ಮೋಹಕ ಲಾವಣ್ಯ

(ಒನಪು ಇಂದ ಪುನರ್ನಿರ್ದೇಶಿತ)

ಮೋಹಕ ಲಾವಣ್ಯ (ಗ್ಲ್ಯಾಮರ್) ಎಂದರೆ ಒಂದು ವಿಶೇಷವಾಗಿ ಐಷಾರಾಮಿ ಅಥವಾ ಸೊಗಸಾದ ನೋಟವು ಸೃಷ್ಟಿಸುವ ಆಕರ್ಷಣೆ ಅಥವಾ ಸೆಳೆತದ ಪ್ರಭಾವ, ಅಂದರೆ ವಾಸ್ತವವನ್ನು ತೀಕ್ಷ್ಣಗೊಳಿಸುವ ಪ್ರಭಾವ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ, ಘಟನೆ, ಸ್ಥಳ, ತಂತ್ರಜ್ಞಾನ, ಅಥವಾ ಉಡುಪಿನಂತಹ ಒಂದು ಉತ್ಪನ್ನವು ಮೋಹಕವಾಗಿರಬಹುದು ಅಥವಾ ಮೋಹಕತೆಯನ್ನು ಸೇರಿಸಬಹುದು. ಮೋಹಕ ಲಾವಣ್ಯವು ಯಶಸ್ವಿಯಾಗಬೇಕಾದರೆ ಅದಕ್ಕೆ ಸುಮಾರು ಯಾವಾಗಲೂ ಸ್ಪ್ರೆಜ಼ಟ್ಯೂರಾದ (ನಿರಾಯಾಸತೆಯ ಉಪಸ್ಥಿತಿ ಮತ್ತು ದೂರವಿರುವಂತೆ ಕಾಣುವುದು) ಅಗತ್ಯವಿರುತ್ತದೆ, ಪ್ರತಿದಿನವನ್ನು ಮೀರಿಸುವಂಥದ್ದು, ಸ್ವಲ್ಪ ನಿಗೂಢವಾಗಿರುವುದು ಮತ್ತು ಸ್ವಲ್ಪ ಆದರ್ಶೀಕೃತವಾಗಿರುವುದು, ಆದರೆ ಮುಂದೆ ವ್ಯಕ್ತಿಯೊಂದಿಗೆ ಗುರುತಿಸಲು ಸಾಧ್ಯವಿಲ್ಲದಷ್ಟು ಮಟ್ಟಿಗೆ ಅಲ್ಲ ಎಂದು ಲೇಖಕಿ ಪೋಸ್ಟ್ರೆಲ್ ಹೇಳುತ್ತಾರೆ. ಮೋಹಕ ವಸ್ತುಗಳು ಎಲ್ಲವನ್ನೂ ಅಡಗಿಸುವಂಥ ಅಪಾರದರ್ಶಕವಾಗಿರುವುದಿಲ್ಲ, ಮತ್ತು ಎಲ್ಲವನ್ನೂ ತೋರಿಸುವಂಥ ಪಾರದರ್ಶಕ ಕೂಡ ಆಗಿರುವುದಿಲ್ಲ, ಬದಲಾಗಿ ಅರೆಪಾರದರ್ಶಕವಾಗಿರುತ್ತವೆ, ಅಂದರೆ ವಸ್ತುಗಳನ್ನು ಅನುಕೂಲಕರವಾಗಿ ತೋರಿಸುವಂಥದ್ದು ಆಗಿರುತ್ತವೆ.[]

