ಕಣಿಲೆಯ ಉಪ್ಪಿನಕಾಯಿ

ಕಣಿಲೆಯ ಉಪ್ಪಿನಕಾಯಿ ಮೊದಲಿನ ಕಾಲದಿಂದಲೂ ಬಗೆ ಬಗೆಯ ಉಪ್ಪಿನಕಾಯಿಗಳನ್ನು ಮಳೆಗಾಲಕ್ಕೆ ಮಾಡಿ ಇಡುವ ಕ್ರಮ ತುಳುನಾಡಿನಲ್ಲಿ ಈಗಲೂ ಇದೆ. ಅಂತಹ ಉಪ್ಪಿನಕಾಯಿಗಳಲ್ಲಿ ಕಣಿಲೆಯ ಉಪ್ಪಿನಕಾಯಿ ಕೂಡಾ ಒಂದು. ಕಣಿಲೆಯ ಉಪ್ಪಿನಕಾಯಿಯಲ್ಲಿ ಕಣಿಲೆ ಮಾತ್ರ ಅಲ್ಲದೆ ಅಮಟೆಕಾಯಿ, ಲಂಬೆ ಹಣ್ಣು ಕೂಡಾ ಜೊತೆಗೆ ಹಾಕುತ್ತಿದ್ದರು. ಕಣಿಲೆಕಣಿಲೆ ತಿಂದರೆ ಆರೋಗ್ಯಕ್ಕೆ ಬಾರಿ ಒಳ್ಳೆಯದು ಎಂದು ನಮ್ಮ ಹಿರಿಯರ ಮಾತಿನಿಂದ ಈಗಲೂ ಕೇಳಿ ಬರುತ್ತದೆ. ವರ್ಷಕ್ಕೆ ಒಮ್ಮೆಯಾದರೂ ಕಣಿಲೆಯನ್ನು ತಿನ್ನಬೇಕು ಎಂಬ ಒಳ್ಳೆಯ ನುಡಿ ತುಳುನಾಡಿನಲ್ಲಿದೆ.

ಏನಿದು 'ಕಣಿಲೆ'?

ಬದಲಾಯಿಸಿ

ಕರ್ನಾಟಕದಲ್ಲಿ, ಬಿದಿರು ಚಿಗುರುಗಳನ್ನು ಮಲೆನಾಡಿನ ಪ್ರದೇಶದಲ್ಲಿ ವಿಶೇಷ ಭಕ್ಷ್ಯವಾಗಿ ಬಳಸಲಾಗುತ್ತದೆ. ಇದನ್ನು ಸ್ಥಳೀಯ ಭಾಷೆ ಕನ್ನಡದಲ್ಲಿ 'ಕಣಲೆ' ಅಥವಾ 'ಕಳಲೆ' ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಕಣಿಲೆಯ ಉಪಯೋಗ

ಬದಲಾಯಿಸಿ

ಕಣಿಲೆ ತುಂಬಾ ಮೆದುವಾಗಿ ಕೊಯ್ಯಲು ಬಲು ಸುಲಭ. ಇದನ್ನು ಉಪ್ಪಿನಕಾಯಿ ಮಾಡುವುದಕ್ಕಾಗಿ ಅಸ್ಟೇ ಅಲ್ಲದೆ ಪದಾರ್ಥ ಮಾಡಲೂ ಕೂಡಾ ಉಪಯೋಸುತ್ತಾರೆ.[] ಇದರಲ್ಲಿ ಮರಗೆಣಸು ನಲ್ಲಿ ಇರುಂತಹ ವಿಷಪೂರಿತವಾದ ಒಂದು ಬಗೆಯ ಗ್ಲೂಕೊಸೈಡ್ (Glucoside) ಇರುವ ಕಾರಣ , ಉಪಯೋಗ ಮಾಡುವಾಗ ತುಂಬಾ ಜಾಗ್ರತೆ ಮಾಡಬೇಕು. ಉಪಯೋಗ ಮಾಡುವುದರ ಮೊದಲು ಕಣಿಲೆಯನ್ನು ಚೆನ್ನಾಗಿ ಸಣ್ಣ ಸಣ್ಣ ಆಗಿ ಕೊಚ್ಚಿ ನೀರಲ್ಲಿ ನೆನೆಯಲು ಹಾಕಬೇಕು. ಎರಡು , ಮೂರು ದಿನಗಳ ಬಳಿಕ ಆ ನೀರನ್ನು ಚೆಲ್ಲಿ, ಬೇರೆ ನೀರನ್ನು ಹಾಕಿ ಅದನ್ನು ಬೇಯಿಸಬೇಕು. ಒಳ್ಳೆ ಬೆಂದ ಬಳಿಕ ಆ ನೀರನ್ನು ಚೆಲ್ಲಿ, ಕಣಿಲೆಯನ್ನು ಉಪ್ಪಿನಕಾಯಿ ಮಾಡಲು ಉಪಯೋಗಿಸಬೇಕು.

