ಓಡಿಎಮ್ ಎಂದರೆ ಒರಿಜಿನಲ್ ಡಿಸೈನ್ ಮ್ಯಾನುಫ್ಯಾಕ್ಚರರ್ ಅಥವಾ ತಮ್ಮದೇ ಸ್ವಂತ ರಚನೆಗಳನ್ನು ಉತ್ಪಾದಿಸುವವರು ಎಂದು ಅರ್ಥ. ಅಂಗಡಿಗಳಲ್ಲಿ ದೊರೆಯುವ ಟಿವಿ, ಫ್ರಿಜ್, ಲ್ಯಾಪ್ ಟಾಪ್ ಇತ್ಯಾದಿ ಸಾಧನಗಳನ್ನು ಹೊರತರಲು ಅನೇಕ ಸಿದ್ಧತೆಗಳು ಬೇಕು - (೧) ರಚನೆ ಅಥವಾ ಡಿಸೈನ್  (೨) ದೊಡ್ಡ ಸಂಖ್ಯೆಯಲ್ಲಿ ಉತ್ಪಾದನೆ  ಅಥ್ವಾ ಮ್ಯಾನುಫಾಕ್ಚರಿಂಗ್ (೩) ಉತ್ಪಾದಿಸಿದ ತಯಾರಿಕೆಗಳ ಪರಿಶೀಲನೆ ಅಥವಾ ಟೆಸ್ಟಿಂಗ್ ಮತ್ತು (೪) ವ್ಯಾಪಾರ ಮತ್ತು ಮಾರಾಟ  (ಮಾರ್ಕೆಟಿಂಗ್ ಮತ್ತು ಸೇಲ್ಸ್) ಓಡಿಎಮ್ ಕಂಪನಿಗಳು ರಚನೆ, ಉತ್ಪಾದನೆ ಮತ್ತು ಪರಿಶೀಲನೆಯ ಕೆಲಸಗಳನ್ನು ವಹಿಸಿಕೊಳ್ಳುತ್ತವೆ. ಓಡಿಎಮ್   ತಯಾರಿಸಿದ ಪದಾರ್ಥಗಳ ವ್ಯಾಪಾರ ಮತ್ತು ಮಾರಾಟ ಮಾಡಲು   ಒಂದಲ್ಲದೆ ಅನೇಕ ಕಂಪನಿಗಳು ಇರಬಹುದು. []

ಉದಾಹರಣೆಗೆ ಸಿದ್ಧ ಉಡುಪುಗಳನ್ನು ಗಮನಿಸಿ. ಒಂದು ಓಡಿಎಮ್ ಸಂಸ್ಥೆ ಅನೇಕ ಶೈಲಿಗಳ ಶರ್ಟ್, ಪ್ಯಾಂಟ್, ಟೈ ಇತ್ಯಾದಿಗಳನ್ನು ರಚಿಸಿ, ಉತ್ಪಾದಿಸಿ, ಪರಿಶೀಲಿಸಿ ಉತ್ತಮವಾದವುಗಳನ್ನು ಪ್ರತ್ಯೇಕಿಸಿದ ನಂತರ ಈ  ಉಡುಪುಗಳನ್ನು ಇತರ ಕಂಪನಿಗಳಿಗೆ ಮಾರಾಟ ಮಾಡಬಹದು.  ಸಿದ್ಧ ಉಡುಪುಗಳಿಗೆ ತಮ್ಮದೇ ಲೇಬಲ್ ಹಚ್ಚಿ ಈ ಕಂಪನಿಗಳು ಮಾರಾಟ ಮಾಡುತ್ತವೆ. ಪ್ರಸಿದ್ಧ ಸಿನಿಮಾ ನಟನಟಿಯರು, ಕ್ರಿಕೆಟ್ ಆಟಗಾರರು ಮುಂತಾದವರನ್ನು ಮಾಡೆಲ್ ಮಾಡಿಕೊಂಡು ಈ ಕಂಪನಿಗಳು ಉಡುಪುಗಳನ್ನು ವ್ಯಾಪಾರ ಮಾಡುತ್ತವೆ.  