ಓಸ್ವಾಲ್ಡ್‌ ಕ್ಯುಲ್ಪೆ

ಓಸ್ವಾಲ್ಡ್‌ ಕ್ಯುಲ್ಪೆ (ಆಗಸ್ಟ್ 3, 1862 – ಡಿಸೆಂಬರ್ 30, 1915) ಮನಶ್ಯಾಸ್ತ್ರದ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳನ್ನು ನಡೆಸಿದ ವೂರಸ್‍ಬರ್ಗ್ ಪಂಥದ ನಾಯಕ. 1903ರಲ್ಲಿ ಈತ ಬರೆದು ಪ್ರಕಟಿಸಿದ ಗ್ರಂಡಿಸ್ ಡರ್ ಸೈಕಾಲಜಿ ಎಂಬ ಉದ್ಗ್ರಂಥ 1901ರಲ್ಲಿ ಟಿಚ್ನರ್‍ನಂಥ ಪ್ರಖ್ಯಾತ ಮನಶ್ಯಾಸ್ತ್ರಜ್ಞನಿಂದಲೇ ಇಂಗ್ಲಿಷ್ ಭಾಷೆಗೆ ಪರಿವರ್ತಿತವಾಯಿತು. ಪ್ರಯೋಗ ಪ್ರಧಾನವಾದ ಈ ಗ್ರಂಥ ಹೊಸ ಪದ್ಧತಿಯೊಂದನ್ನು ಆರಂಭಿಸಿತು. ಕ್ಯುಲ್ಪೆ ಪ್ರಕಾರ ಮನಶ್ಯಾಸ್ತ್ರ ವಾಸ್ತವವಾಗಿ, ಅನುಭವಿಸುವ ವ್ಯಕ್ತಿಗಳನ್ನು ಅವಲಂಬಿಸಿ ಅನುಭವಗಳ ವಿವರಗಳನ್ನು ಅನುಸಂಧಾನ ಮಾಡುವ ವಿಜ್ಞಾನ. ವಿಶ್ಲೇಷಣೆಗೆ ಪ್ರಾಶಸ್ತ್ಯ ಕೊಟ್ಟವರಲ್ಲಿ ಕ್ಯುಲ್ಪೆ ಮೊದಲಿಗ. ಕ್ಯುಲ್ಪೆಯ ಸ್ಫೂರ್ತಿಯಿಂದ ಮೈದಳೆದ ವೂರ್ಸ್‍ಬರ್ಗ್ ಪಂಥದಲ್ಲಿ ವ್ಯವಸ್ಥಿತ, ಪ್ರಾಯೋಗಿಕ ಅಂತಃಸಮೀಕ್ಷೆಯ, ಸಂವಿಧಾನ ಸ್ಪಷ್ಟಗೊಂಡಿತು. ಮನಶ್ಯಾಸ್ತ್ರದ ಸಂವಿಧಾನಗಳ ವ್ಯವಸ್ಥೆಯಲ್ಲಿ ಈ ಕಲ್ಪನೆ ತುಂಬ ಪ್ರಭಾವಶಾಲಿಯಾಯಿತು. ವಿಲ್ಹೆಲ್ಮ್ ವೂಂಟ್‍ನ ಬಳಿ ಕ್ಯೂಲ್ಪೆಯ ಶಿಕ್ಷಣ ಸಾಗಿತಾದರೂ ಕ್ಯುಲ್ಪೆಯ ದಾರಿವೂಂಟ್‍ನ ದಾರಿಗಿಂತ ಭಿನ್ನವಾಯಿತು.

ಓಸ್ವಾಲ್ಡ್‌ ಕ್ಯುಲ್ಪೆ
ಜನನಆಗಸ್ಟ್ 3, 1862
Kandau, Courland
ಮರಣಮ್ಯೂನಿಚ್
ರಾಷ್ಟ್ರೀಯತೆBaltic German
ಕಾರ್ಯಕ್ಷೇತ್ರPsychologist
ಅಭ್ಯಸಿಸಿದ ವಿದ್ಯಾಪೀಠLeipzig University
ಡಾಕ್ಟರೇಟ್ ಸಲಹೆಗಾರರುವಿಲ್ಹೆಲ್ಮ್ ವೂಂಟ್‍