ಕಯಾನಿ ಅಂಡ್ ಕಂಪೆನಿ

ದಕ್ಷಿಣ ಮುಂಬೈನ 'ಧೋಬಿ ತಲಾವ್' ಜಿಲ್ಲೆಯಲ್ಲಿರುವ ೧೦೬ ವರ್ಷಗಳಷ್ಟು ಪುರಾತನ 'ಇರಾನಿ ರೆಸ್ಟೋರೆಂಟ್',ಗಳಲ್ಲಿ 'ಕಯಾನಿ ಅಂಡ್ ಕಂಪೆನಿ,' 'ಪ್ರಿನ್ಸೆಸ್ ಸ್ಟ್ರೀಟ್' ವಲಯದಲ್ಲಿದೆ. ಅಫ್ಲತೂನ್ ಖೊಡಾಡ್ ಈಗಿನ ಮಾಲಿಕ. ಇವರ ತಂದೆಯವರ ಹೆಸರು ಖೊಡಾಡ್ ಎಂದು. ಸನ್, ೧೯೪೮ ರಲ್ಲಿ ಇರಾನಿನ ಯಾಸ್ಡ್ ನಿಂದ 'ಅಪ್ಲತೂನ್' ಮುಂಬೈಗೆ ಬಂದರು. ತಂದೆ ಮೊದಲೇ ಬೊಂಬಾಯಿನಲ್ಲೇ ವಾಸಮಾಡುತ್ತಿದ್ದರು. 'ಅಪ್ಲತೂನ್' ಇನ್ನೂ ೧೮ ವರ್ಷ ವಯಸ್ಸಿನವನಾಗಿದ್ದಾಗ, ತಂದೆಯವರು ಅವರಿಗೆ 'ವೀಸ' ಹೊಂದಿಸಿ ಕೊಟ್ಟು ಬೊಂಬಾಯಿನಲ್ಲಿ ವಿದ್ಯಾಭ್ಯಾಸಮಾಡಲು ಅವಕಾಶಮಾಡಿಕೊಟ್ಟರು ಸನ್. ೧೯೦೪ ರಲ್ಲಿ 'ಖೊಡಾಡ್' ರವರು, 'ಕಯಾನಿ ಅಂಡ್ ಕಂಪೆನಿ'ಯನ್ನು ತಮ್ಮ ಸೋದರ ಖೊಡಮೊರಾದ್ ನ ಜೊತೆಯಲ್ಲಿ ಸ್ಥಾಪಿಸಿದರು. 'ಅಪ್ಲತೂನ್' ರಿಗೆ, ಇಬ್ಬರು ಗಂಡು ಮಕ್ಕಳು : ಅವರುಗಳು : * ಫರೂಕ್ ಮತ್ತು ಫರಾದ್. 'ಧೋಬಿ ತಲಾವ್' ಪ್ರದೇಶಕ್ಕೆ ಜನ ಬರುತ್ತಿದ್ದದ್ದು ಕೆಲವು ಕಾರಣಗಳಿಗಾಗಿ ; ಅದರಲ್ಲಿ ಒಂದು ಅಲ್ಲಿನ ಎರಡು 'ಬೇಕ್ರಿ'ಗಳಿಗೆ ಭೇಟಿಕೊಡಲು.

ಇವೆರಡೂ ಒಂದರ ಎದುರಿಗೆ ಮತ್ತೊಂದು ಇದ್ದವು. ಆದರೆ ಈಗ 'ಕಯಾನಿ ಅಂಡ್' ಕಂಪೆನಿಮಾತ್ರ ಅಸ್ತಿತ್ವದಲ್ಲಿದೆ. 'ಬಸ್ತಾನಿ ಕಂ' ಮುಚ್ಛಲಾಯಿತು.