ಒಣಹಿಮ: ಇಂಗಾಲಾಮ್ಲ (CO2) ಅನಿಲದ ಫನರೂಪ (ಡ್ರೈ ಐಸ್). ಇದೊಂದು ಶೈತ್ಯಕಾರಕ. ಇದು ವಿಷವಲ್ಲ ಮತ್ತು ಇತರ ಪದಾರ್ಥಗಳನ್ನು ಜೀರ್ಣಿಸುವುದಿಲ್ಲ (ನಾನ್ಕರೋಸಿವ್).

Subliming dry ice pellet, with white frost on the surface

ಘನರೂಪದಿಂದ ನೇರವಾಗಿ ಅನಿಲವಾಗುವುದರಿಂದ ಶೇಷ (ರೆಸಿಡ್ಯೂ) ಏನೂ ಇರುವುದಿಲ್ಲ. ಇದರ ಉಷ್ಣತೆ ಬಲುಕಡಿಮೆ. ಈ ಗುಣಗಳು ಇದರ ಉಪಯುಕ್ತತೆಗೆ ಕಾರಣ. ಮಂಜುಗಡ್ಡೆಗಿಂತಲೂ ಇದು ಹೆಚ್ಚು ಪರಿಣಾಮಕಾರಿಯಾದ ಶೈತ್ಯಕಾರಕ. ಕೆಡುವ ಪದಾರ್ಥಗಳನ್ನು ಸಾಗಾಣಿಕೆಯಲ್ಲಿ ಕೆಡದಂತೆ ಸಂರಕ್ಷಿಸುವುದು, ಯಂತ್ರೋಪಕರಣಗಳ ಜೋಡಣೆ, ಪ್ರಯೋಗಶಾಲೆಯಲ್ಲಿ ಶೈತ್ಯ ವಾತಾವರಣದ ಕಲ್ಪನೆ, ಸೀರಂ ಮತ್ತು ರಕ್ತದ ಸಂರಕ್ಷಣೆ,[] ಮಳೆ ಕರೆಸಲು ಮೋಡಗಳ ಮೇಲೆ ಸೇಚನೆ (ಕೃತಕ ಮಳೆ) ಇತ್ಯಾದಿ ಅನೇಕ ಉಪಯೋಗಗಳುಂಟು.[]

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. Newman, Jessie (3 December 2020). "Dry Ice Demand Swells as Covid-19 Vaccines Prepare for Deployment". The Wall Street Journal. Archived from the original on 4 December 2020. Retrieved 3 December 2020.
  2. Keyes 2006, p. 83
"https://kn.wikipedia.org/w/index.php?title=ಒಣಹಿಮ&oldid=1249789" ಇಂದ ಪಡೆಯಲ್ಪಟ್ಟಿದೆ