ಕರಣೆ ಕಲ್ಲು
ಮೃದಂಗಕ್ಕೆ ಬಹು ಮುಖ್ಯವಾದದ್ದು ಬಲ ಭಾಗದ ಕರಣೆ. ಮೃದಂಗದ ನುಡಿಸಾಣಿಕೆ ಸಂಪೂರ್ಣವಾಗಿ ಇರುವುದು ಬಲ ಭಾಗದ ಕರಣೆಯಿಂದ ಮಾತ್ರ. ಈ ಕರಣೆಯನ್ನು ಒಂದು ವಿಶಿಷ್ಟವಾದ ಕಲ್ಲಿನಿಂದ ತಯಾರಿಸಲ್ಪಡಲಾಗುತ್ತದೆ. ಈ ಕಲ್ಲಿಗೆ '' ಕಿಟ್ಟ '' ಎಂದು ಹೆಸರು. ಇದು ಮೃದಂಗ ವಾದಕರಿಗೆ ಚಿನ್ನದ ಕಲ್ಲು. ಚಿನ್ನದ ಹಾಗೆ ಕಾಣದಿದ್ದರು ಹಾಗೂ ಚಿನ್ನದ ಬಣ್ಣವಿಲ್ಲದಿದ್ದರು ಅದು ಮೃದಂಗ ವಾದಕರಿಗೆ ಚಿನ್ನವೇ, ಇದಕ್ಕೆ ಕಾರಣ ಕರಣೆಯಿಂದ ಮಾತ್ರ ನುಡಿಸಲಾಗುವ ಮೀಟು, ಛಾಪು, ಅರೆ ಛಾಪುಗಳಂತಹ ವಿಶಿಷ್ಟವಾದ ಅಕ್ಷರಗಳು.ಕರಣೆ ಇಲ್ಲದಿದ್ದರೆ ಬಹುಶಃ ಮೃದಂಗವು ಪಾಶ್ಚಾತ್ಯ ಸಂಗೀತದ ಡ್ರಮ್ಸ ಆಗುತಿತ್ತೇನೋ ಅಥವಾ ನಮ್ಮ ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತಗಳ ಢೋಲಕ್ಕ ಆಗಿಯೇ ಉಳಿದು ಉಳಿದು ಬಿಡುತಿತ್ತೇನೊ.
ಈ ಕರಣೆ ಕಲ್ಲು ಬಹಳ ಅಪರೂಪವಾಗಿದೆ. ಅದಕ್ಕೆ ಕಾರಣ ಸರಿಯಾದ ಮಾಹಿತಿ ಇಲ್ಲದೆ ಇರುವುದು ಹಾಗೂ ನಿಗೂಢವಾಗಿ ತಯಾರಕರಲ್ಲೆ ಉಳಿದು ಬಂದಿರುವುದರಿಂದ. ಮೃದಂಗಕ್ಕೆ ಕರಣೆ ಹಾಕುವುದು ಒಂದು ವಿಶಿಷ್ಟವಾದ ಕಲೆ. ಶ್ರುತಿ ಜ್ಞಾನವಿದ್ದು ಅದರ ಸೂಕ್ತವಾದ ಮಾಹಿತಿ, ತರಬೇತಿ ಹಾಗೂ ಅಭ್ಯಾಸವಿದ್ದರೆ ಮಾತ್ರ ಸಾಧ್ಯ. ಮೃದಂಗ ವಾದ್ಯದಲ್ಲಿ ವಿಭಿನ್ನ ರೀತಿಯಯಾದ ಶಬ್ಧಾಕ್ಷರಗಳು ಹೊರಹೊಮ್ಮುವುದು ಕರಣೆಯಿಂದ. ಮೃದಂಗದ ನುಡಿಸಾಣಿಕೆಯಲ್ಲಿ '' ಛಾಪು ಮೀಟು ಹಾಗೂ ಕೆಲವು ಪರಂಪರೆಯಲ್ಲಿ ಬಳೆದು ಬಂದಿರುವ ಅರೆ ಛಾಪುವಿನಂತಹ'' ವಿಶಿಷ್ಟವಾದ ಅಕ್ಷರಗಳು ಈ ಕರಣೆಯಿಂದ ನುಡಿಸಲು ಸಾಧ್ಯವಾಗುವವು. ಇದರ ಮಹತ್ವ ತಿಳಿಯಲು ನಾವು ನೀವು ಕಲಿಯ ಬೇಕ್ಕಾಗುತ್ತದೆ. ಕಿಟ್ಟ ಎಂಬ ಕಲ್ಲಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರು, ಇದರ ಬಗ್ಗೆ ನಮ್ಮ ಹಳ್ಳಿ ಜನರಿಗೆ ತಿಳಿದಿದೆ. ಪಟ್ಟಣದಲ್ಲಿ ಇದರ ಹೆಸರು ಗೊತ್ತಿಲ್ಲ ದ ಕಾರಣ ಇದರ ಮಾಹಿತಿ ಅಷ್ಟಾಗಿ ಇಲ್ಲ ಹಾಗೂ ಇದು ನಿಗೂಢವಾಗಿ ತಯಾರಕರಲ್ಲೆ ಉಳಿದು ಬಿಟ್ಟಿದೆ. ಈ ಕರಣೆಯನ್ನು ತಯಾರಿಸುವ ಕಲ್ಲಿಗೆ ಕಿಟ್ಟ ಎಂದು ಕರೆಯುತ್ತಾರೆ ಹಾಗೂ ಬಹಳಷ್ಟು ಕಡೆ ಇದಕ್ಕೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕರಣೆ ಕಲ್ಲು, ಪುಡಿ(Ferric Iron Oxide) ಎಂದು ಹೆಚ್ಚಾಗಿ ಬಳಸುವುದರಿಂದ ಅದರ ನಿಜವಾದ ಹೆಸರು ಗೊತ್ತಿಲ್ಲದಾಗಿದೆ.
^ಮೃದ೦ಗ ಕರಣೆ ಹಾಕುವ ಕ್ರಮ