ಕರ್ನಾಟಕ ಅಸೋಸಿಯೇಷನ್, ತಿರುವನಂತಪುರಂ, ಕೇರಳ

ಕರ್ನಾಟಕ ಅಸೋಸಿಯೇಷನ್, ತಿರುವನಂತಪುರಂ ಕೇರಳ, ಸುಮಾರು ೪ ದಶಕಗಳಿಂದ ತನ್ನ ನಿರಂತರ ಕನ್ನಡಮ್ಮನ ಸೇವೆಯನ್ನು ಮಾಡುತ್ತಿದೆ. ಈ 'ಕರ್ನಾಟಕ ಸಂಘ' ಸನ್,೨೦೧೨ ರಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. 'ಈ ಸಂಸ್ಥೆಯ ೪೧ ನೆಯ ವಾರ್ಷಿಕಾತ್ಸವ ಸಮಾರಂಭ' ಸನ್, ೨೦೧೨ ರ ಫೆಬ್ರವರಿ, ೨೬ ನೆಯ ತಾರೀಖು, 'ತಿರುವನಂತಪುರಂ ನಗರದ ಹಸನ್ ಮರಿಕ್ಕರ್ ಸಭಾಂಗಣ' ದಲ್ಲಿ ಜರುಗಿತು.

ಮುಖ್ಯ ಅತಿಧಿ

ಬದಲಾಯಿಸಿ

ಮಲಯಾಳಂ ಮತ್ತು ಕನ್ನಡ ಭಾಷೆಗಳ ಪಂಡಿತರಾದ ಡಾ.ರಾಮ, ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಇವರು, 'ಪ್ರಾಂತೀಯ ಭಾಷೆಗಳ ಸಂಶೋಧನಾ ಕೇಂದ್ರದ ನಿರ್ದೇಶಕ' ರಾಗಿದ್ದಾರೆ. ಡಾ.ರಾಮರ ಹಸ್ತದಿಂದ ಸಂಘದ ಕಾರ್ಯಚಟುವಟಿಕೆಗಳ 'ಕೈಪಿಡಿ ಬಿಡುಗಡೆ' ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಾರಿತೋಷಕಗಳನ್ನು ವಿತರಣೆಮಾಡಲಾಯಿತು.

ಸನ್ಮಾನ

ಬದಲಾಯಿಸಿ

ಕಾರ್ಯಕ್ರಮದ ಮೊದಲು, ಸ್ವಾಗತ ಭಾಷಣವನ್ನು 'ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್' ಮಾಡಿದರು. ನಂತರ ಸಂಘದ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸುತ್ತಾ, ಡಾ.ರಾಮ್ ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸಂಘದ ಕೊಡುಗೆಗಳನ್ನು ಮುಕ್ತವಾಗಿ ಅಭಿನಂದಿಸಿದರು. ಈ ಕರ್ನಾಟಕ ಸಂಘಕ್ಕೆ ತಮ್ಮದೇ ರೀತಿಯಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಿರುವ, ಶ್ರೀ ರಘುರಾಮ್ ವೋಟ್ಟಿ ಯರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಶ್ರೀ. ಎನ್. ನಯನ್ ಕುಮಾರ್ 'ಸಂಘದ ವಾರ್ಷಿಕ ಆಯ-ವ್ಯಯಗಳ ವರದಿ'ಯನ್ನು ಸಭೆಯಮುಂದಿಟ್ಟರು. ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿ, ಶ್ರೀ ಮೋಹನ್ ವಂದನಾರ್ಪಣೆಯನ್ನು ನೆರವೇರಿಸಿಕೊಟ್ಟರು. ಸಂಘದ ಸದಸ್ಯರು ಹಾಗೂ ಅವರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದರು.