ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ


ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಕಾರ್ಯಗಳು ರಾಜ್ಯದ ಹಣಕಾಸು ನಿಗಮವನ್ನು ಕರ್ನಾಟಕ ರಾಜ್ಯ ಸರ್ಕಾರ ೧೯೫೬ರಂದು ರಾಜ್ಯದ ಹಣಕಾಸುನಿಗಮದ ಆಕ್ಟಿನ ಅಡಿಯಲ್ಲಿ ಜಾರಿಗೆ ತಂದಿತು.

ಈ ನಿಗಮವು ಸಣ್ಣ ಮತ್ತು ಮಾಧ್ಯಮ ಉದ್ಯಮಿಗಳಿಗೆ ಧೀರ್ಘಕಾಲದ ಹಣಕಾಸಿನ ಅಗತ್ಯಗಳಿಗೆ ಜಾರಿಗೆ ತಂದರು. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೊದಲಿಗೆ ಮೈಸೂರು ರಾಜ್ಯ ಹಣಕಾಸು ಸಂಸ್ಥೆಯಾಗಿ ಮಾರ್ಚ್ ೩೦ ೧೯೫೯ರಲ್ಲಿ ಪ್ರಾರಂಭವಾಯಿತು. ನಂತರ ಮೈಸೂರು ಸರ್ಕಾರ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯನ್ನು ಆರಂಭಿಸಿದರು. ಇಂದು ರಾಜ್ಯದ ಆರ್ಥಿಕತೆ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕ್ಷಿಪ್ರ ದಾಪುಗಾಲು ಹಾಕುವಲ್ಲಿ ರಾಜ್ಯ ಹಣಕಾಸು ಸಂಸ್ಥೆ ಯಂತ್ರ ನಡೆಸುತ್ತಿದೆ. ಒಂದು ಪ್ರವರ್ತಕ ಮತ್ತು ಜವಾಬ್ದಾರಿಯುತ ಸಂಸ್ಥೆಯಾದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸಣ್ಣ ಮತ್ತು ಮಾಧ್ಯಮ ಉದ್ಯಮಿಗಳಿಗೆ ಎಲ್ಲಾ ಸಾಂಭವ್ಯ ನೆರವು ವಿಸ್ತರಿಸುತ್ತಿದೆ.[]

 ೪೯ ವರ್ಷಗಳ ಅಸ್ಥಿತ್ವದಲ್ಲಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಸಣ್ಣ ಪ್ರಮಾಣದ ಉದ್ಯಮಕ್ಕೆ ಮತ್ತು ಸಣ್ಣ ಉದ್ಯಮಿಗಳಿಗೆ ಸದಾ ಆರ್ಥಿಕ ನೆರವನ್ನು ಒದಗಿಸಿದೆ.

ಉದ್ಯಮ ಪ್ರೊಫೈಲ್

ಬದಲಾಯಿಸಿ

ರಾಜ್ಯ ಹಣಕಾಸು ನಿಗಮ ಆಕ್ಟ್ - ಕೇಂದ್ರ ಹಣಕಾಸು ಉದ್ಯಮ ನಿಗಮವು ಉದ್ಯಮ ಕೈಗಾರಿಕಾ ಹಣಕಾಸು ಸಂಸ್ಥೆಯ ಅಡಿಯಲ್ಲಿ ಸ್ಥಾಪನೆಗೊಂಡಿತು, ಅದು ಮಾಧ್ಯಮ ಮತ್ತು ಧೀರ್ಘಾವದಿ ಕ್ರೆಡಿಟನ್ನು ವಾಣಿಜ್ಯ ಬ್ಯಾಂಕುಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಕೈಗಾರಿಕಾ ಸಂಸ್ಥೆಗಳಿಗೂ ಕೊಡಲು ಸ್ಥಾಪನೆಯಾಯಿತು. ಎಲ್ಲಾ ರಾಜ್ಯದ ಸರ್ಕಾರವು ಇಂತಹ ಒಂದು ದಾರಿಯಿಂದ ಕೆಲಸವನ್ನು ಪ್ರತೀ ರಾಜ್ಯಕ್ಕೂ ಹಂಚಲು ಅವರ ಇಚ್ಛೆಯನ್ನು ಕೇಂದ್ರ ಸರ್ಕಾರಕ್ಕೆ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ನೀತಿ ನಿಭಂದನೆಗಳನ್ನು ಸರಿಯಾಗಿ ಪಾಲನೆ ಮಾಡಲು ರಾಜ್ಯ ನಿಗಮಗಳನ್ನು ವಿಶೇಷವಾದ ಪ್ರತಿಮೆಯಡಿ ಸ್ಥಾಪಿಸಬೇಕೆಂದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ರಾಜ್ಯ ಸರ್ಕಾರಗಳ ಈ ಇಚ್ಛೆಯನ್ನು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರವು ರಾಜ್ಯ ಹಣಕಾಸು ಸಂಸ್ಥೆಯ ಬಿಲ್ಲನ್ನು ಜಾರಿಗೊಳಿಸಿದರು.


