ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಗಣಮಟ್ಟ ೨೦೧೭

ಭಾರತೀಯ ವಿಜ್ಞಾನ ಸಂಸ್ಥೆ ಯಲ್ಲಿ ಸಿಗ್ನಲ್ ಪರೊಸೆಸ್ಸಿಂಗ್ ಕಟ್ಟಡ.

ಐಐಎಸ್‍ಸಿ ದೇಶದ ನಂ1 ಶಿಕ್ಷಣ ಸಂಸ್ಥೆ

ಬದಲಾಯಿಸಿ
  • ೨೦೧೬-೧೭ ರ ರ್ಯಾಂಕಿಂಗ್‌ ಪಟ್ಟಿಯಲ್ಲಿ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸತತ ಎರಡನೇ ವರ್ಷವೂ ಪಾತ್ರವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ್ಯಾಂಕಿಂಗ್‌ ಪಟ್ಟಿಯಲ್ಲಿ ಐಐಎಸ್‌ಸಿ ಮೊದಲ ಸ್ಥಾನಗಳಿಸಿದೆ.
  • ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) 9ನೇ ಸ್ಥಾನ ಮತ್ತು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ 10ನೇ ಸ್ಥಾನ ಗಳಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಎರಡನೇ ಆವೃತ್ತಿಯ ರ್ಯಾಂಕಿಂಗ್‌ ಅನ್ನು ೨-೪-೨೦೧೭ ಸೋಮವಾರ ಪ್ರಕಟಿಸಿದ್ದಾರೆ.
  • ಕಳೆದ ತಿಂಗಳು ಮಾರ್ಚಿ ೨೦೧೭ ರಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಹತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಎಸ್‌ಸಿ ಸ್ಥಾನ ಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ‘ಟೈಮ್ಸ್‌ ಉನ್ನತ ಶಿಕ್ಷಣ ರ್‍ಯಾಂಕಿಂಗ್‌’ನಲ್ಲಿ ಐಐಎಸ್‌ಸಿ ಎಂಟನೇ ಸ್ಥಾನ ಗಳಿಸಿತ್ತು. ಆ ಮೂಲಕ, ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ, ದಕ್ಷಿಣ ಕೊರಿಯಾದ ಪೊಹಾಂಗ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಅದು ಸೇರಿತ್ತು. ಹೆಚ್ಚು ಅನುದಾನ ಸ್ವಾಯತ್ತೆ: ವಾರ್ಷಿಕ ರ್‍ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ.

ಆರು ವಿಭಾಗಗಳಲ್ಲಿ ರ್ಯಾಂಕ್‌

ಬದಲಾಯಿಸಿ
  • ೨೦೧೭ರ ಈ ವರ್ಷ ಆರು ವಿಭಾಗಗಳಲ್ಲಿ ರ್ಯಾಂಕ್‌ ನೀಡಲಾಗಿದೆ. ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್‌, ಎಂಜಿನಿಯರಿಂಗ್‌ ಮತ್ತು ಫಾರ್ಮಸಿ ವಿಭಾಗಗಳಲ್ಲಿ ರ್ಯಾಂಕ್‌ ನೀಡಲಾಗಿದೆ. ಐಐಎಸ್‌ಸಿಯು ಸಮಗ್ರ ಮತ್ತು ವಿಶ್ವವಿದ್ಯಾಲಯ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಕಳೆದ ವರ್ಷ ವಿವಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಎನ್‌ಯು ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. ಸಮಗ್ರ ವಿಭಾಗದಲ್ಲಿ ಆರನೇ ರ್ಯಾಂಕ್‌ ಗಳಿಸಿದೆ.

ಆಯ್ಕೆ ಕ್ರಮ

ಬದಲಾಯಿಸಿ
  • ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್‌ ಚೌಕಟ್ಟಿನ (ಎನ್‌ಐಆರ್‌ಎಫ್‌) ಅಡಿಯಲ್ಲಿ ರ‍್ಯಾಕಿಂಗ್‌ ನೀಡಲಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಚಿಸಿರುವ ಪ್ರಮುಖರ ಸಮಿತಿ ಮಾಡುವ ಶಿಫಾರಸುಗಳ ಮೇಲೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.

