ಕರ್ನಾಟಕದ ಸೀಮಿತ ನೆಲೆಯ ಹಕ್ಕಿಗಳು

ಕರ್ನಾಟಕದ ಸೀಮಿತ ನೆಲೆಯ ಹಕ್ಕಿಗಳು

ಬದಲಾಯಿಸಿ

ಸೀಮಿತ ನೆಲೆಯಲ್ಲಷ್ಟೇ (Endemic) ಬದುಕಿರುವ ಹಕ್ಕಿಗಳು ಕೆಲವು, ಆ ಪ್ರದೇಶದ ಹೊರತು ಇವುಗಳು ಭೂಮಿಯ ಬೇರೆಡೆ ಕಾಣಸಿಗುವುದಿಲ್ಲ. ಒಂದು ವಾತಾವರಣ ಇಲ್ಲವೇ ಭೂಮೇಲ್ಮೈ ಲಕ್ಷಣ ಇಲ್ಲವೇ ಬೇರೆಡೆ ವಲಸೆ ಹೋಗಲು ಸಾಧ್ಯವಾಗದಂತಹ ದುರ್ಗಮ ಪ್ರದೇಶಕ್ಕೆ ಹೊಂದಿಕೊಂಡಿರುವ ಜೀವಿಯೊಂದು ಆ ಆವಾಸವನ್ನು ಬಿಟ್ಟು ಬೇರೆಡೆ ಹೊಂದಾಣಿಕೆ ಮಾಡಿಕೊಂಡು ಬದುಕಲಾಗುವುದಿಲ್ಲ. ಹೀಗಾಗಿ ಸೀಮಿತ ನೆಲೆಯನ್ನೇ ನಂಬಿರುವ ಈ ಜೀವಿಗಳು ಬದಲಾಗುವ ಸ್ಥಿತಿಗತಿಗಳಿಗೆ ಸ್ಪಂದಿಸದೆ ನಿರ್ಗಮಿಸುತ್ತವೆ. ಇಂತಹವು ದಕ್ಷಿಣ ಏಷಿಯದಲ್ಲಿ 190 ಇವೆ, ಇವುಗಳಲ್ಲಿ ಭಾರತದ 78 ಹಕ್ಕಿಗಳೂ ಸೇರಿವೆ. ಭಾರತದ 78 ಎಂಡೆಮಿಕ್‌ ಗಳಲ್ಲಿ ಕರ್ನಾಟಕ 37 ಹಕ್ಕಿಗಳೂ ಸೇರಿವೆ. ಇವುಗಳಲ್ಲಿ 16 ಕರ್ನಾಟಕದ ಪಶ್ಚಿಮಘಟ್ಟ ವಾಸಿಗಳು ಅತ್ಯಂತ ಕಡಿಮೆ ಪ್ರದೇಶದಲ್ಲಿ (ಕೆಲವೇ ಎಕರೆ ಪ್ರದೇಶದಲ್ಲಿ) ಬದುಕುಳಿದಿವೆ. []

