ಕಂಚುವಾಳ
Bauhinia divaricata flowers
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
Bauhinia

Type species
Bauhinia divaricata
L.
Species

239–334; see text.

Synonyms[೨][೩]
  • Alvesia Welw.
  • Amaria S. Mutis ex Caldas
  • Ariaria Cuervo
  • Cansenia Raf.
  • Cardenasia Rusby
  • Caspareopsis Britton & Rose
  • Casparia Kunth
  • Mandarus Raf.
  • Monoteles Raf.
  • Pauletia Cav.
  • Perlebia Mart.
  • Schnella Raddi
  • Telestria Raf.

ಕಂಚುವಾಳ ಒಂದು ಬಗೆಯ ಹೂ ಬಿಡುವ ಸಸ್ಯ ಜಾತಿ. ಇದು ಫ್ಯಾಬೇಸಿ ಕುಟುಂಬಕ್ಕೆ ಸೇರಿದೆ.ಭಾರತ ಮತ್ತು ಚೀನಾಗಳ ಮೂಲವಾಸಿ.

ಸಸ್ಯ ಲಕ್ಷಣಗಳು ಬದಲಾಯಿಸಿ

 
Bauhinia acuminata flower in Hyderabad, India.
 
Bauhinia racemosa flowers & fruits in Hyderabad, India.
 
Bauhinia tomentosa flowers in Hyderabad, India.

ಕೆಂಪು,ಕಿತ್ತಳೆ,ನಸುಗೆಂಪು ಬಣ್ಣಗಳ ೫ ಎಳೆಗಳ ಹೂವುಗಳನ್ನು ಬಿಡುತ್ತವೆ.ಕೆಲವು ಪ್ರಭೇದಗಳಲ್ಲಿ ಸ್ಪಲ್ಪ ಪರಿಮಳವೂ ಇರುತ್ತದೆ.ಇದು ಸು. 30' ಎತ್ತರ ಬೆಳೆಯುವ ಮಧ್ಯಮಗಾತ್ರದ ಸದಾ ಹಸಿರಾಗಿರುವ ಮರ. ಎಲೆ 3" ರಿಂದ 6" ಉದ್ದ. ಆಕಾರ ಕರನೆಯಂತೆ. ಅಂಚು ನಯ. ತುದಿಯಿಂದ ಅರ್ಧಭಾಗದವರೆಗೆ ಮಧ್ಯದಲ್ಲಿ ಸೀಳಿರುವುದು ಇದರ ವೈಶಿಷ್ಟ್ಯ. ಈ ಸಸ್ಯ ಸೆಪ್ಟೆಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಹೂ ಬಿಡುತ್ತದೆ. ಬಿಳುಪು ಅಥವಾ ಕೆಂಪುಬಣ್ಣದ ಅಂತ್ಯಾರಂಭಿ ಹೂಗೊಂಚಲು ಬಹಳ ಸುಂದರವಾಗಿದೆ; ಕೇಸರುಗಳು 10. ಇವುಗಳಲ್ಲಿ 3-4 ಮಾತ್ರ ಫಲವತ್ತಾಗಿವೆ; ಉಳಿದವು ಬರಡು; ಅಂಡಾಶಯ ಬಹು ಅಂಡಕಗಳನ್ನೊಳಗೊಂಡ ಉಚ್ಚ ಮಾದರಿಯದು. ಫಲ ಬಹುಬೀಜವಿರುವ ಸು.1' ಉದ್ದದ ಪಾಡ್ ಮಾದರಿಯದು. ಕಂಚುವಾಳ ಮರವನ್ನು ಬೀಜಗಳಿಂದ ವೃದ್ಧಿಮಾಡಬಹುದು.

