ಬಲಾತ್ಕಾರ

(ಒತ್ತಾಯ ಇಂದ ಪುನರ್ನಿರ್ದೇಶಿತ)

ಬಲಾತ್ಕಾರ ಎಂದರೆ ಮತ್ತೊಂದು ಪಕ್ಷವನ್ನು ಬೆದರಿಕೆಗಳು ಅಥವಾ ಬಲವಂತದ ಬಳಕೆಯ ಮೂಲಕ ಅನೈಚ್ಛಿಕ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಒತ್ತಾಯಪಡಿಸುವ ಅಭ್ಯಾಸ. ಇದು ಒಂದು ಅಪೇಕ್ಷಿತ ಪ್ರತಿಕ್ರಿಯೆಯನ್ನು ಪ್ರೇರಿಸುವ ಸಲುವಾಗಿ ಒಬ್ಬ ವ್ಯಕ್ತಿಯ ಮುಕ್ತ ಮನಸ್ಸನ್ನು ಉಲ್ಲಂಘಿಸುವ ವಿವಿಧ ಪ್ರಕಾರಗಳ ಬಲವಂತದ ಕ್ರಿಯೆಗಳ ಸಮೂಹವನ್ನು ಒಳಗೊಳ್ಳುತ್ತದೆ, ಉದಾಹರಣೆಗೆ: ಒಬ್ಬ ಪುಂಡನು ಒಬ್ಬ ವಿದ್ಯಾರ್ಥಿಯ ಮುಂದೆ ಊಟಕ್ಕೆ ಹಣದ ಬೇಡಿಕೆ ಇಡುವುದು, ಇಲ್ಲವಾದರೆ ವಿದ್ಯಾರ್ಥಿಗೆ ಹೊಡೆತ ಬೀಳುವುದು ಎಂದು ಹೇಳುವುದು. ಈ ಕ್ರಿಯೆಗಳಲ್ಲಿ ಸುಲಿಗೆ, ಬೆದರಿಕೆ ವಸೂಲಿ, ಚಿತ್ರಹಿಂಸೆ, ಸಹಾಯಗಳನ್ನು ಪ್ರೇರಿಸಲು ಬೆದರಿಕೆಗಳು, ಅಥವಾ ಲೈಂಗಿಕ ಆಕ್ರಮಣ ಕೂಡ ಸೇರಿವೆ. ಕಾನೂನಿನಲ್ಲಿ, ಬಲಾತ್ಕಾರವನ್ನು ಬಲವಂತದ ಅಪರಾಧವೆಂದು ಕ್ರೋಡೀಕರಿಸಲಾಗಿದೆ. ಅಂತಹ ಕ್ರಿಯೆಗಳನ್ನು ಅವರ ಸ್ವಂತ ಹಿತಾಸಕ್ತಿಗಳ ವಿರುದ್ಧವಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಬಲಿಪಶುವಿಗೆ ಬಲವಂತಪಡಿಸಲು ಉಪಾಯವಾಗಿ ಬಳಸಲಾಗುತ್ತದೆ. ಬಲಾತ್ಕಾರವು ಬೆದರಿಕೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಸಲುವಾಗಿ ವಾಸ್ತವವಾದ ದೈಹಿಕ ನೋವು/ಗಾಯ ಅಥವಾ ಮಾನಸಿಕ ಹಾನಿಯನ್ನು ನೀಡುವುದನ್ನು ಒಳಗೊಳ್ಳಬಹುದು. ಮತ್ತಷ್ಟು ಹಾನಿಯ ಬೆದರಿಕೆಯು ಬಲವಂತಕ್ಕೊಳಪಡುತ್ತಿರುವ ವ್ಯಕ್ತಿಯ ಸಹಕಾರ ಅಥವಾ ವಿಧೇಯತೆಗೆ ಕಾರಣವಾಗಬಹುದು.

