(ಮಾರ್ಚ್ ೩೧, ೧೯೩೪ - ಮೇ ೩೧, ೨೦೦೯)(ನೋಡಿ:ಕಮಲಾದಾಸ್) ಮಲಯಾಳಂ ಮತ್ತು ಆಂಗ್ಲ ಭಾಷೆಯ ಸಾಹಿತಿಗಳು. ದಕ್ಷಿಣ ಮಲಬಾರಿನವರಾದ ಕಮಲಾದಾಸ್‍ರ ಬಾಲ್ಯದ ಹೆಸರು, ಮಾಧವಿಕುಟ್ಟಿ ಎಂದು. ಅದೇ ಹೆಸರಿನಲ್ಲಿ ಅವರು ತಮ್ಮ ಮಲಯಾಳೀ ಸಾಹಿತ್ಯ ಕೃಷಿಯನ್ನು ಮಾಡಿದರು. ಮುಂದೆ ತಮ್ಮ ಇಳಿವಯಸ್ಸಿನಲ್ಲಿ ಇಸ್ಲಾಂಧರ್ಮವನ್ನು ಆಯ್ದುಕೊಂಡರು. ಆಗ ಬದಲಾದ ಅವರ ಹೆಸರು 'ಕಮಲಾಸುರೈಯ್ಯ'. ಈ ಸೃಜನಶೀಲ ವ್ಯಕ್ತಿತ್ವದ ಲೇಖಕಿ, ತನ್ನ ಬದುಕಿನ ಬಿಂಬ ಹಾಗೂ ಪ್ರತಿಬಿಂಬವಾಗಿ ತಮ್ಮ ಜೀವಿತದುದ್ದಕ್ಕೂ ವಿಜೃಂಭಿಸಿದ ಅಪರೂಪದ ವ್ಯಕ್ತಿ. ಬದುಕಿಗೆ ಆಧಾರವಾಗಿ ತಮ್ಮ ೧೫ ರ ಹರೆಯದಲ್ಲೇ ಆರಂಭಿಸಿದ ಬರವಣಿಗೆಯ ವ್ಯಾಪ್ತಿ, ಮಲಯಾಳಂ, ಸಾಹಿತ್ಯವಲ್ಲದೆ, ಭಾರತೀಯ ಹಾಗೂ ವಿಶ್ವಸಾಹಿತ್ಯ ವಲಯಗಳಲ್ಲಿ ಬೆರೆಗು, ತಲ್ಲಣ, ಗಳನ್ನೂ ತೀವ್ರ ಆಸಕ್ತಿಯನ್ನೂ ಮೂಡಿಸಿದ ಕಮಲಾದಾಸ್, ಸಾಹಿತ್ಯಲೋಕದಲ್ಲಿ ಕೈಯಾಡಿಸಿದ್ದು, ಮುಕ್ತಛಂದದಲ್ಲಿ, ಕಾವ್ಯ,-ಸಣ್ಣ ಕಥೆ-ಕಾದಂಬರಿಗಳ ಉದ್ಯಾನದಲ್ಲಿ. ಅಲ್ಲಿ ಬೀಸಿದ ಹೊಸ-ತಂಗಾಳಿಗೆ ತಮ್ಮ ಮೈಯೊಡ್ಡಿ ಅವರು ಮುಂದೆ ಸಾಗಿದರು. ತಮ್ಮ ೬೫ ನೇ ವಯಸ್ಸಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಂತಾರಗೊಂಡು ಕಮಲಾ ಸುರೈಯ ಆಗಿ, ಉಭಯ ಸಮುದಾಯಗಳೂ ಹುಬ್ಬೇರಿಸುವಂತೆ ಮಾಡಿದರು. ವೈಯುಕ್ತಿಕ ಕೌಟುಂಬಿಕ ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟುಪಾಡುಗಳನ್ನು ಕಿತ್ತೆಸೆದು ಬೆಳೆಯುವ ಪ್ರಬಲ ಸ್ತ್ರೀಶಕ್ತಿಯನ್ನು ಪ್ರತಿನಿಧಿಸುವ ಹಾಗೂ ಪ್ರತಿಪಾದಿಸಿದ ಸ್ವಚ್ಛಂದ ನಿಲುವಿನ ಚಿಂತಕಿಯಾದ ಕಮಲಾ ದಾಸ್ ರಿಗೆ ಭಾರತೀಯ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವಿದೆ. ಅವರ ನಿರ್ಭೀತ ಸಾರಸ್ವತಲೋಕದ ಅಭಿಯಾನ, ಸ್ತ್ರೀಲೋಕದ ಸಮಸ್ಯೆಗಳ ಕಡೆಯ ಒಳನೋಟಗಳ ಚಿಂತನೆಗೆ ಒಂದು ಸ್ಥಾನವನ್ನು, ತೆರವುಮಾಡಿದೆ.

