ಒಂದು ವಿಚ್ಛೇದನ
'ಒಂದು ವಿಚ್ಛೇದನ' ಅಥವಾ 'ಎ ಸೆಪರೇಷನ್' ೨೦೧೧ರಲ್ಲಿ ಬಿಡುಗಡೆಯಾದ ಆಸ್ಘರ್ ಫರ್ಹಾದಿ ನಿರ್ದೇಶನದ ಪರ್ಷಿಯನ್ ಚಿತ್ರ. ನದೇರ್ ಮತ್ತು ಸಿಮಿನ್ ಎಂಬ ಇರಾನಿನ ಮಧ್ಯಮವರ್ಗದ ದಂಪತಿಗಳ ವಿಚ್ಛೇದನದೊಂದಿಗೆ ಆರಂಭವಾಗುವ ಕಥೆ ವಿಚ್ಛೇದನದ ಹಲವು ಮಜಲುಗಳನ್ನು ಕಟ್ಟಿಕೊಡುತ್ತದೆ.
ಒಂದು ವಿಚ್ಛೇದನ | |
---|---|
ಚಿತ್ರ:A Separation.jpg | |
ನಿರ್ದೇಶನ | ಅಸ್ಘರ್ ಫರ್ಹಾದಿ |
ನಿರ್ಮಾಪಕ | ಅಸ್ಘರ್ ಫರ್ಹಾದಿ |
ಲೇಖಕ | ಅಸ್ಘರ್ ಫರ್ಹಾದಿ |
ಪಾತ್ರವರ್ಗ | ಲೈಲಾ ಹತಮಿ ಪೇಮನ್ ಮೊವಾದಿ ಶಾಹಬ್ ಹೊಸ್ಸೈನಿ ಸಾರೆಹ್ ಬಯಾತ್ ಸರಿನಾ ಫರ್ಹಾದಿ ಮೆರಿಲಾ ಝರೈ |
ಸಂಗೀತ | ಸತ್ತರ್ ಒರಾಕಿ |
ಛಾಯಾಗ್ರಹಣ | ಮಹಮದ್ ಕಲರಿ |
ಸಂಕಲನ | ಹಯೆದೆಹ್ ಸಫಿಯಾರಿ |
ವಿತರಕರು | ಫಿಲ್ಮಿರನ್ (ಇರಾನ್) ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್ (ಯುಎಸ್ಎ) |
ಬಿಡುಗಡೆಯಾಗಿದ್ದು | ದಿನಾಂಕ: ೧೫-೦೨-೨೦೧೧ ಬರ್ಲಿನ್ |
ಅವಧಿ | 123 ನಿಮಿಷಗಳು |
ದೇಶ | ಇರಾನ್ |
ಭಾಷೆ | ಪಾರ್ಸಿ |
ಈ ಚಿತ್ರವು ೨೦೧೨ರಲ್ಲಿ ಆಸ್ಕರ್ ಪ್ರಶಸ್ತಿಯನ್ನು ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಪಡೆದುಕೊಂಡಿತು. ಆ ಮೂಲಕ ಈ ಪ್ರಶಸ್ತಿ ಪಡೆದ ಪ್ರಥಮ ಇರಾನೀ ಚಿತ್ರ ಎನಿಸಿಕೊಂಡಿತು. ಜೊತೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನೂ ಅದೇ ವಿಭಾಗದಲ್ಲಿ ಪಡೆದುಕೊಂಡಿತು. ಬರ್ಲಿನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಅತ್ಯುತ್ತಮ ನಟ', 'ಅತ್ಯುತ್ತಮ ನಟಿ' ವಿಭಾಗದಲ್ಲಿ ಗೋಲ್ಡನ್ ಬೇರ್ ಪ್ರಶಸ್ತಿಯನ್ನು ಗಳಿಸಿತು.
