ಒಂಭತ್ತು ಗುಡ್ಡ
ಚಾರಣ ಮಾಡಲು ಬಯಸುವ ಪ್ರವಾಸಿಗರು ಇಲ್ಲಿನ ಒಂಭತ್ತುಗುಡ್ಡಕ್ಕೆ ಭೇಟಿ ಕೊಡಬಹುದು. ಹೆಸರೆ ಸೂಚಿಸುವಂತೆ ಇಲ್ಲಿ ಒಂಭತ್ತು ಗುಡ್ಡಗಳಿರುವ ಕಾರಣದಿಂದಾಗಿ ಇದಕ್ಕೆ ಈ ಹೆಸರು ಬಂದಿದೆ. ಈ ಗುಡ್ಡಗಳು ಸಮುದ್ರ ಮಟ್ಟದಿಂದ 971 ಮೀಟರ್ ಎತ್ತರದಲ್ಲಿವೆಯಷ್ಟೆ ಅಲ್ಲದೆ ಪಶ್ಚಿಮ ಘಟ್ಟಗಳಲ್ಲಿಯೆ ಅತ್ಯಂತ ಎತ್ತರ ಬೆಟ್ಟಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ.[೧] ಈ ಪ್ರದೇಶದ ಸುತ್ತ ಕಬ್ಬಿನಾಲೆ ಮೀಸಲು ಅರಣ್ಯ ಪ್ರದೇಶ, ಶಿರಡಿ ಶ್ರೀಸಲ ಮೀಸಲು ಅರಣ್ಯ ಪ್ರದೇಶ ಮತ್ತು ಬಾಲೂರು ಮೀಸಲು ಅರಣ್ಯ ಪ್ರದೇಶಗಳು ಇವೆ.ಪ್ರವಾಸಿಗರು ಇಲ್ಲಿಗೆ ಹೋಗುವ ಹಾದಿ ತಿಳಿಯಬೇಕಾದರೆ, ಇಲ್ಲಿನ ಗುಡ್ಡಗಳ ಸ್ಥಳೀಯ ಹೆಸರಾದ ಮುರ್ಕಾಲ ಗುಡ್ಡಕ್ಕೆ ದಾರಿ ಯಾವುದು? ಎಂದು ಕೇಳುವುದು ಉತ್ತಮ. ಈ ಸ್ಥಳವು ಕಬ್ಬಿನಾಲೆ ಮೀಸಲು ಅರಣ್ಯ ಪ್ರದೇಶದ ಒಳಗೆ 20 ಕಿ.ಮೀ ದೂರದಲ್ಲಿರುವ ಗುಂಡಿಯ ಚೆಕ್ ಪೋಸ್ಟ್ ಬಳಿ ಇದೆ. ಒಂಭತ್ತು ಗುಡ್ಡದ ಬುಡಕ್ಕೆ ಪ್ರವಾಸಿಗರನ್ನು ಜೀಪಿನಲ್ಲಿ ಕರೆದೊಯ್ಯುತ್ತಾರೆ. ಹೋಗುವ ಹಾದಿಯಲ್ಲಿ ಪ್ರವಾಸಿಗರು ಜೀಪಿನಲ್ಲಿ ಕುಳಿತೆ ಚಿರತೆ,[೨] ಕೂಗುವ ಜಿಂಕೆ, ಕರಡಿ, ಹುಲಿ, ಕಾಡಾನೆ ಮತ್ತು ಗೌರ್ ಗಳನ್ನು ನೋಡುವ ಅವಕಾಶ ಪಡೆಯಬಹುದು. ಈ ಹಾದಿಯು ಕಬ್ಬಿನ ಹೊಳೆಯ ಗುಂಟ ಸಾಗುತ್ತದೆ. ಇಲ್ಲಿ ಪ್ರವಾಸಿಗರು ನೀರಿನಲ್ಲಿ ಈಜಾಡಬಹುದು
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-11-03. Retrieved 2016-10-31.
- ↑ http://www.thehindu.com/news/cities/bangalore/army-team-charts-safe-route-to-ombattu-gudda/article7037858.ece