'ಕಮಲಾ ದಾಸ್'

ಜನನ ಹಾಗೂ ಬಾಲ್ಯದ ದಿನಗಳು

ಬದಲಾಯಿಸಿ

ಮಾರ್ಚ್ ೩೧, ೧೯೩೪ ರಲ್ಲಿ ಕೇರಳರಾಜ್ಯದ ದಕ್ಶಿಣ ಮಲಬಾರ್ ನ 'ತ್ರಿಶೂರ್' ಜಿಲ್ಲೆಯ 'ಪುನ್ನಯೂರ್ ಕುಳಂ' ಗ್ರಾಮದಲ್ಲಿ ಜನಿಸಿದ ಮಾಧವಿಕುಟ್ಟಿ, ಯವರ ತಂದೆ, ಇಂಗ್ಲೀಷ್ ಭಾಷಾತಜ್ಞ ವಿ. ಎಮ್. ನಾಯರ್. ನಾಯರ್ ಮಲಯಾಳಂ ದಿನಪತ್ರಿಕೆಯೊಂದರ ಸಂಪಾದಕರಾಗಿಯೂ ಇದ್ದರು. ತಾಯಿ, ಪ್ರಸಿದ್ಧ ಲೇಖಕಿ, ಬಾಲಮಣಿಯಮ್ಮ. ಸಾಹಿತ್ಯ ಸೃಷ್ಟಿಯಲ್ಲಿ ಹೆಸರಾಂತ 'ನಳಪತ್', ಮಲಯಾಳೀಕುಟುಂಬ. ಸುಪ್ರಸಿದ್ಧ ವಿದ್ವಾಂಸ ನಾರಾಯಣ ಮೆನನ್, ಆಕೆಯ ಸೋದರಮಾವ. ಅವರು, 'ಲೈಟ್ ಆಫ್ ಏಶ್ಯ,' 'ಲೆ ಮಿಸರಬಲ್,' ಮೊದಲಾದ ಪ್ರಸಿದ್ಧ ಸಾಹಿತ್ಯ ಕೃತಿಗಳನು ಆಂಗ್ಲ ಭಾಷೆಯಿಂದ ಮಲಯಾಳ ಭಾಷೆಗೆ ಅನುವಾದಿಸಿದ ಖ್ಯಾತಿವಂತರು. ವಿದ್ವತ್ತು, ಸೃಜನಶೀಲತೆಗೆ ಹೆಸರಾದ ಕುಟುಂಬವೊಂದರ ಪರಿಸರದಲ್ಲಿ ಬೆಳೆದ ಮಾಧವಿ ಕುಟ್ಟಿ, ಬಾಲ್ಯದ ವಿದ್ಯಾಭ್ಯಾಸವನ್ನು ಮನೆಯಲ್ಲೇ ಮಾಡಿದರು. ನಂತರ ಅಲ್ಲಿನ ಯೂರೋಪಿಯನ್ ಶಾಲೆಯೊಂದರಲ್ಲಿ ರೋಮನ್ ಕ್ಯಾಥೊಲಿಕ್ಕರ ವಸತಿಶಾಲೆಯಲ್ಲಿಇದ್ದುಕೊಂಡು ,ಮುಂದಿನ ಶಿಕ್ಷಣ ಸಂಪಾದಿಸಿದರು. ಸಂಪ್ರದಾಯಶೀಲ ಕುಟುಂಬದ ಅಷ್ಟೇನೂ ಅನುಕೂಲಸ್ತರಲ್ಲದ ಮನೆಯ ಪರಿಸರ, ದೊರೆತ ಜೀವನ ಪ್ರೀತಿ, ಅಜ್ಜಿಯ ಸಾನ್ನಿಧ್ಯದಲ್ಲಿ, ಕೇರಳದ ವನ್ಯಲೋಕ, ಪ್ರಕೃತಿಸೌಂದರ್ಯ, ಅವರಿಗೆ ಉತ್ಸಾಹ ಹುರುಪನ್ನು ವಿಪುಲವಾಗಿ ಕೊಟ್ಟವು. ಮುಂಬಯಿ ನಲ್ಲಿ ಬ್ಯಾಂಕ್ ನಲ್ಲಿ ಅಧಿಕಾರಿಯಗಿದ್ದ ಕೆ. ಮಾಧವ ದಾಸ್ ಎಂಬುವರೊಡನೆ ವಿವಾಹ. ವೈವಾಹಿಕ ಜೀವನದಲ್ಲಿ ಸುಖ, ತೃಪ್ತಿ ದೊರೆಯಲಿಲ್ಲ. ಮುಖ್ಯವಾಗಿ ಅವರು ಹೇಳುವಂತಹ ನಿಷ್ಕಳಂಕ ಪ್ರೀತಿಯ ಅಭಾವವನ್ನು ಅವರು ಪ್ರಸ್ತಾಪಿಸುತ್ತಿರುವುದು. ಸಂವೇದನಾಶೀಲರಾದ ಕ ಮಲಾರವರನ್ನು ಕೄರವಾಗಿ ನಡೆಸಿಕೊಂಡಿದ್ದು ಮೂಲಕಾರಣ. ಈ ಸಂಬಂಧಗಳನ್ನು ಅವರ ಆತ್ಮಕಥೆಯಲ್ಲಿ ಅನಾವರಣಗೊಳಿಸಿದ್ದಾರೆ. ಈ ನೋವು ತುಡಿತಗಳು ಅವರ ಕಥೆ ಕಾವ್ಯಗಳಲ್ಲಿ ಸ್ವಚ್ಛಂದವಾಗಿ ಅಭಿವ್ಯಕ್ತಿ ಪಡೆದಿವೆ. ಇಂತಹ ಭಾರತೀಯ ಸಮಾಜದ 'ಹಿಪೋಕ್ರೆಸಿ' ಯನ್ನು ಸೀಳಿನೋಡುವ ಒಳನೋಟದ ಔಶಧಿ ಗುಣವಿರುವ ಬರವಣಿಗೆಯಾಗಿದೆ. ಕವಯಿತ್ರಿ ಕಮಲಾ ರವರ, ಕಾವ್ಯದ ಪ್ರಧಾನ ವಸ್ತು, ಹೆಣ್ಣಿನ ಸ್ವಾತಂತ್ರ್ಯದ ಬಯಕೆ, ಕಷ್ಟ ಸುಖಗಳು, ನೋವು-ನಿರಾಸೆಗಳು, ನೆಪವಿಲ್ಲದ ಶುದ್ಧ ಆತ್ಮ ಸಖ ಪ್ರೀತಿಯ ಅಪೇಕ್ಷೆಗಳು, ಕಮಲಾ ದಾಸ್ ರ ಸಾಹಿತ್ಯದಲ್ಲಿ ಮುಜುಗರದ ಮೈಚಳಿಬಿಟ್ಟು ಪ್ರಾಮಾಣಿಕ ಅಭಿವ್ಯಕ್ತಿ ಪಡೆದ ಸಾಹಿತ್ಯ ಸೃಷ್ಟಿ, ಲೈಂಗಿಕ ಕೌಟುಂಬಿಕ ಉಪಾಧಿಗಳನ್ನು ಮೀರಿದ ಸ್ವಾತಂತ್ರ್ಯ ಸ್ತ್ರೀ-ವಿಮೋಚನೆ . ಹಾದಿಯಲ್ಲಿ ಎದುರಾದ ಎಲ್ಲ ಮೋಹ, ಮದ, ತೀವ್ರ ತುಡಿತ, ಕಾಮನೆಗಳ ಸಿರಿ-ಪರಿಗಳು. ಇವಿಷ್ಟೇ ರಹದಾರಿಯಲ್ಲವೆನ್ನಿಸಿದಾಗ ಅವರು, ಚಿತ್ರಕಲೆ, ರಾಜಕೀಯ, ಮತಾಂತರಗಳಂತಹ ದಾರಿಗಳನ್ನು ಶೋಧಿಸಿದರು. ೧೯೮೪ ರಲ್ಲಿ ಲೋಕಸಭೆಗೆ 'ಲೋಕಸೇವಪಕ್ಷ' ವೆಂಬ ಪಕ್ಷವನ್ನು ಕಟ್ಟಿ ಸ್ಪರ್ಧಿಸಿ, ಪರಾಜಯಹೊಂದಿದರು. ೧೯೯೯ ರ ಡಿಸೆಂಬರ್ ೧೬ ರಂದು ತಮ್ಮ ೬೫ ರ ಪ್ರಾಯದಲ್ಲಿ ಕಮಲ ಸುರೈಯ್ಯಾ ಆದರು. ಎರಡು ಧರ್ಮಗಳಲ್ಲೂ ಯಾನಮಾಡಿದರು. ತಾವು ಬಯಸಿದ ನಿಶೃಂಖಲ ಸ್ವಾತಂತ್ರ್ಯ, ಬಂಧ ಮುಕ್ತ/ನೆಪವಿಲ್ಲದ ಪ್ರೀತಿ ದೊರಕಿತೆ ಎನ್ನುವ ಪ್ರಶ್ನೆಯ ಅಳಲು, ಆಕ್ರಂದನ, ಗಳನ್ನು ಎಲ್ಲೂ ಉಲ್ಲೇಖಿಸಿಲ್ಲ.

