಿ ‘ಅಭಿವೃದ್ಧಿ’ಯ ಹಳಿ ಮೇಲೆ ಓಡಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ತೆರಿಗೆ ಭಾರ ಹೊರಿಸಿದ್ದಾರೆ.
  17. ಮೌಲ್ಯವರ್ಧಿತ ತೆರಿಗೆಗೆ (ವ್ಯಾಟ್‌) ಕೈಹಾಕದಿದ್ದರೂ ಪೆಟ್ರೋಲ್‌, ಡೀಸೆಲ್‌, ಮದ್ಯ, ಬಿಯರ್‌, ತಂಪು ಪಾನೀಯ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸುವುದರ ಮೂಲಕ ರೂ.7,658 ಕೋಟಿ ಹೆಚ್ಚುವರಿ ವರಮಾನ ನಿರೀಕ್ಷೆ ಮಾಡಿದ್ದಾರೆ. ಇದರಲ್ಲಿ ವಿವಿಧ ರೀತಿಯ ಖಾಸಗಿ ಪ್ರಯಾಣಿಕ ವಾಹನಗಳ ಸೀಟು ತೆರಿಗೆ ಹೆಚ್ಚಳದಿಂದ ಬರುವ ಆದಾಯವೂ ಸೇರಿದೆ.
  18. ಕಳೆದ ವರ್ಷ ರೂ.600 ಕೋಟಿ ಹೆಚ್ಚುವರಿ ತೆರಿಗೆ ವಿಧಿಸಲಾಗಿತ್ತು. ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್‌ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಅವುಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಿದ್ದು, ಅವು ಏಪ್ರಿಲ್‌ 1ರಿಂದ ಅಗ್ಗವಾಗಲಿವೆ.
  19. ಕಾಫಿ, ಟೀ, ರಬ್ಬರ್‌ ಮತ್ತು ಇತರೆ ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ರದ್ದಾಗಲಿದೆ.
  20. ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಇಲಾಖೆ: ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಎಲ್ಲ ರೀತಿಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಒಂದೇ ಇಲಾಖೆಯಡಿ ತರುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಕಾರಣಕ್ಕೆ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯನ್ನು ಸ್ಥಾಪಿಸಲಾಗುತ್ತದೆ. ಇದು ಮುಖ್ಯಮಂತ್ರಿಗಳ ನೇರ ನಿಯಂತ್ರಣದಲ್ಲಿ ಇರುತ್ತದೆ. ಈ ಉದ್ದೇಶಕ್ಕಾಗಿ ₹500 ಕೋಟಿ ಮೀಸಲಿಡಲಾಗಿದೆ.
  21. ಕೈಗಾರಿಕೆಗಳ ಸಲುವಾಗಿ ಭೂಮಿ ಕಳೆದುಕೊಳ್ಳುವ ರೈತರ ಮಕ್ಕಳು ಹಾಗೂ ಸ್ಥಳೀಯ ಯುವಕರಲ್ಲಿ ಉದ್ಯೋಗ ಕೌಶಲ್ಯ ಹೆಚ್ಚಿಸುವ ಬಗ್ಗೆಯೂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.
  22. ಬೆಂಗಳೂರು: ಮುಂದಿನ ಹಣಕಾಸು ವರ್ಷದಲ್ಲಿ ರೈತರಿಗೆ ರೂ.11 ಸಾವಿರ ಕೋಟಿ ಕೃಷಿ ಸಾಲ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದ 23 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಬಡ್ಡಿ ರಹಿತವಾಗಿ ರೂ. 3 ಲಕ್ಷದವರೆಗೆ ಅಲ್ಪಾವಧಿ ಕೃಷಿ ಸಾಲ ಮತ್ತು ಶೇ 3ರ ಬಡ್ಡಿದರದಲ್ಲಿ ₹10 ಲಕ್ಷವರೆಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ನೀಡಲಾಗುತ್ತದೆ.
  23. ಕೃಷಿ ಇಲಾಖೆಗೆ ರೂ.4,344 ಕೋಟಿ ಮೀಸಲಿಟ್ಟಿದ್ದು, ಕೃಷಿ ಮತ್ತು ಇತರ ಇಲಾಖೆಗಳ ಕಾರ್ಯಕ್ರಮಗಳನ್ನು ಒಗ್ಗೂಡಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ’ ರಚಿಸಲಾಗುತ್ತದೆ. ಈ ಸಮಿತಿಯ ಅಡಿಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಇತರೆ ಇಲಾಖೆಗಳು ಒಂದೇ ಕಡೆ ಬರಲಿವೆ. ಇಂತಹ ಸಮಿತಿಗಳ ಮೂಲಕ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇನ್ನೂ ಹೆಚ್ಚು ಸಮನ್ವಯತೆ ಸಾಧಿಸಲಾಗುತ್ತದೆ.
  24. ಸುವರ್ಣ ಕೃಷಿ ಗ್ರಾಮ: ರಾಜ್ಯದ ನೂರು ಗ್ರಾಮಗಳನ್ನು ಮಾದರಿ ಕೃಷಿ ಗ್ರಾಮಗಳನ್ನಾಗಿ ರೂಪಿಸಲು ‘ಸುವರ್ಣ ಕೃಷಿ ಗ್ರಾಮ’ ಯೋಜನೆ ಜಾರಿಗೊಳಿಸಲಾಗುತ್ತದೆ. ಇದರ ಅಡಿಯಲ್ಲಿ ಪ್ರತಿ ಕಂದಾಯ ವಿಭಾಗಕ್ಕೊಂದರಂತೆ ನಾಲ್ಕು ಜಿಲ್ಲೆಗಳ ನೂರು ಗ್ರಾಮಗಳು ಮಾದರಿ ಗ್ರಾಮಗಳಾಗಿ ರೂಪುಗೊಳ್ಳಲಿವೆ.
  25. ಡಿಜಿಟಲ್‌ ಸ್ಪರ್ಶ: ಡಿಜಿಟಲ್‌ ಕೃಷಿಯ ಅಡಿಯಲ್ಲಿ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಕೃಷಿ ವಿಸ್ತರಣಾ ಸೇವೆ ಬಲವರ್ಧನೆ. ಇದಕ್ಕಾಗಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ (ಐಐಎಂಬಿ) ನೆರವು ಪಡೆಯಲಾಗುತ್ತದೆ. ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ವಿನೂತನ ಮಾದರಿ ವಿಸ್ತರಣಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿ, ಕೃಷಿ ಮತ್ತು ಅಗ್ರಿ ಕ್ಲಿನಿಕ್‌ಗಳಿಗೆ ಸರ್ಕಾರ ಒದಗಿಸಲಿದೆ.