ಒಬ್ಬರ ಗುರಿಗಳನ್ನು ಬಲಿಪಶುವಿನ ಗುರಿಗಳಾಗಿ ಬದಲಿಸುವುದು ಬಲಾತ್ಕಾರದ ಉದ್ದೇಶವಾಗಿರುತ್ತದೆ. ಈ ಕಾರಣಕ್ಕಾಗಿ, ಅನೇಕ ಸಾಮಾಜಿಕ ತತ್ವಶಾಸ್ತ್ರಜ್ಞರು ಬಲಾತ್ಕಾರವನ್ನು ಸ್ವಾತಂತ್ರ್ಯದ ಧ್ರುವೀಯ ವಿರುದ್ಧವೆಂದು ಪರಿಗಣಿಸಿದ್ದಾರೆ.[೧] ಬಲಾತ್ಕಾರದ ವಿವಿಧ ರೂಪಗಳನ್ನು ವ್ಯತ್ಯಾಸ ಮಾಡಲಾಗುತ್ತದೆ: ಮೊದಲನೆಯದಾಗಿ ಬೆದರಿಕೆ ಮಾಡಲಾದ ಗಾಯದ ಬಗೆಯ ಆಧಾರದ ಮೇಲೆ, ಎರಡನೆಯದಾಗಿ ಅದರ ಗುರಿಗಳು ಮತ್ತು ವ್ಯಾಪ್ತಿಯ ಪ್ರಕಾರ, ಮತ್ತು ಕೊನೆಯದಾಗಿ ಅದರ ಪರಿಣಾಮಗಳ ಪ್ರಕಾರ. ಇದರ ಮೇಲೆಯೇ ಬಲಾತ್ಕಾರದ ಕಾನೂನಾತ್ಮಕ, ಸಾಮಾಜಿಕ, ಮತ್ತು ನೈತಿಕ ಪರಿಣಾಮಗಳು ಅವಲಂಬಿತವಾಗಿರುತ್ತವೆ.

ದೈಹಿಕ ಬಲಾತ್ಕಾರವು ಬಲಾತ್ಕಾರದ ಅತ್ಯಂತ ಸಾಮಾನ್ಯವಾಗಿ ಪರಿಗಣಿಸಲಾದ ರೂಪವಾಗಿದೆ. ಇದರಲ್ಲಿ ಷರತ್ತುಬದ್ಧ ಬೆದರಿಕೆಯ ಒಳವಸ್ತುವೆಂದರೆ ಬಲಿಪಶು, ಅವರ ಸಂಬಂಧಿಗಳು ಅಥವಾ ಆಸ್ತಿಯ ವಿರುದ್ಧ ಬಲದ ಬಳಕೆ. ಹಲವುವೇಳೆ ಬಳಸಲಾದ ಒಂದು ಉದಾಹರಣೆಯೆಂದರೆ ಕ್ರಿಯೆಯನ್ನು ಒತ್ತಾಯಿಸಲು "ಒಬ್ಬರ ತಲೆಗೆ ಪಿಸ್ತೂಲು ಇಡುವುದು" ಅಥವಾ "ಗಂಟಲಿನ ಕೆಳಗೆ ಚಾಕೂ ಇಡುವುದು" ಇಲ್ಲವಾದರೆ ಬಲಿಪಶುವನ್ನು ಕೊಲ್ಲುತ್ತೇನೆ ಅಥವಾ ಗಾಯಗೊಳಿಸುತ್ತೇನೆ ಎಂದು ಬೆದರಿಸುವುದು. ಇವು ಎಷ್ಟು ಸಾಮಾನ್ಯವಾಗಿವೆಯೆಂದರೆ ಇವನ್ನು ಬಲಾತ್ಕಾರದ ಇತರ ರೂಪಗಳಿಗೆ ರೂಪಕಗಳಾಗಿ ಬಳಸಲಾಗುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. Bhatia, Prof Dr K. L. (2010-01-01). Textbook on Legal Language and Legal Writing (in ಇಂಗ್ಲಿಷ್). Universal Law Publishing. ISBN 9788175348943.