ಪುನರ್ಜನ್ಮದಲ್ಲಿ ನಂಬಿಕೆಯಿದ್ದ, ಕಮಲಾದಾಸ್ ಇಚ್ಛಿಸಿದ್ದು, ನಿಸರ್ಗದ ಕಾಡುಗಳಲ್ಲಿ ಸ್ವಚ್ಛಂದವಾಗಿ ಮುಗಿಲಿನೆತ್ತರಕ್ಕೆ ಹಾರುವ ಪಕ್ಷಿಯಾಗಬೇಕೆಂದು

ಬದಲಾಯಿಸಿ

ತಮ್ಮ ಹುಟ್ಟೂರಿನಲ್ಲಿದ್ದ ಸ್ವಲ್ಪ ಜಮೀನನ್ನು 'ಕೇರಳ ಸಾಹಿತ್ಯ ಅಕ್ಯಾಡಮಿ' ಗೆ ಅವರು ಜೀವಂತವಾಗಿದ್ದಾಗಲೇ ದಾನವಾಗಿ ಕೊಟ್ಟರು. ಅವರು ಜೀವನದಲ್ಲಿ ಅಪೇಕ್ಷಿಸಿದ ಬಯಕೆ ಹೀಗಿದೆ. " ನಾನು ಪುನರ್ಜನ್ಮದಲ್ಲಿ ಮನುಷ್ಯಳಾಗಿ ಹುಟ್ಟಲು ಇಚ್ಛಿಸುವುದಿಲ್ಲ. ಹಕ್ಕಿಯಾಗಿ ಜನಿಸಿ, ಇಂಪಾಗಿ ಹಾಡುತ್ತಾ, ಶೃಂಗಗಳನ್ನೇರುವ ಬಯಕೆ ನನ್ನದು " ೭೫ ರ ಹರಯದಲ್ಲಿ ಮಾತೃಭಾಷೆಯಷ್ಟೇ ಇಂಗ್ಲೀಷಿನಲ್ಲೂ ನೈಪುಣ್ಯತೆಯನ್ನು ಸಾಧಿಸಿಕೊಂಡರು. ಮಲಯಾಳೀ ಭಾಷೆ ಕಥಾ ಸಾಹಿತ್ಯಕ್ಕೆ ಸುಲಲಿತವೆನಿಸಿದರೆ, ಇಂಗ್ಲೀಷ್ ಹೃದಯ ಸಂವಾದಿಯಾಗಿ ಅವರಿಗೆ ಕಂಡಿರಬೇಕು. ಮೊದಲು ಮಲೆಯಾಳಂ ಭಾಷೆಯಲ್ಲಿ ಬರೆದ ಸಣ್ಣ ಕಥೆ, ಕಾದಂಬರಿಗಳಿಂದಾಗಿ ಕೇರಳದ ಮಡಿವಂತ ಪ್ರಪಂಚದಲ್ಲಿ ಬಿರುಗಾಳಿಯೆಬ್ಬಿಸಿ, ಮನೆಮಾತಾದ ಕಮಲಾದಾಸ್, ಜಗತ್ತಿನ ಗಮನ ಸೆಳೆದದ್ದು ಇಂಗ್ಲೀಷ್ ನಲ್ಲಿ ಬರೆದ ಹಲವಾರು ಕಥೆ, ಕಾದಂಬರಿಗಳಿಂದ.