ಹೆಡಿ ಲಮಾರ್ ಒಬ್ಬ ಮೋಹಕ ತಾರೆ ಎಂದು ಪರಿಗಣಿತರಾಗಿದ್ದರು

ವಿಶೇಷವಾಗಿ ಮುಂಚಿನ ಹಾಲಿವುಡ್ ತಾರಾವ್ಯವಸ್ಥೆಯು ಹಾಲಿವುಡ್ ಗ್ಲ್ಯಾಮರ್‌ನಲ್ಲಿ ವಿಶೇಷೀಕರಿಸುತ್ತಿತ್ತು, ಅಂದರೆ ತಮ್ಮ ನಟರು ಮತ್ತು ನಟಿಯರನ್ನು ವ್ಯವಸ್ಥಿತವಾಗಿ ಮನಮೋಹಕಗೊಳಿಸುತ್ತಿತ್ತು. ಮೋಹಕ ಲಾವ್ಯಣವನ್ನು ಒಂದು ಶೈಲಿಯೊಂದಿಗೆ (ಅಂದರೆ ಒಂದು ನಿರ್ದಿಷ್ಟ ಫ಼್ಯಾಷನ್ ಪರಂಪರೆಯೊಂದರ, ಅಥವಾ ಆಂತರಿಕ ಸೌಂದರ್ಯದೊಂದಿಗೆ ಬದ್ಧತೆ) ತಪ್ಪಾಗಿ ತಿಳಿಯಬಹುದು; ಆದರೆ ಗ್ಲ್ಯಾಮರ್ ಬಾಹ್ಯ ಮತ್ತು ಉದ್ದೇಶಪೂರ್ವಕವಾಗಿರಬಹುದು.

ವಾಸ್ತುಶಿಲ್ಪದ ಅನೇಕ ರೂಪಗಳು ನೀರಸವೆನಿಸಬಹುದಾದಂಥ ಕಟ್ಟಡಗಳ ನೋಟವನ್ನು ಹೆಚ್ಚಿಸಲು ಮೋಹಕ ಅಲಂಕಾರ ಸಂಕೇತಗಳನ್ನು ಬಳಸುತ್ತವೆ. ಸಾಮಾನ್ಯವಾಗಿ ಆರ್ಟ್ ಡೆಕೊ ಶೈಲಿಯನ್ನು ಒಂದು ಮೋಹಕ ಶೈಲಿ ಎಂದು ಪರಿಗಣಿಸಲಾಗುತ್ತದೆ. ಆರ್ಥಿಕ ಮುಗ್ಗಟ್ಟು ಮತ್ತು ಅದರ ಪರಿಣಾಮದ ನಂತರ ಬಂದ ೧೯೩೦ರ ದಶಕ ಮತ್ತು ೧೯೪೦ರ ದಶಕವು "ಹಾಲಿವುಡ್ ಗ್ಲ್ಯಾಮರ್"ನ ಸುವರ್ಣಯುಗವಾಗಿತ್ತು. "ಮೋಹಕ ಲಾವಣ್ಯವು ಕೀಯಾರಸ್ಕ್ಯೂರೋದ ಪರಿಣಾಮವಾಗಿದೆ, ಅಂದರೆ ಮುಖದ ಪ್ರದೇಶದ ಮೇಲೆ ಬೆಳಕಿನ ಆಟದ ಪರಿಣಾಮ, ಸಂಯೋಜನೆಯ ಮೂಲಕ, ಕೂದಲಿನ ದ್ವಾರದ ಮೂಲಕ ಸುತ್ತಮುತ್ತಲಿನ ಬಳಕೆ ಮತ್ತು ಕಣ್ಣುಗಳಲ್ಲಿ ರಹಸ್ಯಮಯ ನೆರಳುಗಳನ್ನು ಸೃಷ್ಟಿಸುವುದು. ಹಾಲಿವುಡ್‍ನಲ್ಲಿ, ಮಾರ್ಲೀನ್ ಡಿಯೆಟ್ರಿಚ್, ಕ್ಯಾರೋಲ್ ಲೊಂಬಾರ್ಡ್, ರೀಟಾ ಹೇವರ್ತ್ ಮತ್ತು ಡೋಲೊರೆಸ್ ಡೆಲ್ ರಿಯೊದಂತಹ ದೂರದ ವ್ಯಕ್ತಿತ್ವದ ತಾರೆಗಳು ಮೋಹಕ ಲಾವಣ್ಯ, ತಂತ್ರಜ್ಞಾನ ಮತ್ತು ಅದರ ಸ್ವಂತದ ಸೌಂದರ್ಯವನ್ನು ಶುದ್ಧೀಕರಿಸುವ ಇಚ್ಛೆಯ ಮಾಲೀಕರಾಗಿದ್ದಾರೆ ಮತ್ತು ಅವುಗಳನ್ನು ಪಡೆಯುತ್ತಾರೆ", ಎಂದು ಚಲನಚಿತ್ರೋದ್ಯಮಿ ಜೋಸೆಫ಼್ ವಾನ್ ಸ್ಟರ್ನ್‌ಬರ್ಗ್ ಹೇಳುತ್ತಾರೆ.

ಉಲ್ಲೇಖಗಳು

ಬದಲಾಯಿಸಿ
  1. "The Gilded Age". The New York Times. 2004-10-10. Retrieved 2010-05-03.