ಒರ್ವ್ಯೇಟೊ
ಒರ್ವ್ಯೇಟೊ: ಮಧ್ಯ ಇಟಲಿಯ ಟೆರ್ನಿ ಪ್ರಾಂತ್ಯದ ಅಂಬ್ರಿಯ ಪ್ರದೇಶದಲ್ಲಿರುವ ಐತಿಹಾಸಿಕ ನಗರ.
Orvieto | |
---|---|
Città di Orvieto | |
Country | Italy |
Region | Umbria |
Province | Terni (TR) |
Frazioni | Bagni di Orvieto, Bardano, Baschi Scalo, Benano, Biagio, Botto di Orvieto, Canale di Orvieto, Canonica, Capretta, Ciconia, Colonnetta di Prodo, Corbara, Fossatello, Morrano, Orvieto Scalo, Osteria Nuova, Padella, Prodo, Rocca Ripesena, San Faustino, Sferracavallo, Stazione di Castiglione, Sugano, Titignano, Tordimonte, Torre San Severo |
Government | |
• Mayor | Roberta Tardani[೧] (P) |
Area | |
• Total | ೨೮೧.೨೭ km೨ (೧೦೮.೬೦ sq mi) |
Elevation | ೩೨೫ m (೧,೦೬೬ ft) |
Population (31 December 2017) | |
• Total | ೨೦,೨೫೩ |
• Density | ೭೨/km೨ (೧೯೦/sq mi) |
Demonym | Orvietani |
Time zone | UTC+1 (CET) |
• Summer (DST) | UTC+2 (CEST) |
Postal code | 05018 |
Dialing code | 0763 |
Patron saint | St. Joseph[೨] |
Saint day | 19 March |
Website | Official website |
ರೋಮಿನಿಂದ 126 ಕಿಮೀ ದೂರದಲ್ಲಿದೆ. ಇದು ಟುಫಾ ಜ್ವಾಲಾಮುಖಿ ಪ್ರದೇಶದಲ್ಲಿ, ಸಮತಟ್ಟಾದ ಎತ್ತರವಾದ ಬೆಟ್ಟದ ಕಿರೀಟದಂತೆ, ಟೈಬರ್ನದಿಯ ಉಪನದಿಯಾದ ಪಾಗ್ಲಿಯದ ದಂಡೆಯ ಮೇಲಿದೆ. 12-13ನೆಯ ಶತಮಾನದಲ್ಲಿ ಕಟ್ಟಿದ ಮಧ್ಯಯುಗೀನ ಕಟ್ಟಡಗಳಿಗೂ ಇಕ್ಕಟ್ಟಾದ ಅಂಕುಡೊಂಕಾದ ರಸ್ತೆಗಳಿಗೂ ಇದು ಪ್ರಸಿದ್ಧ.
ವ್ಯಾಪಾರ ವ್ಯವಹಾರ
ಬದಲಾಯಿಸಿಈ ನಗರದ ಸುತ್ತಮುತ್ತ ಅತ್ಯುತ್ತಮ ಬೇಸಾಯ ನಡೆಯುವುದರಿಂದ ಇದು ಮುಖ್ಯವಾದ ಸ್ಥಳೀಯ ವ್ಯಾಪಾರಕೇಂದ್ರ. ರುಚಿಮಧುರ ವೈನ್ ಇಲ್ಲಿ ತಯಾರಾಗುತ್ತದೆ. ಕಲಾತ್ಮಕ ಹಂಚು, ಕಬ್ಬಿಣದ ಸಾಮಾನು, ಅಲಂಕಾರಯುಕ್ತವಾದ ಕಲಾಬತ್ತಿನ ದಾರ-ಇವನ್ನೂ ಇಲ್ಲಿ ತಯಾರಿಸಲಾಗುತ್ತದೆ. ರೋಮಿನಿಂದ ಫ್ಲಾರೆನ್ಸಿಗೆ ಹೋಗುವ ರೈಲುಮಾರ್ಗ ಈ ಕಣಿವೆ ಪ್ರದೇಶವನ್ನು ಹಾದುಹೋಗುತ್ತದೆ.
ಪ್ರೇಕ್ಷಣೀಯ ಸ್ಥಳಗಳು
ಬದಲಾಯಿಸಿಇಲ್ಲಿರುವ ಪ್ರಸಿದ್ಧ ಕೆಥೆಡ್ರಲನ್ನು ಕಟ್ಟಲಾರಂಭಿಸಿದ್ಧು 1290ರಲ್ಲಿ. ಮಧ್ಯಯುಗದ ಅನೇಕ ಚಿತ್ರಕಲಾವಿದರು ಇದನ್ನಲಂಕರಿಸಿದ್ದಾರೆ. ಉಳಿದ ಪ್ರೇಕ್ಷಣೀಯ ಮಂದಿರಗಳೆಂದರೆ ಸಾನ್ ಅಂಡ್ರ್ಯೊ ಚರ್ಚ್, ಪ್ಲಾಜೋ ಕಮ್ಯೂನೇಲ್ ಮತ್ತು ಪ್ಲಾಜೊ ಡೆಲ್ ಪೊಪೊಲೊ. ಆರನೆಯ ಕ್ಲೆಮೆಂಟಿನ ಕಾಲದಲ್ಲಿ ಕಟ್ಟಿದ ಸಾನ್ ಪ್ರೆಟ್ರಿಜಿಯೊ ಕೂಡ ಪ್ರೇಕ್ಷಣೀಯ.
ಇತಿಹಾಸ
ಬದಲಾಯಿಸಿಈ ನಗರ ಹಿಂದೆ ಎಟ್ರುಸ್ಕನರದಾಗಿದ್ದು ಅನಂತರ ರೋಮನರ ಕೈಸೇರಿತು. ಇಲ್ಲಿ ಗಾಥಿಕರೂ ಬೈಜಾಂಟಿಯನ್ನರೂ ಲೊಂಬಾರ್ಡರೂ ಆಳಿದರು.
ಉಲ್ಲೇಖಗಳು
ಬದಲಾಯಿಸಿ- ↑ "Comune di Orvieto". Elezioni.interno.it. Archived from the original on 17 December 2014. Retrieved 17 December 2014.
- ↑ Saint Joseph, sqpn.com; accessed 26 March 2015.