ವಿಮರ್ಶಕರ ಪ್ರಕಾರ, ಮಧ್ಯಮ ವರ್ಗದ ವೈವಾಹಿಕಜೀವನ, ಮುಖ್ಯವಾಗಿ ಹೆಣ್ಣಿನ ಲೈಂಗಿಕ ಅತೃಪ್ತಿಯನ್ನು ಕುರಿತದ್ದು

ಬದಲಾಯಿಸಿ

ಮನುಷ್ಯಸಂಬಂಧಗಳು, ಅವರ ಸೂಕ್ಷ್ಮ ಮನೋಭಾವನೆಗಳು, ಮನಸ್ಸಿನ ನಿಗೂಢ ವ್ಯಾಪಾರಗಳಮೇಲೆ ಬೆಳಕುಚೆಲ್ಲುವ ಕಟುಸತ್ಯಗಳು, ಲೈಂಗಿಕ ಅತೃಪ್ತಿಯಿಂದ ನರಳುವ ಮನಸ್ಸುಗಳು, ಆಧುನಿಕ ಮಹಿಳೆಯರ ಸಂವೇದನೆಯನ್ನು ನಿರ್ಭಿಡೆಯಿಂದ, ನಿಷ್ಟರವಾಗಿ ಅನಾವರಣಗೊಳಿಸುವ ಬರವಣಿಗೆ, ಅಶ್ಲೀಲವೆಂದು ತೋರಿಕೆಗೆ ಕಾಣುವುದು ಸಹಜ. ' ಕಾಮನೆಗೆ ಕಚಗುಳಿಯಿಡುವ ಕೆಲಸ,' ವೆಂದು ಹಲವರು ವಿಶ್ಲೇಷಿದ್ದಾರೆ. ಹಲವರು ಅವನ್ನು ತತ್ಕ್ಷಣದಲ್ಲಿ ಕಾಣುವ ಸಂಕುಚಿತ ದೃಷ್ಟಿಯ ಪ್ರತಿಕ್ರಿಯೆಗಳಷ್ಟೇ, ವಿಮರ್ಶೆಯಲ್ಲವೆಂದಿದ್ದಾರೆ. ಸಭ್ಯತೆ, ಶಿಷ್ಟಾಚಾರಗಳಲ್ಲಿ ಸಮಾಧಿಮಾಡಲಾಗಿದ್ದ "ಹೆಣ್ಣಿನ ಲೈಂಗಿಕ ಅಭೀಪ್ಸೆ, ಮತ್ತು ದೈಹಿಕ ಸುಖದ ಹಕ್ಕನ್ನು ಪ್ರತಿಪಾದಿಸುವ ಬಂಡುಕೋರ ಲೇಖಕಿ", ಎನ್ನುವ ಹಣೆಪಟ್ಟಿ ಅವರಿಗೆ ದೊರೆಯಿತು.