ಬೆಳೆಸುವ ವಿಧಾನ ಬದಲಾಯಿಸಿ

ಗಿಡದ ಪುನರುತ್ಪತ್ತಿ ಬೀಜದಿಂದ ಹಾಗೂ ಗೆಲ್ಲುಗಳಿಂದ ಮಾಡುತ್ತಾರೆ.ಹೆಚ್ಚಿನ ಬೆಳಕು,ದಾರಾಳ ನೀರು ಇರುವಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಪ್ರಭೇದಗಳು ಬದಲಾಯಿಸಿ

ಈ ಸಸ್ಯದಲ್ಲಿ ಸುಮಾರು ೨೦೦ ರಿಂದ ೨೫೦ ಪ್ರಭೇದಗಳನ್ನು ಗುರುತಿಸಿದ್ದಾರೆ.ಅವುಗಳಲ್ಲಿ ಪೊದರು, ಅಡರುಬಳ್ಳಿ ಮತ್ತು ಮರ ಇತ್ಯಾದಿಗಳೆಲ್ಲ ಇವೆ. ಭಾರತದಲ್ಲಿ ಮುಖ್ಯವಾಗಿ ಬೌಹಿನಿಯ ಪಪುರ್ಯ್‌ರಿಯ (ಕಂಚುವಾಳ ಮರ), ಬಾ.ವಾಹ್ಲಿ (ಬಿಳೀ ಕಂಚುವಾಳ ಅಥವಾ ಕಂಬಿಹೂ), ಬಾ.ವೇರಿಗೇಟ(ಉಳಿಪೆ), ಬಾ.ಮಲಬಾರಿಕ (ಬಸವನ ಪಾದ) ಮತ್ತು ಬಾ.ಟೊಮೆಂಟೋಸ (ಆನೆಪಾದ) ಪ್ರಭೇದಗಳು ಬೆಳೆಯುತ್ತವೆ. ಭಾರತ ಮತ್ತು ಚೀನದೇಶಗಳ ಮೂಲನಿವಾಸಿಯಾದ ಕಂಚುವಾಳ ಮರವನ್ನು ರಸ್ತೆಗಳ ಪಕ್ಕದಲ್ಲೂ ಮನೆಗಳ ಆವರಣಗಳಲ್ಲೂ ಉದ್ಯಾನವನಗಳಲ್ಲೂ ಬೆಳೆಸುವುದುಂಟು.