ಹಣಕಾಸು ಸಂಸ್ಥೆಗಳು ದೇಶದ ಆರ್ಥಿಕ ಪರಿಸ್ಥಿತಿಯು ಬೆಳೆಯುವಲ್ಲಿ ವಿಶೇಷವಾದ ಪಾತ್ರವಹಿಸುತ್ತದೆ. ಈ ಸಂಸ್ಥೆಗಳು ಒಂದು ದೇಶದ ಆರ್ಥಿಕ ಸ್ಥಿತಿಯು ಬೆಳೆಯಲೆಂದು ಅನುಕೂಲಕಾರಿ ಮತ್ತು ಪರಿಣಾಮಕಾರಿವಾಗಲಿಯಂದು ಉದ್ಯಮಿಗಳಿಗೆ ಉಳಿತಾಯ ಮತ್ತು ಬಂಡವಾಳ ಆಯ್ಕೆಗಳನ್ನು ಕೊಡುತ್ತಾರೆ. []

ವ್ಯಾಪಾರ ಹಣಕಾಸು

ಬದಲಾಯಿಸಿ

ವ್ಯಾಪಾರದ ಹಣಕಾಸು ವ್ಯಾಪಾರದ ಚಟುವಟಿಕೆ ಸ್ವಾಧೀನಗಳ ಬಗ್ಗೆ ಹಣಕಾಸಿನ ಉದ್ದೇಶಗಳು ಎಲ್ಲರಿಗೂ ಸಿಗುತ್ತಿದೆ. ವ್ಯಾಪಾರದ ಹಣಕಾಸಿನ ಯೋಜನೆ, ನಿಯಂತ್ರಣ ಮತ್ತು ನಿಧಿಗಳ ನಿರ್ವಹಿಸುವಲ್ಲಿ ವಿಶಾಲವಾಗಿ ವ್ಯಾಖ್ಯಾನಿಸಬಹುದು. []

