ಕರಕೊರಂ
ಕರಕೊರಂ ಪರ್ವತ ಶ್ರೇಣಿಗಳು ಪಾಕಿಸ್ತಾನದ ಗಿಲಿಗಿಟ್ಬಲ್ಟಿಸ್ತಾನ್, ಭಾರತದ ಲಡಾಖ್, ಚೀನಾದ ಕ್ಷ್ಶಿಂಜಿಯಾಂಗ್ ಎಂಬ ಪ್ರದೇಶಗಳನ್ನು ಆವರಸಿ ಕೊಂಡಿರುವ; ಭಾರತ, ಪಾಕಿಸ್ತಾನ ಮತ್ತು ಚೀನಾ ದೇಶಗಳ ಸರಹದ್ದಿನಲ್ಲಿ ಹಾದು ಹೋಗುವ ಅತಿ ದೊಡ್ಡ ಪರ್ವತ ಶ್ರೇಣಿ.
ಕರಕೊರಂ ಪರ್ವತ ಶ್ರೇಣಿಯು ವಿಶ್ವದ ಎರಡನೇ ಅತ್ಯಂತ ಎತ್ತರದ ಶಿಖರ ಕೆ೨ ೮೬೧೧ ಮೀ (೨೮೨೫೧ ಅಡಿ) ಯನ್ನೂ ಸೇರಿ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ೮೦೦೦ ಮೀ ಗು ಅಧಿಕ ಎತ್ತರವಿರುವ ಶಿಖರಗಳನ್ನು ಒಳಗೊಂಡಿರುವ ಖ್ಯಾತಿಯನ್ನು ಹೊಂದಿದೆ.
ಕರಕೊರಂ ಪರ್ವತ ಶ್ರೇಣಿಯು ಧೃವ ಪ್ರದೇಶದ ಹೊರತು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಹಿಮನದಿಗಳನ್ನು ಹೊಂದಿರುವ ಜಾಗ. ಈ ಪರ್ವತ ಶ್ರೇಣಿಗಳ ವಿಸ್ತಾರ ಸರಿ ಸುಮಾರು ೫೦೦ ಕಿಲೋ ಮೀಟರಗಳು(೩೧೧ ಮೈಲಿ). ಸಿಯಾಚಿನ್ (೭೦ ಕೀ. ಮೀ; ೪೩ ಮೈಲಿ) ಮತ್ತು ಬಿಯಾಫೋ(೬೩ ಕೀ.ಮೀ.; ೩೯ ಮೈಲಿ) ಎಂಬ ಹಿಮನದಿಗಳು ಧೃವ ಪ್ರದೇಶದ ಹೊರಗೆ ವಿಶ್ವದ ೨ ಮತ್ತು ೩ನೇ ಅತಿ ದೊಡ್ಡ ಹಿಮನದಿಗಳು.
ಹೆಸರು
ಬದಲಾಯಿಸಿಕರಕೊರಂ ಎಂದರೆ ಟರ್ಕಿಕ್ ಭಾಷೆಯಲ್ಲಿ ಕಪ್ಪು ಕಲ್ಲಿನ ರಾಶಿ ಎಂದರ್ಥ. ಮೊದಲಿಗೆ ಸ್ಥಳೀಯ ವ್ಯಾಪಾರಿಗಳು ಈ ಪರ್ವತ ಶ್ರೇಣಿಗಳನ್ನು ಗುರುತಿಸಲು ಕರಕೊರಂ ಹೆಸರನ್ನು ಬಳಸುತ್ತಿದ್ದರು, ನಂತರ ಯೂರೋಪಿನ ವ್ಯಾಪಾರಿಗಳು, ವಿಲಿಯಂ ಮೂಕ್ರೊಫ್ತ್ ಮತ್ತು ಜಾರ್ಜ್ ಹಯ್ವರ್ದ್ ನಂತಹ ಪರಿಶೋಧಕರು ಕೂಡ ಇದೇ ಹೆಸರನ್ನು ಬಳಸಲು ಶುರುಮಾಡಿದರು. ಈ ಪರ್ವತ ಶ್ರೇಣಿಗಳಿಗೆ ಮುಜ್ತಾಗ್ ಎಂಬ ಹೆಸರು ಕೂಡ ಇವರಲ್ಲಿ ಬಳಕೆಯಲ್ಲಿತ್ತು. ನಂತರ ೧೮೫೦ ರಲ್ಲಿ ಸರ್ವೆಯ್ ಆಫ್ ಇಂಡಿಯಾ ದಲ್ಲಿ ಸಮೀಕ್ಷಕ ಥಾಮಸ್ ಮೊಂಟಗೋಮೇರಿ ತನ್ನ ಹರಮುಖ್ ಶಿಖರದ ಕಛೇರಿಯಿಂದ ಕಾಣಿಸುತ್ತಿದ್ದ ೬ ಶಿಖರಗಳನ್ನು ಕೆ೧, ಕೆ೨ ಎಂದು ಕೆ೬ ರ ತನಕ (ಇದರಲ್ಲಿ ಕೆ ಎಂದರೆ ಕರಕೊರಂ ಎಂದು) ಹೆಸರಿಡುವದರಿಂದ ಕರಕೊರಂ ಹೆಸರನ್ನೇ ಮುಂದಿನ ದಿನಗಳಲ್ಲೂ ಬಳಸಲಾಗುತ್ತಿದೆ.
ಪರಿಶೋದನೆ
ಬದಲಾಯಿಸಿಕರಕೊರಂ ಅದರ ಎತ್ತರ ಮತ್ತು ಕ್ಲಿಷ್ಟ ವಾತಾರವರಣದ ಕಾರಣದಿಂದ ಹಿಮಾಲಯದ ಪೂರ್ವ ಭಾಗಕ್ಕೆ ಹೋಲಿಸಿದರೆ ಕಡಿಮೆ ಜನವಸತಿ ಹೊಂದಿರುವ ಜಾಗ. ಹತ್ತೊಂಬತ್ತನೇ ಶತಮಾನದ, ೧೮೫೬ ರ ನಂತರ ಮೊದಲಿಗೆ ಯೂರೋಪಿಯನ್ ಪರಿಶೋಧಕರು ನಂತರ ಆಂಗ್ಲ ಸಮೀಕ್ಷಕರು ಕರಕೊರಂಗೆ ಭೇಟಿ ಕೊಟ್ಟಿದ್ದಾರೆ.
ಬ್ರಿಟಿಷ್ ಸೇನಾಧಿಕಾರಿ ಕರ್ನಲ್ ಫ್ರಾನ್ಸಿಸ್ ಯಂಗ್ ಹಸ್ ಬಂಡ್ ೧೮೮೭ ರಲ್ಲಿ ಮೊದಲಿಗೆ ಮುಜ್ತಾಗ್ ಕಣಿವೆಯನ್ನು ದಾಟಿದನು. ೧೮೯೨ರಲ್ಲಿ ಬ್ರಿಟಿಷ್ ಜನರಲ್ ಸರ್ ಜಾರ್ಜ್ ಕೆ. ಕಾಕೆರಿಲ್ ಹನಜ್ ನದಿಯ ಕಣಿವೆಯನ್ನು ಅನ್ವೇಷಿಸಿದನು. ನಂತರ ೧೯೧೦ ರಿಂದ ೧೯೨೦ ರ ವರಗೆ ನಡೆದ ಅನ್ವೇಷಣೆಗಳು ಈ ಭಾಗದ ಬಹುವಾದ ಭೂಭಾಗವನ್ನು ಅನಾವರಣ ಗೊಳಿಸಿದವು.