ಕಪ್ಪು ಹಿಂಗತ್ತಿನ ರಾಜಹಕ್ಕಿ
ಕಪ್ಪು ಹಿಂಗತ್ತಿನ ರಾಜಹಕ್ಕಿ ಅಥವಾ ಬ್ಲ್ಯಾಕ್-ನೇಪ್ಡ್ ಬ್ಲೂ ಫ್ಲೈಕ್ಯಾಚರ್ ( ಹೈಪೋಥೈಮಿಸ್ ಅಜುರಿಯಾ ) ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಮೊನಾರ್ಕ್ ಫ್ಲೈಕ್ಯಾಚರ್ಗಳ ( ಮೊನರ್ಚಿನೆ , ರಾಜಹಕ್ಕಿಗಳು ) ಕುಟುಂಬಕ್ಕೆ ಸೇರಿದ ಸಪೂರ ಮತ್ತು ಅಧಿಕ ಲವಲವಿಕೆಯ ಪ್ಯಾಸರೀನ್ ಹಕ್ಕಿ . ಇವು ಲೈಂಗಿಕ ದ್ವಿರೂಪಿ, ಗಂಡು ಹೆಣ್ಣುಗಳ ಹೊರರೂಪದಲ್ಲಿ ಸಾಮ್ಯತೆ ಇರುವುದಿಲ್ಲ. ಗಂಡಿನ ತಲೆಯ ಹಿಂಭಾಗದಲ್ಲಿ ಕಪ್ಪು ತೇಪೆ ಇದ್ದು, ಕಂಠದ ಮುಂಭಾಗದಲ್ಲಿ ಕಂಠಾಭರಣದಂತೆ ಕಿರಿದಾದ ಕಪ್ಪನೆಯ ಗೆರೆ ಇರುತ್ತದೆ. ತೆಳು ನೀಲಿಯ ಹೆಣ್ಣು ಆಲಿವ್ ಕಂದು ಮಿಶ್ರಿತ ರೆಕ್ಕೆಯಿದ್ದು, ತಲೆಯ ಹಿಂಭಾಗದ ಕಪ್ಪು ಗುರುತು ಇರುವುದಿಲ್ಲ. ಇವುಗಳ ಧ್ವನಿ ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್‌ಗೆ (ರಾಜಹಕ್ಕಿ) ಹೋಲುತ್ತದೆ. ಉಷ್ಣವಲಯದ ಕಾಡುಗಳಲ್ಲಿ ಇತರೆ ಮಿಶ್ರ-ಜಾತಿಗಳ ಆಹಾರವನ್ನರಸುವ ಗುಂಪುಗಳ ಜೊತೆ ಸೇರಿ ಕೆಲವೊಮ್ಮೆ ಆಹಾರವನ್ನು ಸಂಗ್ರಹಿಸಬಹುದು. ಜೀವಸಂದಣಿಯಲ್ಲಿ ಹೊರರೂಪದ ಬಣ್ಣ ಮತ್ತು ಗಾತ್ರಗಳಲ್ಲಿ ಅಲ್ಪ ವ್ಯತ್ಯಾಸ ಕಾಣಬರುತ್ತದೆ.
ವ್ಯವಸ್ಥಾಶಾಸ್ತ್ರ
ಬದಲಾಯಿಸಿಕಪ್ಪು ಹಿಂಗತ್ತಿನ ರಾಜಹಕ್ಕಿಯನ್ನು1779 ರಲ್ಲಿ ಫ್ರೆಂಚ್ ವಿದ್ವಾಂಸ ಜಾರ್ಜಸ್-ಲೂಯಿಸ್ ಲೆಕ್ಲರ್ಕ್, ಕಾಮ್ಟೆ ಡಿ ಬಫನ್ ಅವರು ತಮ್ಮ ಹಿಸ್ಟೊಯಿರ್ ನೇಚರ್ಲೆ ಡೆಸ್ ಒಸಿಯಾಕ್ಸ್‌ನಲ್ಲಿ ದಾಖಲಿಸಿದ್ದಾರೆ. [೧] ಬಫನ್ ಅವರ ಪಠ್ಯದೊಂದಿಗೆ ಎಡ್ಮೆ-ಲೂಯಿಸ್ ಡೌಬೆಂಟನ್ ಅವರ ಮೇಲ್ವಿಚಾರಣೆಯಲ್ಲಿ ಪ್ರಕಟಿಸಲಾದ ಪ್ಲ್ಯಾಂಚಸ್ ಎನ್ಲುಮಿನೀಸ್ ಡಿ'ಹಿಸ್ಟೊಯಿರ್ ನೇಚರ್ಲೆಯಲ್ಲಿ ಫ್ರಾಂಕೋಯಿಸ್-ನಿಕೋಲಸ್ ಮಾರ್ಟಿನೆಟ್ ಅವರು ಕೈಯಿಂದ ಬಿಡಿಸಿದ ಹಕ್ಕಿಯ ಬಣ್ಣದ ಚಿತ್ರವಿದೆ. [೨] ಆದರೆ ಫಲಕದ ಶೀರ್ಷಿಕೆ ಅಥವಾ ಬಫನ್ ರ ವಿವರಣೆ, ವೈಜ್ಞಾನಿಕ ಹೆಸರನ್ನು ಒಳಗೊಂಡಿಲ್ಲ. 1783 ರಲ್ಲಿ ಡಚ್ ನಿಸರ್ಗಶಾಸ್ತ್ರಜ್ಞ ಪೀಟರ್ ಬೊಡ್ಡೆರ್ಟ್ ತನ್ನ ಪ್ಲ್ಯಾಂಚೆಸ್ ಎನ್ಲುಮಿನೀಸ್ ಕ್ಯಾಟಲಾಗ್‌ನಲ್ಲಿ ಮುಸಿಕಾಪ ಅಜುರಿಯಾ ಎಂಬ ವೈಜ್ಞಾನಿಕ ಹೆಸರನ್ನು ನೀಡಿದನು. [೩] ಬಫನ್ ತನ್ನ ಹಕ್ಕಿಯ ಮಾದರಿಯನ್ನು ಫಿಲಿಪೈನ್ಸ್‌ನಲ್ಲಿ ಸಂಗ್ರಹಿಸಲಾಗಿದೆಯೆಂದರು, ಆದರೆ 1939 ರಲ್ಲಿ ಅಮೇರಿಕನ್ ಪಕ್ಷಿವಿಜ್ಞಾನಿ ಜೇಮ್ಸ್ ಎಲ್. ಪೀಟರ್ಸ್ ಲುಝೋನ್ ದ್ವೀಪದಲ್ಲಿರುವ ಮನಿಲಾ ಮಾದರಿಯ ಸ್ಥಳವೆಂದರು . [೪] [೫] ಕಪ್ಪು ಹಿಂಗತ್ತಿನ ರಾಜಹಕ್ಕಿಯ ಈಗಿನ ಕುಲ ಹೈಪೋಥೈಮಿಸ್ , ಇದನ್ನು ಜರ್ಮನ್ ಪ್ರಾಣಿಶಾಸ್ತ್ರಜ್ಞ ಫ್ರೆಡ್ರಿಕ್ ಬೋಯಿ 1826 ರಲ್ಲಿ ನಾಮಕರಣ ಮಾಡಿದರು ಮತ್ತು ನಮೂನೆ ಜಾತಿಯಾಗಿ (type species) ದಾಖಲಿಸಲಾಯಿತು. [೬] [೭] ಕುಲದ ಹೆಸರು ಪ್ರಾಚೀನ ಗ್ರೀಕ್ ಹ್ಯೂಪೋಥುಮಿಸ್‌ನಿಂದ ಬಂದಿದೆ, ಇದು ನಾಟಕಕಾರ ಅರಿಸ್ಟೋಫೇನ್ಸ್ ಉಲ್ಲೇಖಿಸಿದ ಗುರುತಿಸಲಾಗದ ಹಕ್ಕಿಯ ಹೆಸರು. ಅಜುರಿಯಾ ಎಂಬ ನಿರ್ದಿಷ್ಟ ವಿಶೇಷಣವು ಮಧ್ಯಕಾಲೀನ ಲ್ಯಾಟಿನ್ ಅಜುರಿಯಸ್‌ನಿಂದ ಬಂದಿದೆ, ಇದರರ್ಥ "ಆಕಾಶ ನೀಲಿ-ಬಣ್ಣ" ಅಥವಾ "ಆಕಾಶ ನೀಲಿ-ನೀಲಿ". [೮]
ಕಪ್ಪು ಹಿಂಗತ್ತಿನ ರಾಜಹಕ್ಕಿಯ ಪರ್ಯಾಯ ಹೆಸರುಗಳೆಂದರೆ ಬ್ಲ್ಯಾಕ್-ನೇಪ್ಡ್ ಬ್ಲೂ ಮೊನಾರ್ಕ್ ಮತ್ತು ಬ್ಲ್ಯಾಕ್-ನೇಪ್ಡ್ ಮೊನಾರ್ಕ್. ಕೆಲವು ಪಕ್ಷಿಶಾಸ್ತ್ರಜ್ಞರು ಈ ಎರಡು ಹಿಂದಿನ ಉಪಜಾತಿ - H. a. blasii (Banggai Island) ಮತ್ತು H. a. puella (Sulawesi) ಗಳನ್ನು ಪ್ರತ್ಯೇಕಿಸಿ ಅವುಗಳನ್ನು ತೆಳು-ನೀಲಿ ರಾಜನ (pale-blue monarch Hypothymis puella)ಉಪಜಾತಿಗಳಾಗಿಸಿದ್ದಾರೆ. [೯]
ಉಪಜಾತಿಗಳು
ಬದಲಾಯಿಸಿಇಪ್ಪತ್ಮೂರು ಉಪಜಾತಿಗಳನ್ನು ಗುರುತಿಸಲಾಗಿದೆ: [೭]
- H. a. styani - (Hartlaub, 1899): ಮೊದಲೆಲ್ಲಾ ಫಿಸೆಡುಲಾ ಕುಲದ ಪ್ರತ್ಯೇಕ ಜಾತಿ ಎಂದು ಪರಿಗಣಿಸಲಾಗಿತ್ತು, ಇವು ಭಾರತ ಮತ್ತು ನೇಪಾಳದಿಂದ ಆಗ್ನೇಯ ಚೀನಾ ಮತ್ತು ವಿಯೆಟ್ನಾಂವರೆಗೆ ಕಂಡುಬರುತ್ತವೆ. ಗಂಡು ಹೊಟ್ಟೆ ಬಿಳಿಬಣ್ಣದ್ದಾಗಿದೆ.
