ಕರ್ನಾಟಕದ ಹೆದ್ದಾರಿ ರಸ್ತೆ ಅಪಘಾತಗಳು

ರಸ್ತೆ ಅಪಘಾತ

ಬದಲಾಯಿಸಿ
 
ಅನೇಕ ವಾಹನಗಳ ದಟ್ಟಣೆಯ ಒಂದು ಅಪಘಾತ
  • ಈ ವರ್ಷ ೨೦೧೬ ರಲ್ಲಿ ಹತ್ತು ತಿಂಗಳಲ್ಲಿ ನವೆಂಬರ್ ವರೆಗೆ 18,317 ಅಪಘಾತಗಳು ಸಂಭವಿಸಿ, 5,218 ಮಂದಿ ಜೀವ ತೆತ್ತಿದ್ದಾರೆ. ರಾಜ್ಯದ ಹೆದ್ದಾರಿಗಳು ಪ್ರತಿ ವರ್ಷ 20 ಸಾವಿರಕ್ಕೂ ಹೆಚ್ಚು ಅಪಘಾತಗಳಿಗೆ ಸಾಕ್ಷಿಯಾಗುತ್ತಿವೆ. ರಾಜ್ಯದ ಹೆದ್ದಾರಿಗಳಲ್ಲಿ ಪ್ರತಿವರ್ಷ ಕನಿಷ್ಠ ಐದು ಸಾವಿರ ಮಂದಿ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.
  • ವಾಹನಗಳ ಅತಿಯಾದ ವೇಗ ಹಾಗೂ ಪಾನಮತ್ತ ಚಾಲನೆಯೇ ಅಪಘಾತಗಳ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣಗಳು ಎಂಉ ಕಂಡುಬಂದಿದೆ. ಸಾಮಾನ್ಯವಾಗಿ ದೂರದ ಊರುಗಳಿಗೆ ಪ್ರಯಾಣಿಸುವವರು ಹೆದ್ದಾರಿಗಳನ್ನು ಬಳಸುತ್ತಾರೆ. ರಸ್ತೆ ಬದಿಯ ಬಾರ್‌ ಹಾಗೂ ರೆಸ್ಟೋರೆಂಟ್‌ಗಳು ಅವರನ್ನು ಆಕರ್ಷಿಸುತ್ತವೆ. ಕುಡಿದು ಪ್ರಯಾಣ ಮುಂದುವರಿಸುವ ಅವರು, ಅಮಲು ಏರುತ್ತಿದ್ದಂತೆಯೇ ನಿಯಂತ್ರಣ ಕಳೆದುಕೊಂಡು ಗಂಭೀರ ಸ್ವರೂಪದ ಅಪಘಾತಗಳಿಗೆ ಕಾರಣರಾಗುತ್ತಾರೆ. ಸಾಕಷ್ಟು ಅಪಘಾತ ಪ್ರಕರಣಗಳಲ್ಲಿ ಮೃತ ವ್ಯಕ್ತಿ ಪಾನಮತ್ತನಾಗಿರುತ್ತಾನೆ. ಆದರೆ, ಪೊಲೀಸರು ಪ್ರಕರಣ ದಾಖಲಿಸುವಾಗ ‘ಆತ ಕುಡಿದಿದ್ದ’ ಎಂದು ಎಫ್‌ಐಆರ್ ಮಾಡುವುದಿಲ್ಲ. ಏಕೆಂದರೆ ಪಾನಮತ್ತನಾಗಿದ್ದ ಎಂದು ಎಫ್‌ಐಆರ್ ಮಾಡಿದರೆ ಮೃತನ ಕುಟುಂಬಕ್ಕೆ ವಿಮೆ ಸಿಗುವುದಿಲ್ಲ. ಹೀಗಾಗಿ ಪರಿಹಾರ ಸಿಗಲೆಂದು ನಾವೂ ಕನಿಕರ ತೋರುತ್ತೇವೆ.ಇದು ಸಂಚಾರ ಮತ್ತು ರಸ್ತೆ ಕಮಿಶನರ್ ಅವರ ಅಭಿಪ್ರಾಯ.
  • ಅದೇ 2015 ರಲ್ಲಿ ಭಾರತಾದ್ಯಂತ ರಸ್ತೆ ಅಪಘಾತಕ್ಕೆ ಒಳಗಾಗಿ ಸತ್ತವರ ಸಂಖ್ಯೆ 146,133. []

