ಕನ್ನಡ ನೆಲದಲ್ಲಿ ಗಾಂಧಿ

ಕನ್ನಡ ನೆಲದಲ್ಲಿ ಗಾಂಧೀಜಿ

ಪ್ರಥಮ ಕರ್ನಾಟಕ ಭೇಟಿ ಸಂಪಾದಿಸಿ

ಗಾಂಧೀಜಿಯವರ ಪ್ರಥಮ ಕರ್ನಾಟಕ ಭೇಟಿ ೧೯೧೫ರ ಮೇ ೧೫ರಂದು ಬೆಂಗಳೂರಿಗೆ.ಸಾಹಿತಿ ವಿಧ್ವಾಂಸರಾದ ಡಿ.ವಿ.ಗುಂಡಪ್ಪನವರ ಆಗ್ರಹದೊಂದಿಗೆ ತಮ್ಮ ಪತ್ನಿ ಕಸ್ತೂರಬಾರೊಂದಿಗೆ ಕಾಥೇವಾಡಿ ರೈತನ ವೇಶದಲ್ಲಿ.ಅವರ ಪತ್ನಿ ಕೆಂಪಂಚಿನ ಬಿಳಿ ಸೀರೆಯೊಂದಿಗೆ ಬೆಂಗಳೂರುರೈಲು ನಿಲ್ದಾಣದಲ್ಲಿ ಬಂದಿಳಿದರು.ಅವರ ಸಾಮಾನುಗಳೆಂದರೆ ಒಂದು ಕೈಗಂಟು ಮತ್ತು ಕುಡಿಯುವ ನೀರಿನ ಹೂಜಿ.
ಅವರಿಗಾಗಿ ಕುದುರೆ ಸಾರೋಟು ಸಿದ್ಧ ವಾಗಿದ್ದು ವಿಧ್ಯಾರ್ಥಿಗಳೆಲ್ಲ 'ಕುದುರೆಗಳನ್ನು ಬಿಚ್ಚಿ,ನಾವೇ ಎಳೆಯುತ್ತೇವೆ,ಎಂದರು.'ನರವಾಹನ ಬೇಡ'ಎಂದ ಅವರು,ಕಾಲ್ನಡಿಗೆಯಲ್ಲಿ ತಮ್ಮ ಬಿಡಾರವಾದ ಈಗಿನ ಆನಂದರವ್ ಸರ್ಕಲ್ಬಳಿಯ ಶೇಷಾದ್ರಿ ರಸ್ತೆಯಲ್ಲಿ ಜಿಲ್ಲಾ ನ್ಯಾಯಾಧೀಶ ಬಿ.ಎಸ್.ಕೃಷ್ಣಸ್ವಾಮಿ ಕಟ್ಟಿಸಿದ ನೂತನ ಗೃಹದತ್ತ ಸಾಗಿದರು.
ಅವರ ಆಹಾರ ನೆಲಗಡಲೆ ಬೀಜ ಮತ್ತು ಪಪ್ಪಾಯ ಹಣ್ಣು.ಅವರ ಮೊದಲ ಕಾರ್ಯಕ್ರಮ ಈಗಿನ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಮೈದಾನವಾಗಿತ್ತು.ಆರಂಭದಲ್ಲಿ ಗೋಖಲೆ ಭಾವಚಿತ್ರ ಅನಾವರಣ ಮಾಡಿ ತಮಗಿತ್ತ ಬಿನ್ನವತ್ತಲಳೆಗೆ ಆಂಗ್ಲ ಭಾ‌‍‍‍‍‍‍‍‍ಷೆಯಲ್ಲಿ ಉತ್ತರಿಸಿದರು.ನಂತರ ಲಾಲ್`ಬಾಗಿನ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು.

ಬೆಳಗಾವಿಯಲ್ಲಿ ಎರಡನೆಯ ಭೇಟಿ ಸಂಪಾದಿಸಿ

ಗಾಂಧೀಜಿಯವರ ಎರಡನೆಯ ಭೇಟಿ ೧೯೧೫ರ ಏಪ್ರಿಲ್ ೧೬ರಂದು ಬೆಳಗಾವಿಗೆ.ಮುಂಬಯಿ ಪ್ರಾಂತೀಯ ಪರಿಷತ್ತು

ಸಮಾವೇಶದಲ್ಲಿ ಭಾಗವಹಿಸಲು ಮಗ ರಾಮದಾಸ ಮತ್ತು ಸರ್ವೋದಯ ಧುರೀಣ ಕಾಕಾ ಕಾಲೇಲ್ಕರ್ ರೊಂದಿಗೆ ಬಂದಿದ್ದರು.ಹಿಂದಿ ಭಾಷೆಯಲ್ಲಿ ಮಾತನಾಡಿದರು.