ಕಥಾವಸ್ತು
ಬದಲಾಯಿಸಿಹದಿನಾಲ್ಕು ವರ್ಷದ ದಾಂಪತ್ಯದ ಜೀವನ ನಡೆಸುತ್ತಿರುವ ನದೇರ್ ಹಾಗೂ ಸಿಮಿನ್ ರವರಿಗೆ ತರ್ಮೆಹ್ ಎಂಬ ಹನ್ನೊಂದು ವರ್ಷದ ಮಗಳಿದ್ದಾಳೆ. ಇರಾನಿನ ತೆಹ್ರಾನ್ ನಲ್ಲಿ ಮಧ್ಯಮವರ್ಗದ ಜೀವನ ಸಾಗಿಸುತ್ತಿರುವ ಇವರು ಸದ್ಯಕ್ಕೆ ವಿಚ್ಛೇದನ ಸಲ್ಲಿಸಿದ್ದಾರೆ. ಅಲ್ಝೇಮಿರ್ ಎಂಬ ಖಾಯಿಲೆಯಿಂದ ಬಳಲುತ್ತಿರುವ ನದೇರ್‍ನ ತಂದೆಯು ತಮ್ಮ ಬಳಿ ವಾಸಿಸುವುದು ಸಿಮಿನ್‍ಗೆ ಇಷ್ಟವಿಲ್ಲ. "ತನ್ನ ಮಗ ಯಾರೂ ಎಂಬುದನ್ನು ಅರಿಯಲಾಗದವನನ್ನು ಜೊತೆಗಿಟ್ಟುಕೊಂಡು ಶುಶ್ರೂಷೆ ಮಾಡುವುದಾದರೂ ಏಕೆ?" ಎನ್ನುವುದು ಅವಳ ವಾದ. "ಆದರೆ ನನನಗೆ ಗೊತ್ತಲ್ಲಾ ಅವನು ನನ್ನಪ್ಪ ಅಂತ?" ಎಂದು ಪ್ರಶ್ನಿಸುತ್ತಾನೆ ನದೇರ್. ಇದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವಾಗಿನ ಸಂಭಾಷಣೆ. ಹೀಗೆ ಶುರುವಾಗು ಕಥೆ, ಸಿಮಿನ್ ಹೊರ ಹೋದಾಗ ನದೇರ್‍ನ ಮಗಳು ಮತ್ತು ತಂದೆಯೊಡಗಿನ ಜೀವನ, ಕೆಲಸದವಳೊಂದಿಗಿನ ಜಗಳ, ಗರ್ಭಪಾತ, ಸತ್ಯ, ಸುಳ್ಳು ಹೀಗೆ ಬೆಳೆಯುತ್ತಾ ಹೋಗುತ್ತದೆ.
ನಿರ್ಮಾಣ
ಬದಲಾಯಿಸಿಎಲ್ಲಿಯ ಬಗ್ಗೆ ಎಂಬ ಚಿತ್ರದ ಯಶಸ್ಸಿನ ಕಾರಣದಿಂದಾಗಿ ಫರ್ಹಾದಿಯವರೇ ಚಿತ್ರವನ್ನು ನಿರ್ಮಿಸಲು ಸಾಧ್ಯವಾಯಿತು."ಮೋಷನ್ ಪಿಕ್ಚರ್ ಅಕಾಡೆಮಿ"ಯ ಎಎಸ್‍ಎಪಿ ವಿಭಾಗವು $೨೫,೦೦೦ ದೇಣಿಗೆಯನ್ನು ನೀಡಿತು.
ಬಿಡುಗಡೆ
ಬದಲಾಯಿಸಿಚಿತ್ರವು ೯ ಫೆಬ್ರುವರಿ ೨೦೧೧ ರಂದು ಫಜ್‍ರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಿಡುಗಡೆಯಾಯಿತು. ನಂತರ ೬ ದಿನಗಳ ನಂತರ ಬರ್ಲಿನ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು.