ಕಮಲ ನಾರಾಯಣ ದೇವಸ್ಥಾನ
ಕಮಲ ನಾರಾಯಣ ದೇವಸ್ಥಾನವು ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ದೇಗಾಂವ್‌ನಲ್ಲಿದೆ. [೧] ಈ ದೇವಾಲಯವನ್ನು ಕದಂಬ ರಾಜವಂಶದವರು ನಿರ್ಮಿಸಿದರು. ಕಮಲ ನಾರಾಯಣ ದೇವಾಲಯವನ್ನು ೧೨ ನೇ ಶತಮಾನದ ಕದಂಬ ರಾಜ ಶಿವಚಿತ್ತ ಪೆರ್ಮಾಡಿಯ ರಾಣಿ ಕಮಲಾ ದೇವಿಯ ಮುಖ್ಯ ವಾಸ್ತುಶಿಲ್ಪಿ ತಿಪ್ಪೋಜ ನಿರ್ಮಿಸಿದರು. [೨] ಈ ದೇವಾಲಯವನ್ನು ಕ್ರಿ.ಶ ೧೧೭೪ ರಲ್ಲಿ ನಿರ್ಮಿಸಲಾಗಿದೆ. [೨] ಇಲ್ಲಿನ ಪ್ರಧಾನ ದೇವರು ನಾರಾಯಣ. [೩]
ವಾಸ್ತುಶಿಲ್ಪ
ಬದಲಾಯಿಸಿಇದು ಸಿಂಹಗಳು ಮತ್ತು ಹೂವಿನ ಶಿಲ್ಪಗಳನ್ನು ಒಳಗೊಂಡಿದೆ. ದೇವಾಲಯವು ಮೂರು ಕೋಶಗಳನ್ನು ಹೊಂದಿದೆ. ಆದ್ದರಿಂದ ತ್ರಿಕೂಟಾಚಲ ದೇವಾಲಯಗಳ ವರ್ಗೀಕರಣದ ಅಡಿಯಲ್ಲಿ ಬರುತ್ತದೆ. [೨] ಇಲ್ಲಿ ಮೂರು ದೇಗುಲಗಳಿವೆ. ಮೊದಲ ದೇಗುಲವು ನಾರಾಯಣನ ಪ್ರತಿಮೆಯನ್ನು ಹೊಂದಿದೆ. ಎರಡನೆಯದು ಲಕ್ಷ್ಮಿ ನಾರಾಯಣನ ಪ್ರತಿಮೆಯನ್ನು ಹೊಂದಿದ್ದು, ಲಕ್ಷ್ಮಿ ದೇವಿಯು ನಾರಾಯಣನ ಮಡಿಲಿನಲ್ಲಿ ಕುಳಿತಿದ್ದಾಳೆ. ಮೂರನೆಯ ದೇಗುಲವು ರಾಣಿ ಕಮಲಾ ದೇವಿಯ ಪ್ರತಿಮೆಯನ್ನು ಹೊಂದಿದ್ದು, ಅವಳ ಪರಿಚಾರಕರು ಎರಡೂ ಬದಿಗಳಲ್ಲಿದ್ದಾರೆ. [೪] ದೇವಾಲಯದ ಒಳ ಛಾವಣಿಯು ತಲೆಕೆಳಗಾದ ರೂಪದಲ್ಲಿ ಸೊಗಸಾದ ಕೆತ್ತನೆಯ ದೈತ್ಯಾಕಾರದ ಕಮಲವನ್ನು ಹೊಂದಿದೆ. ದೇವಾಲಯದ ಮೇಲ್ಛಾವಣಿಯು ಶ್ರೀಮಂತ ಕೆತ್ತನೆಗಳೊಂದಿಗೆ ಕಂಬಗಳ ಆಧಾರದ ಮೇಲೆ ನಿಂತಿದೆ. ಅವುಗಳ ನಡುವೆ ಘರ್ಜಿಸುವ ಸಿಂಹಗಳನ್ನು ಹೊಂದಿರುವ ಕಂಬಗಳು, ಈ ಕಂಬಗಳನ್ನು ಸುತ್ತುವರೆದಿರುವ ಪಿರಮಿಡ್ ಗೋಪುರಗಳು ಮತ್ತು ಅವುಗಳ ನಡುವೆ ಶಿಲಾಬಾಲಕೆಯರು ಮತ್ತು ಸುಂದರವಾದ ಸುರುಳಿ-ವಿನ್ಯಾಸಗಳಿವೆ. ದೇವಾಲಯದ ಮುಂಭಾಗದ ಉದ್ದಕ್ಕೂ ಕಲ್ಲಿನ ಫಲಕಗಳು ಕದಂಬ ರಾಜವಂಶದ ಮತ್ತು ಇತರ ವ್ಯಕ್ತಿಗಳ ಲಾಂಛನಗಳನ್ನು ಹೊಂದಿವೆ. [೨]
ಉಲ್ಲೇಖಗಳು
ಬದಲಾಯಿಸಿ- ↑ "Kadamba glory". Archived from the original on August 29, 2008. Retrieved 2008-09-03.
- ↑ ೨.೦ ೨.೧ ೨.೨ ೨.೩ Sadashiv S. Mugali, Sadashiv (16 April 2017). "TEMPLE ARCHITECTURE OF KADAMBAS OF GOA: A STUDY" (PDF). 5th International conference on Recent developments in Engineering science, humanities and management.
- ↑ Achari, Soumya Narayan (28 February 2011). "Miscellany". Deccan Herald.
- ↑ MUDDE, RAGGI (10 June 2011). "Kamala Narayana Temple, Degaon".