ಹಸಿರು ಪಾರಿವಾಳ
male Thick-billed green pigeon
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
Treron

Vieillot, 1816
Species

see text

ಕಗ್ಗುಲ : ಪಾರಿವಾಳ ಮತ್ತು ಕಪೋತಗಳನ್ನೊಳಗೊಂಡ ಕೊಲಂಬಿಡೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಪಕ್ಷಿ,

ವೈಜ್ಞಾನಿಕ ಹೆಸರು ಬದಲಾಯಿಸಿ

ಈ ಜಾತಿಯ ವೈಜ್ಞಾನಿಕ ನಾಮ ಟ್ರೀರಾನ್. ಹಸಿರು ಪಾರಿವಾಳವೆಂದೂ ಹೆಸರುಂಟು.

ಹರಡುವಿಕೆ ಬದಲಾಯಿಸಿ

ಭಾರತದಿಂದ ಹಿಡಿದು ಮಲೇಷಿಯ, ಫಿಲಪೀನ್ಸ್‌ ದ್ವೀಪಗಳವರೆಗೂ ಹರಡಿದೆ.

ಲಕ್ಷಣಗಳು ಬದಲಾಯಿಸಿ

ದೇಹರಚನೆ ಗಾತ್ರ, ಆಕಾರ, ಪಾರಿವಾಳಗಳಂತೆಯೇ. ದೇಹದ ಮೇಲೆ ಹಳದಿಮಿಶ್ರಣವಾದ ಹಸಿರು ತುಪ್ಪಳ ಇರುವುದು ಒಂದು ವಿಶೇಷ ಗುಣ. ಇವುಗಳ ಬಾಲ ಭಾಗಶಃ ದುಂಡಾಗಿರಬಹುದು, ಬೆಣೆಯ ಆಕಾರದಲ್ಲಿರಬಹುದು ಅಥವಾ ಚೂಪಾಗಿರಬಹುದು. ಟಾರ್ಸಸ್ ಎಲುಬಿರುವ ಕಾಲಿನ ಭಾಗ ಮಧ್ಯದ ಬೆರಳಿಗಿಂತ ಚಿಕ್ಕದು ಮತ್ತು ಬಲಯುತವಾದುದು. ಕೊಕ್ಕು ಚಿಕ್ಕದು ಮತ್ತು ತೆಳು. ಅದರ ಬುಡದ ಭಾಗದಲ್ಲಿ ಪಾರಿವಾಳಗಳಿಗಿರುವಂತೆ ಒಂದು ದಪ್ಪನಾದ ಮೃದು ಚರ್ಮದ ದಿಂಡಿದೆ. ಮೇತೆ(ಕ್ರಾಪ್) ದೊಡ್ಡದು; ಅದರಲ್ಲಿ ಎಳೆಯ ಮರಿಗಳಿಗೆ ಉಣಿಸಲು ಹಾಲು ಉತ್ಪತ್ತಿಯಾಗುತ್ತದೆ. ಅಂಗಾಲು ಮಾಂಸಮಯವಾಗಿಯೂ ಮೆತ್ತಗೂ ಇದ್ದು ಬೆರಳುಗಳಿಗಿಂತ ವಿಸ್ತಾರವಾಗಿದೆ. ಹೀಗಿರುವುದು ಮರಗಳ ಮೇಲಿನ ವಾಸಕ್ಕೆ ಸೂಕ್ತವಾಗಿ ಹೊಂದಿಕೊಂಡಿರುವ ವೈಶಿಷ್ಟ್ಯ. ಕಗ್ಗುಲ ಸಾಮಾನ್ಯವಾಗಿ ಮರಗಳ ಮೇಲೆ ವಾಸಿಸಿದರೂ ಕೆಲವು ವೇಳೆ ಮಣ್ಣಿನಲ್ಲಿರುವ ಉಪ್ಪನ್ನು ತಿನ್ನುವುದಕ್ಕೆ ಕೆಳಗಿಳಿಯುತ್ತದೆ. ಸಾಮಾನ್ಯವಾಗಿ ಗುಂಪಿನಲ್ಲಿ ವಾಸಿಸುತ್ತದೆ. ಅಪರೂಪಕ್ಕೆ ಒಂಟಿಯಾಗಿರುವುದೂ ಉಂಟು. ಒಂದೊಂದು ಗುಂಪಿನಲ್ಲಿ 10-30 ಪಕ್ಷಿಗಳಿರಬಹುದು. ಮೈಬಣ್ಣ ಗಿಡದ ಹಸಿರುಬಣ್ಣದೊಡನೆ ಐಕ್ಯವಾಗುವುದರಿಂದ ಮರದ ಮೇಲೆ ಅವನ್ನು ಗುರುತಿಸುವುದು ಕಷ್ಟ. ಆಕಸ್ಮಾತಾಗಿ ಗುಂಡಿನ ಶಬ್ದವಾದಾಗ ಪಕ್ಷಿಗಳೆಲ್ಲ ಒಂದೇ ಗುಂಪಾಗಿ ಜೋರಾಗಿ ಹಾರಿ ಮತ್ತೆ ಅದೇ ಮರದ ಬಳಿ ಬಂದು ಕೂಡುತ್ತವೆ.

ಆಹಾರ ಮತ್ತು ಜೀವನ ಬದಲಾಯಿಸಿ

ಇವುಗಳ ಆಹಾರ ವಿವಿಧ ಬಗೆಯ ಹಣ್ಣುಗಳು. ದಪ್ಪ ದಪ್ಪ ಹಣ್ಣುಗಳನ್ನು ಇಡಿಯಾಗಿ ನುಂಗುವುದು ವಾಡಿಕೆ. ಗಂಡುಹೆಣ್ಣುಗಳೆರಡೂ ಸೇರಿ ಮರಗಳ ತುದಿಯ ರೆಂಬೆಗಳ ಮೇಲೆ ಸಣ್ಣ ಸಣ್ಣ ಕಡ್ಡಿಗಳನ್ನು ಜೋಡಿಸಿ ಒರಟಾದ ಗೂಡುಗಳನ್ನು ಕಟ್ಟುತ್ತವೆ. ಒಂದೊಂದು ಗೂಡಿನಲ್ಲಿ ಎರಡು ಬಿಳಿಯ ಮೊಟ್ಟೆಗಳಿರುತ್ತವೆ. ಗಂಡು ಹೆಣ್ಣು ಎರಡೂ ಸರದಿಯ ಮೇರೆಗೆ ಕಾವು ಕೊಡುತ್ತವೆ. ಅಲ್ಲದೆ ಮರಿಗಳು ದೊಡ್ಡವಾಗುವವರೆಗೂ ಗುಟುಕು ಕೊಟ್ಟು ಸಲಹುತ್ತವೆ. ಕೆಲವು ಪ್ರಭೇದಗಳಲ್ಲಿ ಕಾವು ಕೊಡುವ ಕಾಲ 12-14 ದಿನಗಳಾದರೆ ಮತ್ತೆ ಕೆಲವಲ್ಲಿ 18-19 ದಿನಗಳು.

ಪ್ರಭೇದಗಳು ಬದಲಾಯಿಸಿ

ಕಗ್ಗುಲಗಳಲ್ಲಿ ಹಲವು ಪ್ರಭೇದಗಳಿವೆ; ಹಾಗೂ ಒಂದೊಂದರಲ್ಲೂ ಒಂದಕ್ಕಿಂತಲೂ ಹೆಚ್ಚಾದ ಉಪಪ್ರಭೇದಗಳಿವೆ. ಉತ್ತರಭಾರತದ ಈಶಾನ್ಯಭಾಗದಲ್ಲಿ ಚೂಪುಬಾಲದ ಕಗ್ಗುಲ (ಟ್ರೀ.ಅಪಿಕ್ಯಾಡ), ಬೆಣೆಬಾಲದ ಕಗ್ಗುಲ (ಟ್ರೀ.ಸ್ಫೀನ್ಯೂರ), ದಪ್ಪಕೊಕ್ಕಿನ ಕಗ್ಗುಲ (ಟ್ರೀ.ಕರ್ವಿರಾಸ್ಟ್ರ), ಬೂದುತಲೆಯ ಕಗ್ಗುಲ (ಟ್ರೀ.ಪಾಂಪಡೋರ), ಹೊಂಬಣ್ಣದ ಎದೆಯ ಕಗ್ಗುಲ (ಟ್ರೀ.ಬೈಸಿಂಕ್ಷ), ತೆಂಕಣದ ಕಗ್ಗುಲ (ಟ್ರೀ.ಫೀನಿಕಾಪ್ಟೆರ) ಮೊದಲಾದುವುಗಳಿವೆ. ಇವುಗಳ ಪೈಕಿ ದಕ್ಷಿಣ ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಪಶ್ಚಿಮಘಟ್ಟದ ಕಾಡುಗಳಲ್ಲಿ ಒಂದು ಬಗೆಯ ಬೂದುತಲೆಯ ಕಗ್ಗುಲ, ಹೊಂಬಣ್ಣದ ಎದೆಯ ಕಗ್ಗುಲ ಕಂಡುಬರುತ್ತವೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಗ್ಗುಲ&oldid=1183534" ಇಂದ ಪಡೆಯಲ್ಪಟ್ಟಿದೆ