  26. ಫಸಲ್‌ ಬಿಮಾ ಯೋಜನೆಗೆ ರಾಜ್ಯ ಸರ್ಕಾರದಿಂದ ರೂ.675.38 ಕೋಟಿ ನೆರವು
  27. ದ್ವಿದಳ ಧಾನ್ಯ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ದ್ವಿದಳಧಾನ್ಯ ಅಭಿಯಾನ
  28. ಕೇಂದ್ರ ಸರ್ಕಾರದ ಸಹಾಯಧನ ಪಡೆದುಕೊಂಡು ಪಾಲಿ ಹೌಸ್‌ಗಳಲ್ಲಿ ಬೆಳೆ ಬೆಳೆಯುವ ಮತ್ತು ಸೌರಶಕ್ತಿ ಪಂಪ್‌ಸೆಟ್‌ಗಳನ್ನು ಅಳವಡಿಸುವ ಯೋಜನೆಗಳಿಗೆ ಶೇ 3ರ ಬಡ್ಡಿದರದಲ್ಲಿ ರೂ.10 ಲಕ್ಷ ವರೆಗಿನ ಸಾಲ. ಈ ಯೋಜನೆಗೆ ರೂ.25 ಲಕ್ಷ ಮೊತ್ತದ ಮಿತಿ
  29. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕೆ ರೂ.5 ಕೋಟಿ
  30. ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ಜಮೀನು ಖರೀದಿ ಮತ್ತು ನಿವೇಶನಗಳ ಸಕಾಲಿಕ ಹಂಚಿಕೆಯಲ್ಲಿ ಪಾರದರ್ಶಕತೆ ತರಲು ‘ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ–1959’ಕ್ಕೆ ತಿದ್ದುಪಡಿ
  31. ಯಶಸ್ವಿನಿ ಆರೋಗ್ಯ ಸೇವೆಯ ಯೋಜನೆ ವಿಸ್ತಣೆಗೆ ರೂ.169.11 ಕೋಟಿ ಅನುದಾನ
  32. ಗದಗ ಜಿಲ್ಲೆಯ ಕಣಗಿನಹಾಳ ಕೃಷಿ ಸಹಕಾರಿ ಸಂಘ ಪುನಶ್ಚೇತನ, ಸಬಲೀಕರಣಕ್ಕೆ ರೂ. ಒಂದು ಕೋಟಿ
  33. ರಾಜ್ಯ ಉಗ್ರಾಣ ನಿಗಮದ ಗೋದಾಮುಗಳ ಸಾಮರ್ಥ್ಯದ ಶೇ 20ರಷ್ಟು ಭಾಗವನ್ನು ಖಾಸಗಿ ಸಹಭಾಗಿತ್ವದಲ್ಲಿ ಶೀತಲ ಗೃಹವಾಗಿ ಪರಿವರ್ತನೆ
  34. 25 ಪ್ರಮುಖ ಎಪಿಎಂಸಿಗಳಲ್ಲಿ ರೂ.5 ಕೋಟಿ ವೆಚ್ಚದಲ್ಲಿ ಕುರಿ, ಮೇಕೆ ಮಾರುಕಟ್ಟೆಗಳ ಆಧುನೀಕರಣ
  35. 4 ಮಾರುಕಟ್ಟೆ ಆವರಣಗಳಲ್ಲಿ ಕೃಷಿ ಉತ್ಪನ್ನಗಳ ದಾಸ್ತಾನಿಗಾಗಿ ಸೈಲೊಗಳ ನಿರ್ಮಾಣಕ್ಕೆ ರೂ.5 ಕೋಟಿ
  36. ತರಕಾರಿ ಮಾರುಕಟ್ಟೆಗಳಿಗೆ ₹ 2 ಕೋಟಿ ವೆಚ್ಚದಲ್ಲಿ ಆಧುನಿಕ ಉಪಕರಣಗಳ ಪೂರೈಕೆ
  37. 25 ಗ್ರಾಮೀಣ ಉಪ ಮಾರುಕಟ್ಟೆಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ರೂ.2.5 ಕೋಟಿ ವೆಚ್ಚದಲ್ಲಿ ಗ್ರಾಮೀಣ ಗಂಗಾ ಯೋಜನೆ. ರೈತರಿಗೆ ಅಗತ್ಯ ಮಾಹಿತಿ ಒದಗಿಸಲು ಒಂದು ಕೋಟಿ ವೆಚ್ಚದಲ್ಲಿ ಮಾಹಿತಿ ಕೇಂದ್ರಗಳ ಸ್ಥಾಪನೆ
  38. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ, ರೂ.5 ಕೋಟಿ ವೆಚ್ಚದಲ್ಲಿ ತ್ಯಾಜ್ಯ ಮುಕ್ತ ಮಾರುಕಟ್ಟೆ ಯೋಜನೆ, ರೂ. 2.5 ಕೋಟಿ ವೆಚ್ಚದಲ್ಲಿ ಭಾನುವಾರದ ಮಾರುಕಟ್ಟೆ ಯೋಜನೆ ಮತ್ತು ರೂ.16 ಕೋಟಿ ವೆಚ್ಚದಲ್ಲಿ ಶೀತಲಗೃಹ ಮತ್ತು ಇರೇಡಿಯೇಷನ್‌ ಘಟಕ ಸ್ಥಾಪನೆ
  39. ಕೃಷಿ ಹಾಗೂ ಇತರ ವಲಯಗಳ ಉತ್ಪನ್ನಗಳ ಸಂಸ್ಕರಣೆಗೆ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹ ಧನ ನೀಡುವುದಕ್ಕೆ ರೂ.25 ಕೋಟಿ
  40. ಕೃಷಿ ವಿವಿಗಳ ಮೂಲಕ ರೈತರಿಗೆ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳಿಗೆ ರೂ.15 ಕೋಟಿ
  41. ಸಾವಯವ ಭಾಗ್ಯ ಯೋಜನೆಯನ್ನು ಬಲಪಡಿಸಲು ಸ್ಥಾಪಿಸಲಾಗಿರುವ 14 ಪ್ರಾಂತೀಯ ಒಕ್ಕೂಟಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅವಶ್ಯವಿರುವ ಗೋದಾಮು, ಸಾಗಾಣಿಕೆ, ಕ್ಲೀನಿಂಗ್‌/ವರ್ಗೀಕರಣ, ಪ್ಯಾಕಿಂಗ್‌, ಗುಣಮಟ್ಟ ನಿಯಂತ್ರಣಕ್ಕಾಗಿ ಪ್ರಯೋಗಾಲಯ ಮತ್ತು ಮಾರುಕಟ್ಟೆ ವ್ಯವಸ್ಥೆಗಾಗಿ ರೂ.10 ಕೋಟಿ
  42. ಇ–ತಂತ್ರಾಂಶ ಬಳಸಿ ಕೀಟ–ರೋಗಗಳ ಸಮರ್ಪಕ ನಿರ್ವಹಣೆ, ರೈತರಿಗೆ ಸಲಹೆ ನೀಡಲು ರೂ. 5 ಕೋಟಿ
  43. ಕೋಲಾರದ ಕೆರೆಗಳಿಗೆ ಸಂಸ್ಕರಿಸಿದ ನೀರು
  44. ಕೋರಮಂಗಲದ ಚಲ್ಲಘಟ್ಟ ಕಣಿವೆ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳನ್ನು ಏತ ನೀರಾವರಿ ಮೂಲಕ ತುಂಬಿಸುವ ಯೋಜನೆಯನ್ನು ರೂ.1280 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

