ಕರುಳುಗಳ ಒಳವರಿಯಾಗಿರುವ ಲೋಳೆಪೊರೆಯಲ್ಲಿ ಏಳುವ ಉರಿತ (ಎಂಟರೈಸಸ್). ಅದೇ ರೋಗಕಾರಣದಿಂದ ಜಠರ, ಹೆಗ್ಗರುಳುಗಳಲ್ಲೂ ಹೀಗೇ ಉರಿತವೆದ್ದು ಜಠರಗಳುರಿತ (ಗ್ಯಾಸ್ಟ್ರೊಎಂಟರೈಟಿಸ್), ಕರುಳು ಹೆಗ್ಗರುಳುರಿತ (ಎಂಟರೊಕೊಲೈಟಿಸ್) ಆಗಬಹುದಾದರೂ ಕರುಳುರಿತವೆಂದರೆ ಸಣ್ಣ ಕರುಳಿಗೆ ಸೀಮಿತವಾಗಿರುವುದು. ಕರುಳುರಿತದ ಮುಖ್ಯ ಪರಿಣಾಮ ಉಚ್ಚಾಟ, ಕೆಲಮೇಳೆ, ವಾಂತಿ, ಜ್ವರ, ಆಮಶಂಕೆ, ರಕ್ತಭೇದಿಗಳೂ ಕಾಣಿಸಿಕೊಳ್ಳಬಹುದು. ಕರುಳಿಗೆ ಬಿಡುವು ಕೊಡಬೇಕಾದರೆ ಏನೂ ತಿನ್ನಬಾರದು, ಕುಡಿಯಬಾರದು, ಇದರ ಚಿಕಿತ್ಸೆ ರೋಗದ ಕಾರಕಗಳಿಗೆ ತಕ್ಕ ಹಾಗಿರುತ್ತದೆ.

Enteritis
Classification and external resources
ICD-10A02-A09, K50-K55
ICD-9005, 008, 009, 555-558
MedlinePlus001149
MeSHD004751