ಐಐಎಂಬಿಗೆ 2ನೇ ಸ್ಥಾನ

ಬದಲಾಯಿಸಿ
  • ಮ್ಯಾನೇಜ್‌ಮೆಂಟ್‌ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಮೊದಲ ಸ್ಥಾನ ಗಳಿಸಿದೆ. ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್‌ (ಐಐಟಿ–ಮದ್ರಾಸ್‌) ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಮಾನದಂಡಗಳು

ಬದಲಾಯಿಸಿ
  • ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಪನ್ಮೂಲ, ಬೋಧನಾ ವಿಧಾನ ಮತ್ತು ಕಲಿಕಾ ಪ್ರಕ್ರಿಯೆ
  • ಅಧ್ಯಯನ ಮತ್ತು ವೃತ್ತಿಪರ ನಡಾವಳಿಗಳು
  • ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ
  • ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಮತ್ತು ಒಳಗೊಳ್ಳುವಿಕೆ
  • ಗ್ರಹಿಕೆ

[]

ರ್ಯಾಂಕಿಂಗ್ ಪಟ್ಟಿ ೨೦೧೭

ಬದಲಾಯಿಸಿ
  • ವಿವಿಧ ವಿಭಾಗಗಳಲ್ಲಿ ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ ಸಿಕ್ಕಿದ ರ್ಯಾಂಕ್
  • ಸಮಗ್ರ
ಶಿಕ್ಷಣ ಸಂಸ್ಥೆ ಸಿಕ್ಕಿದ ರ್ಯಾಂಕ್
ಐಐಎಸ್ ಸಿ ಬೆಂಗಳೂರು 1
ಜವರ್ಲಾಲ್ ಸೆಂಟರ್ಫಾರ್ ಅಡ್ವಾನ್ಸ್ 11
ಐಐಎಂ ಬೆಂಗಳೂರು 25
ಮಣಿಪಾಲ್ ಅಕ್ಯಾಡಮಿ ಒಫ್ ಹೈಯರ್ ಎಜುಕೇಶನ್ ಮಣಿಪಾಲ್ 30
ಮೈಸೂರು ವಿಶ್ವವಿದ್ಯಾಲಯ 57
ಎನ್.ಐ.ಟಿ. ಸುರತ್ಕಲ್ 65
ಜಗದ್ಗುರು ಶ್ರೀ ಶಿವರಾತ್ರೇಶ್ವರ ವಿಶ್ವವಿದ್ಯಾಲಯ ಮೈಸೂರು 75
ಕೆ.ಎಲ್.ಇ ಅಕಾಡಮಿ ಆಫ್ ಹೈಯರ್ ಎಜುಕೇಶನ್ CAಡ್ ರಿಸರ್ಚ್ ಬೆಳಗಾವಿ 100

ಇಂಜನೀಯರಿಂಗ ವಿಭಾಗ

ಬದಲಾಯಿಸಿ
ಶಿಕ್ಷಣ ಸಂಸ್ಥೆ ::: ಇಂಜನಿಯರಿಮಗ್ ವಿಭಾಗ ಸಿಕ್ಕಿದ ರ್ಯಾಂಕ್
ಎನ್.ಐ. ಟಿ ಸುರತ್ಕಲ್ 22
ಮಣಿಪಾಲ್ ಇನ್ ಸ್ಟಿಟೂಟ್ ಆಫ್ ಟೆಕ್ನಾಲೊಜಿ 43
ಎಂ.ಎಸ್.ರಾಮಯ್ಯ ಇನ್ ಸ್ಟಿಟೂಟ್ ಆಫ್ ಟೆಕ್ನಾಲೊಜಿ 45
ಆರ್.ವಿ. ಇಂಜನೀಯರಿಂಗ್ ಕಾಲೇಜು ಬೆಂಗಳೂರು 49
ಬಿ.ಎಂ.ಎಸ್.ಕಾಲೇಜು ಬೆಂಗಳೂರು. 52
ಸಿದ್ದಗಂಗಾ ಇನ್ ಸ್ಟಿಟೂಟ್ ಆಫ್ ಟೆಕ್ನಾಲೊಜಿ 72
ಪಿ.ಇ.ಎಸ್.ವಿಶ್ವವಿದ್ಯಾಲಯ ಬೆಂಗಳೂರು 86
ಬಿ.ಎಂ.ಎಸ್. ಇನ್ ಸ್ಟಿಟೂಟ್ ಆಫ್ ಟೆಕ್ನಾಲೊಜಿ ಅ್ಯಂಡ್ ಮ್ಯಾನೇಜ್ ಮೆಂಟ್. 95
ಶಿಕ್ಷಣ ಸಂಸ್ಥೆ ಇಂಜನಿಯರಿಮಗ್ ವಿಭಾಗ