ಸುಪ್ರೀಮ್ ಕೋರ್ಟಿನ ತೀರ್ಪು

ಬದಲಾಯಿಸಿ
  • ಹೆದ್ದಾರಿಗಳಲ್ಲಿ ಪಾನಮತ್ತ ಚಾಲಕರಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ದಿಟ್ಟ ನಿಲುವು ಕೈಗೊಂಡಿರುವ ಸುಪ್ರೀಂಕೋರ್ಟ್, ದೇಶಾದ್ಯಂತ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ತೆರವುಗೊಳಿಸುವಂತೆ ಗುರುವಾರ ಮಹತ್ವದ ಆದೇಶ ನೀಡಿದೆ. ಪಾನಮತ್ತ ಚಾಲಕ ರಿಂದ ಸಂಭವಿಸುವ ಅಪಘಾತಗಳಲ್ಲಿ ಪ್ರತಿವರ್ಷ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಆದೇಶ ನೀಡಿರುವ ನ್ಯಾಯಾಲಯ, 2017ರ ಏಪ್ರಿಲ್ ಒಳಗೆ ದೇಶಾದ್ಯಂತ ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
  • ಮಾ.31ರ ನಂತರ ಹೆದ್ದಾರಿಯ ಇಕ್ಕೆಲಗಳಲ್ಲಿ ಮದ್ಯದ ಮಳಿಗೆ ತೆರೆಯಲು ಸರ್ಕಾರಗಳು ಪರವಾನಗಿ ನೀಡಬಾರದು ಹಾಗೂ ಈಗಿರುವ ಮದ್ಯದ ಅಂಗಡಿಗಳ ಪರವಾನಗಿಯನ್ನು ಭವಿಷ್ಯದಲ್ಲಿ ನವೀಕರಿಸಬಾರದೆಂದೂ ಸುಪ್ರೀಂ ಸೂಚಿಸಿದೆ. ಈ ಮಹತ್ವದ ಆದೇಶದಿಂದಾಗಿ ಇನ್ನು ಕೆಲವೇ ತಿಂಗಳಲ್ಲಿ ದೇಶದ ಎಲ್ಲ ಹೆದ್ದಾರಿಗಳು ಮದ್ಯ ಅಂಗಡಿಗಳಿಂದ ಮುಕ್ತವಾಗಲಿವೆ. ಅರೈವ್ ಸೇಫ್ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಪೀಠ ಈ ಆದೇಶ ನೀಡಿದೆ. []
  • ಹೆದ್ದಾರಿಗಳಲ್ಲಿ ಬಾರ್‌ ಮುಚ್ಚಿಸಿದರೆ ಅಪಘಾತಗಳ ಸಂಖ್ಯೆಯಲ್ಲಿ ಶೇ 10ರಷ್ಟಂತೂ ಇಳಿಕೆಯಾಗುತ್ತದೆ’ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ಕಮಿಷನರ್ ಅವರು ಹೇಳುತ್ತಾರೆ.

ಅಪಘಾತದಳ ವಿವರ

ಬದಲಾಯಿಸಿ
  • ಕರ್ನಾಟಕದಲ್ಲಿ ನೆಡೆದ ಅಪಘಾತಗಳು:
ಈ ವರ್ಷ ಹೆಚ್ಚು ಅಪಘಾತ ಸಂಭವಿಸಿದ ಜಿಲ್ಲೆಗಳು
ಹೆದ್ದಾರಿ ವ್ಯಾಪ್ತಿ ಅಪಘಾತ ಮೃತಪಟ್ಟವರು
ಬೆಂಗಳೂರು ನಗರ 1049 180
ಬೆಂಗಳೂರು ಗ್ರಾಮಾಂತರ 1155 322
ತುಮಕೂರು 951 311
ರಾಮನಗರ 850 210
ಮಂಡ್ಯ 1,011 253
ಹಾಸನ 945 273
ಚತ್ರದುರ್ಗ 853 215
ಶಿವಮೊಗ್ಗ 1,002 173
ರಾಷ್ಟ್ರೀಯ ಹೆದ್ದಾರಿಯಲ್ಲಿ
ವಿವರ 2014 2015 2016(
ಅಪಘಾತ 12,475 14171 10744
ಮೃತಪಟ್ಟವರು 3183 3873 2999
ಗಾಯಗೊಂಡವರು 16,268 17948 10814
ರಾಜ್ಯ ಹೆದ್ದಾರಿಯಲ್ಲಿ
ಅಪಘಾತ 11,109 10759 7568
ಮೃತಪಟ್ಟವರು 2914 3011 2219
ಗಾಯಗೊಂಡವರು 16,170 14,474 10,614
ರಾಜ್ಯ ರಸ್ತೆಗಳಲ್ಲಿ - ಒಟ್ಟು
ಅಪಘಾತ 43,419 43,187 32,226
ಮೃತಪಟ್ಟವರು 10,152 10,811 8,215
ಗಾಯಗೊಂಡವರು 56,362 55067 38,834

