ಕಟ್ಟುವಾರೆ
ಕಟ್ಟುವಾರೆ : ಮೈಯಲ್ಲಿ ಪ್ಯುರೀನ್ ಜೀವವಸ್ತು ಕರಣದೋಷದಿಂದ ಜನ್ಮತಃ ಇರುವ ಮತ್ತು ಕಾಲಿನ ಹೆಬ್ಬೆರಳಿನ ಬುಡದಲ್ಲಿ ಮೊದಲು ಕೀಲುರಿತವಾಗಿ (ಆತ್ರೆರ್ೖಟಿಸ್) ಕಾಣಿಸಿಕೊಳ್ಳುವ ರೋಗ (ಗಾಟ್).
ಕಾರಣ
ಬದಲಾಯಿಸಿಇದು ಕೆಲವು ವಂಶಗಳಲ್ಲಿ ಅನುವಂಶಿಕವಾಗಿ ತೋರುವುದುಂಟು. ರಾತ್ರಿಹೊತ್ತು ನೋವು ವಿಪರೀತ. ಬೇರೂರಿದ ರಕ್ತಬೇನೆಯವರಲ್ಲಿ ಕಟ್ಟುವಾರೆ ಆಗುವುದುಂಟು. ಮೂತ್ರಪಿಂಡಗಳಲ್ಲು, ಮೂತ್ರದಲ್ಲಿ ಕೊಳೆ (ಅಲ್ಬುಮಿನ್), ಏರಿದ ರಕ್ತದೊತ್ತಡ ಇವು ಕಟ್ಟುವಾರೆಗೆ ಸಂಬಂಧಪಟ್ಟ ಬೇನೆಗಳೇ. ಕಟ್ಟುವಾರೆ ರೋಗಿಗಳ ರಕ್ತದಲ್ಲಿ ಮೂತ್ರಾಮ್ಲದ (ಯೂರಿಕ್ ಆಸಿಡ್) ಮಟ್ಟ ಏರಿರುತ್ತದೆ. ವೈದ್ಯಚರಿತ್ರೆಯಲ್ಲಿ ಈ ರೋಗವೂ ಇದರ ಮದ್ದು ಕಾಲ್ಚೀಸೀನೂ ಬಲು ಹಳೆಯವು.
ಲಕ್ಷಣಗಳು
ಬದಲಾಯಿಸಿರೋಗ ಕೆರಳಿದಾಗ ಜ್ವರ ಬಂದು ಬಿಳಿ ರಕ್ತಕಣಗಳು ಹೆಚ್ಚಿದರೂ ಉಳಿದ ದಿವಸಗಳಲ್ಲಿ ರೋಗದ ಲಕ್ಷಣಗಳೇ ತೋರವು. ಆದರೆ ಬರಬರುತ್ತ ಬೇರೂರಿ ಇನ್ನಷ್ಟು ಕೀಲುಗಳಿಗೂ ಹಬ್ಬುವುದು, ಯಾವುದಾದರೂ ಕೂರಾದ ಸೋಂಕು, ಮನೋದ್ವೇಗ, ಶಸ್ತ್ರಕ್ರಿಯೆ, ಗಾಯ ಪೆಟ್ಟುಗಳು, ಮಿತಿಮೀರಿದ ತಿನಿಸು, ಕುಡಿತ ಮತ್ತು ಕೆಲವು ಮದ್ದುಗಳಿಂದ ಕಟ್ಟುವಾರೆ ಲಕ್ಷಣಗಳು ಇದ್ದಕ್ಕಿದ್ದ ಹಾಗೆ ಕೆರಳುವುದು ಸಾಮಾನ್ಯ. ಚಿಕಿತ್ಸೆ ಇಲ್ಲವಾದರೆ ರೋಗ ದಿವಸಗಳೋ ವಾರಗಳೋ ಕಾಡುತ್ತದೆ. ರೋಗದ ಕೀಲು ಕೆಂಪಗೆ ಬೆಚ್ಚಗಾಗಿ ಉರಿ, ಚಳುಕಾಗಿ ನೋವಿಡುತ್ತಿರುವುದು. ಜ್ವರವೇರುತ್ತದೆ. ಕೆಲವರಲ್ಲಿ ಕೀಲುಗಳ ಒಳಗೂ ಸುತ್ತಲೂ ಸೋಡಿಯಂ ಬೈರೂರೇಟು ತುಂಬಿರುವ ಒಂಡುಗಲ್ಲುಗಳು (ಟೋಫೈ) ಏಳುತ್ತವೆ. ಸಾಮಾನ್ಯವಾಗಿ ಒಂಡುಗಲ್ಲುಗಳು ಕಿವಿಯಾಲೆಯ ಚರ್ಮದ ಅಡಿಯಲ್ಲೊ ಯಾವುದಾದರೂ ಕೀಲುಗಳ ಮೇಲೋ ಮುಖ್ಯವಾಗಿ ಕೈಬೆರಳುಗಳ ಗೆಣ್ಣುಗಳ ಮೇಲೋ ಎಷ್ಟೋ ವರ್ಷಗಳ ಮೇಲೆ ಕೆಲವರಲ್ಲಿ ಏಳುತ್ತವೆ. ಅವು ಒಡೆದುಕೊಂಡು ಹುಣ್ಣಾಗಿ ಸುಣ್ಣದಪುಡಿ ತೆರನ ರೋಸು ಸುರಿಯಬಹುದು. ಕೊನೆಗೆ ಈ ಒಂಡುಗಲ್ಲುಗಳು ಯಾವ ಕೀಲನ್ನಾದರೂ ಪುರಾ ಹಾಳುಗೆಡವಬಹುದು. ಕಟ್ಟುವಾರೆ ಮತ್ತೆ ಮತ್ತೆ ಕೆರಳುತ್ತಿದ್ದರೆ ಒಂಡುಗಲ್ಲುಗಳು ಇರಲಿ ಇಲ್ಲವಾಗಲಿ ಮೂಳೆಗಳು ಸೊಟ್ಟಗಾಗುತ್ತವೆ. ಬಹುಪಾಲು ಇದು ಗಂಡಸರ ರೋಗವಾದರೂ ಹೆಂಗಸರಲ್ಲಿ ಮುಟ್ಟುತೀರುವೆ (ಮಿನೋಪಾಸ್) ಆದಾಗ ತೋರಬಹುದು. 30 ಮಂದಿ ಗಂಡಸರಲ್ಲಿ ಕಟ್ಟುವಾರೆ ತೋರಿದರೆ ಒಬ್ಬ ಹೆಂಗಸಲ್ಲಿ ಕಾಣಬಹುದು.
ಚಿಕಿತ್ಸೆ
ಬದಲಾಯಿಸಿಕಟ್ಟುವಾರೆ ಕೀಲುರಿತ ಕೆರಳಿದ ಕೂಡಲೇ ಸಾಕಷ್ಟು ಕಾಲ್ಚಿಸೀನ್ ಕೊಟ್ಟರೆ ಶಮನವಾಗುತ್ತದೆ. ಮತ್ತೆ ಹೀಗೆ ಕೆರಳುವುದನ್ನು ತಡೆಗಟ್ಟಲು ರಕ್ತದ ಮೂತ್ರಾಮ್ಲವನ್ನು ಸಾಕಷ್ಟು ಹೊರಹಾಕಿ ತಗ್ಗಿಸುವ ಪ್ರೊಬೆನಿಸಿಡ್ ಮಾತ್ರೆಗಳಿವೆ. ಇವನ್ನು ವರ್ಷಾನುಗಟ್ಟಲೆ ಕೊಡುತ್ತಿರಬೇಕಾಗುತ್ತದೆ. ಮೂತ್ರಾಮ್ಲವನ್ನು ಮೈಯಿಂದ ಕಳೆಯಲು ನೀರು ಕುಡಿದಷ್ಟೂ ಒಳ್ಳೆಯದು. ಜೊತೆಗೆ ಮಾಂಸಾಹಾರ ಬಿಟ್ಟುಬಿಡುವುದೊಳ್ಳೆಯದು, ಕೆಲವರು ಕಟ್ಟುವಾರೆ ರೋಗಿಗಳು ಮೂತ್ರಪಿಂಡ ರೋಗದಿಂದ ಸಾಯುವರಾದರೂ ಬಹುಮಂದಿ ಹೆಚ್ಚು ಕಾಲ ಬದುಕಿರುವರು.