ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿಗಳು

  • ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 14 ಶಿಕ್ಷಕರು 2015-16ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದರಲ್ಲಿ 9 ಮಂದಿ ವಿವಿಧ ಜಿಲ್ಲೆಗಳ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಉಳಿದ ಐವರು ಪ್ರೌಢಶಾಲಾ ಶಿಕ್ಷಕರಾಗಿದ್ದು, ಶಿಕ್ಷಕರ ದಿನವಾದ ಸೆ.5ರಂದು ನವದೆಹಲಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ 14 ಶಿಕ್ಷಕರಿಗೆ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು- ಒಂದು ಪದಕ, ಪ್ರಮಾಣಪತ್ರ, ಮತ್ತು ರೂ.50,000 / ಒಳಗೊಂಡಿದೆ.

ಪ್ರಶಸ್ತಿಗೆ ಭಾಜನರಾದವರು

ಬದಲಾಯಿಸಿ
  • ಪ್ರಾಥಮಿಕ ಶಾಲಾ ಶಿಕ್ಷಕರು:
  • ಬೆಂಗಳೂರಿನ ಜಾಲಹಳ್ಳಿ ಪಶ್ಚಿಮ ವಲಯದ ಕತಾನ್‌ ನಗರ ಕೊಳಗೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಆರ್‌.ಸಿ. ಪಾರ್ವತಮ್ಮ, ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ನಿಟ್ಟೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಡಿ.ಎಚ್‌.ಲಕ್ಷ್ಮಣಯ್ಯ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ತಳಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಭೋಜಪ್ಪ, ಚಿಕ್ಕಮಗಳೂರು ಜಿಲ್ಲೆಯ ಆಜಾದ್‌ ಪಾರ್ಕ್‌ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ದೈಹಿಕ ಶಿಕ್ಷಕ ಎಸ್‌.ಇ.ಲೋಕೇಶ್ವರಾಚಾರ್‌, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಮಂಗಳತೇರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿ.ಪ್ರಭಾಕರ್‌ ಹೆಗ್ಡೆ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಹಾಲಕುರ್ಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ನೀಲಪ್ಪ ದ್ಯಾವಪ್ಪ ಗೊರವರ್‌, ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕು ಬೆನಕನಕೊಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿವಲೀಲಾ ಹನುಮಂತಪ್ಪ ಪದ್ಮಸಾಲಿ, ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಚಿತ್ತಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸಂಗಪ್ಪ ಬಸಪ್ಪ ಬಾಗೇವಾಡಿ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಲುವಾದಿ ಓಣಿಯ (ಬೇಗಾರ್‌ ವಾಡಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಂಗಪ್ಪ ಗಾಜಿ,

ಪ್ರೌಢಶಾಲಾ ಶಿಕ್ಷಕು

ಬದಲಾಯಿಸಿ
  • ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ಅಜ್ಜನಹಳ್ಳಿಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಕೆ.ಎನ್‌. ಶಂಕರ ಶೆಟ್ಟಿ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಪಡುವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಎಚ್‌.ಬಿ.ದೇವರಾಜು, ಧಾರವಾಡ ಜಿಲ್ಲೆ ಕಮಲಾಪುರದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಮಾಲಾ ಗೋಪಾಲಕೃಷ್ಣ ಗೌರಯ್ಯ, ಬೀದರ್‌ ಜಿಲ್ಲೆ ಔರಾದ್‌ ತಾಲೂಕು ತೋರಣದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಧಾನಾಜಿ ತುಕಾರಾಂ ಕಾಂಬ್ಳೆ ಮತ್ತು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಬ್ಬೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ(ಗ್ರೇಡ್‌-1) ಶಾಂತಾರಾಮ ಬಿ. ಜೋಗಲೆ(ವಿಶೇಷ ವರ್ಗ-ಪ್ರೌಢಶಾಲೆ) ಅವರುಗಳ ಶಿಕ್ಷಕ ವೃತ್ತಿಯಲ್ಲಿನ ವಿಶೇಷ ಸೇವೆ ಪರಿಗಣಿಸಿ 2015-16ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಕೇಂದ್ರ ಆಯ್ಕೆ ಮಾಡಿದೆ.

[]

ಉಲ್ಲೇಖಗಳು

ಬದಲಾಯಿಸಿ


ಉಲ್ಲೇಖ

ಬದಲಾಯಿಸಿ