ಒತ್ತಿದ ಲೋಹಗಳು
ಕಾಯಿಸದೆ ಒತ್ತುಯಂತ್ರಗಳ ನೆರವಿನಿಂದ ಬೇಕಾದ ಆಕಾರ ನೀಡಿದ ಲೋಹವಸ್ತುಗಳು (ಪ್ರೆಸ್ಡ್‌ಮೆಟಲ್ಸ್). ಇಂಥ ಲೋಹಗಳಿಗೆ ಸಹ ಈ ಹೆಸರಿದೆ. ಲೋಹದ ತಗಡು ಅಥವಾ ತುಂಡನ್ನು ಒತ್ತುಯಂತ್ರಗಳಲ್ಲಿ ನಿರ್ದಿಷ್ಟ ಆಕಾರಕ್ಕೆ ಬಗ್ಗಿಸಬೇಕಾದರೆ ಅದರಲ್ಲಿ ಇಂಗಾಲಾಂಶ ಕಡಿಮೆ ಇರಬೇಕು.
ಬಳಸುವ ಲೋಹಗಳು
ಬದಲಾಯಿಸಿಒತ್ತಿದ ಲೋಹವಸ್ತುಗಳ ತಯಾರಿಕೆಯಲ್ಲಿ ಬಳಸುವ ಲೋಹಗಳೆಂದರೆ ಅಲ್ಯೂಮಿನಿಯಂ ಮತ್ತು ಅದರ ಮಿಶ್ರಲೋಹಗಳು, ಇಂಗಾಲಾಂಶ ಕಡಿಮೆ ಇರುವ ಉಕ್ಕು, ತುಕ್ಕುಹಿಡಿಯದ ಉಕ್ಕು (ಸ್ಟೇನ್ಲೆಸ್ ಸ್ಟೀಲ್), ತವರ, ತಾಮ್ರ, ಹಿತ್ತಾಳೆ, ಕಂದುಬಣ್ಣದ ಕಂಚು, ಸತು, ಮೆಗ್ನೀಸಿಯಂ, ನಿಕಲ್, ಸರ್ಕೋವಿಯಂ-ಇತ್ಯಾದಿ. ಒತ್ತಿದ ಈ ಲೋಹಗಳಿಗೆ ಕೈಗಾರಿಕೆಗಳಲ್ಲಿ ವಿಶೇಷ ಪ್ರಾಮುಖ್ಯವಿದೆ. ವಾತಾವರಣದ ಉಷ್ಣತೆಯಲ್ಲಿಯೇ ಒತ್ತುಲೋಹಗಳ ತಯಾರಿಕೆ ಸಾಮಾನ್ಯವಾದರೂ ಕೆಲವು ಲೋಹಗಳು ಮತ್ತು ಮಿಶ್ರಲೋಹಗಳು ಏರಿದ ಉಷ್ಣತೆಯಲ್ಲಲ್ಲದೆ ವಾತಾವರಣದ ಉಷ್ಣತೆಯಲ್ಲಿ ಸಾಕಷ್ಟು ಮೆತುವಾಗಿರುವುದಿಲ್ಲ. ಆದ್ದರಿಂದ ಕೆಲವೊಮ್ಮೆ ಲೋಹದ ತಗಡು ಮತ್ತು ಛಾಪ (ಡೈ) ಇವೆರಡನ್ನೂ ಸುಮಾರು 2550-8150 ಸೆಂ. ವರೆಗೆ ಕಾಯಿಸುವುದು ಅನಿವಾರ್ಯ. ಆಮೇಲೆ ಅದಕ್ಕೆ ಬೇಕಾದ ರೂಪ ನೀಡುವುದು ಸುಲಭ. ಒತ್ತಿದ ಲೋಹಗಳಿಗೂ ಬೆಂಕಿಯಲ್ಲಿ ಕಾಯಿಸಿ ಬಡಿದ ಅಥವಾ ಎರಕಹೊಯ್ದ ಲೋಹಗಳಿಗೂ ಸ್ಪಷ್ಟವ್ಯತ್ಯಾಸವಿದೆ. ಎರಡನೆಯ ತರದ ಲೋಹದ ಘನಾಕೃತಿಯಲ್ಲಿ ವಿವಿಧ ಮಂದಗಳು ಇರಬಹುದು. ಒತ್ತಿದ ಲೋಹಕ್ಕೆ ಚಪ್ಪಟೆ ಅಥವಾ ಶಂಖರೀತಿಯ ಟೊಳ್ಳು ಆಕಾರ ಇರಬಹುದಾದರೂ ಅದರ ಗೋಡೆಗಳ ಮಂದ ಒಂದೇ ಇರುತ್ತದೆ. ಕೆಲವು ವಿಶಿಷ್ಟ ಉಪಕರಣಗಳನ್ನು ಬಳಸಿ ವಿವಿಧ ಮಂದದ ಗೋಡೆಗಳನ್ನು ಪಡೆಯಬಹುದು, ನಿಜ. ಆದರೂ ಸಾಮಾನ್ಯವಾಗಿ ಕಚ್ಚಾವಸ್ತುವಾಗಿ ಉಪಯೋಗಿಸಿದ ತಗಡಿನ ಮಂದ " ಇದ್ದರೆ ರೂಪುಗೊಂಡ ಒತ್ತಿದ ಲೋಹದ ಗೋಡೆಯ ಮಂದವೂ ಅಷ್ಟೇ ಇರುವುದು.
ಇತಿಹಾಸ
ಬದಲಾಯಿಸಿಲೋಹದ ಎರಕ ಹೊಯ್ಯುವಿಕೆ ಬಹಳ ಕಾಲದಿಂದಲೂ ಬಳಕೆಯಲ್ಲಿತ್ತು. ಆದರೆ ಅದು ಕೈಗಾರಿಕಾ ಪ್ರಪಂಚದಲ್ಲಿ ಲೋಹಗಳ ಪ್ರಮುಖ ಪಾತ್ರ ಗಳಿಸಿದ್ದು ಬೈಸಿಕಲ್ ಉತ್ಪಾದಕರಿಂದ. ಎರಕ ಹೊಯ್ದ ಲೋಹಗಳ ತೂಕ ಹೆಚ್ಚು ಮತ್ತು ಉತ್ಪಾದನೆಯ ವೆಚ್ಚ ಅಧಿಕ. ಬೈಸಿಕಲ್ಲುಗಳು ಜನಪ್ರಿಯವಾದಂತೆ ಅವುಗಳ ತೂಕ ಮತ್ತು ಉತ್ಪಾದನೆಯ ವೆಚ್ಚದ ನಿಯಂತ್ರಣ ಅನಿವಾರ್ಯವಾಯಿತು. ಆಗ ಒತ್ತಿದ ಲೋಹದ ಬಳಕೆ ಲಾಭದಾಯಕವೆನ್ನಿಸಿತು. ಇದು ಎರಕ ಹೊಯ್ದ ಮತ್ತು ಕಾಯಿಸಿ ಬಡಿದ ಲೋಹಗಳ ಸ್ಥಾನವನ್ನು ಸಂಪುರ್ಣವಾಗಿ ಆಕ್ರಮಿಸಿತು. ಈ ಕ್ಷೇತ್ರದಲ್ಲಿ ಮಾತ್ರ ಅಲ್ಲ, ತಾಂಡವಾಳದ ಪಾತ್ರೆಪರಟೆಗಳ ಸ್ಥಾನವನ್ನು ಸಹ ಒತ್ತಿದ ಉಕ್ಕು ಬಲುಬೇಗ ಕಸಿದುಕೊಂಡಿತು. ಇಂದು ಅಲ್ಯೂಮಿನಿಯಂ ಮತ್ತು ತುಕ್ಕುಹಿಡಿಯದ ಉಕ್ಕು ಆ ಸ್ಥಾನದಲ್ಲಿವೆ. ಒತ್ತಿದ ಲೋಹದ ಉಪಯೋಗವನ್ನು ಬಹಳಷ್ಟು ಹೆಚ್ಚಿಸಿದ ಕೀರ್ತಿ ಆಟೊಮೊಬೈಲುಗಳ ಉತ್ಪಾದಕರಿಗೆ ಸಲ್ಲಬೇಕು. 