ಉಪಯೋಗಗಳು ಬದಲಾಯಿಸಿ

ಅಲಂಕಾರಕ್ಕಾಗಿ ರಸ್ತೆ ಬದಿಗಳಲ್ಲಿ, ಉದ್ಯಾನಗಳಲ್ಲಿ ಬೆಳೆಸುತ್ತಾರೆ.ಕಾಂಡದಲ್ಲಿ ದೊರೆಯುವ ಗೋಂದಿಗೆ ವಾಣಿಜ್ಯಿಕ ಪ್ರಾಮುಖ್ಯತೆ ಇದೆ. ಚೌಬೀನೆ ಕಂದು ಬೂದು ಮಿಶ್ರಿತ ಬಣ್ಣದ್ದು; ಹಗುರ ಮತ್ತು ಮೃದು. ಗೆದ್ದಲು ಮತ್ತು ಕುಟ್ಟೆ ಹುಳು ತಿಂದುಹಾಕುವುದು ಸಾಮಾನ್ಯ. ವ್ಯವಸಾಯೋಪಕರಣಗಳ ತಯಾರಿಕೆಯಲ್ಲೂ ಬಡವರು ಒಮ್ಮೊಮ್ಮೆ ಮನೆ ಕಟ್ಟಲೂ ಇದನ್ನು ಬಳಸುವರು. ಹೂವನ್ನು ತರಕಾರಿಯಾಗಿ ಮತ್ತು ಉಪ್ಪಿನಕಾಯಿಗಳಲ್ಲಿ ಉಪಯೋಗಿಸುವುದೂ ಉಂಟು. ಗೋಂದನ್ನು ಬಟ್ಟೆ ಮತ್ತು ಕಾಗದದ ತಯಾರಿಕೆಯಲ್ಲಿ ಉಪಯೋಗಿಸುವರು. ಬೇರು, ಕಾಂಡದ ತೊಗಟೆ ಮತ್ತು ಹೂಗಳನ್ನು ಸ್ಥಳೀಯ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಬೇರುಗಳ ಮೇಲಿನ ತೊಗಟೆ ವಿಷಪೂರಿತವಾದದ್ದು. ಎಲೆಗಳು ದನಕರುಗಳಿಗೆ ಒಳ್ಳೆಯ ಆಹಾರ.ವಾಹ್ಲಿ (ಬಿಳೀ ಕಂಚುವಾಳ) ಎಂಬ ಪ್ರಭೇದ ಒಂದು ಭೀಷ್ಮ ಬಳ್ಳಿ. ನಮ್ಮ ದೇಶದ ಕಾಡುಗಳಲ್ಲಿ ಬೆಳೆಯುತ್ತದೆ. ಬಳ್ಳಿಯ ನಾರನ್ನು ಹಗ್ಗವಾಗಿ ಉಪಯೋಗಿಸುವರು. ಬೀಜಗಳು ಗೇರುಬೀಜದ ರುಚಿ ಕೊಡುವುದರಿಂದ ಹುರಿದು ತಿನ್ನುವುದುಂಟು. ಎಲೆ ಅಗಲವಾಗಿರುವುದರಿಂದ ತಿಂಡಿ ತಿನ್ನಲೂ ಊಟ ಮಾಡಲೂ ಗುಡಿಸಿಲ ಮೇಲ್ಛಾವಣೆಗೆ ಹೊದಿಸಲೂ ಬರುತ್ತದೆ ಇನ್ನೊಂದು ಪ್ರಭೇದವಾದ ವೇರಿಗೇಟ (ಉಳಿಪೆ) ಎಂಬುದು ಸು. 10-15 ಮೀ ಎತ್ತರ ಬೆಳೆದು ಬೇಸಗೆಯಲ್ಲಿ ಹೂಬಿಡುತ್ತದೆ. ಇದನ್ನು ಉದ್ಯಾನವನಗಳಲ್ಲಿ ಗಿಡವಾಗಿ ಬೆಳೆಸುವರು. ಗೋಂದು ಚೆರಿ ಗೋಂದಿನಂತಿದೆ. ವಿವಿಧ ಬಣ್ಣಗಳನ್ನು ಕಟ್ಟಲು ತೊಗಟೆಯನ್ನು ಬಳಸಲಾಗುವುದು. ಬಿಳಿಯ ಹೂಬಿಡುವ ಬಾಹಿನಿಯ ಆಲ್ಪ, ಬಾ.ಕ್ಯಾಂಡಿಡ, ಬಾ.ಹುಕರಿ, ಬಾ.ಅಕ್ಯುಮಿನೇಟ ಪ್ರಭೇದಗಳನ್ನೂ ಕಗ್ಗೆಂಪು ಹೂ ಬಿಡುವ ಬಾ.ಗಾಲ್ಪಿನಿ ಪ್ರಭೇದವನ್ನೂ ಅಲಂಕಾರಕ್ಕೋಸ್ಕರ ಉದ್ಯಾನಗಳಲ್ಲಿ ಬೆಳೆಸುವುದೂ ಉಂಟು.

ಔಷಧೀಯ ಸಸ್ಯವಾಗಿ ಬದಲಾಯಿಸಿ

ಇದರ ತೊಗಟೆ ಮತ್ತು ಹೂವುಗಳಲ್ಲಿ ಔಷಧೀಯ ಗುಣಗಳಿವೆ.

ಉಲ್ಲೇಖಗಳು ಬದಲಾಯಿಸಿ

  1. Sinou C, Forest F, Lewis GP, Bruneau A. (2009). "The genus Bauhinia s.l. (Leguminosae): a phylogeny based on the plastid trnLtrnF region". Botany. 87 (10): 947–960. doi:10.1139/B09-065.{{cite journal}}: CS1 maint: multiple names: authors list (link)
  2. ೨.೦ ೨.೧ "Genus: Bauhinia L." Germplasm Resources Information Network. United States Department of Agriculture. 2007-03-29. Retrieved 2010-12-06.
  3. Wunderlin RP. (2010). "Reorganization of the Cercideae (Fabaceae: Caesalpinioideae)" (PDF). Phytoneuron. 48: 1–5.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಂಚುವಾಳ&oldid=908308" ಇಂದ ಪಡೆಯಲ್ಪಟ್ಟಿದೆ