ಜನಾಭಿಪ್ರಾಯ

ಬದಲಾಯಿಸಿ
  • ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ಟಿನಲ್ಲಿ ಕೇವಲ 14,404 ಕೋಟಿ ರೂ.ಗಳನ್ನು ಮಾತ್ರ ನೀರಾವರಿಗೆ ಮೀಸಲಿಟ್ಟಿರುವುದು ನಿರಾಶಾದಾಯಕ. ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ನೀರಾವರಿಗೆ ವಿಶೇಷ ಕಾಳಜಿ ವಹಿಸಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಕೇವಲ ಶೇ.9% ನೀರಾವರಿಗೆ ಮೀಸಲಿಟ್ಟಿದ್ದಾರೆ. ಎತ್ತಿನಹೊಳೆ ಯೋಜನೆಯ ಕುರಿತು ಸಮನ್ವಯ ಸಮಿತಿಯನ್ನು ರಚಿಸಿರುವುದು ಅವೈಜ್ಞಾನಿಕ ಯೋಜನೆಯನ್ನು ಯಥಾವತ್ತಾಗಿ ಜಾರಿ ಮಾಡಲು ಮಾಡಿರುವ ಸಂಚು ಎಂದು ದೂರಿದರು.-: ಕರ್ನಾಟಕ ನೀರಾವರಿ ವೇದಿಕೆ ಅಧ್ಯಕ್ಷ ಹಾಗೂ ಖ್ಯಾತ ಕಣ್ಣಿನ ವೈದ್ಯ ಇಂಗ್ಲೆಂಡ್ ದೇಶದ ನಿವಾಸಿ ಡಾ. ಮಧು ಸೀತಪ್ಪ ಅಭಿಪ್ರಾಯಪಟ್ಟಿದ್ದಾರೆ. (March 19, 2016,) []
  • 'ಆಶಾದಾಯಕವಲ್ಲದ ನಿರ್ಜೀವ ಬಜೆಟ್' 'ರಾಜ್ಯದ ಪ್ರಗತಿಗೆ ಆಶಾದಾಯಕವಲ್ಲದ ನಿರ್ಜೀವ ಬಜೆಟ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ'. ' ಕೃಷ್ಣಾ ಮೇಲ್ದಂಡೆ ಯೋಜನ ಮತ್ತು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಎಷ್ಟು ಹಣ ಎಂದು ಸ್ಪಷ್ಟಪಡಿಸಿಲ್ಲ. ಕಳಸಾ ಬಂಡೂರಿ ಯೋಜನೆ ಪ್ರಸ್ತಾಪವೇ ಇಲ್ಲ. ಬಜೆಟ್‌ನಲ್ಲಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ' ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.[]

ಜಿಲ್ಲಾವಾರು ಕೊಡಿಗೆ

ಬದಲಾಯಿಸಿ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಹಣಕಾಸು ಪತ್ರದಲ್ಲಿ, ರಾಜ್ಯದ 30 ಜಿಲ್ಲೆಗಳ ಅಭಿವೃದ್ಧಿ ಗಮನದಲ್ಲಿ ಇಟ್ಟುಕೊಂಡು ಒಂದೆಲ್ಲಾ ಒಂದು ಕೊಡುಗೆ ನೀಡಿದ್ದಾರೆ.
  • 1. ಬೆಂಗಳೂರು ನಗರ : 5,018 ಕೋಟಿ ರು. ವೆಚ್ಚದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ನೀರು ಮತ್ತು ಒಳಚರಂಡಿ, ಎತ್ತರಿಸಿದ ರಸ್ತೆ, ಕಾರಿಡಾರ್. ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ.
  • 2 ಮೈಸೂರು: ಹೂಣಸೂರು ಬಳಿ ಬಿದಿರುವನ, 60ಕೋಟಿ ವೆಚ್ಚದ ಜಿಲ್ಲಾಸ್ಪತ್ರೆ, ಟಿ ನರಸೀಪುರದಲ್ಲಿ ಆಯುಷ್ ಆಸ್ಪತ್ರೆ, ಮಹಿಳಾ ಉದ್ಯಮಶೀಲ ಪಾರ್ಕ್, ಹಾರಂಗಿ ಬಲದಂಡೆ, ಕಬಿನಿ ನಾಲೆ ಅಭಿವೃದ್ಧಿ, ಪಿರಿಯಾಪಟ್ಟಣ ಮುತ್ತಿನಮುಳಿ ಸೋಗೆ ಏತ ನೀರಾವರಿ.
  • 3. ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುದಲ್ಲಿ ಟೆಕ್ಸಾಸ್ ಸಹಯೋಗದಲ್ಲಿ ಟೆಕ್ನಾಲಜಿ ಇನ್ಯೂಬೆಷನ್ ಸೆಂಟರ್, ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ.
  • 4. ರಾಮನಗರ: ಕೆಂಪಾಪುರದ ಕೆಂಪೆಗೌಡ ಸ್ಮಾರಕ ಅಭಿವೃದ್ಧಿಗೆ 5 ಕೋಟಿ, ರಾಜೀವ್ ಗಾಂಧಿ ವೈದ್ಯಕೀಯ ಕಾಲೇಜು ಕ್ಯಾಂಪಸ್, ರಾಮನಗರ-ಚೆನ್ನಪಟ್ಟಣಕ್ಕೆ ಹೊಸ ನೀರು ಸರಬರಾಜು ಯೋಜನೆ.
  • 5.ಮಂಡ್ಯ: ಮಂಡ್ಯದ ಮಾರೇಹಳ್ಳಿ ಕೆರೆ ಕಾಲುವೆ, ಶಿಂಷಾಬಲದಂಡೆ ನಾಲೆಗಳ ಆಧುನೀಕರಣ, ಮಳವಳ್ಳಿಯಲ್ಲಿ ತುಂತುರು ನೀರಾವರಿ ಯೋಜನೆ.
  • 6. ಚಾಮರಾಜನಗರ: ಚಾಮರಾಜನಗರ ಪಟ್ಟಣ ಸಮಗ್ರ ಅಭಿವೃದ್ಧಿಗೆ 5 ಕೋಟಿ. ಕೊಳ್ಳೆಗಾಲದಿಂದ ಕೇರಳ ಗಡಿವರೆಗೆ ರಸ್ತೆ ಅಭಿವೃದ್ಧಿ 585 ಕೋಟಿ 7. ಕೊಡಗು: ಮೆಡಿಕಲ್ ಕಾಲೇಜು, ರಸ್ತೆ ಅಭಿವೃದ್ಧಿಗೆ 50 ಕೋಟಿ.
  • 8. ಹಾಸನ: ಅರಕಲಗೂಡಿನಲ್ಲಿ ಪಶು ಆಹಾರ ಘಟಕ ಸ್ಥಾಪನೆ, ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಹಳಿ ಅಭಿವೃದ್ಧಿಗೆ ನೆರವು. ಹೇಮಾವತಿ ಬಲದಂಡೆ ನಾಲೆ ಅಭಿವೃದ್ಧಿ
  • 9. ದಕ್ಷಿಣ ಕನ್ನಡ: ಬಂಟ್ವಾಳದಲ್ಲಿ ಕಾರಾಗೃಹ, ಮಂಗಳೂರಿನಲ್ಲಿ 2.5 ಕೋಟಿ ವೆಚ್ಚದಲ್ಲಿ ಕೊಂಕಣಿ ಸಂಸ್ಕೃತಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ 10. ಉಡುಪಿ: ಹೆಂಗಾರಕಟ್ಟೆ-ಕೋಡಿ ಬೆಂಗ್ರೆಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ, ಅರಣ್ಯ ಪ್ರದೇಶದ ಜನರಿಗೆ ಎಲ್ ಪಿಜಿ ಭಾಗ್ಯ.
  • 11. ಉತ್ತರ ಕನ್ನಡ: ಮೆಡಿಕಲ್ ಕಾಲೇಜು, ಕಾರವಾರದಲ್ಲಿ ಹೊಸ ಕಾರಾಗೃಹ, ತದಡಿಯಲ್ಲಿ ಮೀನಿಗಾರಿಕಾ ಬಂದರು, ದಾಂಡೇಲಿಯಲ್ಲಿ ಆಯುಷ್ ಆಸ್ಪತ್ರೆ, ಕುಮಟಾದಲ್ಲಿ ಗೋಡಂಬಿ ತಂತ್ರಜ್ಞಾನ ತರಬೇತಿ ಕೇಂದ್ರ, 125 ಕೋಟಿ ವೆಚ್ಚದಲ್ಲಿ ಕಡಲ ಕೊರತ ತಡೆ ಗೋಡೆ. ಪ್ರವಾಸಿ ತಾಣಗಳ ಅಭಿವೃದ್ಧಿ.
  • 12. ಕೋಲಾರ: 1280 ಕೋಟಿ ರು. ವೆಚ್ಚದಲ್ಲಿ ಕೆ-ಸಿ ವ್ಯಾಲಿ ಯೋಜನೆ ಮುಖಾಂತರ ಕೋಲಾರದ ಕೆರೆಗಳಿಗೆ ನೀರು. ಶ್ರೀನಿವಾಸಪುರಕ್ಕೆ ಹೊಸ ಕುಡಿವ ನೀರಿನ ಯೋಜನೆ
