ಕಥಾಕಾಲಕ್ಷೇಪ
ಕಥಾಕಾಲಕ್ಷೇಪ : ಯಾವುದಾದರೊಂದು ಕಥೆಯನ್ನು ಸಂಗೀತಾಬಿsನಯ ಉಪಕಥೆ; ಗಾದೆ ಮುಂತಾದುವುಗಳ ಮಿಶ್ರಣದಿಂದ ರಸವತ್ತಾಗಿ ತಿಳಿಯುತ್ತ ಕಾಲವನ್ನು ಕಳೆಯುವುದು ಕಥಾಕಾಲಕ್ಷೇಪ. ಈ ಪದ್ಧತಿ ಪ್ರಾರಂಭವಾದದ್ದು ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಿ ಈ ಕಲೆ ಬಳಕೆಗೆ ಬರುವ ಮೊದಲು ಇಲ್ಲಿ ಪುರಾಣ ಪಠಣ, ಭಜನೆ ಮುಂತಾದುವುಗಳು ದೇವಾಲಯಗಳಲ್ಲಿ ನಡೆಯುತ್ತಿದ್ದುವು. ಇಲ್ಲಿ ಕೆಲವು ಕಾಲಾನಂತರ ಪುರಾಣ ಪಠಣವೇ ಕಥಾಕಾಲಕ್ಷೇಪವಾಗಿ ಪರಿವರ್ತಿತವಾಯಿತು.
ಕಥಾಕಾಲಕ್ಷೇಪವನ್ನು ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಿಗೆ ಪ್ರಚುರಪಡಿಸಿದವರೆಂದರೆ ಮಹಾರಾಷ್ಟ್ರದ ಅನಂತಪದ್ಮನಾಭÀ ಗೋಸ್ವಾಮಿ. ಇವರ ಶಾರೀರಕ್ಕೆ ಮಾರುಹೋದ ಜನ ಇವರನ್ನು ಕೋಕಿಲಕಂಠ ಮೇರು ಸ್ವಾಮಿ ಎಂದೂ ಕರೆಯುತ್ತಿದ್ದರು. ಈ ಕಲೆಗೆ ಸರಿಯಾದ ಸ್ವರೂಪವನ್ನು ಕಲ್ಪಿಸಿ ಜನಪ್ರಿಯತೆಯೊಂದಿಗೆ ತುಂಬುಕಲೆಯಾಗಿ ಮಾರ್ಪಡಿಸಿದವರು ತಂಜಾವೂರಿನ ಕೃಷ್ಣ ಭಾಗವತರು ಮತ್ತು ಪಂಚಾ ಪಕೇಶ ಶಾಸ್ತ್ರಿಗಳು. ಇವರು ತೋರಿರುವ ಮಾರ್ಗವನ್ನೇ ಕರ್ನಾಟಕದ ಇಂದಿನ ಹರಿಕಥಾ ವಿದ್ವಾಂಸರೂ ಅನುಸರಿಸುತ್ತಿರುವುದು ಕಂಡುಬಂದಿದೆ.
ಕಥಾಕಾಲಕ್ಷೇಪದ ಮುಖ್ಯೋದ್ದೇಶ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋದಿsಸುವುದು. ಅಲ್ಲದೆ ಇದು ಮುಕ್ತಿಗೆ ಒಂದು ಸುಲಭಸಾಧ್ಯವಾದ ಮಾರ್ಗವೆನಿಸಿದೆ. ಇದರಲ್ಲಿ ಸಂಗೀತವು ಕಥೆಯ ನಿರೂಪಣೆಗಾಗಿ ರಾಗ ತಾಳಮೇಳ ಹಾಗೂ ಉಪಕಥೆಗಳೊಡನೆ ಹಿತಮಿತವಾಗಿ ಸಮ್ಮಿಲನಗೊಂಡು ವಿಶಿಷ್ಟವಾಗಿರುತ್ತದೆ. ಜನರಲ್ಲಿ ಧರ್ಮನೀತಿಗಳನ್ನು ಸೌಂದರ್ಯ ಕಲೋಪಾಸನೆಯನ್ನೂ ಜಾಗೃತಗೊಳಿಸಿದ ಈ ಕಲೆ ಸಂಗೀತಕ್ಕಿಂತ ಹೆಚ್ಚು ಜನಪ್ರಿಯತೆ ಗಳಿಸಿದೆ. ಅನಂತರಾಮ ಭಾಗವತರು, ಮುತ್ತಯ್ಯ ಭಾಗವತರು, ವೇದಾಂತ ಭಾಗವತರು ಮೊದಲಾದ ಅನೇಕ ಸಂಗೀತ ವಿದ್ವಾಂಸರು ಕಥಾಕಾಲಾಕ್ಷೇಪ ಕಲೆಯನ್ನು ಕಲಿತು ತಮ್ಮ ಸಂಗೀತದ ವಿದ್ವತ್ತನ್ನು ಇದರ ಮೂಲಕ ಪ್ರದರ್ಶಿಸಿದರು.