ಇಂಥ ಕಂಪನಿಗಳ ಬ್ರಾಂಡ್ ಪ್ರಸಿದ್ಧವಾದ ಕಾರಣ ಅವು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತವೆ.   ಓಡಿಎಮ್ ಕಂಪನಿಗಳು ವಿವಿಧ ಬ್ರಾಂಡ್ ಕಂಪನಿಗಳಿಗೆ ಬೇರೆ ಬೇರೆ ರೀತಿಯ ರಚನೆಗಳನ್ನು ಮಾರಾಟ ಮಾಡುತ್ತವೆ. ಇದರಿಂದ ಬ್ರಾಂಡ್ ಕಂಪನಿಗಳು ಮಾರಾಟ ಮಾಡುವ ಪದಾರ್ಥಗಳಲ್ಲಿ ವ್ಯತ್ಯಾಸ ಇರುತ್ತದೆ.  ಇದಕ್ಕೆ ವಿರುದ್ಧವಾಗಿ ಕಾಂಟ್ರಾಕ್ಟ್ ಮ್ಯಾನುಫ್ಯಾಕ್ಚರರ್ ಎಂದರೆ ಬ್ರಾಂಡ್ ಕಂಪನಿಯ ರಚನೆಗೆ ಅನುಗುಣವಾಗಿ ಪದಾರ್ಥವನ್ನು ತಯಾರಿಸಿ ಪೂರೈಸುವವರು. ಉದಾಹರಣೆಗೆ ಬ್ರಾಂಡ್ ಕಂಪನಿಯೊಂದು ನೀಡಿದ ಹೊಸ ಮಾದರಿಯ ಉಡುಪನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಪೂರೈಸುವುದು.

ಗ್ಲೋಬಲೀಕರಣದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಓಡಿಎಂ ಎಂಬುದು ಹೆಚ್ಚು ಪ್ರಚಲಿತ. ಚೈನಾ, ಭಾರತ, ವಿಯೆಟ್ನಾಯಂ, ಬಾಂಗ್ಲಾದೇಶ್ ಮುಂತಾದ ದೇಶಗಳಲ್ಲಿ ಉಡುಪುಗಳು, ಬೂಟುಗಳು, ಇತ್ಯಾದಿ ಸರಕುಗಳನ್ನು ಸ್ಥಳೀಯ ಕಂಪನಿಗಳಿಂದ ಮಾಡಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರುವುದು ಮಲ್ಟಿನ್ಯಾಷನಲ್ ಕಂಪನಿಗಳಿಗೆ  ಲಾಭದಾಯಕ.  ಏಕೆಂದರೆ -

  1. ಸ್ಥಳೀಯ ಕಂಪನಿಗಳಿಗೆ ತಮ್ಮ ದೇಶದ ಜನರು ಯಾವ ಬಗೆಯ ರಚನೆಗಳನ್ನು ಇಷ್ಟ ಪಡುತ್ತಾರೆಂಬುದು ಗೊತ್ತಿರುತ್ತದೆ
  2. ಕೆಲವೊಮ್ಮೆ ಒಂದು ಬ್ರಾಂಡ್ ಕಂಪನಿಗೆ ವಿಪರೀತ ಹೆಚ್ಚು ಮಾರುಕಟ್ಟೆಯಿದ್ದಾಗ ಪೂರೈಕೆ ಕಷ್ಟ. ಆಗ ಸ್ಥಳೀಯ ಕಂಪನಿಗಳಿಂದ ಉತ್ಪನ್ನಗಳನ್ನು ಕೊಳ್ಳುವುದು ಹೆಚ್ಚು ಸೂಕ್ತ.