  • 13. ಚಿಕ್ಕಬಳ್ಳಾಪುರ: 50 ಹಾಸಿಗೆಯ ಆಯುಷ್ ಆಸ್ಪತ್ರೆ, ಚಿಕ್ಕಬಳ್ಳಾಪುರ ಪಟ್ಟಣ ಅಭಿವೃದ್ಧಿಗೆ 50 ಕೋಟಿ,
  • 14. ದಾವಣಗೆರೆ: ಐಟಿ ಪಾರ್ಕ್ ಸ್ಥಾಪನೆ, 50 ಹಾಸಿಗೆಯ ಆಯುಷ್ ಆಸ್ಪತ್ರೆ, ಸವಳಂಗ-ಹೊನ್ನಾಳಿ 48 ಕಿಮೀ ರಸ್ತೆ ಅಭಿವೃದ್ಧಿಗೆ 130 ಕೋಟಿ.
  • 15. ಶಿವಮೊಗ್ಗ: ನಿಗೂಢ ರೋಗಗಳ ಸಂಶೋಧನಾ ಘಟಕ, ವಿಮಾಣ ನಿಲ್ದಾಣ ಅಭಿವೃದ್ಧಿ,
  • 16. ತುಮಕೂರು: ವಸಂತಾನರಸಾಪುರದಲ್ಲಿ ಜಪಾನ್ ಇಂಡಸ್ಟ್ರಿಯಲ್ ಟೌನ್ ಶಿಪ್, ಕೊರಟಗೆರೆಯಲ್ಲಿ ಅಗ್ನಿ ಶಾಮಕ ಠಾಣೆ, ಪಾವಗಡದಲ್ಲಿ ಬೃಹತ್ ಸೋಲಾರ್ ಪಾರ್ಕ್.
  • 17. ವಿಜಯಪುರ: ಹಿಪ್ಪರಿಗೆ ಅಭಿವೃದ್ಧಿಗೆ 3 ಕೋಟಿ, ಐಟಿ ಪಾರ್ಕ್,ಇಂಡಿ ಏತ ನೀರಾವರಿ ಯೋಜನೆ, ನೀರಾವರಿ ಅಭಿವೃದ್ಧಿ.
  • 18. ಬಾಗಲಕೋಟೆ: ಐಟಿ ಪಾರ್ಕ್, ಐಹೊಳೆ, ಪಟ್ಟದಕಲ್ಲು ಕೆರೆಗಳನ್ನು ಪ್ರವಾಸಿತಾಣಗಳನ್ನಾಸುವುದು, ಕೂಡಲ ಸಂಗಮ-ಅಡವಿಹಾಳ ಸೇತುವೆ ನಿರ್ಮಾಣ.
  • 19. ಬೆಳಗಾವಿ: ಐಟಿ ಪಾರ್ಕ್,ವಿಟಿಯುನಲ್ಲಿ ಶ್ರೇಷ್ಠತಾ ಕೇಂದ್ರ, 3 ಕೋಟಿ ವೆಚ್ಚದಲ್ಲಿ ಬೆಳಗಾವಿ ಕೋಟೆ ಸಂರಕ್ಷಣೆ ಮತ್ತು ಅಭಿವೃದ್ಧಿ.
  • 20. ಧಾರವಾಡ: ಕರ್ನಾಟಕ ವಿವಿಯಲ್ಲಿ ಎಂಎಂ ಕಲಬುರ್ಗಿ ಸಂಶೋಧನಾ ಕೇಂದ್ರ, 40 ಕೋಟಿ ವೆಚ್ಚದ ಮಾನಸಿಕ ಆರೋಗ್ಯ ಕೇಂದ್ರ, ತ್ಯಾಜ್ಯ ನೀರು ಸಂಸ್ಕರಣಾ ಘಟಕ. ಮಹಿಳಾ ಪಾರ್ಕ್.
  • 21. ಬಳ್ಳಾರಿ: ಜಾನುವಾರು ರೋಗ ಪತ್ತೆ ಕೇಂದ್ರ, ಕನ್ನಡ ವಿವಿಯಲ್ಲಿ ವಾಲ್ಮೀಕಿ ಅಧ್ಯಯನ ಪೀಠ, ಕೂಡ್ಲಗಿ-ತೋರಣಗಲ್ಲು ರಸ್ತೆ ಅಭಿವೃದ್ಧಿ.
  • 22. ಯಾದಗಿರಿ: ಶಿರವಾಳ ಚಾಲುಕ್ಯರ ಸ್ಮಾರಕ ಅಭಿವೃದ್ಧಿಗೆ 3 ಕೋಟಿ.
  • 23. ಕಲಬುರಗಿ: 1320 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಘಟಕ, ಆಯುಷ್ ಆಸ್ಪತ್ರೆ, ಐಟಿ ಪಾರ್ಕ್, ಕಾರಂಜಿ ಯೋಜನೆ ಪೂರ್ಣ.
  • 24. ಗದಗ: 962 ಕೋಟಿ ವೆಚ್ಚದಲ್ಲಿ ಮಲಪ್ರಭಾ ನಾಲಾ ಅಭಿವೃದ್ಧಿ.
  • 25. ಹಾವೇರಿ: ಜಾನಪದ ವಿವಿಯಲ್ಲಿ ಅಧ್ಯಯನ ಕೇಂದ್ರ, ಹಾವೇರಿ ಪಟ್ಟಣ ಅಭಿವೃದ್ಧಿಗೆ 50 ಕೋಟಿ.
  • 26. ಬೀದರ್: ಐಟಿ ಪಾರ್ಕ್, ಮಹಮದ್ ಗವಾನ್ ಗ್ರಂಥಾಲಯದಲ್ಲಿ ಸಂಶೋಧನಾ ಕೇಂದ್ರ.
  • 27, ಕೊಪ್ಪಳ: 155 ಕೋಟಿ ವೆಚ್ಚದಲ್ಲಿ ಕುಷ್ಟಗಿ-ಸಿಂಧನೂರು ರಸ್ತೆ ಅಭಿವೃದ್ಧಿ.
  • 28. ರಾಯಚೂರು: 35 ಕೋಟಿ ವೆಚ್ಚದಲ್ಲಿ ರಾಜೀವ್‌ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮೇಲ್ದರ್ಜೆಗೆ, 48 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 167 ಚತುಷ್ಪಥ ನಿರ್ಮಾಣ, ಗೃಹರಕ್ಷಕರ ತರಬೇತಿ ಕೇಂದ್ರ ನಿರ್ಮಾಣ.
  • 29. ಚಿತ್ರದುರ್ಗ: ಹಿರಿಯೂರು-ಚಳ್ಳಕೆರೆ ನೀರು ಸರಬರಾಜು ಯೋಜನೆ.
  • 30. ಚಿಕ್ಕಮಗಳೂರು: ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಹಳಿಗೆ ಹೆಚ್ಚುವರಿ ಅನುದಾನ.

