ಕನ್ನಡಿ ಕಾಯಕದ ರೇಮವ್ವ ಸಾಮಾನ್ಯ ಜನವರ್ಗದಿಂದ ಬಂದವಳು. ವೀರಶೈವಧರ್ಮದಲ್ಲಿ ಇವಳಿಗಿದ್ದ ನಿಷ್ಠೆ, ಶ್ರದ್ಧೆ, ನೇರ ನಡೆ-ನುಡಿ, ನಿಷ್ಠುರ ಮನೋ ಭಾವ ಅವಳ ವಚನಗಳಲ್ಲಿ ವ್ಯಕ್ತಗೊಂಡಿವೆ. ಕೆಲವೆಡೆ ಈಕೆ ಅಹಂಕಾರಿಗಳ ವರ್ತನೆಯ ವಿಡಂಬನೆ ಮಾಡಿದ್ದಾಳೆ. ಇವಳ ವಚನಗಳ ಅಂಕಿತ "ನಿರಂಗಲಿಂಗ".

ಕನ್ನಡಿ ಕಾಯಕದ ರೇಮವ್ವ
ಜನನ1160
ಅಂಕಿತನಾಮನಿರಂಗಲಿಂಗ


ವಚನಗಳ ವೈಶಿಷ್ಟ್ಯಸಂಪಾದಿಸಿ

ಗುರು, ಲಿ<ಗ, ಜಂಗಮ, ಸದಾಚಾರಗಳ ಬಗ್ಗೆ ಅಸೀಮನಿಷ್ಠೆ ಹಾಗೂ ಶಿವಭಕ್ತರಲ್ಲದವರ ಶಿವನಿಷ್ಠೆಯ ಬಗ್ಗೆ ಅನುಮಾನಿಸುವವರನ್ನು ಖಂಡಿಸಿದ್ದಾಳೆ. ಈ ಶರಣೆವಚನಗಳಲ್ಲಿ ತಾವು ಹಿಡಿದ ಹೊಸಧರ್ಮ, ಆಚರಣೆ, ಅಚಲಶ್ರದ್ಧೆ, ಒಲವು, ಅಭಿಮಾನ, ಅದನ್ನು ಮೀರುವವರ ಬಗ್ಗೆ ಕ್ರೋಧ, ಅಸಹನೆ, ಪ್ರತಿರೋಧಗಳು ತೀಕ್ಷ್ಣವಾಗಿ ಹೊರಹೊಮ್ಮಿವೆ. ಈಕೆಯ ಒಂದೇ ಒಂದು ವಚನ ಲಭ್ಯವಾಗಿದೆ.

ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ ?
ಲಿಂಗ-ಜಂಗಮದ ಪ್ರಸಾದಕ್ಕೆ ತಪ್ಪದಲ್ಲಿ ಕೊಲ್ಲಬಾರದೆ ?
ಕೊಂದಡೆ ಮುಕ್ತಿಯಿಲ್ಲವೆಂಬುವರ ಬಾಯಲ್ಲಿ
ಪಡಿಹಾರನ ಪಾದರಕ್ಷೆಯನಿಕ್ಕುವೆ
ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ!
ಎತ್ತಲಾರದಡೆ ಸತ್ತ ಕುನ್ನಿ ನಾಯ ಬಾಲವ
ನಾಲಗೆಯ ಮುರುಟಿರೊ ಸದ್ಗುರುಸಂಗ ನಿರಂಗಲಿಂಗದಲ್ಲಿ