ಕೆಲವರು ಮಹಿಳೆಯೋರ್ವಳ ಪ್ರಾಮಾಣಿಕ ಬರವಣಿಗೆಯೆಂದು ಗುಟ್ಟಾಗಿ ಮೆಚ್ಚಿಕೊಂಡಾರೂ, ಮಲಯಾಳ ಸಮಾಜದ ಮಡಿವಂತ ಸಮಾಜ, ಅಶ್ಲೀಲವೆಂದು ಜರೆಯಿತು. ಗಂಡು-ಹೆಣ್ಣಿನ ಎಲ್ಲೆಮೀರಿದ ಪ್ರೀತಿಯ ಸಂಬಂಧಗಳು, ಅವರ ಆತ್ಮಕಥೆ, ಸಣ್ಣ-ಕಥೆ, ಕಾದಂಬರಿಗಳಲ್ಲಿ ಪದೇ-ಪದೇ ಕಾಣಿಸಿಕೊಳ್ಳುವ ವಿಚಾರಧಾರೆಗಳು. ಆದರೆ ಮದುವೆಯ ಗಂಟಿನಡಿಯಲ್ಲಿ ನವೆಯುವ ಪ್ರೀತಿಸಂಬಂಧಗಳು ಅದರಾಚೆಗಿನ ಪ್ರೀತಿ, ವಾತ್ಸಲ್ಯ, ಮನೋತೃಪ್ತಿಗಳಿಗಾಗಿ ಕಾಮನೆಗಳ ತೃಪ್ತಿಗಾಗಿ ತುಡಿಯುವ ಮಧ್ಯಮ ವರ್ಗದ ಹೆಣ್ಣುಗಳ ಅಂತರಂಗದ ದನಿಗಳನ್ನು ಕಂಡು-ಕೇಳಿ-ಅನುಭವಿಸಿ ಅರಿತಿದ್ದ, ಕಮಲಾದಾಸ್ ರಿಗೆ ಇದರಿಂದ ಸ್ತ್ರೀ-ವಿಮೋಚನೆಯ ಅಗತ್ಯವಿದೆಯೆಂಬ ಕಳಕಳಿಯಿತ್ತು. ಅವರುತಾಳಿದ ದಿಟ್ಟನಿಲುವಿನಲ್ಲಿ, ವಿವಾಹೇತರ ಪ್ರೇಮಸಂಬಂಧವನ್ನು ಪ್ರಣಯಸಂಬಂಧಗಳೇ ಆಗಿರಬೇಕಿಲ್ಲ. ಅವು ಮಾನವ ಸಬಂಧಗಳೋ ಇಲ್ಲವೇ ಹೃದಯ ಸಂವಾದವೋ ಆಗಿರಲು ಸಾಧ್ಯವೆಂಬುದು ಅವರ ವಾದ. ಕ. ದೃಷ್ಟಿಯಲ್ಲಿ ರಾಧಾ-ಕೃಷ್ಣರ, ಮೀರಾ ಕೃಷ್ಣರ ಸಂಬಂಧಕ್ಕೆ ಸಾದೃಶವಾದದ್ದೆಂಬುದನ್ನು ಸ್ತ್ರೀ-ಪುರುಷರ ಸಂಬಂಧಕ್ಕೂ ಹೋಲಿಸಬಹುದೆಂಬುದು ಅವರ ಜಿಜ್ಞಾಸೆಗಳಲ್ಲೊಂದು.

೧೫ ರ ಅಪ್ರಾಪ್ತವಯಸ್ಸಿನಲ್ಲಿ ವಿವಾಹವಾದ ಕಮಲಾದಾಸ್ ವೈವಾಹಿಕ ವ್ಯಕ್ತಿಜೀವನದಲ್ಲಿ ಹೆಚ್ಚು ಸುಖ-ಸಮಾಧಾನಗಳನ್ನು ಕಾಣಲಿಲ್ಲ

ಬದಲಾಯಿಸಿ

ಸತಿ-ಪತಿಯ ವಯಸ್ಸಿನ ಅಂತರ ಬಹಳ ಹೆಚ್ಚಾಗಿತ್ತು. ಪತಿಯಿಂದ ಬಯಸಿದ ನಿಷ್ಕಳಂಕ ಪ್ರೀತಿಯಿಂದ ವಂಚಿತರಾಗಿದ್ದನ್ನು ಅವರು, ತಮ್ಮ ’ ಆತ್ಮಕಥೆಯಲ್ಲಿ ತೋಡಿಕೊಂಡಿದ್ದಾರೆ. ಕಮಲಾದಾಸ್ ದಂಪತಿಗಳಿಗೆ ೩ ಜನ ಗಂಡುಮಕ್ಕಳು. ಹಿರಿಯಮಗ, ಎಮ್. ಎನ್. ನಲಪತ್, 'ಟ್ರಾವನ್ಕೋರ್ ಮಹಾರಾಜರ ಬಳಗದ ಸದಸ್ಯರೊಬ್ಬರ ಮಗಳ ಜೊತೆಯಲ್ಲಿ ವಿವಾಹವಾದರು. ಎರಡನೆಯ ಮಗ, ಚಿನ್ನೇನ್ ದಾಸ್, ಹಾಗೂ ಕೊನೆಯ ಮಗನೇ, ಜಯಸೂರ್ಯದಾಸ್ .ಪುಣೆಯಲ್ಲಿ ವಾಸ್ತವ್ಯಹೂಡಿದ್ದಾರೆ. ನಲಪತ್, ಯುನೆಸ್ಕೋದ 'ಶಾಂತಿ ಪಾರಿತೋಷಕನೀಡುವ ಸಮಿತಿ' ಗೆ ಅಧ್ಯಕ್ಷರಾಗಿದ್ದರು. 'ಮಣಿಪಾಲ್ ಅಕ್ಯಾಡೆಮಿ ಆಫ್ ಹೈಯರ್ ಎಜುಕೇಶನ್' ಸಂಸ್ಥೆಯಲ್ಲಿ.

ಜೀವನದ ಅಂತಿಮದಿನಗಳನ್ನು ಕಳೆದದ್ದು, ಅವರ ಕೊನೆಯ ಮಗ, ಜಯಸೂರ್ಯದಾಸನ ಪುಣೆಯ ಮನೆಯಲ್ಲಿ. ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದರು. ಮಲಯಾಳದ ಕವಯಿತ್ರಿ, ೨೦೦೯ ರ, ಮೇ, ೩೧ ರಂದು, ದೈವಾಧೀನರಾದರು.ಯೋಪಾಲಿಟಿಕ್ಸ್ ವಿಷಯದ ಪ್ರಾಧ್ಯಾಪಕರಾಗಿದ್ದರು. ಹಿಂದೆ, 'ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆ' ಯ 'ರೆಸಿಡೆಂಟ್ ಎಡಿಟರ್' ಆಗಿ ಕೆಲಸಮಾಡಿದ್ದರು. ಕೇರಳದ ಹುಟ್ಟಿದೂರಿಗೆ ಅವರ ಮೃತಶರೀರವನ್ನು ಕೊಂಡೊಯ್ಯಲಾಯಿತು. 'ಕೊಚ್ಚಿ' ಯಿಂದ 'ಟ್ರಿವೆಂಡ್ರಮ್' ವರೆಗೆ ರಸ್ತೆಯುದ್ದಕ್ಕೂ ಅವರ ಪಾರ್ಥಿವಶರೀರವನ್ನು ಮೆರವಣಿಗೆಯಲ್ಲಿ ಒಯ್ಯಲಾಯಿತು. ಸಾವಿರಾರು ಜನ, ಸಾಹಿತ್ಯಪ್ರಿಯರು, ಊರಿನವರು, ಮತ್ತು ಎಲ್ಲಾ ವರ್ಗದ ಜನರೂ ರಸ್ತೆಯುದ್ದಕ್ಕೂ ನಿಂತು ತಮ್ಮ ಗೌರವಶ್ರದ್ಧಾಂಜಲಿಯನ್ನು ಅರ್ಪಿಸಿದರು. ಕಮಲಾ ಸುರಯ್ಯರವರ ದೇಹವನ್ನು ಇಸ್ಲಾಂ ಧರ್ಮದ ಪ್ರಕಾರ, ನೆಲದಲ್ಲಿ ಹೂಳಿ ಮಣ್ಣುಮಾಡಿ ಮೇಲೆ ಸಮಾಧಿಯನ್ನು ತಿರುವನಂತಪುರದ ಮಧ್ಯದಲ್ಲಿರುವ, 'ಪಾಲಯಮ್ ಮಸೀದಿ' ಯೊಳಗೆ, ಮಾಡಲಾಯಿತು. ಅಲ್ಲಿ ನೆರೆದವರು ಎಲ್ಲಾ ಜಾತಿ, ಮತ ಧರ್ಮ ಹಾಗೂ ವಯೋಮಾನದವರಾಗಿದ್ದರು. ಸಮಾಧಿಯ ಆಕಡೆ-ಈಕಡೆಗಳಲ್ಲಿ ಎರಡುಬದಿಯಲ್ಲೂ ಒಂದೊಂದು ವೃಕ್ಷವನ್ನು ಅವರ ಕೊನೆಯಮಗ ನೆಟ್ಟರು.

ಕಮಲಾಸುರಯ್ಯರಿಗೆ ಸಿಕ್ಕ ಬಿರುದು ಪ್ರಶಸ್ತಿ-ಸನ್ಮಾನಗಳು

ಬದಲಾಯಿಸಿ
  • Asian Poetry Prize
  • Kent Award for English Writing from Asian Countries
  • Asian World Prize
  • Ezhuthachan Award
  • Sahitya Academy Award
  • Vayalar Award
  • Kerala Sahitya Academy Award
  • Muttathu Varkey Award[7]

ಕೃತಿಗಳು

ಬದಲಾಯಿಸಿ
  • ಎಂಡೆಕಥಾ
  • ೧೯೬೪ 'ಪಕ್ಷಿಯುಡೆ ಮರಣಂ'
  • ೧೯೬೫ 'ಸಮ್ಮರ್ ಇನ್ ಕಲ್ಕತಾ'
  • ೧೯೬೭ 'ದ ಡಿಸಿಡೆಂಟ್ಸ್'
  • ೧೯೭೩ 'ದ ಓಲ್ಡ್ ಪ್ಲೇ ಹೌಸ್ ಅಂಡ್ ಅದರ್ ಪೊಯಮ್ಸ್'
  • ೧೯೭೬ 'ಮೈ ಸ್ಟೋರಿ'
  • ೧೯೭೬ 'ಆಲ್ಫಬೆಟ್ ಆಫ್ ಲಸ್ಟ್'
  • ೧೯೭೭ 'ಎ ಡಾಲ್ ಫಾರ್ ದ ಚೈಲ್ಡ್ ಪ್ರಾಸ್ಟಿಟ್ಯೂಟ್'
  • ೧೯೮೫ 'ದ ಅಣ್ಣಾಮಲೈ ಪೊಯಮ್ಸ್'
  • ೧೯೯೦ 'ಪಾಲಯನ್'
  • ೧೯೯೧ 'ನೆಯ್ ಪಾಯಸಮ್'
  • ೧೯೯೨ 'ಡೈರಿ ಕುರುಪ್ಪುಗಳ್'
  • ೧೯೯೨ 'ಪದ್ಮಾವತಿ ದ ಹಾರ್ಲೆಟ್ ಅಂಡ್ ಅದರ್ ಸ್ಟೋರೀಸ್'
  • ೧೯೯೬ 'ಓನ್ಲಿ ದ ಸೋಲ್ ನೋಸ್ ಹೌ ಟು ಸಿಂಗ್'
  • ೧೯೯೯ 'ನೀರ್ ಮಾದಲಮ್ ಪೂತಕಾಲಂ'
  • ೨೦೦೫ 'ಚಂದನ ಮರಂಗಳ್'
  • ೨೦೦೫ 'ಮಾಧೈ ಕುಟ್ಟಿಯುಡೆ ಉನ್ಮಕ್ಕಥಕ್ಕಳ್'
  • ೨೦೦೫ 'ಬಾಲ್ಯಕಾಲ ಸ್ಮರಣಕಳ್' (ಕೊನೆಯ ಕಥೆ)