ಅಸಭ್ಯತೆ

(ಒರಟು ಇಂದ ಪುನರ್ನಿರ್ದೇಶಿತ)

ಅಸಭ್ಯತೆ ಎಂದರೆ ಒಂದು ಗುಂಪು ಅಥವಾ ಸಂಸ್ಕೃತಿಯ ಸಾಮಾಜಿಕ ರೂಢಿಗಳು ಅಥವಾ ಶಿಷ್ಟಾಚಾರದ ಅನುಸರಣೆ ಮಾಡದಿರುವುದರ ಮೂಲಕ ಅಗೌರವದ ಪ್ರದರ್ಶನ. ಈ ರೂಢಿಗಳು ಸಾಧಾರಣವಾಗಿ ಸ್ವೀಕೃತವಾದ ವರ್ತನೆಯ ಅತ್ಯಗತ್ಯ ಗಡಿರೇಖೆಗಳಾಗಿ ಸ್ಥಾಪಿತವಾಗಿವೆ. ಒಬ್ಬರ ವರ್ತನೆಯನ್ನು ಸಾಮಾನ್ಯ ಜನರಿಗೆ ಸಾಮಾಜಿಕವಾಗಿ ಸ್ವೀಕಾರಾರ್ಹವೆಂದು ಪರಿಚಿತವಾಗಿರುವ ಈ ರೂಢಿಗಳೊಂದಿಗೆ ಸರಿದೂಗಿಸಿಕೊಳ್ಳುವಲ್ಲಿ ಅಸಮರ್ಥವಾಗಿರುವುದು ಅಥವಾ ಇಷ್ಟವಿಲ್ಲದಿರುವುದು ಅಸಭ್ಯತೆಯಾಗುತ್ತದೆ ಮತ್ತು ಇವನ್ನು ಸಾಮಾಜಿಕ ಕಾನೂನಿಂತೆ ಜಾರಿಗೊಳಿಸಲಾಗುತ್ತದೆ, ಮತ್ತು ಅನುಕ್ರಮವಾಗಿ ಉಲ್ಲಂಘಿಸುವವರಿಗೆ ಅಥವಾ ಪ್ರತಿಪಾದಕರಿಗೆ ಸಾಮಾಜಿಕ ಪರಿಣಾಮಗಳು ಅಥವಾ ಬಹುಮಾನಗಳು ಇರುತ್ತವೆ. ಅಸಭ್ಯತೆಯಲ್ಲಿ ಒಂದು ನಿರ್ದಿಷ್ಟ ಸಾಮಾಜಿಕ ಸಂದರ್ಭದಲ್ಲಿ ಯಾವುದು ವಿವೇಚನೆ ಎಂದು ಪರಿಗಣಿತವಾಗುತ್ತದೆಯೊ ಅದರಿಂದ ಮಾರ್ಗಾಂತರ ಸೇರಿರುತ್ತದೆ. ಅಸಭ್ಯತೆಯು ಅಂತರ್ಗತವಾಗಿ ವಿರೋಧಿಯಾಗಿರುತ್ತದೆ ಮತ್ತು ಸಾಮಾಜಿಕ ಸಮತೋಲನಕ್ಕೆ ಅಡ್ಡಿಪಡಿಸುತ್ತದೆ. ಅಸಭ್ಯತೆ, ವಿಶೇಷವಾಗಿ ಮಾತಿನ ವಿಷಯದಲ್ಲಿ, ತನ್ನ ಕೇಂದ್ರದಲ್ಲಿ ಅಗತ್ಯವಾಗಿ ವಿರೋಧಿಯಾಗಿರುತ್ತದೆ.