1930ರ ಸುಮಾರಿಗೆ ಎಂಜಿನ್ ಮತ್ತು ಮುಂದಿನ ಆಕ್ಸಲ್ ಗೇರುಗಳ ಹೊರತು ಮಿಕ್ಕೆಲ್ಲ ಮೋಟಾರಿನ ಭಾಗಗಳೂ ಒತ್ತಿದ ಲೋಹಗಳಿಂದಲೇ ತಯಾರಾದುವು. ಅದೇ ಸಮಯಕ್ಕೆ ಉಕ್ಕಿನ ತಗಡನ್ನು ಉರುಳಿಸುವ ವಿಧಾನ ಬಹಳವಾಗಿ ಸುಧಾರಿಸಿತು. ಇದರಿಂದಾಗಿ ಸಾಲುಯಂತ್ರಗಳಲ್ಲಿ 4"-5" ಮಂದವಿರುವ ಲೋಹದ ಚಪ್ಪಡಿಗಳನ್ನು " ಕಡಿಮೆ ಮಂದಕ್ಕೆ, ಒಂದೇ ಸಾರಿಗೆ ಇಳಿಸಲು ಸಾಧ್ಯವಾಯಿತು. ಇನ್ನೂ ಮುಂದುವರಿದು " ಮಂದದ ತಗಡುಗಳನ್ನು ಜನಪ್ರಿಯ " ಮುಂದಕ್ಕೆ ಪರಿವರ್ತಿಸುವುದು ಶಕ್ತಿಯುತ ಯಂತ್ರಗಳ ನಿಮಾರ್ಣದಿಂದಾಗಿ ಸಾಧ್ಯವಾಯಿತು. ಈ ರೀತಿ ಸಾಲುಯಂತ್ರಗಳಿಂದ ಹೊರಬಿದ್ದ ತಗಡುಗಳ ಉತ್ಪಾದನೆಯ ವೆಚ್ಚ ಕಡಿಮೆ. ಗುಣ ಹಿರಿಯಮಟ್ಟದ್ದು. ಈಗ ಅಲ್ಯೂಮಿನಿಯಂ, ಹಿತ್ತಾಳೆ ಮತ್ತು ತಾಮ್ರದ ಕೈಗಾರಿಕೆಗಳಲ್ಲಿ ಸಾಲುಯಂತ್ರಗಳನ್ನು ಅಧಿಕವಾಗಿ ಬಳಸುತ್ತಾರೆ.
ಉಪಯೋಗಗಳು
ಬದಲಾಯಿಸಿಉತ್ಪಾದಕರು ಒತ್ತಿದ ಲೋಹಗಳನ್ನು ಕಾಯಿಸಿ ಬಡಿದ ಮತ್ತು ಎರಕಹೊಯ್ದ ಲೋಹಗಳೊಂದಿಗೆ ಹೋಲಿಸಿದರು. ಒತ್ತಿದ ಲೋಹದ ಶ್ರೇಷ್ಠತೆ ಎದ್ದು ನಿಂತಿತು. ಕ್ಷೇತ್ರದಲ್ಲೂ ಅದನ್ನು ಬಳಸಲು ಪ್ರಯತ್ನಿಸಿದರು. ಪರಿಣಾಮವಾಗಿ ಇಂದು ಪಾತ್ರಪರಟೆಗಳು, ಕುರ್ಚಿ ಮೇಜುಗಳು, ಮೊಳೆ, ತಾಪಾಳು, ಒಳತಿರುಪು, ರೈಲ್ವೆ ಬೋಗಿಗಳು, ಜೆಟ್ ಎಂಜಿನುಗಳು[೧], ವಿಮಾನಗಳ ರಚನೆ ಮುಂತಾದವನೆಲ್ಲ ಒತ್ತಿದ ಲೋಹಗಳಿಂದ ತಯಾರಿಸಲಾಗುತ್ತದೆ.
ಉಲ್ಲೇಖ
ಬದಲಾಯಿಸಿ