ಕರೆಂಟ್: ಬೊಂಬಾಯಿಯಿಂದ ಪ್ರತಿ ಶನಿವಾರ ಪ್ರಕಟವಾಗುವ ಸ್ವತಂತ್ರ ಧೋರಣೆಯ ರಾಜಕೀಯ ವಿಚಾರಗಳ ಇಂಗ್ಲಿಷ್ ವಾರಪತ್ರಿಕೆ. ೧೯೪೯ರಲ್ಲಿ ಪ್ರಕಟಣೆ ಆರಂಭವಾಯಿತು. ಇದು ಮುಖ್ಯವಾಗಿ ವೈಚಾರಿಕ ಪತ್ರಿಕೆಯಾಗಿದ್ದರೂ ರಾಜ್ಯಗಳ ಸುದ್ದಿಪತ್ರಗಳೂ ಇದರಲ್ಲಿ ಸಮಾವೇಶಗೊಂಡಿರುತ್ತವೆ. ಮಹಿಳಾ ಮತ್ತು ಕ್ರೀಡಾ ವಿಭಾಗಗಳೂ ಉಂಟು. ಭಾಷೆ ಕಟುವೆನಿಸಿ, ಅಭಿಪ್ರಾಯಗಳು ಏಕಪಕ್ಷೀಯವೆನಿಸಿದರೂ ವೈಯಕ್ತಿಕ ನಿಂದೆ ಸಾಮಾನ್ಯವಾಗಿ ಇಲ್ಲ. ಈ ಪತ್ರಿಕೆಯ ಒಂದೇ ಅಖಿಲಭಾರತ ಆವೃತ್ತಿ ಪ್ರಕಟವಾಗುತ್ತದೆ. ಈ ಪತ್ರಿಕೆ ಬೊಂಬಾಯಿಯ ಕರೆಂಟ್ ಪಬ್ಲಿಕೇಷನ್ಸ್‌ (ಪ್ರೈವೇಟ್) ಲಿಮಿಟೆಡ್ನ ಒಡೆತನದಲ್ಲಿದೆ. ಸಂಪಾದಕ ಡಿ. ಎಫ್. ಕರಾಕಾ. ಮುಂಬಯಿ ಮತ್ತು ಆಕ್ಸ್‌ಫರ್ಡ್ಗಳಲ್ಲಿ ಶಿಕ್ಷಣ ಪಡೆದ ಕರಾಕಾ ಮುಂಬಯಿ ಕ್ರಾನಿಕಲ್ ಪತ್ರಿಕೆಯಲ್ಲಿ ಒಂಬತ್ತು ವರ್ಷಕಾಲ ಇದ್ದರು. ಬರ್ಮ ಯೂರೋಪ್ಗಳಲ್ಲಿ ಯುದ್ಧ ವರದಿಗಾರರಾಗಿಯೂ ಕೆಲಕಾಲ ವಿಶೇಷ ಸುದ್ದಿಗಾರ ರಾಗಿಯೂ ಕೆಲಸ ಮಾಡಿದ ಅನುಭವ ಅವರಿಗುಂಟು.

"https://kn.wikipedia.org/w/index.php?title=ಕರೆಂಟ್&oldid=799923" ಇಂದ ಪಡೆಯಲ್ಪಟ್ಟಿದೆ