ಮ್ಯಾನೇಜ್ ಮೆಂಟ್ ವಿಭಾಗ

ಬದಲಾಯಿಸಿ
ಶಿಕ್ಷಣ ಸಂಸ್ಥೆ ಮ್ಯಾನೇಜ್ ಮೆಂಟ್. ವಿಭಾಗ ಸಿಕ್ಕಿದ ರ್ಯಾಂಕ್
ಐ ಐ ಎಂ. ಬೆಂಗಳೂರು 2
ಕ್ಷೇವಿಯರ್ ಇನ್ ಸ್ಟಿಟೂಟ್ ಆಫ್ ಟೆಕ್ನಾಲೊಜಿ ಅ್ಯಂಡ್ ಮ್ಯಾನೇಜ್ ಮೆಂಟ್. 50

ವಿಶ್ವವಿದ್ಯಾಲಯ

ಬದಲಾಯಿಸಿ
ಶಿಕ್ಷಣ ಸಂಸ್ಥೆ  ::: ವಿಶ್ವವಿದ್ಯಾಲಯ. ವಿಭಾಗ ಸಿಕ್ಕಿದ ರ್ಯಾಂಕ್
ಐಐಎಸ್.ಸಿ ಬೆಂಗಳೂರು 1
ಜವಾಹರ್ ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಟಿಫಿಕ್ ರಿಸರ್ಚ್ ಬೆಂಗಳೂರ್ 4
ಮಣಿಪಾಲ್ ಅಕಾಡಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ 18
ಮೈಸೂರು ವಿಶ್ವವಿದ್ಯಾನಿಲಯ 36
ಜಗದ್ಗುರು ಶ್ರೀ ಶಿವರಾತ್ರೇಶ್ವರ ವಿಶ್ವವಿದ್ಯಾಲಯ ಮೈಸೂರು. 45
ಕೆ.ಎಲ್.ಇ. ಅಕ್ಯಾಡಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಬೆಳಗಾವಿ. 62
ನಿಟ್ಟಿ ವಿಶ್ವವಿದ್ಯಾಲಯ ಮಂಗಳೂರು 83
ಪಿ.ಇ.ಎಸ್.ವಿಶ್ವವಿದ್ಯಾಲಯ ಬೆಂಗಳೂರು. 94

ಕಾಲೇಜು

ಬದಲಾಯಿಸಿ
ಶಿಕ್ಷಣ ಸಂಸ್ಥೆ  ::: ಕಾಲೇಜು. ವಿಭಾಗ ಸಿಕ್ಕಿದ ರ್ಯಾಂಕ್
ಸೈಂಟ್ ಜೊಸೆಫ್ ಕಾಲೇಜ್ ಆಫ್ ಕಾಮರ್ಸ್ ಬೆಂಗಳೂರು 29
ಸೆಂಟ್ ಅಲೋಸಿಯಸ್ ಕಾಲೇಜ್ ಆಫ ಕಾಮರ್ಸ್ ಮಂಗಳೂರು 44
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ದಕ್ಷಿಣ ಕನ್ನಡ 71
ಪಿಸಿ ಜಬಿನ್ ಸೈನ್ಸ್ ಕಾಲೇಜು ಧಾರವಾಡ 89
ಜೆ.ಜೆ. ಕಾಲೇಜ್ ಆಫ್ ಕಾಮರ್ಸ್ ಹುಬ್ಬಳ್ಳಿ ಧಾರವಾಡ 94
ಪ್ರಸಿಡೆನ್ಸಿ ಕಾಲೇಜು ಬೆಂಗಳೂರು 96

ಫಾರ್ಮಸಿ

ಬದಲಾಯಿಸಿ
ಶಿಕ್ಷಣ ಸಂಸ್ಥೆ  ::: ಕಾಲೇಜು. ವಿಭಾಗ ಸಿಕ್ಕಿದ ರ್ಯಾಂಕ್
ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ಸ್, ಮಣಿಪಾಲ 7
ಜೆ.ಎಸ್.ಎಸ್.ಕಾಲೇಜ್ ಆಫ್ ಫಾರ್ಮಸಿ, ಮೈಸುರು. 10
ಎನ್.ಎಸ್.ಜಿ.ಎಮ್. ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಮಂಗಳೂರು 27
ಕೆ.ಎಲ್.ಇ.ಅಕಾಡಮಿ ಆಫ್ ಹೈಯರ್ ಎಜುಕೇಶನ್ ಅಂಡ ರಿಸರ್ಚ್ ಬೆಳಗಾವಿ 37

ಉಲ್ಲೇಖ

ಬದಲಾಯಿಸಿ