  3. ಸ್ಥಳೀಯ ಕಂಪೆನಿಗಳಲ್ಲಿ ಉತ್ಪಾದನೆ ಮಾಡುವಾಗ ಕಾರ್ಮಿಕರಿಗೆ ನೀಡುವ ಕೂಲಿ ಕಡಿಮ
  4. ಅಮೆರಿಕಾ ಮುಂತಾದ ದೇಶಗಳಲ್ಲಿ ತಯಾರಿಸಿ ಸರಕುಗಳನ್ನು  ದೂರದ ದೇಶಗಳಿಗೆ ಒಯ್ದು ಮಾರುವುದಕ್ಕಿಂತ ಸ್ಥಳೀಯ ಪ್ರದೇಶಗಳಲ್ಲಿ ಉತ್ಪನ್ನ ಮಾಡುವುದರಲ್ಲಿ ಸಾಗಾಣಿಕೆಯ ಖರ್ಚು ಕಡಿಮೆ.
  5. ಕೆಲವೊಮ್ಮೆ ಪದಾರ್ಥದ ರಚನೆಯ ಪೇಟೆಂಟ್ ಸ್ಥಳೀಯ ಕಂಪನಿಗಳ ಬಳಿ ಇರುವುದು ಕೂಡಾ ಓಡಿಎಂ ಮಾದರಿಯು ಜನಪ್ರಿಯವಾಗಲು ಕಾರಣ
  6. ಪರರಾಷ್ಟ್ರದ ಕಂಪನಿಯು ತನ್ನ ಶಾಖೆ ಸ್ಥಾಪಿಸಿ ಉತ್ಪನ್ನ ಮಾಡಲು ಕೆಲವು ದೇಶಗಳಲ್ಲಿಅನೇಕ ಕಾನೂನುಗಳ ಅಡಚಣೆಗಳು ಇರುತ್ತವೆ.

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಓಡಿಎಮ್ ಮಾದರಿಯು ಹೆಚ್ಚು ಜನಪ್ರಿಯವಾಗಿದೆ.  ಉದಾಹರಣೆಗೆ ಇಂಟೆಲ್ ಕಂಪನಿಯು ಲ್ಯಾಪ್ ಟಾಪ್ ತಯಾರಿಕೆಯನ್ನು ತ್ವರಿತಗೊಳಿಸಲು ಎಂಟು ಭಾರತೀಯ ಓಡಿಎಂಗಳೊಂದಿಗೆ ಸಂಬಂಧ ಹೊಂದುವುದಾಗಿ ಪ್ರಕಟಿಸಿದೆ. ಇವುಗಳ ಹೆಸರುಗಳು ಹೀಗಿವೆ - ಭಗವತಿ ಪ್ರಾಡಕ್ಟ್ಸ್, ಡಿಕ್ಸನ್ ಟೆಕ್ನಾಲಜೀಸ್ ಇಂಡಿಯಾ, ಕೇನ್ಸ್ ಟೆಕ್ನಾಲಜಿ ಇಂಡಿಯಾ, ಆಪ್ಟಿಮಸ್ ಎಲೆಕ್ಟ್ರಾನಿಕ್ಸ್, ಪೆನಾಶ್ ಡಿಜಿಲೈಫ್, ಸ್ಮೈಲ್  ಎಲೆಕ್ಟ್ರಾನಿಕ್ಸ್,  ಸಿರ್ಮಾ ಎಸ್ಜಿಎಸ್ ಟೆಕ್ನಾಲಜಿ ಮತ್ತು ವಿವಿಡಿಎನ್  ಟೆಕ್ನಾಲಜೀಸ್.  ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಓಡಿಎಂಗಳ ಒಂದು ಪಟ್ಟಿ ಇಲ್ಲೂ ಸಿಕ್ಕುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "ODM".
"https://kn.wikipedia.org/w/index.php?title=ಓಡಿಎಂ&oldid=1259151" ಇಂದ ಪಡೆಯಲ್ಪಟ್ಟಿದೆ