ರಾಜ್ಯ ಸರ್ಕಾರದ ಸಾಲ

ಬದಲಾಯಿಸಿ
  • 30 Nov, 2016;ಬೆಳಗಾವಿ ಅಧಿವೇಶನದಲ್ಲಿ 2016-17 ನೇ ಸಾಲಿನ ಆರ್ಥಿಕ ಸಮೀಕ್ಷೆ:
  • ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕ ಅವಧಿಯ ಯೋಜನಾ ವೆಚ್ಚವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 2 ರಷ್ಟು ಕಡಿಮೆಯಾಗಿದೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಂಡಿಸಿದ ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಯಲ್ಲಿ ಆರ್ಥಿಕ ಇಲಾಖೆ ಈ ಅಂಶವನ್ನು ಉಲ್ಲೇಖಿಸಿದೆ.
  • 2016-17 ನೇ ಸಾಲಿನಲ್ಲಿ ಯೋಜನಾ ವೆಚ್ಚಕ್ಕೆ ರೂ.71,694 ಕೋಟಿ ಮೀಸಲಿಡಲಾಗಿತ್ತು. ಕಳೆದ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ರೂ.22,270 ಕೋಟಿ ವೆಚ್ಚ ಮಾಡಲಾಗಿದ್ದು, ಬಜೆಟ್ ಮೊತ್ತದ ಶೇ 31ರಷ್ಟನ್ನು ಮಾತ್ರ ಖರ್ಚು ಮಾಡಲಾಗಿದೆ. 2015-16 ರಲ್ಲಿ ಬಜೆಟ್ ಅಂದಾಜು ರೂ.60,906 ಕೋಟಿಯಷ್ಟಿದ್ದು, ಮೊದಲ ಆರು ತಿಂಗಳಲ್ಲಿ ಶೇ 34ರಷ್ಟು ಅಂದರೆ ರೂ.20,830 ಕೋಟಿ ಹಾಗೂ 2014-15ರಲ್ಲಿ ಶೇ 33ರಷ್ಟು ವೆಚ್ಚ ಮಾಡಲಾಗಿತ್ತು. ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸಬೇಕು ಎಂದು ಪರಿಶೀಲನಾ ವರದಿಯಲ್ಲಿ ಸಲಹೆ ನೀಡಿದೆ. ಯೋಜನೇತರ ವೆಚ್ಚದಲ್ಲಿ ಕೂಡ ಇದೇ ಪ್ರವೃತ್ತಿ ಮುಂದುವರಿದಿದೆ. ಹಿಂದಿನ ವರ್ಷಗಳಲ್ಲಿ ಮೊದಲ ಎರಡು ತ್ರೈಮಾಸಿಕ ಅವಧಿಯಲ್ಲಿ ಶೇ 46 ರಷ್ಟಿದ್ದ ವೆಚ್ಚದ ಪ್ರಮಾಣ ಈ ವರ್ಷ ಶೇ 45ಕ್ಕೆ ಇಳಿಕೆಯಾಗಿದೆ. ಮಿತವ್ಯಯ ಆದೇಶವನ್ನು ಜಾರಿಗೊಳಿಸಿರುವುದರ ಪರಿಣಾಮ ಇದು ಎಂದು ವರದಿ ಹೇಳಿದೆ.
  • ಹಳೆ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದರಿಂದಾಗಿ ಸಂಪನ್ಮೂಲ ಕ್ರೋಡೀಕರಣದಲ್ಲಿ ಹಿನ್ನಡೆಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಜಾಗ್ರತೆಯಿಂದ ಸರ್ಕಾರ ಹೆಜ್ಜೆ ಇಡಬೇಕು. ಅನಾವಶ್ಯಕ ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ವರದಿ ಶಿಫಾರಸು ಮಾಡಿದೆ. ಸ್ವದೇಶಿ ಮದ್ಯದ ಮಾರಾಟವು ಅಂದಾಜು ಮಾಡಿದ್ದಕ್ಕಿಂತ ಕಡಿಮೆಯಾಗಿದೆ. ಅಬಕಾರಿ ಬಾಕಿಗಳನ್ನು ಸಂಗ್ರಹಿಸಲು, ಕಟ್ಟುನಿಟ್ಟಾಗಿ ಸುಂಕ ವಸೂಲು ಮಾಡಲು ಅಬಕಾರಿ ಇಲಾಖೆ ಕ್ರಮ ವಹಿಸಬೇಕು ಎಂದು ವರದಿ ಸಲಹೆ ನೀಡಿದೆ.

