ಒಂದು ಸಾಹಿತ್ಯಿಕ ಕೃತಿ, ಚಲನಚಿತ್ರ, ಅಥವಾ ಇತರ ಕಥೆಯಲ್ಲಿ, ಕಥಾವಸ್ತು ಎಂದರೆ ಘಟನೆಗಳ ಅನುಕ್ರಮ, ಯಾವ ರೀತಿಯಲ್ಲಿ ಎಂದರೆ ಪ್ರತಿ ಘಟನೆಯು ಮುಂದಿನದರ ಮೇಲೆ ಕಾರಣ ಮತ್ತು ಪರಿಣಾಮ ತತ್ತ್ವದ ಮೂಲಕ ಪ್ರಭಾವ ಬೀರುತ್ತದೆ. ಒಂದು ಕಥಾವಸ್ತುವಿನ ಕಾರಣ ಸಂಬಂಧಿ ಘಟನೆಗಳು "ಮತ್ತು ಹಾಗಾಗಿ" ಎಂಬ ಸಂಬಂಧಕದಿಂದ ಜೋಡಣೆಗೊಂಡಿರುವ ಘಟನೆಗಳ ಸರಣಿಯೆಂದು ಭಾವಿಸಬಹುದು. ಕಥಾವಸ್ತುಗಳು ಸರಳ ರಚನೆಗಳಿಂದ (ಉದಾಹರಣೆಗೆ ಸಾಂಪ್ರದಾಯಿಕ ಹಾಡುಕಥೆಯಲ್ಲಿರುವಂತೆ) ಹಿಡಿದು ಕೆಲವೊಮ್ಮೆ ಉಪಕಥಾವಸ್ತು ಅಥವಾ ಜಟಿಲ ಸನ್ನಿವೇಶ ಎಂದು ಕರೆಯಲ್ಪಡುವ ಸಂಕೀರ್ಣವಾದ ಪರಸ್ಪರ ಹೆಣೆದುಕೊಂಡಿರುವ ರಚನೆಗಳವರೆಗೆ ಬದಲಾಗಬಹುದು. ಆನ್ಸೆನ್ ಡಿಬೆಲ್‍ರ ಪ್ರಕಾರ, ನಿರೂಪಣೆಯ ಅರ್ಥದಲ್ಲಿ, ಈ ಪದವು ಕಥೆಯೊಳಗೆ ಪರಿಣಾಮಗಳನ್ನು ಹೊಂದಿರುವ ಪ್ರಮುಖ ಅಂಶಗಳ ಮೇಲೆ ಒತ್ತು ನೀಡುತ್ತದೆ.[]

ಟಿಪ್ಪಣಿಗಳು

ಬದಲಾಯಿಸಿ
  1. Ansen Dibell, Ph.D. (1999-07-15). Plot. Elements of Fiction Writing. Writer's Digest Books. pp. 5 f. ISBN 978-0-89879-946-0. Plot is built of significant events in a given story – significant because they have important consequences. Taking a shower isn't necessarily plot... Let's call them incidents ... Plot is the things characters do, feel, think or say, that make a difference to what comes afterward.