ಕಠಾರಿಯು ಬಹಳ ಚೂಪಾದ ತುದಿ ಮತ್ತು ಒಂದು ಅಥವಾ ಎರಡು ಚೂಪಾದ ಬದಿಗಳನ್ನು ಹೊಂದಿರುವ ಚಾಕು. ಸಾಮಾನ್ಯವಾಗಿ ಇದನ್ನು ತುರುಕುವ ಅಥವಾ ಇರಿಯುವ ಆಯುಧವಾಗಿ ಬಳಸುವಂತೆ ಸಾಧ್ಯವಾಗಲು ವಿನ್ಯಾಸಗೊಳಿಸಲಾಗಿರುತ್ತದೆ. ಕಠಾರಿಗಳನ್ನು ಮಾನವ ಅನುಭವದಾದ್ಯಂತ ನಿಕಟ ಹೋರಾಟ ಹೊಡೆದಾಟಗಳಿಗೆ ಬಳಸಲಾಗಿದೆ, ಮತ್ತು ಅನೇಕ ಸಂಸ್ಕೃತಿಗಳು ಕ್ರಿಯಾವಿಧಿ ಸಂಬಂಧಿ ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಅಲಂಕೃತ ಕಠಾರಿಗಳನ್ನು ಬಳಸಿವೆ. ಕಠಾರಿಯ ವಿಶಿಷ್ಟ ಆಕಾರ ಮತ್ತು ಐತಿಹಾಸಿಕ ಬಳಕೆಯು ಅದನ್ನು ಸಾಂಕೇತಿಕವಾಗಿಸಿದೆ. ಆಧುನಿಕ ಅರ್ಥದಲ್ಲಿ ಕಠಾರಿಯು ನಿಕಟ ಸಾಮೀಪ್ಯದ ಹೊಡೆದಾಟ ಅಥವಾ ಸ್ವರಕ್ಷಣೆಗಾಗಿ ವಿನ್ಯಾಸಗೊಳಿಸಲಾದ ಆಯುಧ; ಐತಿಹಾಸಿಕ ಆಯುಧ ಸಂಗ್ರಹಗಳಲ್ಲಿ ಅದರ ಬಳಕೆಯ ಕಾರಣ, ಇದು ಗಂಡಸುತನ ಮತ್ತು ಸಮರಸೂಕ್ತತೆಯೊಂದಿಗೆ ಸಂಬಂಧಗಳನ್ನು ಹೊಂದಿದೆ. ಆದರೆ, ಎರಡು ಬದಿಯ ಚಾಕುಗಳು, ವಿಭಿನ್ನ ಸಾಮಾಜಿಕ ಸಂದರ್ಭಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನು ವಹಿಸುತ್ತವೆ. ಕೆಲವು ಸಂಸ್ಕೃತಿಗಳಲ್ಲಿ ಅವು ಆಯುಧವೂ ಅಲ್ಲ ಅಥವಾ ಉಪಕರಣವೂ ಅಲ್ಲ, ಬದಲಾಗಿ ಪುರುಷತ್ವದ ಪ್ರಬಲ ಸಂಕೇತವಾಗಿವೆ; ಇತರ ಸಂಸ್ಕೃತಿಗಳಲ್ಲಿ ಅವು ಸುನತಿಯಂತಹ ದೈಹಿಕ ಮಾರ್ಪಾಡುಗಳಲ್ಲಿ ಬಳಸಲಾದ ಕ್ರಿಯಾವಿಧಿ ಸಂಬಂಧಿ ವಸ್ತುಗಳಾಗಿವೆ.[೧]