ಕರ್ನಾಟಕದ ಸೀಮಿತ ನೆಲೆಯ ಹಕ್ಕಿಗಳು Endemic birds of Karnataka
ಕ್ರ ಸಂ ಇಂಗ್ಲಿಷ್‌ ಹೆಸರು ವೈಜ್ಞಾನಿಕ ಹೆಸರು ಕನ್ನಡದ ಹೆಸರು []
1 Painted Bush Quail Perdicula erythrorhyncha ಬಣ್ಣದ ಬುರ್ಲಿ
2 Rock Bush Quail Perdicula argoondah ಪೊದೆ ಬುರ್ಲಿ
3 Red Spurfowl Galloperdix spadicea ಕೆಂಪು ಚಿಟ್ಟುಕೋಳಿ
4 Painted Spurfowl Galloperdix lunulata ಬಣ್ಣದ ಚಿಟ್ಟುಕೋಳಿ
5 Grey Junglefowl Gallus sonneratii ಕಾಡುಕೋಳಿ
6 Nilgiri Wood Pigeon elphinstonii ನೀಲಗಿರಿ ಪಾರಿವಾಳ
7 Grey-fronted Green Pigeon Treron affinis ಹಸುರು ಪಾರಿವಾಳ
8 Malabar Parakeet Psittacula columboides ಮಲೆಗಿಳಿ
9 Mottled Wood Owl Strix ocellata ಚುಕ್ಕೆ ಗೂಬೆ
10 Grey Hornbill Ocyceros griseus ಮಲೆ ಮಂಗಟ್ಟೆ
11 White-cheeked Barbet Psilopogon viridis ಸಣ್ಣ ಕುಟ್ರು ಹಕ್ಕಿ
12 Malabar Barbet Psilopogon malabaricus ಕೆಂಪುಕತ್ತಿನ ಕಂಚುಕುಟಿಗ
13 Malabar Lark Galerida malabarica ಮಲೆನೆಲಗುಬ್ಬಿ
14 Sykes's Lark Galerida deva ಕಲವಿಂಕ
15 Malabar Woodshrike Tephrodornis sylvicola ಮಲೆ ಅಡವಿಕೀಚುಗ
16 Spot-breasted Fantail Rhipidura albogularis ಬಿಳಿಚುಕ್ಕೆಯ ಬೀಸಣಿಗೆನೊಣಹಿಡುಕ
17 Grey-headed Bulbul Brachypodius priocephalus ಬೂದುತಲೆಯ ಪಿಕಳಾರ
18 Flame-throated Bulbul Rubigula gularis ಕೆಂಪುಕೊರಳಿನ ಪಿಕಳಾರ
19 Yellow-throated Bulbul Pycnonotus xantholaemus ಹಳದಿಕೊರಳಿನ ಪಿಕಳಾರ
20 Nilgiri Thrush Zoothera neilgherriensis ಗಿರಿ ನೆಲಸಿಳ್ಳಾರ
21 Malabar Whistling Thrush Myophonus horsfieldii ಸರಲೆ ಸಿಳ್ಳಾರ
22 Black-and-orange Flycatcher Ficedula nigrorufa ಕಪ್ಪುಕಿತ್ತಲೆ ನೊಣಹಿಡುಕ
23 Nilgiri Flycatcher Eumyias albicaudatus ನೀಲಗಿರಿ ನೊಣಹಿಡುಕ
24 White-bellied Blue Flycatcher Cyornis pallidipes ಬಿಳಿಹೊಟ್ಟೆಯ ನೊಣಹಿಡುಕ
25 Nilgiri Sholakili Sholicola major ಶೋಲಾ ನೊಣಹಿಡುಕ
26 Wyanad Laughingthrush Pterorhinus delesserti ವೈನಾಡಿನ ನಗೆಮಲ್ಲ
27 Banasura Laughingthrush Montecincla jerdoni ಬೂದುಎದೆಯ ನಗೆಮಲ್ಲ
28 Indian Scimitar Babbler Pomatorhinus horsfieldii ಕುಡುಗೊಕ್ಕು ಹರಟೆಮಲ್ಲ
29 Rufous Babbler Argya subrufa ಕೆಂಗಂದು ಹರಟೆಮಲ್ಲ
30 Broad-tailed Grassbird Schoenicola platyurus ಜೊಂಡು ಉಲಿಯಕ್ಕಿ
31 White-naped Tit Machlolophus nuchalis ಬಿಳಿರೆಕ್ಕೆಯ ಚೇಕಡಿ
32 Indian Black-lored Tit Machlolophus aplonotus ಹಳದಿಕೆನ್ನೆಯ ಚೇಕಡಿ
33 Nilgiri Flowerpecker Dicaeum concolor ಪೇಲ ಬದನಿಕೆ
34 Crimson-backed Sunbird Leptocoma minima ಸಣ್ಣ ಸೂರಕ್ಕಿ
35 Vigors's Sunbird Aethopyga vigorsii ಹಳದಿಬೆನ್ನಿನ ಸೂರಕ್ಕಿ
36 Malabar Starling Sturnia blythii ಬೆಳಿತಲೆ ಕಬ್ಬಕ್ಕಿ
37 White-bellied Treepie Dendrocitta leucogastra ಬಿಳಿಹೊಟ್ಟೆಯ ಮಟಪಕ್ಷಿ

ಉಲ್ಲೇಖಗಳು

ಬದಲಾಯಿಸಿ
  1. http://www.wiienvis.nic.in/KidsCentre/ebi_8385.aspx
  2. ಡಾ. ಎಸ್ ವಿ ನರಸಿಂಹನ್.೨೦೦೮.ಕೊಡಗಿನ ಖಗರತ್ನಗಳು. ಪರಿಷ್ಕರಿಸಿದ ಹಕ್ಕಿಗಳ ಪರಿಶೀಲನಾ ಪಟ್ಟಿ ೨೦೨೨