- H. a. oberholseri - Stresemann, 1913: ತೈವಾನ್‌ನಲ್ಲಿ ಕಂಡುಬಂದಿದೆ
- H. a. ceylonensis - Sharpe, 1879: ಮೂಲತಃ ಶ್ರೀಲಂಕಾದಲ್ಲಿ ಕಂಡುಬರುವ ಪ್ರತ್ಯೇಕ ಜಾತಿ. ಗಂಡು ಹಕ್ಕಿಗೆ ಕಪ್ಪು ಕಂಠಾಹಾರವಿರುವುದಿಲ್ಲ.
- H. a. tytleri - (Beavan, 1867):ಮೊದಲೆಲ್ಲಾ ಮೈಯಾಗ್ರಾ ಕುಲದ ಪ್ರತ್ಯೇಕ ಜಾತಿ ಎಂದು ಪರಿಗಣಿಸಲಾಗಿತ್ತು. ಅಂಡಮಾನ್ ದ್ವೀಪಗಳಲ್ಲಿ ವಾಸ. ಗಂಡು ಹಕ್ಕಿಯ ಹೊಟ್ಟೆಯ ಭಾಗ ನೀಲಿ ಬಣ್ಣ.
- H. a. idiochroa - Oberholser, 1911:ಕಾರ್ ನಿಕೋಬಾರ್ (ಉತ್ತರ ನಿಕೋಬಾರ್ ದ್ವೀಪಗಳು ) ನಲ್ಲಿ ವಾಸ. ಗಂಡು ಹಕ್ಕಿಯ ಹೊಟ್ಟೆಯ ಭಾಗ ಬಿಳಿ ಮಿಶ್ರಿತ ನೀಲಿ ಬಣ್ಣ.
- H. a. nicobarica - Bianchi, 1907: ದಕ್ಷಿಣ ನಿಕೋಬಾರ್ ದ್ವೀಪಗಳಲ್ಲಿ ವಾಸ. ಗಂಡು ಹಕ್ಕಿಯ ಹೊಟ್ಟೆಯ ಭಾಗ ಬಿಳಿ ಮಿಶ್ರಿತ ನೀಲಿ ಬಣ್ಣ.
- H. a. montana - Riley, 1929: ಉತ್ತರ ಮತ್ತು ಮಧ್ಯ ಥೈಲ್ಯಾಂಡ್‌ನಲ್ಲಿ ವಾಸ.
- H. a. galerita - (Deignan, 1956), 1929: ನೈಋತ್ಯ ಮತ್ತು ಆಗ್ನೇಯ ಥೈಲ್ಯಾಂಡ್‌ನಲ್ಲಿ ವಾಸ.
- H. a. forrestia - Oberholser, 1911: ಮೆರ್ಗುಯಿ ದ್ವೀಪಸಮೂಹದಲ್ಲಿ ವಾಸ (ಪಶ್ಚಿಮ ಮ್ಯಾನ್ಮಾರ್‌ನಿಂದ ಹೊರತಾದ).
- H. a. prophata - Oberholser, 1911: ಮಲಯ ಪರ್ಯಾಯದ್ವೀಪ, ಸುಮಾತ್ರಾ ಮತ್ತು ಬೊರ್ನಿಯೊದಲ್ಲಿ ಕಂಡುಬರುತ್ತವೆ.
- H. a. javana - Chasen & Kloss, 1929:ಜಾವಾ ಮತ್ತು ಬಾಲಿ (ಇಂಡೋನೇಷ್ಯಾ) ನಲ್ಲಿ ಕಂಡುಬರುತ್ತವೆ.
- H. a. penidae - Meise, 1942:ನುಸಾ ಪೆನಿಡಾದಲ್ಲಿ ವಾಸ ( ಲೆಸ್ಸರ್ ಸುಂಡಾಸ್‌ನಲ್ಲಿ ಬಾಲಿ ಬಳಿ).