ಸಾಲ ಮಾಡಿ ನೀರಾವರಿ ಯೋಜನೆ ಜಾರಿ

ಬದಲಾಯಿಸಿ
  • ನೀರಾವರಿ ಯೋಜನೆಗಳಿಗಾಗಿ ಮೊದಲ ಆರು ತಿಂಗಳಿನಲ್ಲಿ ₹3,000 ಕೋಟಿ ಸಾಲ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಕೃಷ್ಣಾ ಭಾಗ್ಯ ಜಲ ನಿಗಮ, ಕಾವೇರಿ ನೀರಾವರಿ ನಿಗಮ ಹಾಗೂ ಕರ್ನಾಟಕ ನೀರಾವರಿ ನಿಗಮಗಳು ಕೈಗೊಳ್ಳುವ ಯೋಜನೆಗಳಿಗೆ ಸಾಲದ ಮೂಲಕ ಹಣಕಾಸು ಒದಗಿಸಿರುವುದನ್ನು ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿ ಉಲ್ಲೇಖಿಸಿದೆ.
  • ಅಂಕಿ ಅಂಶ: ಕೋಟಿಗಳಲ್ಲಿ:
  • 2015-16 ರೂ.1,83,320 ರಾಜ್ಯದ ಒಟ್ಟು ಸಾಲ
  • 2016-17 ರೂ.2,08,557 ರಾಜ್ಯದ ಒಟ್ಟು ಸಾಲ

[]

ಸರ್ಕಾರಿ ಸಾಲ

ಬದಲಾಯಿಸಿ
  • ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಳೆದ 4 ವರ್ಷಗಳಲ್ಲಿ ರೂ.90 ಸಾವಿರ ಕೋಟಿ ಸಾಲ ಮಾಡಿದೆ. 2012–13ರಲ್ಲಿ ರಾಜ್ಯ ಸರ್ಕಾರದ ಒಟ್ಟು ಹೊಣೆಗಾರಿಕೆ ಮೊತ್ತ ರೂ.1,18,155 ಕೋಟಿಯಷ್ಟಿತ್ತು. ಇದೇ 15ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಂಡಿಸುತ್ತಿರುವ 5 ನೇ ಬಜೆಟ್‌ನ ಹೊತ್ತಿಗೆ ಈ ಮೊತ್ತ ರೂ.2,08,557 ಕೋಟಿ ದಾಟಲಿದೆ.[]