ಸಣ್ಣ ಮತ್ತು ಮಾಧ್ಯಮ ಪ್ರಮಾದ ಕೈಗಾರಿಕ ಸಂಸ್ಥೆಗಳು

ಬದಲಾಯಿಸಿ

ಸಣ್ಣ ಪ್ರಮಾಣ ಮತ್ತು ಕಾಟೇಜ್ ಸಂಸ್ಥೆಗಳು ಈ ರಚನೆಯ ವಿಶೇಷ ಭಾಗಗಳಾಗಿವೆ ಮತ್ತು ಭಾರತೀಯ ಉತ್ಪಾದನಾ ವಲಯದಲ್ಲಿ ವಿನ್ಯಾಸಗೊಂಡಿದೆ. ಸಣ್ಣ ಪ್ರಮಾಣದ ಉದ್ಯಮಗಳು ಸಾಧಾರಣ ಬಂಡವಾಳವನ್ನು ಹೊಂದಿಕೊಂಡಿರುತ್ತದೆ. ಇದು ಧೀರ್ಘ ಪ್ರಮಾಣದ ಉದ್ಯಮಕ್ಕಿಂತ ಬಂಡವಾಳದಲ್ಲಿ, ಮೂಲಸೌಕರ್ಯದಲ್ಲಿ, ನೇಮಕಾತಿಯಲ್ಲಿ ಮತ್ತು ಹಲವು ವಿಚಾರಗಳಲ್ಲಿ ಬೇರ್ಪಡುತ್ತವೆ. ಕಾಟೇಜ್ ಉದ್ಯಮದಿಂದಲೂ ಅದು ಕೆಲಸದ ವೈಖರಿಯಲ್ಲಿ, ಕೆಲಸಗಾರರಲ್ಲಿ ಮತ್ತಿನಷ್ಟು ವಿಷಯಗಳಿಂದ ಬೇರ್ಪಡುತ್ತವೆ. ಸಣ್ಣ ಪ್ರಮಾಣದ ಉದ್ಯಮವು ಒಟ್ಟಾರೆ ದೇಶದ ಉತ್ಪನ್ನಗಳ ಏರಿಕೆಗಳಿಗೆ ಪ್ರಮುಖ ಘಟಕವಾಗಿದೆ ಮತ್ತು ರಫ್ತು ಗಳಿಕೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯನ್ನೂ ಗಮನದಲ್ಲಿಟ್ಟುಕೊಂಡು ಉದ್ಯೋಗಗಳನ್ನು ನಿರ್ಮಿಸುತ್ತಿದೆ.[]

ವ್ಯಾಪಾರದ ಸ್ವರೂಪ

ಬದಲಾಯಿಸಿ

ಕರ್ನಾಟಕ ರಾಜ್ಯ ಹಣಕಾಸು ಸ೦ಸ್ಥೆಯು ಮುಖ್ಯವಾಗಿ ಸಣ್ಣ ಮತ್ತು ಮಾಧ್ಯಮ ಉದ್ಯಮಗಳಿಗೆ ಸಾಲ ಕೊಡುವ ವ್ಯವಹಾರದಲ್ಲಿದೆ. ಅದು ಉದ್ಯಮಗಳಿಗೆ ಧೀರ್ಘಾವದಿ ಸಾಲ, ಅಲ್ಪಾವಧಿ ಸಾಲ, ಗುತ್ತಿಗೆ ಕೊಡುವಲ್ಲಿ ಮತ್ತು ತುಂಬುಗೂದಲು ಎಂಬ ನೆರವುಗಳನ್ನು ಕೊಡುತ್ತದೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಎಲ್ಲಾ ತರಹದ ಉದ್ಯಮ ಮತ್ತು ಸೇವೆಗಳಿಗೆ ಆರ್ಥಿಕವಾದ ನೆರವನ್ನು ನೀಡುತ್ತದೆ.

ಕೆ.ಎಸ್.ಎಫ್.ಸಿ ಯ ದೃಷ್ಟಿ

ಬದಲಾಯಿಸಿ

ರಾಜ್ಯದ ಎಲ್ಲಾ ಭಾಗಗಳನ್ನು ತಲುಪುವುದು. ರಾಜ್ಯದ ಎಲ್ಲಾ ಭಾಗಗಳಿಗೂ ಮೂಲ ಸೌಕರ್ಯಗಳನ್ನು ಮತ್ತು ನೈಸರ್ಗಿಕ ಸೌಕರ್ಯಗಳನ್ನು ಒದಗಿಸುವುದು. ಸಣ್ಣ ಪ್ರಮಾಣದ ಉದ್ಯಮ ಮತ್ತು ಉದ್ಯಮಿಗಳ ಸದಾ ಬೆಳವಣಿಗೆಯ ಪ್ರಯಾಣದಲ್ಲಿರುವುದು.

ಉಲ್ಲೆಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2017-10-20. Retrieved 2017-11-04.
  2. https://en.wikipedia.org/wiki/Government_of_Karnataka
  3. https://en.wikipedia.org/wiki/Economy_of_Karnataka
  4. http://arthapedia.in/index.php?title=Small_and_Medium_Scale_Enterprise_(SMEs)