- H. a. karimatensis - Chasen & Kloss, 1932: ಕರಿಮಾತಾ ದ್ವೀಪದಲ್ಲಿ (ಪಶ್ಚಿಮ ಬೋರ್ನಿಯೊದಿಂದ ಹೊರತಾದ) ಕಂಡುಬರುತ್ತವೆ.
- H. a. opisthocyanea - Oberholser, 1911: Anambas ದ್ವೀಪಗಳಲ್ಲಿ ( ದಕ್ಷಿಣ ಚೀನಾ ಸಮುದ್ರದಲ್ಲಿ ) ಕಂಡುಬರುತ್ತವೆ.
- H. a. gigantoptera - Oberholser, 1911: Natuna Besar ( ನಟುನಾ ದ್ವೀಪಗಳು, ದಕ್ಷಿಣ ಚೀನಾ ಸಮುದ್ರ) ನಲ್ಲಿ ಕಂಡುಬರುತ್ತವೆ.
- H. a. consobrina - Richmond, 1902: ಮೊದಲೆಲ್ಲಾ ಸಿಮೆಯುಲು (ವಾಯುವ್ಯ ಸುಮಾತ್ರಾದಿಂದ) ವಿನಲ್ಲಿ ವಾಸಿಸುವ ಪ್ರತ್ಯೇಕ ಜಾತಿಯೆಂದು ಪರಿಗಣಿಸಲಾಗಿತ್ತು.
- H. a. leucophila - Oberholser, 1911: ಸೈಬೆರುಟ್‌ನಲ್ಲಿ ವಾಸ. (ಪಶ್ಚಿಮ ಸುಮಾತ್ರಾದಿಂದ ಹೊರತಾದ)
- H. a. richmondi - Oberholser, 1911: ಎಂಗಾನೊ ದ್ವೀಪದಲ್ಲಿ (ನೈಋತ್ಯ ಸುಮಾತ್ರಾದಿಂದ ಹೊರತಾದ) ಕಂಡುಬರುತ್ತವೆ.
- H. a. abbotti - Richmond, 1902: ಮೊದಲೆಲ್ಲಾ ಪ್ರತ್ಯೇಕ ಜಾತಿಯೆಂದು ಪರಿಗಣಿಸಲಾಗಿತ್ತು, ಇವು ರೀಸಾಮ್ ಮತ್ತು ಬಾಬಿ ದ್ವೀಪಗಳಲ್ಲಿ ಕಂಡುಬರುತ್ತವೆ (ವಾಯುವ್ಯ ಸುಮಾತ್ರಾದಿಂದ ಹೊರತಾದ)
- H. a. symmixta - Stresemann, 1913: ಪಶ್ಚಿಮ ಮತ್ತು ಮಧ್ಯ ಲೆಸ್ಸರ್ ಸುಂಡಾಸ್‌ನಲ್ಲಿ ಕಂಡುಬರುತ್ತವೆ.
- Philippine black-naped monarch (H. a. azurea) - (Boddaert, 1783): ಬ್ಲ್ಯಾಕ್-ನೇಪ್ಡ್ ಮೊನಾರ್ಚ್ ಮತ್ತು ಫಿಲಿಪೈನ್ ಬ್ಲ್ಯಾಕ್-ನೇಪ್ಡ್ ಬ್ಲ್ಯೂ ಮೊನಾರ್ಚ್ ಎಂದೂ ಕರೆಯುತ್ತಾರೆ. ಫಿಲಿಪೈನ್ಸ್‌ನಲ್ಲಿ ಕಂಡುಬರುತ್ತವೆ ( ಕ್ಯಾಮಿಗುಯಿನ್ ಸುರ್ ದ್ವೀಪವನ್ನು ಹೊರತುಪಡಿಸಿ).
- H. a. aeria - Bangs & Peters, JL, 1927: ಮೊದಲೆಲ್ಲಾ ಪ್ರತ್ಯೇಕ ಜಾತಿಯೆಂದು ಪರಿಗಣಿಸಲಾಗಿತ್ತು, ಮರತುವಾ ದ್ವೀಪದಲ್ಲಿ (ಪೂರ್ವ ಬೋರ್ನಿಯೊದಿಂದ) ಕಂಡುಬರುತ್ತವೆ.
- H. a. catarmanensis - Rand & Rabor, 1969: ಕ್ಯಾಮಿಗುಯಿನ್ ಸುರ್ ದ್ವೀಪದಲ್ಲಿ (ದಕ್ಷಿಣ ಫಿಲಿಪೈನ್ಸ್) ಕಂಡುಬರುತ್ತವೆ.