ಯೂರೋಪಿಯನ್ ರಾಂಡೆಲ್ ಕಠಾರಿ ಅಥವಾ ಪರ್ಷಿಯಮ್ ಪೆಶ್-ಕಾಬ್ಝ್‌ನಂತಹ ಕೇವಲ ಒಂದು ಕತ್ತರಿಸುವ ತುದಿಯನ್ನು ಹೊಂದಿರುವ ಚಾಕುಗಳು, ಅಥವಾ ಕೆಲವು ಸಂದರ್ಭಗಳಲ್ಲಿ ನವೋದಯ ಕಾಲದ ಸ್ಟಲೆಟೊದಂತಹ ಒಂದೂ ಕತ್ತರಿಸುವ ತುದಿಯನ್ನು ಹೊಂದಿರದ ಚಾಕು ಸೇರಿದಂತೆ, ವಿವಿಧ ರೀತಿಯ ಇರಿಯುವ ಚಾಕುಗಳನ್ನು ಕಠಾರಿಗಳೆಂದು ವರ್ಣಿಸಲಾಗಿದೆ. ಆದರೆ, ಕಳೆದ ನೂರು ಅಥವಾ ಸುಮಾರು ವರ್ಷಗಳಲ್ಲಿ, ಕಠಾರಿಯು ನಿರ್ದಿಷ್ಟ ನಿರ್ಣಾಯಕ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದರಲ್ಲಿ ಚೂಪಾಗಿ ಮೊನಚಾಗುವ ತುದಿಯಿರುವ ಗಿಡ್ಡನೆಯ ಅಲಗು, ಕೇಂದ್ರ ರಚನೆ ಅಥವಾ ಫ಼ುಲರ್, ಮತ್ತು ಸಾಮಾನ್ಯವಾಗಿ ಎರಡು ಅಲಗಿನ ಪೂರ್ಣ ಉದ್ದಕ್ಕೆ, ಅಥವ ಹತ್ತಿರಹತ್ತಿರ ಚೂಪಾಗಿಸಿದ ಕತ್ತರಿಸುವ ಬದಿಗಳು ಸೇರಿವೆ. ಬಹುತೇಕ ಕಠಾರಿಗಳು ಕೈಗಳನ್ನು ಮುಂದಕ್ಕೆ ಚೂಪಾಗಿಸಿದ ಅಲಗಿನ ಬದಿಗಳ ಮೇಲೆ ಹೋಗದಂತೆ ತಡೆಯಲು ಪೂರ್ಣ ಅಡ್ಡರಕ್ಷೆಯನ್ನು ಕೂಡ ಹೊಂದಿರುತ್ತವೆ. ಕಠಾರಿಗಳು ಪ್ರಧಾನವಾಗಿ ಆಯುಧಗಳಾಗಿವೆ, ಹಾಗಾಗಿ ಚಾಕು ಕಾಯಿದೆಯು ಅನೇಕ ಸ್ಥಳಗಳಲ್ಲಿ ಅವುಗಳ ತಯಾರಿಕೆ, ಮಾರಾಟ, ಸ್ವಾಧೀನ, ಸಾಗಣೆ, ಅಥವಾ ಬಳಕೆಯನ್ನು ನಿರ್ಬಂಧಿಸುತ್ತದೆ.

ಅತ್ಯಂತ ಮುಂಚಿನ ಕಠಾರಿಗಳನ್ನು ನವಶಿಲಾಯುಗದ ಕಾಲದಲ್ಲಿ ಚಕಮಕಿ ಕಲ್ಲು, ದಂತ ಅಥವಾ ಮೂಳೆಯಂಥ ವಸ್ತುಗಳಿಂದ ತಯಾರಿಸಲಾಗಿತ್ತು. ಮುಂಚಿನ ಕಂಚಿನ ಯುಗದಲ್ಲಿ ಕ್ರಿ.ಪೂ. ೩ನೇ ಸಹಸ್ರಮಾನದಲ್ಲಿ ಮೊದಲ ಬಾರಿ ತಾಮ್ರದ ಕಠಾರಿಗಳು ಕಾಣಿಸಿಕೊಂಡವು, ಮತ್ತು ಮುಂಚಿನ ಮಿನೋವನ್‍ನ (ಕ್ರಿ.ಪೂ. ೨೪೦೦-೨೦೦೦) ತಾಮ್ರದ ಕಠಾರಿಗಳನ್ನು ನಾಸಾಸ್‍ನಲ್ಲಿ ಮರಳಿಪಡೆಯಲಾಯಿತು.

ಉಲ್ಲೇಖಗಳು ಬದಲಾಯಿಸಿ

  1. Frieman, Catherine (1950). Flint Daggers in Prehistoric Europe. United Kingdom: Oxbox Books.
"https://kn.wikipedia.org/w/index.php?title=ಕಠಾರಿ&oldid=870768" ಇಂದ ಪಡೆಯಲ್ಪಟ್ಟಿದೆ