ಕಥಾಕಾಲಕ್ಷೇಪಕ್ಕಾಗಿ ಮಹಾರಾಷ್ಟ್ರದಲ್ಲಿ ಸಖಿ,ದಂಡಿ, ಅಂಜನಗೀತ, ಸವಾಯ್, ಓವಿ, ಅಭಂಗ ಮುಂತಾದವುಗಳನ್ನು ಬಳಸುತ್ತಾರೆ. ದಕ್ಷಿಣ ಭಾರತದಲ್ಲಿ ಕಥಾ ಪ್ರಾರಂಭದಲ್ಲಿ ಪಂಚಮುಖಿಯನ್ನು ಹಾಡುವುದುಂಟು. ಜೊತೆಗೆ ಸಂಗೀತದ ವಾದ್ಯಗಳಾದ ಹಾರ್ಮೋನಿಯಂ, ತಬಲ ಪಿಟೀಲು, ಮೃದಂಗ ಮುಂತಾದವುಗಳನ್ನು ಹಿಮ್ಮೇಳಕ್ಕಾಗಿ ಬಳಸುತ್ತಾರೆ.
ಕಥಾಕಾಲಕ್ಷೇಪ ಮಾಡುವ ವಿದ್ವಾಂಸರನ್ನು ಭಾಗವತರೆಂದು ಕರೆಯುವುದು ರೂಡಿs. ಕಥೆ ಸಂತ ಮಹಾನುಭಾವರ ಅಥವಾ ಭಗವತ್ಸಿದ್ಧಾಂತಗಳನ್ನು ತೋರುವ ಯಾವುದೇ ವಿಷಯವನ್ನು ಕುರಿತದ್ದಾದರೂ ಅದನ್ನು ಕ್ರಮಬದ್ಧರೀತಿಯಲ್ಲಿ ವಿಭಾಗಿಸಿ ಸಂಗೀತರಚನೆಗಳನ್ನೂ ಉಪಕಥೆಗಳನ್ನೂ ಗಾದೆಗಳನ್ನೂ ಸಂದರ್ಭೋಚಿತವಾಗಿ ಮಾಡುವಾಗ ಭಾಗವತರ ಜವಾಬ್ದಾರಿ ಗುರುತರವಾಗಿರುತ್ತದೆ. ಕಥೆಯಲ್ಲಿ ಬರುವ ವಿವಿಧ ಪಾತ್ರಗಳೂ ತಾವೇ ಎಂಬಂತೆ ಏಕಪಾತ್ರಾಬಿsನಯವನ್ನು ಮಾಡುವ ಸಾಮಥರ್ಯ್‌ದ ಜೊತೆಗೆ ಭಾಷಾe್ಞÁನ, e್ಞÁಪಕಶಕ್ತಿ ಮತ್ತು ಸಂಗೀತದ ವಿಷಯದಲ್ಲಿನ ಅರಿವುಗಳು ಭಾಗವತರಿಗೆ ಅತ್ಯವಶ್ಯಕವಾಗಿರುತ್ತದೆ. ಚತುರರಾದ ಹರಿಕಥಾ ವಿದ್ವಾಂಸರು ರಸಭಾವಗಳಿಗೆ ತಕ್ಕಂತೆ ಅಬಿsನಯ ಉಪಕಥೆ ಸಂಗೀತ ಮುಂತಾದವುಗಳ ಮಿಶ್ರಣದಿಂದ ಕ್ರಮಬದ್ಧರೀತಿಯಲ್ಲಿ ಮಾಡಿದ ಕಥಾಕಾಲಕ್ಷೇಪದ ಗುರಿ ಶ್ರಾವಕರ ಚಿತ್ರದಲ್ಲಿ ಚಿರಕಾಲ ಉಳಿಯುವುದರಲ್ಲಿ ಸಂಶಯವಿಲ್ಲ. ಕನ್ನಡನಾಡಿನಲ್ಲಿ ಕಥಾಕಾಲಕ್ಷೇಪ ಹರಿಕಥೆ ಎಂಬ ಮತ್ತೊಂದು ಹೆಸರಿನಲ್ಲಿ ಬಳಕೆಯಲ್ಲಿದೆ. ಈ ಕಲೆಗೆ ದಾಸರ ಕೊಡುಗೆ ಅಪಾರವಾದುದು. 20ನೆಯ ಶತಮಾನದಲ್ಲಿ ಕೊಣನೂರು, ಸೀತಾರಾಮ ಶಾಸ್ತ್ರಿ, ಶ್ರೀಕಂಠಶಾಸ್ತ್ರಿ, ಭದ್ರಗಿರಿ ಕೇಶವದಾಸರು, ಭದ್ರಗಿರಿ ಅಚ್ಚುತದಾಸರು, ವೇಣು ಗೋಪಾಲದಾಸರು, ಕುರ್ತಕೋಟಿ ಶ್ರೀಪಾದಶಾಸ್ತ್ರಿ, ಮುಂತಾದವರು ಹೆಸರಾಂತ ವಿದ್ವಾಂಸರೆನಿಸಿದ್ದಾರೆ.