ವಯಸ್ಕ ಕಪ್ಪು ಹಿಂಗತ್ತಿನ ರಾಜಹಕ್ಕಿ ಸುಮಾರು 16 ಸೆಂ.ಮೀ ಉದ್ದವಿದ್ದು, ಹೆಚ್ಚಿನಂಶ ಆಕಾಶ ನೀಲಿ ಬಣ್ಣದ್ದಾಗಿದ್ದು, ಕೆಳಹೊಟ್ಟೆ ಬಿಳಿಯಾಗಿರುತ್ತದೆ. ಗಂಡುಗಳ ತಲೆಯ ಹಿಂಭಾಗದಲ್ಲಿ ಕಪ್ಪು ತೇಪೆ ಇದ್ದು, ಮುಂಭಾಗದಲ್ಲಿ ಕಂಠಾಭರಣದಂತೆ ಕಿರಿದಾದ ಕಪ್ಪನೆಯ ಗೆರೆ ಇರುತ್ತದೆ. ತೆಳು ನೀಲಿಯ ಹೆಣ್ಣು ಆಲಿವ್ ಕಂದು ಮಿಶ್ರಿತ ರೆಕ್ಕೆಯಿದ್ದು, ತಲೆಯ ಹಿಂಭಾಗದ ಕಪ್ಪು ಗುರುತು ಇರುವುದಿಲ್ಲ. ಭೌಗೋಳಿಕವಾಗಿ ಬೇರ್ಪಟ್ಟ ಜೀವಸಂದಣಿಯ ವಿವಿಧ ತಳಿಗಳ ಹೊರರೂಪದ ಬಣ್ಣ ಮತ್ತು ಗಾತ್ರಗಳಲ್ಲಿ ಅಲ್ಪ ವ್ಯತ್ಯಾಸವನ್ನು ಕಾಣಬಹುದು. ಭಾರತೀಯ ಪರ್ಯಾಯ ದ್ವೀಪವು ಉಪಜಾತಿಯಾದ H. a. styani (ಸ್ಟುವರ್ಟ್ ಬೇಕರ್ [೧೦] )ಯಲ್ಲಿ ಗಂಡು ಎದ್ದು ಕಾಣುವ ಕಪ್ಪು ಗುರುತುಗಳು ಮತ್ತು ಬಿಳಿಕೆಳಹೊಟ್ಟೆ ಇರುತ್ತದೆ. ಶ್ರೀಲಂಕಾದಲ್ಲಿನ ಹಕ್ಕಿಗಳ ಗಂಡು ಹಕ್ಕಿಗೆ H. a. ceylonensis ತಲೆ ಹಿಂಭಾಗದ ಕಪ್ಪು ತೇಪೆ, ಮತ್ತು ಕಪ್ಪು ಕಂಠಾಹಾರವಿರುವುದಿಲ್ಲ, ಆಕಾಶನೀಲಿ ನೇರಳೆ ಬಣ್ಣದಂತಾಗಿರುತ್ತದೆ. ಅಂಡಮಾನ್ ದ್ವೀಪಗಳ H. a. tytleri ಕೆಳ ಹೊಟ್ಟೆ ಬೂದುನೀಲಿ. ಕಾರ್ ನಿಕೋಬಾರ್ ದ್ವೀಪದ, H. a. idiochroa, ಬಿಳಿಬೂದುಬಣ್ಣದ ಹೊಟ್ಟೆಯನ್ನು ಹೊಂದಿದೆ, ಆದರೆ ದಕ್ಷಿಣ ನಿಕೋಬಾರ್‌ನ H. a. idiochroa, ಚಿಕ್ಕದಾದ ಮತ್ತು ಸಪೂರವಾದ ಕೊಕ್ಕನ್ನು ಹೊಂದಿದೆ. [೧೧] [೧೨] ಕೊಕ್ಕುಗಳು ಸೇರುವಲ್ಲಿನ ಜಾಗ ಹಳದಿಯಿಂದ ಹಸಿರು ಬಣ್ಣದ್ದಾಗಿರುತ್ತದೆ. [೧೩]
ವಿತರಣೆ ಮತ್ತು ಆವಾಸಸ್ಥಾನ
ಬದಲಾಯಿಸಿಕಪ್ಪು ಹಿಂಗತ್ತಿನ ರಾಜಹಕ್ಕಿ ಸಂತಾನೋತ್ಪತ್ತಿಯಲ್ಲಿ ಪಾಲ್ಗೊಂಡು, ಉಷ್ಣವಲಯದ ದಕ್ಷಿಣ ಏಷ್ಯಾದಾದ್ಯಂತ, ಇರಾನ್ ಮತ್ತು ಶ್ರೀಲಂಕಾ ಪೂರ್ವದಿಂದ ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನವರೆಗೆ ಹರಡಿವೆ. ಇವು ಸಾಮಾನ್ಯವಾಗಿ ದಟ್ಟವಾದ ಕಾಡು ಮತ್ತು ಹೆಚ್ಚು ಮರಗಳಿರುವ ಆವಾಸಸ್ಥಾನಗಳಲ್ಲಿ ವಾಸಿಸುತ್ತವೆ.