ಕಣಿಲೆಯ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಾನುಗಳು

ಬದಲಾಯಿಸಿ

ಕಣಿಲೆ, ಅಮಟೆ, ಉಪ್ಪು, ನೀರು, ಕೆಂಪು ಮೆಣಸು, ಸಾಸಿವೆ, ಮೆತ್ತೆ, ಇಂಗು, ಹಳದಿ, ಮತ್ತು ಎಣ್ಣೆ.

ಕಣಿಲೆಯ ಉಪ್ಪಿನಕಾಯಿ ಮಾಡುವ ವಿಧಾನ

ಬದಲಾಯಿಸಿ

ಒಂದು ಚಿಕ್ಕ ಪಾತ್ರೆಯಲ್ಲಿ ನೀರು, ಉಪ್ಪು ಹಾಕಿ ಕಣಿಲೆಯನ್ನು ಒಳ್ಳೆಯದಾಗಿ ಬೇಯಲು ಇಡಬೇಕು. ಅರ್ಧ ಗಂಟೆಯ ನಂತರ ಅದನ್ನು ಒಲೆಯಿಂದ ಕೆಳಗಿಳಿಸಬೇಕು. ಕಣಿಲೆಯನ್ನು ಆರಲು ಅಥವಾ ತಣ್ಣಗೆ ಆಗಲು ಬಿಡಬೆಕು, ತಣ್ಣಗೆ ಆದ ಬಳಿಕ ಅಮಟೆಯನ್ನು ಗುದ್ದಿ ಅದಕ್ಕೆ ಹಾಕಿ ಅರ್ಧ ಗಂಟೆ ಹಾಗೆಯೇ ಬಿಡಬೇಕು. ಮತ್ತೊಂದು ಚಿಕ್ಕ ಬಾಣಲೆಯನ್ನು ತೆಗೆದು ಅದನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಿ ಅದು ಹೊಡೆದಾಗ ಅದನ್ನು ಕೆಳಗಿರಿಸಬೇಕು. ಅದು ತಣ್ಣಗೆ ಆದ ಬಳಿಕ ಅದಕ್ಕೆ ಮೆಣಸಿನ ಹುಡಿ, ಅರಸಿನ ಹುಡಿ, ಉಪ್ಪು, ಕಣಿಲೆಯ ತುಂಡುಗಳು ಹಾಕಿ ಬೆರಸಿ ಅದಕ್ಕೆ ಉಪ್ಪು ನೀರಿನಲ್ಲಿ ಹಾಕಿದ ಅಮಟೆಯನ್ನು ಸೇರಿಸಬೇಕು. ಮತ್ತೆ ಎಲ್ಲವನ್ನೂ ಬೆರೆಸಿ ಮಿಶ್ರಣ ಮಾಡಿದರೆ ಕಣಿಲೆಯ ಉಪ್ಪಿನಕಾಯಿ ತಿನ್ನಲು ಸಿಧ್ಧ.

ಉಲ್ಲೇಖಗಳು

ಬದಲಾಯಿಸಿ