ಮೂರನೆಯ ಭೇಟಿ ==
ಮೂರನೆಯ ಭೇಟಿ ೧೯೧೮ಮೇ ೫ರಂದು ಮುಂಬಯಿ ಪ್ರಾಂತದ ರಾಜಕೀಯ ಪರಿಷತ್ತಿನಲ್ಲಿ ಭಾಗವಹಿಸಲು ಪಾಣಪುರಕ್ಕೆ ಬಂದಿದ್ದರು.(ವಿವರ ಸೇರಿಸಬಹುದು)

ನಾಲ್ಕನೆಯ ಭೇಟಿ ಸಂಪಾದಿಸಿ

ನಾಲ್ಕನೆಯ ಭೇಟಿ ೧೯೨೦ ಆಗಸ್ಟ್ ೨೦ರಂದು ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿಗೆ ಬಂದರು.ಆಗಸ್ಟ್ ೧೯ರಂದುರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿಗೆ ಬಂದರು.ಆಗಸ್ಟ್ ೧೯ರಂದು ಅಸಹಕಾರ ಆಂದೋಲನ ಮತ್ತು ಅಸ್ಪ್ರಶ್ಯತಾ ನಿವಾರಣಾ ಸಂದೇಶವನ್ನು ಸಾರಲು ಮಂಗಳೂರು,ಕಾಸರಗೋಡಿಗೆ ಭೇಟಿ ಕೊಟ್ಟರು.ಅವರ ಜೊತೆ ಶೌಕತ್ ಅಲಿ ಇದ್ದರು.

ಐದನೆಯ ಭೇಟಿ ಸಂಪಾದಿಸಿ

ಐದನೆಯ ಭೇಟಿ ೧೯೨೦ ನವೆಂಬರ್ ೨೦ರಂದು ತಮ್ಮ ತತ್ವಗಳ ಸಂದೇಶ ಬೀರಲು ನಿಪ್ಪಣಿ,ಚಿಕ್ಕೋಡಿ,ಧಾರವಾಡ,

ಹುಬ್ಬಳ್ಳಿ,ಗದಗ ಮತ್ತು ಬೆಳಗಾವಿಗಳನ್ನು ಸಂದರ್ಶಿಸಿದ್ದರು.

ಆರನೆಯ ಭೇಟಿ ಸಂಪಾದಿಸಿ

ಆರನೆಯ ಭೇಟಿ ೧೯೨೧ ಮೇ ೨೮,ವಿಜಾಪುರಕ್ಕೆ ಭೇಟಿ ನೀಡಿ ಮಹಿಳೆಯರ ಸಭೆಯಲ್ಲಿ ಪಾಲುಗೊನಂಡರು ಮುಂದೆ ಬಾಗಲಕೋಟೆ ಸೊಲ್ಲಾಪುರಗಳಿಗೆ ಭೇಟಿ ನೀಡಿದ್ದರು.

ಏಳನೆಯ ಭೇಟಿ ಸಂಪಾದಿಸಿ

ಏಳನೆಯ ಭೇಟಿ ಅಕ್ಟೋಬರ್ ೧,೧೯೨೨ರಂದು ಆಂಧ್ರದ ತಿರುಪತಿ ಮೂಲಕ ಬಳ್ಳಾರಿಗೆ ಭೇಟಿ ಕೊಟ್ಟರು.

ಎಂಟನೆಯ ಭೇಟಿ ಸಂಪಾದಿಸಿ

   ಎಂಟನೆಯ ಭೇಟಿ  
ಎಂಟನೆಯ ಭೇಟಿ ಅತ್ಯಂತ ಮಹತ್ವದ್ದು.೧೯೨೪ರಲ್ಲಿ ಬೆಳಗಾವಿಯ ೨೯ನೇ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿ ಅವರು ಆಗಮಿಸಿದ್ದರು.ಡಿಸೆಂಬರ್ ನಲ್ಲಿ ನಡೆದ ಸಮ್ಮೇಳನದಲ್ಲಿ ವೇದಿಕೆಯಿಂದ ಇಳಿದು ಸಾರ್ವಜನಿಕರ ಎದುರು ನಿಂತು ಭಾಷಣ ಮಾಡಿದರು.ಹತ್ತು ನಿಮಿಷ ಹಿಂದಿಯಲ್ಲಿ ಭಾಷಣ. ಅದಿವೇಶನದ ನೆನಪಿಗಾಗಿ ಬೆಳಕವಾಡಿಯಲ್ಲಿ ಕಟ್ಟಿಸಿದ ಪಂಪಾ ಸರೋವರದ ಅಡಿಗಲ್ಲನ್ನು ಇಟ್ಟರು.