ಇವುಗಳ ಚುಟುಕು ಕರೆ ಅತಿ ತೀಕ್ಷ್ಣ. [೧೧] ಭಾರತದಲ್ಲಿ ಬೇಸಿಗೆಯ ಮೇ ನಿಂದ ಜುಲೈ ವರೆಗೆ ಸಂತಾನೋತ್ಪತ್ತಿ ನಡೆಸುತ್ತವೆ. ಎರಡು ಮೂರು ರೆಂಬೆ ಸೇರುವೆಡೆ ಬಟ್ಟಲಾಕಾರದ ಗೂಡಿನಲ್ಲಿ ಎರಡರಿಂದ ಮೂರು ಮೊಟ್ಟೆಗಳನ್ನು ಇಡುತ್ತವೆ. ಜೇಡ, ಮೊಟ್ಟೆಗಳ ಹೊರಕವಚವನ್ನು ಉಪಯೋಗಿಸಿ ಗೂಡನ್ನು ಅಲಂಕರಿಸುತ್ತವೆ. [೧೪]
ನಡವಳಿಕೆ ಮತ್ತು ಪರಿಸರ ವಿಜ್ಞಾನ
ಬದಲಾಯಿಸಿಕಪ್ಪು ಹಿಂಗತ್ತಿನ ರಾಜಹಕ್ಕಿಗೆ ಚಿಕ್ಕ ಕಾಲುಗಳಿದ್ದು, ಕಳಿಂಗ (shrike) ಹಕ್ಕಿಗಳಂತೆ ನೇರವಾಗಿ ಕುಳಿತುಕೊಳ್ಳುತ್ತವೆ. ಇವು ಕೀಟಾಹಾರಿಯಾಗಿದ್ದು ಸಾಮಾನ್ಯವಾಗಿ ಹಾರಾಡುವ ನೊಣದಂತಹ ಜೀವಿಗಳನ್ನುಬೇಟೆಯಾಡುತ್ತವೆ. ಗಾಬರಿಯಾದಾಗ ಅಥವಾ ಎಚ್ಚತ್ತುಕೊಂಡಾಗ, ಹಿಂಗತ್ತಿನ ಗರಿಗಳು ಮೊನಚಾಗಿ ಜುಟ್ಟಿನಂತಾಗುತ್ತದೆ. [೧೫] ಇವುಗಳು ಇತರೆ ಮಿಶ್ರ-ಜಾತಿಗಳ ಆಹಾರವನ್ನರಸುವ ಗುಂಪುಗಳ ಜೊತೆ ಸೇರುತ್ತವೆ, ಪಶ್ಚಿಮ ಘಟ್ಟಗಳಲ್ಲಿನ ಅಂತಹ ಹಿಂಡುಗಳಲ್ಲಿ ಅತ್ಯಂತ ಮಹತ್ವದ ಸದಸ್ಯರೆನ್ನಬಹುದು. [೧೬] ಮತ್ತು ಅರಣ್ಯದ ಹಸುರು ಮೇಲ್ಛಾವಣಿಯ ಕೆಳಭಾಗದಲ್ಲಿ ಅತ್ಯಂತ ಸಕ್ರಿಯವಾಗಿ ಆಹಾರವನ್ನರಸುತ್ತವೆ. [೧೭] ಶ್ರೀಲಂಕಾದಲ್ಲಿ ನಡೆಸಿದ ಅಧ್ಯಯನವೊಂದು, ಮನುಷ್ಯನ ಅಡಚಣೆ ಹೆಚ್ಚಿರುವ ಕಾಡಿನಂಚಿನಿಂದ ಸುಮಾರು 75 ಮೀಟರ್ ಗಳಷ್ಟು ಒಳಕ್ಕೆ ರಾಜಹಕ್ಕಿಗಳ ಚಟುವಟಿಕೆ ಹಿಮ್ಮೆಟ್ಟಿರುವುದು ತಿಳಿದುಬಂದಿದೆ.[೧೮]
ಇವುಗಳು ಸ್ಥಳೀಯ ನಿವಾಸಿಗಳಾದರೂ, ಕೆಲವೆಡೆ ಋತುಮಾನಕ್ಕನುಗುಣವಾಗಿ ವಲಸೆ ಹೋಗುತ್ತವೆ. [೧೯] ಭಾರತದಲ್ಲಿ ಸಂತಾನವೃದ್ಧಿ ಅವಧಿ - ಮಾರ್ಚ್‌ನಿಂದ ಜುಲೈ. ಎರಡು ಮೂರು ರೆಂಬೆ ಸೇರುವೆಡೆ ಬಟ್ಟಲಾಕಾರದ ಗೂಡಿನಲ್ಲಿ ಸಂತಾನ. ಗೂಡಿನ ಒಳಭಾಗ ಜೇಡರ ಬಲೆಯ ನೂಲು ಮತ್ತು ಶಿಲೀಂಧ್ರಗಳ ತಂತುಗಳಿಂದ ಮಾಡಲ್ಪಟ್ಟಿರುತ್ತದೆ, ಗೂಡಿನಲ್ಲಿ ಉಪಯೋಗಿಸಿದ ಶಿಲೀಂಧ್ರ, ಪ್ರತಿಜೀವಕಗಳನ್ನು ಉತ್ಪಾದಿಸಲು ಹೆಸರುವಾಸಿಯಾದ ಮರಸ್ಮಿಯಸ್ ಕುಲಕ್ಕೆ ಸೇರಿದವು. ಈ ಶಿಲೀಂಧ್ರ ಮರಿಗಳನ್ನು ಸೋಂಕಿನಿಂದ ರಕ್ಷಿಸುವ ಮೂಲಕ ಪಕ್ಷಿಗಳಿಗೆ ಪ್ರಯೋಜನವಾಗಬಹುದು. [೨೦] ಹೆಣ್ಣು ಗೂಡು ನಿರ್ಮಿಸುವಾಗ ಗಂಡು ಕಾವಲು ಕಾಯುತ್ತದೆ. ಸಾಮಾನ್ಯವಾಗಿ ಮೂರು ಮೊಟ್ಟೆಗಳಿಟ್ಟು, ಹೆಣ್ಣು ಗಂಡುಗಳೆರಡೂ ಕಾವುಕೊಡುತ್ತವೆ ಹಾಗೂ ಮರಿಗಳಿಗೆ ಆಹಾರವನ್ನು ಒದಗಿಸುತ್ತವೆ. ಕಾವು ಕೊಡಲು ಆರಂಭಿಸಿದ ಸುಮಾರು 12 ದಿನಗಳ ನಂತರ ಮೊಟ್ಟೆಯಿಂದ ಮರಿ ಹೊರಬರುತ್ತದೆ. [೧೫]
ನೆಫಿಲಾ ಮ್ಯಾಕುಲಾಟಾದಂತಹ ದೊಡ್ಡ ಜೇಡಗಳು ನಿರ್ಮಿಸಿದ ಬಲೆಗಳಲ್ಲಿ ಈ ಹಕ್ಕಿ ಸಿಕ್ಕಿಬೀಳುತ್ತವೆ ಎಂದು ತಿಳಿದುಬಂದಿದೆ. [೨೧] ಕಾಂಬೋಡಿಯಾದಲ್ಲಿ ಕಪ್ಪು ಹಿಂಗತ್ತಿನ ರಾಜಹಕ್ಕಿಯಲ್ಲಿ ಆಸ್ಟ್ರೋವೈರಸ್ ಪತ್ತೆಯಾಗಿದೆ, ಈ ಮೊದಲು ಪ್ಯಾಸರೀನ್ ಗುಂಪಿನ ಹಕ್ಕಿಗಳಲ್ಲಿ ಆಸ್ಟ್ರೋವೈರಸ್ ಇರುವಿನ ಬಗ್ಗೆ ದಾಖಲಾತಿಯಿಲ್ಲ. [೨೨] ವಿಯೆಟ್ನಾಂನ ಕಪ್ಪು ಹಿಂಗತ್ತಿನ ರಾಜಹಕ್ಕಿಯೊಂದರಲ್ಲಿ , ಗರಿಗಳ ಹೇನು - ಪ್ರೊಟೆರೊಥ್ರಿಕ್ಸ್ ಹೈಪೋಥೈಮಿಸ್ (Proterothrix hypothymis, Pterodectinae: Protophyllodidae) ಕಂಡು ಬಂದಿದೆ. [೨೩]
ಉಲ್ಲೇಖಗಳು
ಬದಲಾಯಿಸಿ- ↑ Buffon, Georges-Louis Leclerc de (1779). "Le petit azur, gobe-mouche bleu des Philippines". Histoire Naturelle des Oiseaux (in ಫ್ರೆಂಚ್). Vol. 8. Paris: De L'Imprimerie Royale. p. 329.
- ↑ Buffon, Georges-Louis Leclerc de; Martinet, François-Nicolas; Daubenton, Edme-Louis; Daubenton, Louis-Jean-Marie (1765–1783). "Gobe-mouche bleu, des Philippines". Planches Enluminées D'Histoire Naturelle. Vol. 7. Paris: De L'Imprimerie Royale. Plate 666 Fig. 1.
- ↑ Boddaert, Pieter (1783). Table des planches enluminéez d'histoire naturelle de M. D'Aubenton : avec les denominations de M.M. de Buffon, Brisson, Edwards, Linnaeus et Latham, precedé d'une notice des principaux ouvrages zoologiques enluminés (in ಫ್ರೆಂಚ್). Utrecht. p. 41, Number 666 Fig. 1.
- ↑ Peters, James L. (1939). "Collections from the Philippine Islands: Birds". Bulletin of the Museum of Comparative Zoology at Harvard College. 86: 74–228 [112].
- ↑ Mayr, Ernst; Cottrell, G. William, eds. (1986). Check-list of Birds of the World. Vol. 11. Cambridge, Massachusetts: Museum of Comparative Zoology. p. 476.