[]

ದೇಶದ ಅಂಕೆ ಸಂಖ್ಯೆಗಳು

ಬದಲಾಯಿಸಿ
  • ಕಳೆದ ವರ್ಷ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 1,46,133
  • ಪ್ರತಿದಿನ ಭಾರತದಲ್ಲಿ ಸಂಭವಿಸುವ ಅಪಘಾತಗಳು 1400
  • ಪ್ರತಿದಿನ ಅಪಘಾತದಿಂದ ಮೃತರಾಗುವವರು 400
  • ಪ್ರತಿಗಂಟೆಗೆ ಸಾವನ್ನಪ್ಪುವವರು 17
  • ಡ್ರಿಂಕ್ ಆಂಡ್ ಡ್ರೖೆವ್ ಪ್ರಕರಣ ಶೇ.70

[]

ಉತ್ತರ ಪ್ರದೇಶ

ಬದಲಾಯಿಸಿ
  • ಉತ್ತರಪ್ರದೇಶದ ಅಲಿಗಂಜ್‌–ಪಲಿಯಾಲಿ ರಸ್ತೆಯಲ್ಲಿ ಅವಘಡ;
  • ಉತ್ತರಪ್ರದೇಶದ ಎಟಾ ನಗರದಲ್ಲಿ, ಶಾಲಾ ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದರಿಂದ 19 ಮಕ್ಕಳು ಮೃತಪಟ್ಟು, 30ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಇಲ್ಲಿನ ಅಲಿಗಂಜ್‌–ಪಲಿಯಾಲಿ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕನೂ ಮೃತಪಟ್ಟಿದ್ದು, ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕನೂ ಮೃತಪಟ್ಟಿದ್ದು, ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಶಾಲಾ ಬಸ್‌ ಇಲ್ಲಿನ ಜೆ.ಎಸ್‌. ವಿದ್ಯಾನಿಕೇತನ್‌ಗೆ ಸೇರಿದ್ದು. ತೀವ್ರ ಚಳಿಯ ಕಾರಣ ಜಿಲ್ಲಾಧಿಕಾರಿ ಅವರು ಶಾಲೆಗಳಿಗೆ ರಜೆ ಘೋಷಿಸುವಂತೆ ಆದೇಶಿಸಿದ್ದರು. ಆದರೆ, ಜೆ.ಎಸ್‌. ವಿದ್ಯಾನಿಕೇತನ್‌ ಸಂಸ್ಥೆ ಜಿಲ್ಲಾಧಿಕಾರಿ ಆದೇಶ ಮೀರಿ ಶಾಲೆ ತೆರೆದಿತ್ತು.
  • ಅಪಘಾತದಲ್ಲಿ ಮೃತಪಟ್ಟವರು 5ರಿಂದ 15 ವರ್ಷದ ಒಳಗಿನವರು. ಸಂಖ್ಯೆ ಇನ್ನಷ್ಟೂ ಏರುವ ಸಾಧ್ಯತೆ ಇದೆ. ಘಟನೆ ಕಾರಣ ಶಾಲೆಯ ಮಾನ್ಯತೆಯನ್ನು ರದ್ದು ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶಾಲೆಯ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಾಗಿದ್ದು, ವ್ಯವಸ್ಥಾಪಕ ತಲೆಮೆರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ.[]

ಉಲ್ಲೇಖಗಳು

ಬದಲಾಯಿಸಿ
  1. India road crashes kill 146,133 people in 201510 June 2016;
  2. ವಿಜಯವಾಣಿ; ದೇಶ ಹೈವೇ ಬಾರ್ ಬಂದ್Friday, 16.12.2016,;ವಿಜಯವಾಣಿ
  3. "ಹೆದ್ದಾರಿ ರಸ್ತೆಗಳಲ್ಲಿ ಸತ್ತವರ ಸಂಖ್ಯೆ 5,218!". Archived from the original on 2016-12-18. Retrieved 2016-12-18.
  4. ಬಾರ್ ಬಂದ್;Friday, 16.12.2016,
  5. ಶಾಲಾವಾಹನ– ಲಾರಿ ಡಿಕ್ಕಿ: 19 ಮಕ್ಕಳ ಸಾವು;ಪಿಟಿಐ;20 Jan, 2017


ಉಲ್ಲೇಖ

ಬದಲಾಯಿಸಿ