ಕಮಲಾ ಎಮ್.ಎಸ್.ಬಾಲು

ಇವರು ಹುಟ್ಟಿದ್ದು ೨೯-೧೧-೧೯೩೮ರಂದು.ಇವರು ತಮ್ಮ ಬಿ.ಎಸ್.ಸಿ(ಆನರ್ಸ್) ಮುಗಿಸಿ ಗಣಿತದಲ್ಲಿ ಎಂ.ಎಸ್.ಸಿ ಯನ್ನೂ ಮಾಡಿರುತ್ತಾರೆ.ಇವರು ೧೯೬೨ ರಿಂದ ೧೯೭೦ರವರೆಗೆ ದೆಹಲಿಯ ಆಕಾಶವಾಣಿಯಲ್ಲಿ ಕನ್ನಡದಲ್ಲಿ ವಾರ್ತಾ ವಾಚಕಿಯಾಗಿ ಸೇವೆಸಲ್ಲಿಸುತ್ತಿದರು. ಅದೇ ರೀತಿ ೧೯೭೦ ರಿಂದ ೧೯೯೬ ರವರೆಗೆ ಬೆಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಕೆಲಸ ನಿರ್ವಹಿಸಿದ್ದರು.ಎಲ್ ಗುಂಡಪ್ಪ ಮತ್ತು ಶಾರದಮ್ಮ ರವರ ಪುತ್ರಿಯಾದ ಇವರು ಇಬ್ಬರು ಅಕ್ಕಂದಿರು,ಇಬ್ಬರು ತಂಗಿಯರು ಮತ್ತು ಇಬ್ಬರು ತಮ್ಮಂದಿರನ್ನು ಹೊಂದಿದ್ದಾರೆ.ಇವರ ಪತಿ ಎಮ್ ಎಸ್ ಬಾಲಸುಬ್ರಮಣ್ಯ.ಇವರು ನ್ಯಾಷನಲ್ ಏರೊನೆಟಿಕಲ್ ಲಾಬೊರಾಟರೀಸ್ನ್ ರಿಟಾಯರ್ಡ್ ಸಿನಿಮೆಟೋಗ್ರಾಫರ್ ಅಸಿಸ್ಟೆಂಟ್ ಡೈರೆಕ್ಟರ್. ಇವರ ವಿಶೇಷ ಹವ್ಯಾಸಗಳಲ್ಲಿ ಜಾನಪದ ಸಂಗೀತ ಹಾಡುಗಾರಿಕೆಯೂ ಒಂದಾಗಿದೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಬರೆದು ಪ್ರಸಾರ ಮಾಡಿರುವ ಕಾಯರ್ಯಕ್ರಮಗಳು:-

ಬದಲಾಯಿಸಿ
  • ಹೆಣ್ಣು ಇರುವ ಮನೆಗೆ ಕನ್ನಡಿ ಯಾತಕ್ಕೆ(ಜಾನಪದ ರೂಪಕ)
  • ತಿರುಮಲಾಂಬಾ-ಸಾಹಿತ್ಯ ಮತ್ತು ಅಧ್ಯಯನ (ವಿಮರ್ಶಾತ್ಮಕ ಕಾರ್ಯಕ್ರಮ)
  • ಮಳೆ(ಜಾನಪದ ಕಾರ್ಯಕ್ರಮ)
  • ಶಿಶು ಗೀತೆಗಳು(ರೂಪಕ)
  • ಅಕ್ಷಯಾಂಬರ (ಭಾರತದ ಸೀರೆಗಳ ಬಗ್ಗೆ ೧೩ ಕಾರ್ಯಕ್ರಮಗಳು)
  • ಜಾನಪದ ರೂಪಕಗಳು : ಕುಂತಿ ಪದಗಳು, ಬಸವನ ಅಷ್ಟಮಿ ಪದಗಳು, ನನ್ನ ದೊಡ್ಡೋರ ಮಗಳಂತ ಕರಿಯೋ ಗಂಡಯ್ಯ, ಸತ್ತವನು ಎದ್ಬಂದಾಗ
  • ನಮ್ಮ ಬೆಂಗಳೂರು-ಮಾಲಿಕೆಯಲ್ಲಿ ೬ ಕಾರ್ಯಕ್ರಮಗಳು ಇತ್ಯಾದಿ

ಉಲ್ಲೇಖ

ಬದಲಾಯಿಸಿ


[]

  1. ನಮ್ಮ ಬದುಕಿನ ಪುಟಗಳು (ಲೇಖಕಿಯರ ಆತ್ಮ ಕಥನಗಳು) , ಪ್ರಧಾನ ಸಂಪಾದಕರು:ಡಾ ಕೆ ಆರ್ ಸಂಧ್ಯಾ ರೆಡ್ಡಿ, ಸಂಪಾದಕರು: ವನಮಾಲ ಸಂಪನ್ನಕುಮಾರ್,ಗುಣಸಾಗರಿ ನಾಗರಾಜ್, ಚಂದ್ರಿಕಾ ಕರ್ನಾಟಕ ಲೇಖಕಿಯರ ಸಂಘ(ರಿ) ಬೆಂಗಳೂರು, ಚಾಮರಾಜಪೇಟೆ ಬೆಂಗಳೂರು ಪುಟ ಸಂಖ್ಯೆ ೨೬೪