- ↑ Boie, Friedrich (1826). "Generalübersicht". Isis von Oken (in ಜರ್ಮನ್). Col 973.
- ↑ ೭.೦ ೭.೧ Gill, Frank; Donsker, David, eds. (2019). "Monarchs". World Bird List Version 9.2. International Ornithologists' Union. Retrieved 24 August 2019.
- ↑ Jobling, James A. (2010). The Helm Dictionary of Scientific Bird Names. London: Christopher Helm. pp. 64, 200. ISBN 978-1-4081-2501-4.
- ↑ Oberholser, Harry C (1911). "A monograph of the Flycatcher genera Hypothymis and Cyanonympha No. 1803". Proc. U. S. Natl. Mus. 39 (1803): 585–615. doi:10.5479/si.00963801.1803.585.
- ↑ Baker, E.C. Stuart (1923). A Hand-list of Genera and Species of Birds of the Indian Empire. Bombay Natural History Society.
- ↑ ೧೧.೦ ೧೧.೧ Rasmussen, Pamela C.; Anderton, John C. (2012). Birds of South Asia. The Ripley Guide. Vol. 2: Attributes and Status (2nd ed.). Washington D.C. and Barcelona: Smithsonian National Museum of Natural History and Lynx Edicions. p. 333. ISBN 978-84-96553-87-3.
- ↑ Oates, E.W. (1890). Fauna of British India. Birds. Volume 2. Taylor and Francis, London. pp. 49–50.
- ↑ Ripley, S.D. (1944). "The Bird Fauna of the West Sumatra Islands". Bulletin of the Museum of Comparative Zoology. 94 (8): 307–430.
- ↑ Hume, AO (1900). The nests and eggs of Indian birds. Volume 2. R H Porter, London. pp. 27–30.
- ↑ ೧೫.೦ ೧೫.೧ Ali, S; S D Ripley (1996). Handbook of the Birds of India and Pakistan. Volume 7 (2nd ed.). New Delhi: Oxford University Press. pp. 223–227.
- ↑ Sridhar, Hari; Jordán, Ferenc; Shanker, Kartik (2013). "Species importance in a heterospecific foraging association network" (PDF). Oikos. 122 (9): 1325–1334. doi:10.1111/j.1600-0706.2013.00101.x. ISSN 1600-0706.
- ↑ Kotagama, SW; Goodale, E (2004). "The composition and spatial organisation of mixedspecies flocks in a Sri Lankan rainforest" (PDF). Forktail. 20: 63–70.[ಶಾಶ್ವತವಾಗಿ ಮಡಿದ ಕೊಂಡಿ]
- ↑ Alwis, Nilusha S.; Perera, Priyan; Dayawansa, Nihal P. (2016). "Response of tropical avifauna to visitor recreational disturbances: a case study from the Sinharaja World Heritage Forest, Sri Lanka". Avian Research. 7: 15. doi:10.1186/s40657-016-0050-5. ISSN 2053-7166.
{{cite journal}}
: CS1 maint: unflagged free DOI (link) - ↑ Whistler, Hugh (1949). Popular Handbook of Indian Birds (4th ed.). Gurney and Jackson. pp. 133–134.
- ↑ Aubrecht, Gerhard; Huber, Werner; Weissenhofer, Anton (2013). "Coincidence or benefit? The use of Marasmius (horse-hair fungus) filaments in bird nests". Avian Biology Research. 6 (1): 26–30. doi:10.3184/175815512x13531739538638.
- ↑ Andheria,Anish P (1999). "Blacknaped Blue Flycatcher Hypothymis azurea trapped in the web of the Giant Wood Spider Nephila maculata". Journal of the Bombay Natural History Society. 96 (1): 145–146.
- ↑ Mendenhall, Ian H.; Yaung, Katherine Nay; Joyner, Priscilla H.; Keatts, Lucy; Borthwick, Sophie; Neves, Erica Sena; San, Sorn; Gilbert, Martin; Smith, Gavin J.D. (2015). "Detection of a novel astrovirus from a black-naped monarch (Hypothymis azurea) in Cambodia". Virology Journal. 12 (1): 182. doi:10.1186/s12985-015-0413-2. ISSN 1743-422X. PMC 4634723.
{{cite journal}}
: CS1 maint: unflagged free DOI (link) - ↑ Mironov, S. V.; Tostenkov, O. O. (2013). "Three new feather mites of the subfamily Pterodectinae (Acari: Proctophyllodidae) from passerines (Aves:Passeriformes) in Vietnam". Proceedings of the Zoological Institute RAS. 317 (1): 11–29.
ಬಾಹ್ಯ ಕೊಂಡಿಗಳು
ಬದಲಾಯಿಸಿ- Photos and videos
- Hua-Hsiang Chen (2009). "A Preliminary Study on Nest Site Selection and Nest Success of the Black-naped Blue Monarch (Hypothymis azurea) in Linnei Township and Douliu hilly area, Yunlin County". Thesis. Taiwan. (in Chinese)