ಅಸಭ್ಯತೆಯ ರೂಪಗಳಲ್ಲಿ ವಿಚಾರಶೂನ್ಯನಂತೆ, ಸೂಕ್ಷ್ಮಗ್ರಾಹಿಯಲ್ಲದಂತೆ, ಉದ್ದೇಶಪೂರ್ವಕವಾಗಿ ಮನನೋಯಿಸುವಂತೆ, ವಿನಯವಿಲ್ಲದಂತೆ ನಟಿಸುವುದು, ಮರ್ಯಾದೋಲ್ಲಂಘನೆ, ಅಶ್ಲೀಲತೆ, ಧರ್ಮನಿಂದೆ ಮತ್ತು ವಿಲಕ್ಷಣತೆಯಂತಹ ನಿಷೇಧಗಳನ್ನು ಉಲ್ಲಂಘಿಸುವುದು ಸೇರಿವೆ. ಕೆಲವು ಸಂದರ್ಭಗಳಲ್ಲಿ, ಅಸಭ್ಯತೆಯ ಒಂದು ಕ್ರಿಯೆಯು ಅಪರಾಧವಾಗುವಷ್ಟು ದೂರಕ್ಕೆ ಹೋಗಬಹುದು, ಉದಾಹರಣೆಗೆ ದ್ವೇಷಪೂರ್ಣ ಭಾಷಣದ ಅಪರಾಧ.

ಯಾವುದು ಒರಟು ಮಾತಿನಲ್ಲಿ ಸೇರಿರುತ್ತದೆ ಎಂಬುದು ಸಂಸ್ಕೃತಿ, ಹಿನ್ನೆಲೆ ಮತ್ತು ಸಂಸ್ಕೃತಿಯಲ್ಲಿ ಮಾತನಾಡುವವನ ಸಾಮಾಜಿಕ ಸ್ಥಾನಮಾನವನ್ನು ಅವಲಂಬಿಸಿರುತ್ತದೆ. ಪ್ರತಿ ಸಂಸ್ಕೃತಿಯಲ್ಲಿ, ಕೆಲವು ಶಬ್ದಗಳು ಅಥವಾ ವಾಕ್ಯಗಳನ್ನು ದ್ವೇಷಪೂರ್ಣ ಮಾತು ಅಥವಾ ಸೂಕ್ತವಲ್ಲದ ಜನಾಂಗೀಯ ನಿಂದನೆಗಳು ಎಂದು ಪರಿಗಣಿಸಲಾಗುತ್ತದೆ. ಬಹುತೇಕ ಆಧುನಿಕ ಸಂಸ್ಕೃತಿಗಳಲ್ಲಿ, ಒಬ್ಬ ವ್ಯಕ್ತಿ ಅಥವಾ ಜನರ‍ ಒಂದು ಗುಂಪನ್ನು ಅವಮಾನಿಸುವುದನ್ನು, ವಿಶೇಷವಾಗಿ ತಮ್ಮ ಪ್ರತ್ಯಕ್ಷ ನಿಯಂತ್ರಣದ ಹೊರಗಿನ ಯಾವುದೇ ಕಾರಣಕ್ಕಾಗಿ (ಉದಾಹರಣೆಗೆ ಒಂದು ವೈದ್ಯಕೀಯ ಸ್ಥಿತಿಯನ್ನು ಹೊಂದಿರುವುದು, ಒಂದು ನಿರ್ದಿಷ್ಟ ಧರ್ಮವನ್ನು ಅನುಸರಿಸುವುದು, ಅಥವಾ ಬಡವನಾಗಿರುವುದು), ಒರಟುತನವೆಂದು ಪರಿಗಣಿಸಲಾಗುತ್ತದೆ. ಒರಟು ಮಾತಿನಲ್ಲಿ ಒಬ್ಬ ವೈಯಕ್ತಿಕ ವ್ಯಕ್ತಿಯನ್ನು ವರ್ಣಿಸುವ ಅವಹೇಳನಕಾರಿ ಪದಗಳು ಮತ್ತು ಸೂಕ್ತವಲ್ಲದ ಪ್ರಶ್ನೆಗಳನ್ನು ಕೇಳುವುದು ಅಥವಾ ಒಂದು ಪ್ರಶ್ನೆಗೆ ಉತ್ತರಗಳನ್ನು ಕೊಡುವಂತೆ ಒತ್ತಾಯಪಡಿಸುವುದು ಕೂಡ ಸೇರಿರುತ್ತವೆ.

"https://kn.wikipedia.org/w/index.php?title=ಅಸಭ್ಯತೆ&oldid=862812" ಇಂದ ಪಡೆಯಲ್ಪಟ್ಟಿದೆ