ಭಾಗ್ಯಗಳ ಅನುಷ್ಠಾನಕ್ಕಾಗಿ ಸಾಲ

ಬದಲಾಯಿಸಿ
  • 13 Mar, 2017;
  • ರಾಜ್ಯ ಸರ್ಕಾರ ಪ್ರಕಟಿಸಿರುವ ಮಧ್ಯಮಾವಧಿ ವಿತ್ತೀಯ ಯೋಜನೆ 2016–2020 ರ ಅಂಕಿ ಅಂಶಗಳ ಪ್ರಕಾರ, ವಿವಿಧ ಭಾಗ್ಯಗಳಿಗೆ ನೀಡುತ್ತಿರುವ ಸಹಾಯಧನದ ಮೊತ್ತ 2011ರಲ್ಲಿ ರೂ.9,287 ಕೋಟಿಯಷ್ಟಿತ್ತು. 2015–16ರಲ್ಲಿ ಈ ಮೊತ್ತ ರೂ.18,688 ಕೋಟಿ ಗಳಿಗೆ ಏರಿಕೆಯಾಗಿದೆ.
  • ಕಳೆದ 10 ವರ್ಷಗಳ ಅಂಕಿ– ಅಂಶ ಗಮನಿಸಿದರೆ ಆಹಾರ, ಸಾರಿಗೆ ಸಹಾಯಧನ 5 ಪಟ್ಟು, ವಿದ್ಯುತ್‌ ಸಹಾಯಧನ 8 ಪಟ್ಟು, ಶಿಕ್ಷಣ, ಆರೋಗ್ಯ, ಕೃಷಿ ಸಹಾಯಧನ 7 ಪಟ್ಟು, ಸಾಲದ ಮೇಲಿನ ಬಡ್ಡಿ ಮತ್ತು ಋಣಸೇವೆಗಳಿಗೆ ಮಾಡುತ್ತಿರುವ ವೆಚ್ಚ 4 ಪಟ್ಟು ಏರಿಕೆಯಾಗಿದೆ.

2007 ರಿಂದ ಈಚೆಗೆ ಆಶ್ವಾಸನೆಗಳ ಈಡೇರಿಕೆ ಎಂಬ ವಿಶೇಷ ಲೆಕ್ಕ ಶೀರ್ಷಿಕೆಯನ್ನು ಹಣಕಾಸು ಇಲಾಖೆ ಆರಂಭಿಸಿದೆ. ಈ ಮೊತ್ತ ಎರಡೂವರೆ ಪಟ್ಟು ಹೆಚ್ಚಳವಾಗಿದೆ. 2007ರಲ್ಲಿ ಬಂಡವಾಳ ಮತ್ತು ಆಸ್ತಿ ಸೃಜನೆಗೆ ರೂ.3,794 ಕೋಟಿ ಖರ್ಚಾಗಿದ್ದರೆ, 2016ರಲ್ಲಿ ರೂ.26,341 ಕೋಟಿ ಮೀಸಲಿಡಲಾಗಿತ್ತು.

ಹೆಚ್ಚಳವಾದ ವೆಚ್ಚದ ವಿವರ

ಬದಲಾಯಿಸಿ
ಕ್ರಮಸಂ / ವರ್ಷ-> 2007-08 2012-13 2016-17
ವಿವರ↓ ಕೋಟಿರೂ,ಗಳಲ್ಲಿ ಕೋಟಿರೂ,ಗಳಲ್ಲಿ ಕೋಟಿರೂ,ಗಳಲ್ಲಿ
1 ಆಹಾರ, ಸಾರಿಗೆ, ವಸತಿ, ಸಹಾಯಧನ 1,180 3,659 6,482
2 ವಿದ್ಯುತ್ ಸಹಾಯ ಧನ 1,926 7,050 8,048
3 ಶಿಕ್ಷಣ ಆರೋಗ್ಯ, ಕೃಷಿ, ಗ್ರಾಮಾಭಿವೃದ್ಧಿ 4,130 10,062 29,215
4 ಸಾಲದ ಮೇಲಿನ ಬಡ್ಡಿ, 4,506 6,688 12,672
5 ಋಣಸೇವೆಗಳು 5,752 10,560, 19,513
6 ಆಶ್ವಾಸನೆಗಳ ಈಡೇರಿಕೆ 5,472 6,688 12,291
7 ಆಡಳಿತ ವೆಚ್ಚ 478 1,011 2,398

[]

ಉಲ್ಲೇಖಗಳು

ಬದಲಾಯಿಸಿ
  1. http://kannada.oneindia.com/news/karnataka/karnataka-budget-2016-17-district-wise-allocation-101941.html
  2. "ಆರ್ಕೈವ್ ನಕಲು". Archived from the original on 2016-03-20. Retrieved 2016-03-20.
  3. http://www.prajavani.net/article/%E0%B2%88-%E0%B2%AC%E0%B2%BE%E0%B2%B0%E0%B2%BF-%E0%B2%A4%E0%B3%86%E0%B2%B0%E0%B2%BF%E0%B2%97%E0%B3%86-%E0%B2%B9%E0%B3%8A%E0%B2%B0%E0%B3%86-%E0%B2%AD%E0%B2%BE%E0%B2%97%C5%80
  4. http://kannada.oneindia.com/news/karnataka/karnataka-budget-irrigation-is-side-line-this-budget-101944.html?utm_source=spikeD&utm_medium=LT&utm_campaign=adgebra
  5. http://kannada.oneindia.com/news/karnataka/karnataka-budget-2016-who-said-what-101933.html
  6. ಯೋಜನಾ ವೆಚ್ಚ ಶೇ 2ರಷ್ಟು ಹಿನ್ನಡೆ;ಪ್ರಜಾವಾಣಿ ವಾರ್ತೆ;30 Nov, 2016
  7. ಸಿದ್ದರಾಮಯ್ಯ ಮಾಡಿದ ಸಾಲ ₹90 ಸಾವಿರ ಕೋಟಿ;ವೈ.ಗ. ಜಗದೀಶ್‌;11 Mar, 2017
  8. "ಭಾಗ್ಯಗಳ ಅನುಷ್ಠಾನಕ್ಕಾಗಿ ಹೆಚ್ಚಿತು ಸಾಲದ ಹೊರೆ;ವೈ.ಗ. ಜಗದೀಶ್‌;13 Mar, 2017". Archived from the original on 2017-03-15. Retrieved 2017-03-14.


ಉಲ್ಲೇಖ

ಬದಲಾಯಿಸಿ