ಒಂಭತ್ತನೆಯ ಭೇಟಿ ಸಂಪಾದಿಸಿ

ಒಂಭತ್ತನೆಯ ಭೇಟಿ ಜುಲೈ ೧೯೨೭ ನಾಲ್ಕು ತಿಂಗಳ ಕಾಲ ಕರ್ನಾಟಕದಲ್ಲಿದ್ದರು.ರಕ್ತದೊತ್ತಡ ಹೆಚ್ಛಾದ್ದರಿಂದ ನಂದಿ ಬೆಟ್ಟದಲ್ಲಿ ವಿಶ್ರಾಂತಿ ಪಡೆದರು.ಬೆಂಗಳೂರಿಗೆ ತೆರಳಿ ಅಲ್ಲಿಂದ ರಾಜ್ಯದ ಪ್ರವಾಸ ಆರಂಭಿಸಿದರು. ಮೈಸೂರುಪ್ರವಾಸದಲ್ಲಿ ಕಲಾವಿದ ವೆಂಕಟಪ್ಪನವರ ಕಲಾ ಚಿತ್ರಗಳನ್ನು ನೋಡಿದರು.ಕನಕಪುರಕ್ಕೆ ಭೇಟಿ ಕೊಟ್ಟರು. ನಂತರದ ಪ್ರವಾಸದಲ್ಲಿ ಹಾಸನ, ಶಿವಮೊಗ್ಗ, ಚಿತ್ರದುರ್ಗಗಳಿಗೂ ಭೇಟಿ ನೀಡಿದರು.
ಆಗಸ್ಟ್ ೧೨,೧೯೨೭ರಂದು ದಾವಣಗೆರೆಗೆ ಬಂದು ಖಾದಿ ಪ್ರಚಾರ ಆಂದೋಲನ ನಡೆಸಿ ರಾತ್ರಿ ಅಲ್ಲಿ ತಂಗಿದ್ದು, ಆಗಸ್ಟ್ ೧೩ ರಂದು ಹರಿಹರಕ್ಕೆ ಹೋಗಿ ಹರಿಹರೇಶ್ವರ ದೇವಸ್ತಾನದ ಮುಂದೆ ನೇತಾರನನ್ನು ಕುರಿತು ಭಾಷಣ ಮಾಡಿ ಮಧ್ಯಾಹ್ನ ಹೊನ್ನಾಳಿಗೆ ಬಂದರು.
ಖಾದಿ ಪ್ರಚಾರ (ಪ್ರವಾಸ) ಮಾಡುವ ಉದ್ದೇಶದಿಂದ ಹೊರಟ ಅವರು ಖಾದಿ ಬಟ್ಟೆ - ಅದನ್ನು ತಯಾರಿಸುವ ವಿಧಾನದ ಬಗ್ಗೆ ಹೇಳಿದರು.ಹೊನ್ನಾಳಿಯಲ್ಲಿ ತುಂಗಭದ್ರಾ ನದಿಯ ದಡದಲ್ಲಿ ೧೮೬೨ರಲ್ಲಿ ಬ್ರಿಟಿಷರು ಕಟ್ಟಿಸಿರುವ ಪ್ರವಾಸ ಮಂದಿರದ ಕಟ್ಟಡದಲ್ಲಿ ಕೆಲಕಾಲ ತಂಗಿದ್ದರು.ಹರಿಯುತ್ತಿರುವ ತುಂಗಾಭದ್ರ ನದಿಯ ಶುಭ್ರತೆ ಮತ್ತು ಹಸಿರಿನಿಂದ ಕೂಡಿದ ವಾತಾವರಣ ಕಂಡು 'ನನಗೆ ಸಾಬರಮತಿ ಆಶ್ರಮ ನೆನಪಾಗುತ್ತಿದೆ'ಎಂದಿದ್ದರು.ಅಲ್ಲಿಯ ನವಾಬ್`ಷೆರ್ಖಾನ್ ಉರ್ದುವಿನಲ್ಲಿ ಬಿನ್ನವತ್ತಳೆ ಓದಿ ,ಗಾಂಧೀಜಿ ಹಿಂದಿ ಭಾಷೆಯಲ್ಲಿ ಮಾತನಾಡಿದನ್ನು ಕನ್ನಡ ಭಾಷೆಗೆ ಭಾಷಾಂತರಿಸಿದ್ದರು.ಗಾಂಧೀಜಿ ಜೊತೆಯಲ್ಲಿ ಕಸ್ತೂರಬಾ,ಮಹಾದೇವಿ ದೇಸಾಯಿ,ರಾಜಾಜಿ,ದೇವದಾಸ ಗಾಂಧಿ, ರಾಜಾಜಿಯವರ ಮಗಳು ಲಕ್ಷ್ಮೀ ಗಂಗಾಧರ ದೇಶಪಾಂಡೆ ಇದ್ದರು.ನಂತರ ಸಾಗರಕ್ಕೆ ತೆರಳಿದರು. ಚಿಕ್ಕಮಗಳೂರು ಪ್ರವಾಸದ ನಂತರ ಆಗಸ್ಟ್ ೨೦ರಂದು ಬೇಲೂರಿನ ದೇವಾಲಯಕ್ಕೆ ಗಾಂಧಿ ಪರಿವಾರ ಭೇಟಿ ನೀಡಿತು.

ನೋಡಿ ಸಂಪಾದಿಸಿ

• • • •

ಆಧಾರ ಸಂಪಾದಿಸಿ

  • (ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸ)??